ನಾಗ ಚೈತನ್ಯ ಹಾಗೂ ಶೋಭಿತಾ ಧುಲಿಪಾಲ್ ಆಗಸ್ಟ್ನಲ್ಲಿ ನಿಶ್ಚಿತಾರ್ಥ ಮಾಡಿಕೊಂಡರು. ಈ ಕಾರಣಕ್ಕೆ ಅವರು ಸಾಕಷ್ಟು ಸುದ್ದಿ ಆದರು. ಇವರು ಡಿಸೆಂಬರ್ನಲ್ಲಿ ಮದುವೆ ಆಗಲಿದ್ದಾರೆ ಎಂದು ಹೇಳಲಾಗಿತ್ತು. ಅದು ನಿಜವಾಗಿದೆ. ಈ ಜೋಡಿ ಡಿಸೆಂಬರ್ನಲ್ಲಿ ಮದುವೆ ಆಗುತ್ತಿರುವುದು ಖಚಿತವಾಗಿದೆ. ಈಗ ಆಮಂತ್ರಣ ಪತ್ರ ಒಂದು ವೈರಲ್ ಆಗಿದೆ. ಇದನ್ನು ನೋಡಿ ಫ್ಯಾನ್ಸ್ ಖುಷಿಪಟ್ಟಿದ್ದಾರೆ. ಇವರಿಗೆ ಎಲ್ಲ ಕಡೆಗಳಿಂದ ಶುಭಾಶಯ ಬರುತ್ತಿದೆ.
ನಾಗ ಚೈತನ್ಯ ಹಾಗೂ ಶೋಭಿತಾ ಪರಸ್ಪರ ಪ್ರೀತಿಸಿದವರು. ಇವರು ಸೈಲೆಂಟ್ ಆಗಿ ಸುತ್ತಾಟ ನಡೆಸಿ ಸಾಕಷ್ಟು ಸುದ್ದಿ ಆದರು. ಈಗ ಇವರು ವಿವಾಹ ಆಗುವ ನಿರ್ಧಾರಕ್ಕೆ ಬಂದಿದ್ದಾರೆ. ಸಖತ್ ಬೋಲ್ಡ್ ಆಗಿ ಕಾಣಿಸಿಕೊಳ್ಳುವ ಮೂಲಕ ಶೋಭಿತಾ ಸುದ್ದಿ ಆಗುತ್ತಾರೆ. ಇವರ ಜೊತೆ ನಾಗ ಚೈತನ್ಯ ವಿವಾಹ ಆಗುತ್ತಿದ್ದಾರೆ ಎಂಬ ಸುದ್ದಿ ಸಹಜವಾಗಿಯೇ ಅಚ್ಚರಿ ಮೂಡಿಸಿದೆ.
ನಾಗ ಚೈತನ್ಯ ಹಾಗೂ ಶೋಭಿಯಾ ಡಿಸೆಂಬರ್ 4ರಂದು ಮದುವೆ ಆಗಲಿದ್ದಾರೆ. ಇವರ ಆಮಂತ್ರಣಪತ್ರ ವೈರಲ್ ಆಗಿದೆ. ಶೋಭಿತಾ ಹಾಗೂ ನಾಗ ಚೈತನ್ಯ ವಿವಾಹ ಆಮಂತ್ರಣ ಸಿಕ್ಕವರು ಇದರ ಫೋಟೋನ ವೈರಲ್ ಮಾಡಿದ್ದಾರೆ. ಸದ್ಯ ಮದುವೆಗೆ ಸಿದ್ಧತೆ ನಡೆಯುತ್ತಿದೆ.
ನಾಗ ಚೈತನ್ಯ ಹಾಗೂ ಶೋಭಿತಾ ಬಂಜಾರಾ ಹಿಲ್ಸ್ನಲ್ಲಿರುವ ಅನುಪಮಾ ಸ್ಟುಡಿಯೋದಲ್ಲಿಯೇ ಮದುವೆ ಆಗುತ್ತಿದ್ದಾರೆ. ಈ ಸ್ಟುಡಿಯೋ ಅಕ್ಕಿನೇನಿ ನಾಗಾರ್ಜುನ ಅವರ ಒಡೆತನದಲ್ಲಿ ಇದೆ. ಒಂದೊಮ್ಮೆ ಅಕ್ಕಿನೇನಿ ನಾಗಾರ್ಜುನ ಒಡೆತನದ ‘ಎನ್ ಕನ್ವೆಷನ್ ಹಾಲ್’ ಇದ್ದಿದ್ದರೆ ಅಲ್ಲಿ ಅದ್ದೂರಿಯಾಗಿ ಮದುವೆ ಜರುಗುತ್ತಿತ್ತು. ಆದರೆ, ಅಕ್ರಮವಾಗಿ ಕಟ್ಟಡ ನಿರ್ಮಾಣ ಆಗಿದೆ ಎಂಬ ಆರೋಪದ ಅಡಿಯಲ್ಲಿ ಅದನ್ನು ಕೆಡಗಲಾಗಿದೆ.
ಇದನ್ನೂ ಓದಿ: ನಾಗ ಚೈತನ್ಯ ಜೊತೆ ಮದುವೆಗೆ ಮುಂಚೆಯೇ ತ್ಯಾಗಕ್ಕೆ ಸಿದ್ಧವಾದ ನಟಿ ಶೋಭಿತಾ ಧುಲಿಪಾಲ
ಈ ಮದುವೆಗೆ ಹಲವು ಸೆಲೆಬ್ರಿಟಿಗಳು ಭಾಗಿ ಆಗಲಿದ್ದಾರೆ. ಟಾಲಿವುಡ್ನ ಸೆಲೆಬ್ರಿಟಿಗಳಿಗೆ ಆಮಂತ್ರಣ ತಲುಪಿದೆ. ಮದುವೆ ಬಳಿಕ ಇವರು ಹನಿಮೂನ್ ತೆರಳೋ ಸಾಧ್ಯತೆ ಇದೆ. ಡಿಸೆಂಬರ್ ಅಂತ್ಯಕ್ಕೆ ಹೊಸ ವರ್ಷ ಆಚರಣೆಗೆ ಸೆಲೆಬ್ರಿಟಿಗಳು ವಿದೇಶಕ್ಕೆ ತೆರಳುತ್ತಾರೆ. ಇವರು ಕೂಡ ಹಾಗೆಯೇ ತೆರಳುವ ಸಾಧ್ಯತೆ ಇದೆ. ಇನ್ನು, ನಾಗ ಚೈತನ್ಯ ಮಾಜಿ ಪತ್ನಿ ಸಮಂತಾ ಅವರು ಇದಕ್ಕೆ ಯಾವ ರೀತಿಯಲ್ಲಿ ಪ್ರತಿಕ್ರಿಯೆ ನೀಡುತ್ತಾರೆ ಎನ್ನುವ ಕುತೂಹಲ ಮೂಡಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.