AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಸ್ಪಿರಿಟ್’ ಚಿತ್ರಕ್ಕಾಗಿ ದಿನಕ್ಕೆ 17 ಗಂಟೆ ಪ್ರಭಾಸ್ ಶೂಟಿಂಗ್; ಶೂಟ್ ಕಂಪ್ಲೀಟ್ ಮಾಡಲು ಪ್ಲ್ಯಾನ್

Spirit Movie : ಸಂದೀಪ್ ರೆಡ್ಡಿ ವಂಗ ನಿರ್ದೇಶನದ 'ಸ್ಪಿರಿಟ್' ಸಿನಿಮಾಗಾಗಿ ಪ್ರಭಾಸ್ ದಿನಕ್ಕೆ 17 ಗಂಟೆ ಶ್ರಮಿಸುತ್ತಿದ್ದಾರೆ. ಈಗಾಗಲೇ ಶೇ. 40ರಷ್ಟು ಶೂಟಿಂಗ್ ಮುಗಿದಿದ್ದು, ನಟಿ ದೀಪಿಕಾ ಪಡುಕೋಣೆ ಸಿನಿಮಾದಿಂದ ಹೊರಬಿದ್ದಿದ್ದಾರೆ. ಪ್ರಭಾಸ್ ಈ ಚಿತ್ರದಲ್ಲಿ ಪವರ್‌ಫುಲ್ ಪೊಲೀಸ್ ಅವತಾರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

‘ಸ್ಪಿರಿಟ್’ ಚಿತ್ರಕ್ಕಾಗಿ ದಿನಕ್ಕೆ 17 ಗಂಟೆ ಪ್ರಭಾಸ್ ಶೂಟಿಂಗ್; ಶೂಟ್ ಕಂಪ್ಲೀಟ್ ಮಾಡಲು ಪ್ಲ್ಯಾನ್
ಪ್ರಭಾಸ್
ರಾಜೇಶ್ ಹೆಗಡೆ ದುಗ್ಗುಮನೆ
|

Updated on: Aug 22, 2026 | 9:01 AM

Share

ಮುಖ್ಯಾಂಶಗಳು

  • 'ಸ್ಪಿರಿಟ್' ಶೂಟಿಂಗ್ ಸೆಟ್‌ನಲ್ಲಿ ಪ್ರಭಾಸ್ ಅಹೋರಾತ್ರಿ ಶ್ರಮ
  • ಡುಪ್ಲಿಕೇಟ್ ಇಲ್ಲದೇ ಆಕ್ಷನ್ ಸೀನ್‌ಗಳಲ್ಲಿ ನಟಿಸುತ್ತಿದ್ದಾರಾ ರೆಬೆಲ್ ಸ್ಟಾರ್?
  • 'ಸ್ಪಿರಿಟ್' ಯೋಜನೆಯಿಂದ ನಟಿ ದೀಪಿಕಾ ಪಡುಕೋಣೆ ದಿಢೀರ್ ಔಟ್

ರೆಬೆಲ್ ಸ್ಟಾರ್ ಪ್ರಭಾಸ್ ಹಾಗೂ ‘ಅನಿಮಲ್’ ಖ್ಯಾತಿಯ ನಿರ್ದೇಶಕ ಸಂದೀಪ್ ರೆಡ್ಡಿ ವಂಗ ಕಾಂಬಿನೇಶನ್‌ನ ಬಹುನಿರೀಕ್ಷಿತ ‘ಸ್ಪಿರಿಟ್’ ಸಿನಿಮಾದ ಶೂಟಿಂಗ್ ಭರದಿಂದ ಸಾಗುತ್ತಾ ಇದೆ. ಈ ಸಿನಿಮಾಗಾಗಿ ಪ್ರಭಾಸ್ ಅವರು ತೋರುತ್ತಿರುವ ಕಮಿಟ್‌ಮೆಂಟ್ ಅಭಿಮಾನಿಗಳನ್ನು ಹುಬ್ಬೇರಿಸುವಂತೆ ಮಾಡಿದೆ. ದೀಪಿಕಾ ಹೊರ ಹೋಗಲು ಪ್ರಭಾಸ್ ಅವರ ಈ ಕಮಿಟ್​​ಮೆಂಟ್ ಕಾರಣ ಎಂದು ವರದಿ ಆಗಿದೆ.

ದಿನಕ್ಕೆ 16-17 ಗಂಟೆ ಕೆಲಸ

ನಿರ್ಮಾಪಕ ಪ್ರಣಯ್ ರೆಡ್ಡಿ ವಂಗ ನೀಡಿರುವ ಮಾಹಿತಿಯಂತೆ, ‘ಸ್ಪಿರಿಟ್ ಚಿತ್ರದ ಶೂಟಿಂಗ್ ಈಗಾಗಲೇ ಶೇಕಡಾ 40ರಷ್ಟು ಪೂರ್ಣಗೊಂಡಿದೆ. ಉಳಿದ ಭಾಗದ ಚಿತ್ರೀಕರಣವನ್ನು ಮುಂದಿನ 2 ರಿಂದ 3 ತಿಂಗಳುಗಳಲ್ಲಿ ಮುಕ್ತಾಯಗೊಳಿಸಲು ನಾವು ಯೋಜನೆ ರೂಪಿಸಿದ್ದೇವೆ. ಈ ಸಿನಿಮಾಗಾಗಿ ಪ್ರಭಾಸ್ ದಿನಕ್ಕೆ ಬರೋಬ್ಬರಿ 16ರಿಂದ 17 ಗಂಟೆಗಳ ಕಾಲ ಸತತವಾಗಿ ಕೆಲಸ ಮಾಡುತ್ತಿದ್ದಾರೆ’ ಎಂದಿದ್ದಾರೆ.

ಬಾಡಿ ಡಬಲ್ ಬಳಸದ ಸಂದೀಪ್ ವಂಗ

ಸಾಮಾನ್ಯವಾಗಿ ಅದ್ದೂರಿ ಆಕ್ಷನ್ ಸಿನಿಮಾಗಳಲ್ಲಿ ಸಾಹಸ ದೃಶ್ಯಗಳಿಗಾಗಿ ಬಾಡಿ ಡಬಲ್ ಬಳಸುವುದು ಸಹಜ. ಆದರೆ ನಿರ್ದೇಶಕ ಸಂದೀಪ್ ರೆಡ್ಡಿ ವಂಗ ತಮ್ಮ ಯಾವುದೇ ಸಿನಿಮಾಗಳಲ್ಲಿ ಬಾಡಿ ಡಬಲ್ ಬಳಸುವುದಿಲ್ಲ. ಹೀಗಾಗಿ ಪ್ರಭಾಸ್ ಅವರೇ ಖುದ್ದಾಗಿ ಎಲ್ಲಾ ಕಠಿಣ ಆಕ್ಷನ್ ಸೀನ್‌ಗಳಲ್ಲಿ ಭಾಗವಹಿಸುತ್ತಿದ್ದು, ಕಠಿಣ ಪರಿಶ್ರಮ ಪಡುತ್ತಿದ್ದಾರೆ. ಯಾವುದೇ ಅವಘಡ ಆಗದಿರಲಿ ಎಂದು ಫ್ಯಾನ್ಸ್ ಬಯಸುತ್ತಿದ್ದಾರೆ.

ದೀಪಿಕಾ ಪಡುಕೋಣೆ ಔಟ್

ಈ ನಡುವೆ ಸಿನಿಮಾದಲ್ಲಿ ನಾಯಕಿಯಾಗಿ ನಟಿಸಬೇಕಿದ್ದ ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ಯೋಜನೆಯಿಂದ ಹೊರಬಂದಿದ್ದಾರೆ. ‘ಕಲ್ಕಿ 2898 AD’ ಚಿತ್ರದ ಯಶಸ್ಸಿನ ನಂತರ ಈ ಜೋಡಿ ಮತ್ತೆ ಒಂದಾಗಲಿದೆ ಎನ್ನಲಾಗಿತ್ತು. ಆದರೆ ಕಾಲ್ ಶೀಟ್, ಅಧಿಕ ಸಂಭಾವನೆ ಸಮಸ್ಯೆಯಿಂದಾಗಿ ದೀಪಿಕಾ ಈ ಸಿನಿಮಾದಿಂದ ಹೊರನಡೆದಿದ್ದಾರೆ ಎನ್ನಲಾಗಿದೆ.

ಇದನ್ನೂ ಓದಿ: ‘ಸ್ಪಿರಿಟ್’ ಸಿನಿಮಾದಿಂದ ದೀಪಿಕಾ ಪಡುಕೋಣೆ ಹೊರ ನಡೆದಿದ್ದಕ್ಕೆ ಕೊನೆಗೂ ಅಸಲಿ ಕಾರಣ ಬಯಲು

ಪ್ರಭಾಸ್ ಈ ಚಿತ್ರದಲ್ಲಿ ಪವರ್‌ಫುಲ್ ಪೊಲೀಸ್ ಅಧಿಕಾರಿಯ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದು, ಮಾಸ್ ಲುಕ್‌ನಲ್ಲಿ ಪ್ರೇಕ್ಷಕರ ಮುಂದೆ ಬರಲು ಸಜ್ಜಾಗುತ್ತಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Follow Us
ರಾಜೇಶ್ ಹೆಗಡೆ ದುಗ್ಗುಮನೆ
ರಾಜೇಶ್ ಹೆಗಡೆ ದುಗ್ಗುಮನೆ

ರಾಜೇಶ್ ಹೆಗಡೆ ದುಗ್ಗುಮನೆಯವರು ಮೂಲತಃ ಉತ್ತರ ಕನ್ನಡದ ಶಿರಸಿಯವರು. ಇವರು ಪತ್ರಿಕಾ ರಂಗಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More
ಘರ್ ವಾಪ್ಸಿ: ಬಿಜೆಪಿಗೆ ವಾಪಸ್ ಆಗೋ ಬಗ್ಗೆ ಸ್ಫೋಟಕ ಸುಳಿವು ಕೊಟ್ಟ ಈಶ್ವರಪ್ಪ
ಘರ್ ವಾಪ್ಸಿ: ಬಿಜೆಪಿಗೆ ವಾಪಸ್ ಆಗೋ ಬಗ್ಗೆ ಸ್ಫೋಟಕ ಸುಳಿವು ಕೊಟ್ಟ ಈಶ್ವರಪ್ಪ
ಪೊಲೀಸರು ವಶಕ್ಕೆ ಪಡೆಯುವಾಗ ರಸ್ತೆಯಲ್ಲೇ ಮಲಗಿದ ಪ್ರಿಯಾಂಕಾ ಗಾಂಧಿ!
ಪೊಲೀಸರು ವಶಕ್ಕೆ ಪಡೆಯುವಾಗ ರಸ್ತೆಯಲ್ಲೇ ಮಲಗಿದ ಪ್ರಿಯಾಂಕಾ ಗಾಂಧಿ!
ಮಠಕ್ಕೆ ವಿದ್ಯಾರ್ಥಿಯಾಗಿ ಬಂದು ಪೀಠಾಧಿಪತಿಯಾದ ಗವಿಸಿದ್ದೇಶ್ವರ ಶ್ರೀಗಳು
ಮಠಕ್ಕೆ ವಿದ್ಯಾರ್ಥಿಯಾಗಿ ಬಂದು ಪೀಠಾಧಿಪತಿಯಾದ ಗವಿಸಿದ್ದೇಶ್ವರ ಶ್ರೀಗಳು
ನಾಳೆ ಮೀಸಲಾತಿ ಪಟ್ಟಿ ಪ್ರಕಟ:ಜಿಲ್ಲಾ-ತಾಲೂಕು ಪಂಚಾಯಿತಿ ಎಲೆಕ್ಷನ್ ಯಾವಾಗ?
ನಾಳೆ ಮೀಸಲಾತಿ ಪಟ್ಟಿ ಪ್ರಕಟ:ಜಿಲ್ಲಾ-ತಾಲೂಕು ಪಂಚಾಯಿತಿ ಎಲೆಕ್ಷನ್ ಯಾವಾಗ?
ಜಂತರ್ ಮಂತರ್ ಪ್ರತಿಭಟನೆ ವೇಳೆ ಮತ್ತೆ ರಾಹುಲ್ ಗಾಂಧಿ ಪೊಲೀಸ್ ವಶಕ್ಕೆ
ಜಂತರ್ ಮಂತರ್ ಪ್ರತಿಭಟನೆ ವೇಳೆ ಮತ್ತೆ ರಾಹುಲ್ ಗಾಂಧಿ ಪೊಲೀಸ್ ವಶಕ್ಕೆ
ಕೆಪಿಎಸ್​ಸಿ ಹಗರಣ:ಶಿವಶಂಕರಪ್ಪ ಸಾಹುಕಾರ್, ಗೀತಾ ಇಡಿ ಕಸ್ಟಡಿಗೆ
ಕೆಪಿಎಸ್​ಸಿ ಹಗರಣ:ಶಿವಶಂಕರಪ್ಪ ಸಾಹುಕಾರ್, ಗೀತಾ ಇಡಿ ಕಸ್ಟಡಿಗೆ
ಹೆಸರಿಗಷ್ಟೇ ಸರ್ಕಾರಿ ಆಸ್ಪತ್ರೆ, ಒಳಗಡೆ ಬರೀ ಅವ್ಯವಸ್ಥೆ
ಹೆಸರಿಗಷ್ಟೇ ಸರ್ಕಾರಿ ಆಸ್ಪತ್ರೆ, ಒಳಗಡೆ ಬರೀ ಅವ್ಯವಸ್ಥೆ
ಸೌಜನ್ಯ ಕೇಸ್ ತನಿಖಾಧಿಕಾರಿ ಖಡಕ್ ಆಫೀಸರ್ ಲೋಕೇಶ್ ಜಗಲ್ಸಾರ್ ಹಿನ್ನೆಲೆ
ಸೌಜನ್ಯ ಕೇಸ್ ತನಿಖಾಧಿಕಾರಿ ಖಡಕ್ ಆಫೀಸರ್ ಲೋಕೇಶ್ ಜಗಲ್ಸಾರ್ ಹಿನ್ನೆಲೆ
ಎಸ್‌ಐಆರ್ ವಿವಾದ; ಎಫ್‌ಐಆರ್‌ಗಳು ನನಗೆ ಪದಕಗಳಿದ್ದಂತೆ ಎಂದ ರಾಹುಲ್ ಗಾಂಧಿ
ಎಸ್‌ಐಆರ್ ವಿವಾದ; ಎಫ್‌ಐಆರ್‌ಗಳು ನನಗೆ ಪದಕಗಳಿದ್ದಂತೆ ಎಂದ ರಾಹುಲ್ ಗಾಂಧಿ
ಮುಸ್ಲಿಂ ಮತದಾರರ ಹೆಸರು ಡಿಲೀಟ್ ಆರೋಪ
ಮುಸ್ಲಿಂ ಮತದಾರರ ಹೆಸರು ಡಿಲೀಟ್ ಆರೋಪ