ಮಗನ ಸಿನಿಮಾಕ್ಕಿದ್ದ ಸಮಸ್ಯೆ ಪರಿಹರಿಸಿದ ಮೆಗಾಸ್ಟಾರ್ ಚಿರಂಜೀವಿ
Megastar Chiranjeevi: ರಾಮ್ ಚರಣ್ ಸಿನಿಮಾಕ್ಕೆ ಭಾರಿ ದೊಡ್ಡ ಬಂಡವಾಳ ಹೂಡಲಾಗಿದ್ದು, ಸಿನಿಮಾದ ಪ್ರಚಾರಕ್ಕೂ ಕೋಟ್ಯಂತರ ಖರ್ಚು ಮಾಡಲಾಗಿದೆ. ಆದರೆ ಸಿನಿಮಾದ ಬಿಡುಗಡೆ ಸಮಯದಲ್ಲಿ ಕೆಲವು ಪ್ರದರ್ಶಕರು ಮತ್ತು ವಿತರಕರು ಕಿರಿಕ್ ಪ್ರಾರಂಭಿಸಿದ್ದಾರೆ. ತೆಲಂಗಾಣದ ಕೆಲ ಸಿನಿಮಾ ಪ್ರದರ್ಶಕರಂತೂ ತಾವು ಸಿನಿಮಾ ಬಿಡುಗಡೆಗೆ ಅನುಮತಿ ನೀಡುವುದಿಲ್ಲ ಎಂದು ಪಟ್ಟು ಹಿಡಿದಿದ್ದರು. ಇದೀಗ ಸಮಸ್ಯೆ ಪರಿಹಾರಕ್ಕಾಗಿ ಖುದ್ದು ಚಿರಂಜೀವಿ ಅವರೇ ಮುಂದೆ ಬಂದಿದ್ದಾರೆ.

ರಾಮ್ ಚರಣ್ (Ram Charan) ನಟನೆಯ ‘ಪೆದ್ದಿ’ ಸಿನಿಮಾ ಕೆಲವೇ ದಿನಗಳಲ್ಲಿ ಬಿಡುಗಡೆ ಆಗಲಿದೆ. ‘ಆರ್ಆರ್ಆರ್’ ಬಳಿಕ ರಾಮ್ ಚರಣ್ ಭಾರಿ ನಿರೀಕ್ಷೆ ಇರಿಸಿರುವ ಸಿನಿಮಾ ಇದಾಗಿದೆ. ಸಿನಿಮಾಕ್ಕಾಗಿ ಸಾಕಷ್ಟು ಶ್ರಮವನ್ನು ರಾಮ್ ಚರಣ್ ಹಾಕಿದ್ದಾರೆ. ಸಿನಿಮಾಕ್ಕೆ ಭಾರಿ ದೊಡ್ಡ ಬಂಡವಾಳ ಹೂಡಲಾಗಿದ್ದು, ಸಿನಿಮಾದ ಪ್ರಚಾರಕ್ಕೂ ಕೋಟ್ಯಂತರ ಖರ್ಚು ಮಾಡಲಾಗಿದೆ. ಆದರೆ ಸಿನಿಮಾದ ಬಿಡುಗಡೆ ಸಮಯದಲ್ಲಿ ಕೆಲವು ಪ್ರದರ್ಶಕರು ಮತ್ತು ವಿತರಕರು ಕಿರಿಕ್ ಪ್ರಾರಂಭಿಸಿದ್ದಾರೆ. ತೆಲಂಗಾಣದ ಕೆಲ ಸಿನಿಮಾ ಪ್ರದರ್ಶಕರಂತೂ ತಾವು ಸಿನಿಮಾ ಬಿಡುಗಡೆಗೆ ಅನುಮತಿ ನೀಡುವುದಿಲ್ಲ ಎಂದು ಪಟ್ಟು ಹಿಡಿದಿದ್ದರು. ಇದೀಗ ಸಮಸ್ಯೆ ಪರಿಹಾರಕ್ಕಾಗಿ ಖುದ್ದು ಚಿರಂಜೀವಿ ಅವರೇ ಮುಂದೆ ಬಂದಿದ್ದಾರೆ.
‘ಪೆದ್ದಿ’ ಸಿನಿಮಾದ ಲಾಭದಲ್ಲಿ ಪಾಲು ನೀಡಬೇಕು ಎಂದು ಪ್ರದರ್ಶಕರು ಒತ್ತಾಯಿಸಿದ್ದರು. ಅಲ್ಲದೆ, ‘ಪೆದ್ದಿ’ ಸಿನಿಮಾದ ಟಿಕೆಟ್ ದರಗಳನ್ನು ಹೆಚ್ಚಿಸಲು ಸರ್ಕಾರ ಅನುಮತಿ ಕೊಡಬಾರದು, ವಿಶೇಷ ಶೋಗಳಿಗೂ ಅನುಮತಿ ಕೊಡಬಾರದು ಎಂದು ಆಗ್ರಹಿಸಿದ್ದರು. ಒಂದೊಮ್ಮೆ ‘ಪೆದ್ದಿ’ ಸಿನಿಮಾ ನಿರ್ಮಾಪಕರು ಲಾಭ ಹಂಚಿಕೆಗೆ ಒಪ್ಪಲಿಲ್ಲವಾದರೆ ಸಿನಿಮಾ ಬಿಡುಗಡೆ ಮಾಡುವುದಿಲ್ಲ ಎಂದು ಪ್ರದರ್ಶಕರು ಸುದ್ದಿಗೋಷ್ಠಿ ಕರೆಸಿ ಹೇಳಿಕೆ ನೀಡಿದ್ದರು.
ಇದನ್ನೂ ಓದಿ:ರಾಮ್ ಚರಣ್-ಪವನ್ ಕಲ್ಯಾಣ್ ಬಾಂಡಿಂಗ್ ನೋಡಿ ಹೊಗಳಿದ ಶಿವಣ್ಣ
ಇದೀಗ ರಾಮ್ ಚರಣ್ ತಂದೆ, ಮೆಗಾಸ್ಟಾರ್ ಚಿರಂಜೀವಿ ಅವರು ಖುದ್ದು ನಿರ್ಮಾಪಕರು, ವಿತರಕರು ಮತ್ತು ಪ್ರದರ್ಶಕರ ಜೊತೆಗೆ ಮಾತುಕತೆ ನಡೆಸಿದ್ದು, ಪ್ರದರ್ಶಕರನ್ನು ಒಪ್ಪಿಸಿದ್ದು, ‘ಪೆದ್ದಿ’ ಸಿನಿಮಾವನ್ನು ಈ ಹಿಂದಿನ ಮಾದರಿಯಲ್ಲಿಯೇ ಬಿಡುಗಡೆ ಮಾಡುವಂತೆ ಒಪ್ಪಿಸಿದ್ದಾರೆ. ಏಷಿಯನ್ ಸುನಿಲ್, ಅಲ್ಲು ಅರವಿಂದ್, ಚೇಂಬರ್ ಅಧ್ಯಕ್ಷ ಸುರೇಶ್ ಇನ್ನೂ ಹಲವರನ್ನು ಸೇರಿಸಿಕೊಂಡು ಸಂಧಾನ ನಡೆಸಿದ ಮೆಗಾಸ್ಟಾರ್ ಚಿರಂಜೀವಿ, ಮುನಿಸಿಕೊಂಡಿದ್ದ ಪ್ರದರ್ಶಕರನ್ನು ವಿತರಕರನ್ನು ವಿಶ್ವಾಸಕ್ಕೆ ತೆಗೆದುಕೊಂಡಿದ್ದಾರೆ.
ಮೆಗಾಸ್ಟಾರ್ ಚಿರಂಜೀವಿ ಸಿನಿಮಾ ರಂಗ ಸಮಸ್ಯೆಗೆ ಸಿಲುಕಿದಾಗ ಪ್ರತಿಬಾರಿ ಖುದ್ದು ಮುಂದೆ ಬಂದು ಸಮಸ್ಯೆ ಬಗೆಹರಿಸಲು ಯತ್ನಿಸಿದ್ದಾರೆ. ಆಂಧ್ರದಲ್ಲಿ ಈ ಹಿಂದೆ ಜಗನ್ ಸಿಎಂ ಆಗಿದ್ದಾಗ, ಸಿನಿಮಾ ಟಿಕೆಟ್ ದರಗಳನ್ನು ಧಾರುಣವಾಗಿ ತಗ್ಗಿಸಿದ್ದರು, ಚಿತ್ರಮಂದಿರಗಳನ್ನು ಮುಚ್ಚಿಸಿದ್ದರು, ವಿಶೇಷ ಶೋಗಳನ್ನು ರದ್ದು ಮಾಡಿದ್ದರು. ಆಗಲೂ ಸಹ ಚಿರಂಜೀವಿ, ಖುದ್ದು ಜಗನ್ ಅವರನ್ನು ಭೇಟಿಯಾಗಿ ಹಲವು ಸುತ್ತುಗಳ ಮಾತುಕತೆ ನಡೆಸಿದ್ದರು. ಈಗ ಮತ್ತೆ ತಮ್ಮ ಹಿರಿತನವನ್ನು ಚಿರಂಜೀವಿ ಪ್ರದರ್ಶಿಸಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ





