AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ದಿ ಕೇರಳ ಸ್ಟೋರಿ 2’ ಸಿನಿಮಾ ಒಟಿಟಿ ಬಿಡುಗಡೆ ದಿನಾಂಕ ಪ್ರಕಟ

The Kerala Story 2 on OTT: ಇದೇ ವರ್ಷ ಫೆಬ್ರವರಿ ತಿಂಗಳಲ್ಲಿ ‘ದಿ ಕೇರಳ ಸ್ಟೋರಿ 2’ ಸಿನಿಮಾ ಬಿಡುಗಡೆ ಆಯ್ತು. ಈ ಸಿನಿಮಾಕ್ಕೂ ಸಹ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವಿರೋಧ ವ್ಯಕ್ತವಾಗಿತ್ತು. ಆದರೂ ಬಾಕ್ಸ್ ಆಫೀಸ್​​ನಲ್ಲಿ ತಕ್ಕ ಮಟ್ಟಿಗೆ ಉತ್ತಮ ಪ್ರದರ್ಶನವನ್ನೇ ಕಂಡ ಈ ಸಿನಿಮಾ ಇದೀಗ ಒಟಿಟಿಗೆ ಬರುತ್ತಿದೆ.

‘ದಿ ಕೇರಳ ಸ್ಟೋರಿ 2’ ಸಿನಿಮಾ ಒಟಿಟಿ ಬಿಡುಗಡೆ ದಿನಾಂಕ ಪ್ರಕಟ
The Kerala Story 2
ಮಂಜುನಾಥ ಸಿ.
|

Updated on:Apr 24, 2026 | 6:40 PM

Share

‘ದಿ ಕೇರಳ ಸ್ಟೋರಿ’ (The Kerala Story) ಸಿನಿಮಾ 2023 ರಲ್ಲಿ ಬಿಡುಗಡೆ ಆಗಿತ್ತು. ಕೇರಳದಲ್ಲಿ ನಡೆದ ಮತಾಂತರರ ಬಗೆಗಿನ ಸಿನಿಮಾ ಇದೆಂದು ಹೇಳಲಾದ ಈ ಸಿನಿಮಾ ಬಾಕ್ಸ್ ಆಫೀಸ್​​ನಲ್ಲಿ ದೊಡ್ಡ ಗೆಲುವು ಕಂಡಿತ್ತು. ಸಾಕಷ್ಟು ವಿರೋಧವೂ ಸಹ ಸಿನಿಮಾಕ್ಕೆ ವ್ಯಕ್ತವಾಗಿತ್ತು. ಇದೇ ವರ್ಷ ಫೆಬ್ರವರಿ ತಿಂಗಳಲ್ಲಿ ‘ದಿ ಕೇರಳ ಸ್ಟೋರಿ 2’ ಸಿನಿಮಾ ಬಿಡುಗಡೆ ಆಯ್ತು. ಈ ಸಿನಿಮಾಕ್ಕೂ ಸಹ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವಿರೋಧ ವ್ಯಕ್ತವಾಗಿತ್ತು. ಆದರೂ ಬಾಕ್ಸ್ ಆಫೀಸ್​​ನಲ್ಲಿ ತಕ್ಕ ಮಟ್ಟಿಗೆ ಉತ್ತಮ ಪ್ರದರ್ಶನವನ್ನೇ ಕಂಡ ಈ ಸಿನಿಮಾ ಇದೀಗ ಒಟಿಟಿಗೆ ಬರುತ್ತಿದೆ.

ವಿಪುಲ್ ಅಮೃತಲಾಲ್ ಶಾ ನಿರ್ದೇಶಿಸಿ, ನಿರ್ಮಾಣ ಮಾಡಿರುವ ‘ದಿ ಕೇರಳ ಸ್ಟೋರಿ 2: ಗೋಸ್ ಬಿಯಾಂಡ್’ ಜೀ5 ಒಟಿಟಿಯಲ್ಲಿ ಸ್ಟ್ರೀಮಿಂಗ್ ಆರಂಭಿಸಲಿದೆ. ಸಿನಿಮಾವು ಮೇ 8 ರಂದು ಬಿಡುಗಡೆ ಆಗಲಿದ್ದು, ಹಿಂದಿ ಮಾತ್ರವಲ್ಲದೆ ಇತರೆ ಕೆಲ ಭಾಷೆಗಳಲ್ಲಿಯೂ ಸಿನಿಮಾ ವೀಕ್ಷಣೆಗೆ ಲಭ್ಯವಾಗಲಿದೆ. ಚಿತ್ರಮಂದಿರಗಳಲ್ಲಿ ಬಿಡುಗಡೆಯಾದ 10 ವಾರಗಳ ನಂತರ ಈ ಸಿನಿಮಾ ಡಿಜಿಟಲ್ ಪರದೆಯ ಮೇಲೆ ಬರುತ್ತಿದೆ. ಫೆಬ್ರವರಿ 27 ರಂದು ಈ ಚಿತ್ರವು ಥಿಯೇಟರ್‌ಗಳಲ್ಲಿ ಬಿಡುಗಡೆಯಾಗಿತ್ತು.

ಇದನ್ನೂ ಓದಿ:ಒಂದಲ್ಲ, ಎರಡು ಒಟಿಟಿಗಳಲ್ಲಿ ಬಿಡುಗಡೆ ಆಗಲಿದೆ ‘ಧುರಂಧರ್ 2’?

ಕಾಮಾಖ್ಯ ನಾರಾಯಣ್ ಸಿಂಗ್ ನಿರ್ದೇಶನದ ಈ ಚಿತ್ರದಲ್ಲಿ ಐಶ್ವರ್ಯಾ ಓಜಾ, ಉಲ್ಕಾ ಗುಪ್ತಾ ಮತ್ತು ಅದಿತಿ ಭಾಟಿಯಾ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಈ ಚಿತ್ರವು ಮೂವರು ಹಿಂದೂ ಯುವತಿಯರು ಮುಸ್ಲಿಂ ಯುವಕರೊಂದಿಗೆ ಪ್ರೇಮ ಸಂಬಂಧ ಬೆಳೆಸಿದ ನಂತರ ಧಾರ್ಮಿಕ ಮತಾಂತರದ ಜಾಲಕ್ಕೆ ಸಿಲುಕುವ ಕಥೆಯನ್ನು ಹೊಂದಿದೆ. ಬಿಡುಗಡೆಗೆ ಮುನ್ನ ಕೇರಳ ಹೈಕೋರ್ಟ್‌ನಿಂದ ತಾತ್ಕಾಲಿಕ ತಡೆ ಅನುಭವಿಸಿದ್ದ ಈ ಚಿತ್ರವು ನಂತರ ಕಾನೂನು ಹೋರಾಟದಲ್ಲಿ ಜಯಗಳಿಸಿ ಬಿಡುಗಡೆಯಾಗಿತ್ತು. ಈ ಚಿತ್ರವು ಬಾಕ್ಸ್ ಆಫೀಸ್‌ನಲ್ಲಿ ಸುಮಾರು 50 ಕೋಟಿ ರೂಪಾಯಿ ಗಳಿಸಿದೆ ಎಂದು ವರದಿಯಾಗಿದೆ.

2023ರ ‘ದಿ ಕೇರಳ ಸ್ಟೋರಿ’ ಸಿನಿಮಾಕ್ಕೆ ಎದುರಾದಷ್ಟು ವಿರೋಧ ಈ ಸಿನಿಮಾಕ್ಕೆ ಎದುರಾಗಲಿಲ್ಲ. ಆದರೆ ನ್ಯಾಯಾಲಯ ತಾತ್ಕಾಲಿಕ ತಡೆಯನ್ನು ನೀಡಿತ್ತು. ಆದರೆ ಬಳಿಕ ಆ ತಡೆಯನ್ನು ತೆಗೆಯಲಾಯ್ತು. ಆದರೆ ಮೊದಲ ಭಾಗದಷ್ಟು ದೊಡ್ಡ ಮಟ್ಟದ ಯಶಸ್ಸನ್ನು ಕಾಣದಿದ್ದರೂ, ಈ ಚಿತ್ರವು ಈಗ ಒಟಿಟಿ ಪ್ರೇಕ್ಷಕರನ್ನು ತಲುಪಲು ಸಜ್ಜಾಗಿದೆ. ಸಿನಿಮಾನಲ್ಲಿ ಉಲ್ಕಾ ಗುಪ್ತಾ, ಅದಿತಿ ಭಾಟಿಯಾ, ಅಲ್ಕಾ ಅಮಿನ್, ಐಶ್ವರ್ಯಾ ಓಝಾ ಇನ್ನೂ ಹಲವರು ನಟಿಸಿದ್ದಾರೆ. ಸಿನಿಮಾಕ್ಕೆ ಮನನ್ ಶಾ, ರಾಹುಲ್ ಸುಹಾಸ್ ಸಂಗೀತ ನೀಡಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 6:40 pm, Fri, 24 April 26

Follow Us