ಯಶ್ ಬೆಂಬಲ ನೆನೆದು ‘ಟಾಕ್ಸಿಕ್’ ಈವೆಂಟ್‌ನಲ್ಲಿ ಧನ್ಯವಾದ ಹೇಳಿದ ಕಿಯಾರಾ

ತಮ್ಮ ಗರ್ಭಿಣಿ ವಿಚಾರ ತಿಳಿದಾಗ 'ಟಾಕ್ಸಿಕ್' ಸಿನಿಮಾ, ಲಾಜಿಸ್ಟಿಕ್ಸ್ ಬಗ್ಗೆ ಚಿಂತಿಸದೆ, ಆನಂದಭಾಷ್ಪದೊಂದಿಗೆ ಬೆಂಬಲ ನೀಡಿದ ನಟ ಯಶ್ ಹಾಗೂ ನಿರ್ದೇಶಕಿ ಗೀತು ಮೋಹನ್‌ದಾಸ್ ಅವರಿಗೆ ನಟಿ ಕಿಯಾರಾ ಅಡ್ವಾಣಿ ಧನ್ಯವಾದ ತಿಳಿಸಿದ್ದಾರೆ. ಚೆನ್ನೈ ಈವೆಂಟ್‌ನಲ್ಲಿ ಕಿಯಾರಾ ಹಂಚಿಕೊಂಡ ಈ ಭಾವುಕ ಮಾತುಗಳು ಈಗ ವೈರಲ್ ಆಗಿವೆ. ಆ ಸಂದರ್ಭದ ವಿಡಿಯೋ ವೈರಲ್ ಆಗಿದೆ. 

ಯಶ್ ಬೆಂಬಲ ನೆನೆದು ಟಾಕ್ಸಿಕ್ ಈವೆಂಟ್‌ನಲ್ಲಿ ಧನ್ಯವಾದ ಹೇಳಿದ ಕಿಯಾರಾ
ಯಶ್-ಕಿಯಾರಾ

Updated on: Aug 25, 2026 | 11:33 AM

ಮುಖ್ಯಾಂಶಗಳು

  • ಗರ್ಭಿಣಿಯಾದಾಗ ಮೊದಲು ತಿಳಿಸಿದ್ದೇ ಯಶ್ ಹಾಗೂ ಗೀತುಗೆ
  • ಸಿನಿಮಾ ಶೂಟಿಂಗ್ ಚಿಂತೆ ಮಾಡದೆ ಶುಭಕೋರಿದ್ದ 'ಟಾಕ್ಸಿಕ್' ತಂಡ
  • ವೇದಿಕೆಯಲ್ಲೇ ಭಾವುಕರಾಗಿ ಯಶ್‌ಗೆ ಧನ್ಯವಾದ ತಿಳಿಸಿದ ಕಿಯಾರಾ

ರಾಕಿಂಗ್ ಸ್ಟಾರ್ ಯಶ್ ಅಭಿನಯದ ‘ಟಾಕ್ಸಿಕ್’ ಸಿನಿಮಾದ ಪ್ರೀ-ರಿಲೀಸ್ ಈವೆಂಟ್‌ ಚೆನ್ನೈನಲ್ಲಿ ನಡೆದಿದೆ. ಈ ವೇದಿಕೆ ಮೇಲೆ ನಟಿ ಕಿಯಾರಾ ಅಡ್ವಾಣಿ ಅವರು ತಮ್ಮ ವೈಯಕ್ತಿಕ ಹಾಗೂ ವೃತ್ತಿಜೀವನದ ಅತ್ಯಂತ ಭಾವುಕ ಕ್ಷಣವೊಂದನ್ನು ಹಂಚಿಕೊಂಡಿದ್ದಾರೆ. ನಟ ಯಶ್ ಹಾಗೂ ನಿರ್ದೇಶಕಿ ಗೀತು ಮೋಹನ್‌ದಾಸ್ ಅವರ ಮಾನವೀಯತೆ ಮತ್ತು ಪ್ರೀತಿಯನ್ನು ನೆನೆದು ಕಿಯಾರಾ ವೇದಿಕೆಯಲ್ಲೇ ಕೃತಜ್ಞತೆ ಸಲ್ಲಿಸಿದ್ದಾರೆ.

ಮೊದಲ ಬಾರಿಗೆ ಸತ್ಯ ಬಿಚ್ಚಿಟ್ಟ ಕಿಯಾರಾ

ವೇದಿಕೆಯಲ್ಲಿ ಮಾತನಾಡಿದ ಕಿಯಾರಾ, ‘ನಾನು ಗರ್ಭಿಣಿಯಾದಾಗ ನನ್ನ ಕುಟುಂಬದ ನಂತರ ಈ ವಿಚಾರವನ್ನು ಹಂಚಿಕೊಂಡ ಮೊದಲ ಇಬ್ಬರು ವ್ಯಕ್ತಿಗಳೆಂದರೆ ಯಶ್ ಮತ್ತು ಗೀತು ಮೋಹನ್‌ದಾಸ್. ಆ ಕ್ಷಣದಲ್ಲಿ ಅವರು ಸಿನಿಮಾವನ್ನು ಹೇಗೆ ಮುಗಿಸುವುದು, ಪ್ರಯಾಣ ಹೇಗೆ ಎನ್ನುವುದರ ಬಗ್ಗೆ ಯೋಚಿಸಲೇ ಇಲ್ಲ. ಬದಲಾಗಿ ಕಣ್ಣಲ್ಲಿ ಆನಂದಭಾಷ್ಪ ತುಂಬಿಕೊಂಡು ನನಗೆ ಶುಭಾಶಯ ತಿಳಿಸಿದರು’ ಎಂದು ಆ ಕ್ಷಣವನ್ನು ಸ್ಮರಿಸಿದರು.

ಸೆಟ್‌ನಲ್ಲಿ ನೀಡಿದ ಬೆಂಬಲ ಮತ್ತು ಪ್ರೀತಿ

ಮುಂದುವರಿದು ಮಾತನಾಡಿದ ಅವರು, ‘ಚಿತ್ರೀಕರಣದ ಸಮಯದಲ್ಲಿ ‘ಸೆಟ್‌ಗೆ ಬಾ, ಕಂಫರ್ಟಬಲ್ ಆಗಿರು, ನಿನಗೆ ಇಷ್ಟ ಬಂದದ್ದನ್ನು ತಿನ್ನು, ನಾವೆಲ್ಲರೂ ಸೇರಿ ಅತ್ಯುತ್ತಮ ಸಿನಿಮಾ ಮಾಡೋಣ’ ಎಂದು ಪ್ರೋತ್ಸಾಹಿಸಿದರು’ ಎಂದಿದ್ದಾರೆ ಕಿಯಾರಾ.

ಇದನ್ನೂ ಓದಿ: ಡ್ರಗ್ಸ್ ಬಗ್ಗೆ ಜಾಗೃತಿ ಮೂಡಿಸಲು ಟಾಕ್ಸಿಕ್ ಸಿನಿಮಾ ಶೀರ್ಷಿಕೆ ಬಳಸಿಕೊಂಡ ಒಡಿಶಾ ಪೋಲೀಸ್

‘ಅವರು ನೀಡಿದ ಆ ಬೆಂಬಲದಿಂದಾಗಿ ನಾನು ಯಾವುದೇ ಭಯವಿಲ್ಲದೆ ಕೆಲಸ ಮಾಡಲು ಸಾಧ್ಯವಾಯಿತು. ಅವರು ತೋರಿಸಿದ ಕಾಳಜಿ ಮತ್ತು ಪ್ರೀತಿಯನ್ನು ನಾನು ಜೀವನದಲ್ಲಿ ಎಂದು ಮರೆಯುವುದಿಲ್ಲ. ಇಂತಹ ಅದ್ಭುತ ತಂಡ ಸಿಕ್ಕಿದ್ದಕ್ಕೆ ಧನ್ಯವಾದಗಳು’ ಎಂದು ನಟ ಯಶ್ ಹಾಗೂ ಗೀತು ಮೋಹನ್‌ದಾಸ್‌ಗೆ ಕೃತಜ್ಞತೆ ವ್ಯಕ್ತಪಡಿಸಿದರು. ಕಿಯಾರಾ ಅವರ ಈ ಮಾತಿಗೆ ನಟ ಯಶ್ ಕೈಜೋಡಿಸಿ ಗೌರವ ಸಲ್ಲಿಸಿದರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 11:02 am, Tue, 25 August 26

ರಾಜೇಶ್ ಹೆಗಡೆ ದುಗ್ಗುಮನೆ

ರಾಜೇಶ್ ಹೆಗಡೆ ದುಗ್ಗುಮನೆಯವರು ಮೂಲತಃ ಉತ್ತರ ಕನ್ನಡದ ಶಿರಸಿಯವರು. ಇವರು ಪತ್ರಿಕಾ ರಂಗಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More
Loading...
Unable to load recommendations.
Follow Us