Raayan Raj Sarja: ರಾಯನ್ ರಾಜ್ ಸರ್ಜಾ ಹುಟ್ಟುಹಬ್ಬಕ್ಕೆ ಧ್ರುವ ಬಂದಿಲ್ಲ; ಕಾರಣ ತಿಳಿಸಿದ ಮೇಘನಾ ರಾಜ್
Dhruva Sarja: ಚಿರು ಪುತ್ರನಿಗೆ ಧ್ರುವ ಸರ್ಜಾ ಸೋಶಿಯಲ್ ಮಿಡಿಯಾ ಮೂಲಕ ವಿಶ್ ಮಾಡಿದ್ದಾರೆ. ಆದರೆ ಬರ್ತ್ಡೇ ಸಡಗರದಲ್ಲಿ ಭಾಗಿಯಾಗಲು ಅವರಿಗೆ ಸಾಧ್ಯವಾಗಿಲ್ಲ. ಅದಕ್ಕೆ ಕಾರಣ ಏನು ಎಂಬುದನ್ನು ಮೇಘನಾ ರಾಜ್ ತಿಳಿಸಿದ್ದಾರೆ.
ಪುತ್ರ ರಾಯನ್ ರಾಜ್ ಸರ್ಜಾನ ಮೊದಲನೇ ವರ್ಷದ ಹುಟ್ಟುಹಬ್ಬವನ್ನು ಮೇಘನಾ ರಾಜ್ ಅವರು ಸಡಗರದಿಂದ ಇಂದು (ಅ.22) ಆಚರಿಸುತ್ತಿದ್ದಾರೆ. ಬರ್ತ್ಡೇ ಸೆಲೆಬ್ರೇಷನ್ಗಾಗಿ ಕಾಡಿನ ಥೀಮ್ನಲ್ಲಿ ಇಡೀ ಮನೆಯನ್ನು ಅಲಂಕರಿಸಲಾಗಿದೆ. ‘ರಾಯನ್ ಕಿಂಗ್ಡಮ್ಗೆ ಸ್ವಾಗತ’ ಎಂಬ ಫಲಕ ಗಮನ ಸೆಳೆಯುತ್ತಿದೆ. ಚಿತ್ರರಂಗದ ಸ್ನೇಹಿತರು ಮತ್ತು ಕುಟುಂಬದವರಿಗೆ ಆಹ್ವಾನ ನೀಡಲಾಗಿದೆ. ಜ್ಯೂ. ಚಿರುಗೆ ಎಲ್ಲರೂ ಶುಭ ಕೋರುತ್ತಿದ್ದಾರೆ. ಮಗನ ಬರ್ತ್ಡೇ ಬಗ್ಗೆ ಮೇಘನಾ ರಾಜ್ ಕೆಲವು ಮಾತುಗಳನ್ನು ಹಂಚಿಕೊಂಡಿದ್ದಾರೆ.
ಚಿರು ಪುತ್ರನಿಗೆ ಧ್ರುವ ಸರ್ಜಾ ಸೋಶಿಯಲ್ ಮಿಡಿಯಾ ಮೂಲಕ ವಿಶ್ ಮಾಡಿದ್ದಾರೆ. ಆದರೆ ಬರ್ತ್ಡೇ ಸಡಗರದಲ್ಲಿ ಭಾಗಿಯಾಗಲು ಅವರಿಗೆ ಸಾಧ್ಯವಾಗಿಲ್ಲ. ಅದಕ್ಕೆ ಕಾರಣ ಏನು ಎಂಬುದನ್ನು ಮೇಘನಾ ರಾಜ್ ತಿಳಿಸಿದ್ದಾರೆ. ‘ಧ್ರುವ ಈಗ ವಿಶಾಖಪಟ್ಟಣದಲ್ಲಿ ಇದ್ದಾರೆ. ಈ ಬಾರಿ ಅವರು ಬರಲು ಸಾಧ್ಯವಾಗುವುದಿಲ್ಲ ಎನಿಸುತ್ತದೆ’ ಎಂದು ಮೇಘನಾ ಹೇಳಿದ್ದಾರೆ. ‘ಮಾರ್ಟಿನ್’ ಚಿತ್ರದ ಕೆಲಸಗಳಲ್ಲಿ ಧ್ರುವ ಬ್ಯುಸಿ ಆಗಿದ್ದಾರೆ. ಈ ಚಿತ್ರಕ್ಕೆ ಎ.ಪಿ. ಅರ್ಜುನ್ ನಿರ್ದೇಶನ ಮಾಡುತ್ತಿದ್ದಾರೆ. ಸಿನಿಮಾ ಕೆಲಸಗಳ ಸಲುವಾಗಿ ತಮ್ಮ ಹುಟ್ಟುಹಬ್ಬವನ್ನು ಕೂಡ ಅಭಿಮಾನಿಗಳ ಜೊತೆ ಸೆಲೆಬ್ರೇಟ್ ಮಾಡಲು ಧ್ರುವಗೆ ಸಾಧ್ಯವಾಗಿರಲಿಲ್ಲ.
ಇದನ್ನೂ ಓದಿ:
Raayan Raj Sarja: ಕಾಡಿನ ಥೀಮ್ನಲ್ಲಿ ರಾಯನ್ ರಾಜ್ ಸರ್ಜಾ ಹುಟ್ಟುಹಬ್ಬ; ಮೇಘನಾ ಮನೆಯಲ್ಲಿ ಅದ್ದೂರಿ ಆಚರಣೆ
Meghana Raj: 45 ವರ್ಷ ಹಳೇ ಗೊಂಬೆಗಳ ಜತೆ ರಾಯನ್ ರಾಜ್ ಸರ್ಜಾ; ಮೇಘನಾ ರಾಜ್-ಚಿರು ಪುತ್ರನಿಗೆ ಮೊದಲ ದಸರಾ