AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಸೈನಿಕ 2’: ಚಿತ್ರರಂಗಕ್ಕೆ ಕಾಲಿಡಲಿರುವ ಸಿಪಿ ಯೋಗೇಶ್ವರ್ ಪುತ್ರ

MLA CP Yogeshwar: ಕೆಲವು ರಾಜಕಾರಣಿಗಳು ತಮ್ಮ ಮಕ್ಕಳನ್ನು ಚಿತ್ರರಂಗಕ್ಕೆ ತಂದಿದ್ದಾರೆ. ಕೆಲವು ಸಿನಿಮಾಗಳಲ್ಲಿ ನಟಿಸಿದ ಬಳಿಕ ಅವರೂ ಸಹ ರಾಜಕಾರಣದತ್ತ ತಿರುಗುತ್ತಾರೆ. ಮಕ್ಕಳನ್ನು ರಾಜಕಾರಣಕ್ಕೆ ತರುವ ಮುನ್ನ ಸಿನಿಮಾ ರಂಗದಲ್ಲಿ ಜನಪ್ರಿಯತೆ ಸಿಗುವಂತೆ ಮಾಡಲಾಗುತ್ತದೆ. ಇದು ಒಂದು ರೀತಿಯ ಮಾಡೆಲ್ ಆಗಿಬಿಟ್ಟಿದೆ. ಅದರಂತೆ ಈಗ ಸಿಪಿ ಯೋಗೇಶ್ವರ್ ಸಹ ತಮ್ಮ ಮಗನನ್ನು ಸಿನಿಮಾ ರಂಗಕ್ಕೆ ತರುತ್ತಿದ್ದು, ರಾಜಕಾರಣಕ್ಕೆ ಸಿನಿಮಾ ರಂಗದಲ್ಲಿ ತಳಹದಿ ಹಾಕುತ್ತಿದ್ದಾರೆ.

‘ಸೈನಿಕ 2’: ಚಿತ್ರರಂಗಕ್ಕೆ ಕಾಲಿಡಲಿರುವ ಸಿಪಿ ಯೋಗೇಶ್ವರ್ ಪುತ್ರ
Cp Yogeshwar
ಮಂಜುನಾಥ ಸಿ.
|

Updated on: Jun 18, 2026 | 6:19 PM

Share

ಸಿಪಿ ಯೋಗೇಶ್ವರ್ (CP Yogeshwar), ನಟನಾಗಿ ಯಶಸ್ಸು ಗಳಿಸಿ, ಬಳಿಕ ರಾಜಕಾರಣಿಯಾಗಿ ಅಲ್ಲಿಯೂ ಯಶಸ್ಸು ಗಳಿಸಿದವರು. ಇದೀಗ ಅವರು ತಮ್ಮ ಪುತ್ರನನ್ನು ಚಿತ್ರರಂಗಕ್ಕೆ ಕರೆತರಲು ಸಜ್ಜಾಗಿದ್ದಾರೆ. ಕೆಲವು ರಾಜಕಾರಣಿಗಳು ತಮ್ಮ ಮಕ್ಕಳನ್ನು ಚಿತ್ರರಂಗಕ್ಕೆ ತಂದಿದ್ದಾರೆ. ಕೆಲವು ಸಿನಿಮಾಗಳಲ್ಲಿ ನಟಿಸಿದ ಬಳಿಕ ಅವರೂ ಸಹ ರಾಜಕಾರಣದತ್ತ ತಿರುಗುತ್ತಾರೆ. ಮಕ್ಕಳನ್ನು ರಾಜಕಾರಣಕ್ಕೆ ತರುವ ಮುನ್ನ ಸಿನಿಮಾ ರಂಗದಲ್ಲಿ ಜನಪ್ರಿಯತೆ ಸಿಗುವಂತೆ ಮಾಡಲಾಗುತ್ತದೆ. ಇದು ಒಂದು ರೀತಿಯ ಮಾಡೆಲ್ ಆಗಿಬಿಟ್ಟಿದೆ. ಅದರಂತೆ ಈಗ ಸಿಪಿ ಯೋಗೇಶ್ವರ್ ಸಹ ತಮ್ಮ ಮಗನನ್ನು ಸಿನಿಮಾ ರಂಗಕ್ಕೆ ತರುತ್ತಿದ್ದು, ರಾಜಕಾರಣಕ್ಕೆ ಸಿನಿಮಾ ರಂಗದಲ್ಲಿ ತಳಹದಿ ಹಾಕುತ್ತಿದ್ದಾರೆ.

ಸಿಪಿ ಯೋಗೇಶ್ವರ್ ಅವರ ಪುತ್ರ ಧ್ಯಾನ್ ಯೋಗೇಶ್ವರ್ ಅವರು ಕನ್ನಡ ಚಿತ್ರರಂಗಕ್ಕೆ ಪದಾರ್ಪಣೆ ಮಾಡಲು ಸಜ್ಜಾಗಿದ್ದಾರೆ. ಯೋಗೇಶ್ವರ್ ಅವರಿಗೆ ಭಾರಿ ಹೆಸರು, ಖ್ಯಾತಿ, ಯಶಸ್ಸು ತಂದುಕೊಟ್ಟ ‘ಸೈನಿಕ’ ಸಿನಿಮಾದ ಹೆಸರನ್ನೇ ಇರಿಸಿಕೊಂಡು ಧ್ಯಾನ್ ಅವರು ಚಿತ್ರರಂಗಕ್ಕೆ ಬರುತ್ತಿದ್ದಾರೆ. ಧ್ಯಾನ್ ಅವರು ನಟಿಸುತ್ತಿರುವ ಮೊದಲ ಸಿನಿಮಾದ ಹೆಸರು ‘ಸೈನಿಕ 2’.

ಅಂದಹಾಗೆ ‘ಸೈನಿಕ’ ಸಿನಿಮಾನಲ್ಲಿ ಕೇವಲ ಮಗನಷ್ಟೇ ಅಲ್ಲ ಖುದ್ದು ಸಿಪಿ ಯೋಗೇಶ್ವರ್ ಅವರು ಪ್ರಮುಖ ಪಾತ್ರವೊಂದರಲ್ಲಿ ನಟಿಸಲಿದ್ದಾರೆ. ಯೋಗೇಶ್ವರ್ ಅವರು ಸಿನಿಮಾಕ್ಕಾಗಿ ಬಣ್ಣ ಹಚ್ಚಿ ವರ್ಷಗಳೇ ಆಗಿವೆ. ಇದೀಗ ಮಗನ ಸಿನಿಮಾಕ್ಕಾಗಿ ಮತ್ತೆ ಬಣ್ಣ ಹಚ್ಚಲು ರೆಡಿಯಾಗಿದ್ದಾರೆ. ಈ ಚಿತ್ರಕ್ಕೆ ಖ್ಯಾತ ನಿರ್ದೇಶಕ ನಾಗಣ್ಣ ಆಕ್ಷನ್ ಕಟ್ ಹೇಳುತ್ತಿದ್ದಾರೆ. ನಿರ್ಮಾಪಕ ಕೆಪಿ ಶ್ರೀಕಾಂತ್ ಅವರು ಈ ಸಿನಿಮಾವನ್ನು ನಿರ್ಮಿಸುತ್ತಿದ್ದು, ಪ್ರಸ್ತುತ ಲೊಕೇಶನ್ ಹುಡುಕಾಟದ ಕೆಲಸಗಳು ಸಾಗುತ್ತಿವೆಯಂತೆ.

ಇದನ್ನೂ ಓದಿ:ನಮ್ಮಪ್ಪನೊಂದಿಗೆ ಇರೋದು ಆಸ್ತಿ ಕಲಹ ಅಲ್ಲವೇ ಅಲ್ಲ, ಹಾಗೆ ಬಿಂಬಿಸಲಾಗುತ್ತಿದೆ: ನಿಶಾ ಯೋಗೇಶ್ವರ್ 

ಬೆಂಗಳೂರು, ಬೀದರ್, ಗುಲ್ಬರ್ಗ ಸೇರಿದಂತೆ ಇನ್ನೂ ಕೆಲ ಭಾಗಗಳಲ್ಲಿ ಚಿತ್ರೀಕರಣ ನಡೆಸಲು ಚಿತ್ರತಂಡ ಯೋಜಿಸುತ್ತಿದೆ. ಜುಲೈ 5ರಂದು ಸಿನಿಮಾದ ಮುಹೂರ್ತ ನಿಗದಿ ಮಾಡಲಾಗಿದೆ ಎನ್ನಲಾಗುತ್ತಿದೆ. ಈ ಬಗ್ಗೆ ಸಿ.ಪಿ. ಯೋಗೇಶ್ವರ್ ಅವರ ಕುಟುಂಬದಿಂದ ಯಾವುದೇ ಅಧಿಕೃತ ಘೋಷಣೆ ಇನ್ನೂ ಹೊರಬಿದ್ದಿಲ್ಲ. ಸಿಪಿ ಯೋಗೇಶ್ವರ್ ಅವರ ಪುತ್ರಿ ನಿಶಾ ಸಹ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದರು. ದರ್ಶನ್ ಎದುರು ‘ಅಂಬರೀಶ’ ಸಿನಿಮಾದ ನಾಯಕಿಯಾಗಿ ಆಯ್ಕೆ ಆಗಿದ್ದರು ಆದರೆ ಬಳಿಕ ಆ ಸಿನಿಮಾದಿಂದ ಹೊರ ನಡೆದರು. ಬಳಿಕ ತೆಲುಗಿನ ಸಿನಿಮಾನಲ್ಲಿ ನಟಿಸುತ್ತಾರೆಂಬ ಸುದ್ದಿಯಾಗಿತ್ತು. ಬಳಿಕ ಅವರು ಸಹ ರಾಜಕೀಯದ ಕಡೆ ಗಮನ ಹರಿಸಿದರು. ಜೊತೆಗೆ ತಂದೆಯ ಜೊತೆಗೆ ವಿವಾದವನ್ನೂ ಮಾಡಿಕೊಂಡರು.

ಕುಮಾರಸ್ವಾಮಿ, ಜಮೀರ್ ಅಹ್ಮದ್, ಅಂಬರೀಶ್, ಎಚ್​​ಎಂ ರೇವಣ್ಣ, ಜನಾರ್ದನ ರೆಡ್ಡಿ ಇನ್ನೂ ಕೆಲವು ರಾಜಕಾರಣಿಗಳು ತಮ್ಮ ಮಕ್ಕಳನ್ನು ನಟರನ್ನಾಗಿ ಮಾಡಿದ್ದಾರೆ. ಬಳಿಕ ರಾಜಕೀಯಕ್ಕೂ ಕರೆತರುತ್ತಾರೆ. ಈಗ ಯೋಗೇಶ್ವರ್ ಸಹ ತಮ್ಮ ಮಗನನ್ನು ಸಿನಿಮಾಕ್ಕೆ ಕರೆತರುತ್ತಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us
ಮಂಜುನಾಥ ಸಿ.
ಮಂಜುನಾಥ ಸಿ.

ಮಂಜುನಾಥ ಸಿ, ಬೆಂಗಳೂರು ಗ್ರಾಮಾಂತರ, ವಿಜಯರಪುರ ಪಟ್ಟಣ ನಿವಾಸಿ. ಕಳೆದ ಏಳು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯನಾಗಿದ್ದೇನೆ. ಕಳೆದ ಐದು ವರ್ಷದಿಂದ ಡಿಜಿಟಲ್ ಪತ್ರಿಕೋದ್ಯಮದಲ್ಲಿ ತೊಡಗಿಕೊಂಡಿದ್ದೇನೆ. ಈ ಹಿಂದೆ ಪ್ರಜಾವಾಣಿ, ಒನ್ ಇಂಡಿಯಾ ಕನ್ನಡ ಸಂಸ್ಥೆಗಳ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ್ದೇನೆ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್​ನ ಸಿನಿಮಾ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಮೆಚ್ಚಿನ ಹವ್ಯಾಸ ಸಿನಿಮಾ ವೀಕ್ಷಣೆ, ಪುಸ್ತಕಗಳನ್ನು ಓದುವುದು.

Read More
ಘರ್ ವಾಪ್ಸಿ: ಬಿಜೆಪಿಗೆ ವಾಪಸ್ ಆಗೋ ಬಗ್ಗೆ ಸ್ಫೋಟಕ ಸುಳಿವು ಕೊಟ್ಟ ಈಶ್ವರಪ್ಪ
ಘರ್ ವಾಪ್ಸಿ: ಬಿಜೆಪಿಗೆ ವಾಪಸ್ ಆಗೋ ಬಗ್ಗೆ ಸ್ಫೋಟಕ ಸುಳಿವು ಕೊಟ್ಟ ಈಶ್ವರಪ್ಪ
ಪೊಲೀಸರು ವಶಕ್ಕೆ ಪಡೆಯುವಾಗ ರಸ್ತೆಯಲ್ಲೇ ಮಲಗಿದ ಪ್ರಿಯಾಂಕಾ ಗಾಂಧಿ!
ಪೊಲೀಸರು ವಶಕ್ಕೆ ಪಡೆಯುವಾಗ ರಸ್ತೆಯಲ್ಲೇ ಮಲಗಿದ ಪ್ರಿಯಾಂಕಾ ಗಾಂಧಿ!
ಮಠಕ್ಕೆ ವಿದ್ಯಾರ್ಥಿಯಾಗಿ ಬಂದು ಪೀಠಾಧಿಪತಿಯಾದ ಗವಿಸಿದ್ದೇಶ್ವರ ಶ್ರೀಗಳು
ಮಠಕ್ಕೆ ವಿದ್ಯಾರ್ಥಿಯಾಗಿ ಬಂದು ಪೀಠಾಧಿಪತಿಯಾದ ಗವಿಸಿದ್ದೇಶ್ವರ ಶ್ರೀಗಳು
ನಾಳೆ ಮೀಸಲಾತಿ ಪಟ್ಟಿ ಪ್ರಕಟ:ಜಿಲ್ಲಾ-ತಾಲೂಕು ಪಂಚಾಯಿತಿ ಎಲೆಕ್ಷನ್ ಯಾವಾಗ?
ನಾಳೆ ಮೀಸಲಾತಿ ಪಟ್ಟಿ ಪ್ರಕಟ:ಜಿಲ್ಲಾ-ತಾಲೂಕು ಪಂಚಾಯಿತಿ ಎಲೆಕ್ಷನ್ ಯಾವಾಗ?
ಜಂತರ್ ಮಂತರ್ ಪ್ರತಿಭಟನೆ ವೇಳೆ ಮತ್ತೆ ರಾಹುಲ್ ಗಾಂಧಿ ಪೊಲೀಸ್ ವಶಕ್ಕೆ
ಜಂತರ್ ಮಂತರ್ ಪ್ರತಿಭಟನೆ ವೇಳೆ ಮತ್ತೆ ರಾಹುಲ್ ಗಾಂಧಿ ಪೊಲೀಸ್ ವಶಕ್ಕೆ
ಕೆಪಿಎಸ್​ಸಿ ಹಗರಣ:ಶಿವಶಂಕರಪ್ಪ ಸಾಹುಕಾರ್, ಗೀತಾ ಇಡಿ ಕಸ್ಟಡಿಗೆ
ಕೆಪಿಎಸ್​ಸಿ ಹಗರಣ:ಶಿವಶಂಕರಪ್ಪ ಸಾಹುಕಾರ್, ಗೀತಾ ಇಡಿ ಕಸ್ಟಡಿಗೆ
ಹೆಸರಿಗಷ್ಟೇ ಸರ್ಕಾರಿ ಆಸ್ಪತ್ರೆ, ಒಳಗಡೆ ಬರೀ ಅವ್ಯವಸ್ಥೆ
ಹೆಸರಿಗಷ್ಟೇ ಸರ್ಕಾರಿ ಆಸ್ಪತ್ರೆ, ಒಳಗಡೆ ಬರೀ ಅವ್ಯವಸ್ಥೆ
ಸೌಜನ್ಯ ಕೇಸ್ ತನಿಖಾಧಿಕಾರಿ ಖಡಕ್ ಆಫೀಸರ್ ಲೋಕೇಶ್ ಜಗಲ್ಸಾರ್ ಹಿನ್ನೆಲೆ
ಸೌಜನ್ಯ ಕೇಸ್ ತನಿಖಾಧಿಕಾರಿ ಖಡಕ್ ಆಫೀಸರ್ ಲೋಕೇಶ್ ಜಗಲ್ಸಾರ್ ಹಿನ್ನೆಲೆ
ಎಸ್‌ಐಆರ್ ವಿವಾದ; ಎಫ್‌ಐಆರ್‌ಗಳು ನನಗೆ ಪದಕಗಳಿದ್ದಂತೆ ಎಂದ ರಾಹುಲ್ ಗಾಂಧಿ
ಎಸ್‌ಐಆರ್ ವಿವಾದ; ಎಫ್‌ಐಆರ್‌ಗಳು ನನಗೆ ಪದಕಗಳಿದ್ದಂತೆ ಎಂದ ರಾಹುಲ್ ಗಾಂಧಿ
ಮುಸ್ಲಿಂ ಮತದಾರರ ಹೆಸರು ಡಿಲೀಟ್ ಆರೋಪ
ಮುಸ್ಲಿಂ ಮತದಾರರ ಹೆಸರು ಡಿಲೀಟ್ ಆರೋಪ