ಗಲ್ಲಾಪೆಟ್ಟಿಗೆಯಲ್ಲಿ ಬಿರುಗಾಳಿ ಎಬ್ಬಿಸಿದ ‘ಪ್ರೇಮದ ಊರಲಿ’; ಮಂಗಳವಾರದ ಗಳಿಕೆ ಇಷ್ಟೊಂದಾ?

ಚಿತ್ರಮಂದಿರಗಳಲ್ಲಿ 'ಪ್ರೇಮದ ಊರಲಿ' ಸಿನಿಮಾದ ಅಬ್ಬರ ಜೋರಾಗಿದ್ದು, ವಾರದ ದಿನಗಳಲ್ಲೂ ವೀಕೆಂಡ್‌ನಷ್ಟೇ ಭರ್ಜರಿ ಕಲೆಕ್ಷನ್ ಮಾಡುತ್ತಿದೆ. 12ನೇ ದಿನ ₹3.65 ಕೋಟಿ ಗಳಿಸುವ ಮೂಲಕ ಭಾರತದಲ್ಲಿ ಒಟ್ಟು ₹24.69 ಕೋಟಿ ಗ್ರಾಸ್ ಕಲೆಕ್ಷನ್ ಮಾಡಿ ಬಾಕ್ಸ್ ಆಫೀಸ್‌ನಲ್ಲಿ ಹೊಸ ದಾಖಲೆ ಬರೆದಿದೆ. ಪ್ರೇಕ್ಷಕರಿಂದ ಅಭೂತಪೂರ್ವ ಬೆಂಬಲ ವ್ಯಕ್ತವಾಗಿದೆ.

ಗಲ್ಲಾಪೆಟ್ಟಿಗೆಯಲ್ಲಿ ಬಿರುಗಾಳಿ ಎಬ್ಬಿಸಿದ ಪ್ರೇಮದ ಊರಲಿ’; ಮಂಗಳವಾರದ ಗಳಿಕೆ ಇಷ್ಟೊಂದಾ?
ಪ್ರೇಮದ ಊರಲೊ
Image Credit source: Premada Oorali

Updated on: Oct 07, 2026 | 9:05 AM

ಮುಖ್ಯಾಂಶಗಳು

  • ವಾರದ ದಿನಗಳಲ್ಲೂ ವೀಕೆಂಡ್ ಹವಾ
  • ಗಲ್ಲಾಪೆಟ್ಟಿಗೆಯಲ್ಲಿ 'ಪ್ರೇಮದ ಊರಲಿ' ಬಿರುಗಾಳಿ
  • 12ನೇ ದಿನವೂ ಭರ್ಜರಿ ಕಲೆಕ್ಷನ್

ಚಿತ್ರಮಂದಿರಗಳಲ್ಲಿ ‘ಪ್ರೇಮದ ಊರಲಿ’ ಸಿನಿಮಾದ ಅಬ್ಬರ ದಿನದಿಂದ ದಿನಕ್ಕೆ ಜೋರಾಗುತ್ತಿದ್ದು, ಗಲ್ಲಾಪೆಟ್ಟಿಗೆಯಲ್ಲಿ ಹೊಸ ದಾಖಲೆ ಬರೆಯುತ್ತಿದೆ. ಸಾಮಾನ್ಯವಾಗಿ ವಾರಾಂತ್ಯದಲ್ಲಿ ಸಿನಿಮಾಗಳಿಗೆ ಬರುವ ಕಲೆಕ್ಷನ್ ವಾರದ ದಿನಗಳಲ್ಲಿ ಕೊಂಚ ಕಡಿಮೆಯಾಗುವುದು ಸಹಜ. ಆದರೆ, ‘ಪ್ರೇಮದ ಊರಲಿ’ ವಿಷಯದಲ್ಲಿ ಇದು ಉಲ್ಟಾ ಆಗಿದೆ. ವಾರದ ದಿನಗಳಲ್ಲೂ ಸಹ ವೀಕೆಂಡ್‌ನಲ್ಲಿ ಮಾಡಿದಷ್ಟೇ ಭರ್ಜರಿ ಕಲೆಕ್ಷನ್ ಮಾಡುವ ಮೂಲಕ ಈ ಚಿತ್ರ ಬಾಕ್ಸ್ ಆಫೀಸ್‌ನಲ್ಲಿ ಅಬ್ಬರಿಸುತ್ತಿದೆ. ವೀಕ್ಷಕರ ಅಭೂತಪೂರ್ವ ಬೆಂಬಲದಿಂದಾಗಿ ಚಿತ್ರದ ಶೋಗಳ ಸಂಖ್ಯೆ ಮತ್ತು ಪ್ರೇಕ್ಷಕರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಸಾಗಿದೆ.

ಚಿತ್ರ ತೆರೆಕಂಡ 12ನೇ ದಿನ ಅಂದರೆ ಮಂಗಳವಾರದಂದು (ಅಕ್ಟೋಬರ್ 6) ಒಟ್ಟು 834 ಶೋಗಳಿಂದ ಬರೋಬ್ಬರಿ 3.65 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ. ಈ ಮೂಲಕ ‘ಪ್ರೇಮದ ಊರಲಿ’ ಸಿನಿಮಾ ಇದುವರೆಗೆ ಭಾರತದಲ್ಲಿ ಒಟ್ಟು 24.69 ಕೋಟಿ ಗ್ರಾಸ್ ಹಾಗೂ 21.22 ಕೋಟಿ ನೆಟ್ ಗಳಿಕೆ ಕಂಡು ಭರ್ಜರಿ ಯಶಸ್ಸಿನತ್ತ ಮುನ್ನುಗ್ಗುತ್ತಿದೆ.

ಮೊದಲ ದಿನ ಕೇವಲ 13 ಲಕ್ಷ ರೂಪಾಯಿ ಇಂದ ಆರಂಭವಾದ ಈ ಸಿನಿಮಾದ ಕಲೆಕ್ಷನ್ ಪ್ರಯಾಣ, ದಿನ ಕಳೆದಂತೆ ಪಾಸಿಟಿವ್ ಟಾಕ್‌ನಿಂದಾಗಿ ರಾಕೆಟ್ ವೇಗದಲ್ಲಿ ಬೆಳೆದಿದೆ. ಮೊದಲ ವಾರದ ಕೊನೆಯಲ್ಲಿ 5.32 ಕೋಟಿ ಕಲೆಕ್ಷನ್ ಮಾಡಿದ್ದ ಚಿತ್ರ, ಎರಡನೇ ವಾರದಲ್ಲಿ ಭಾರಿ ಜಿಗಿತ ಕಂಡಿದೆ. ವಿಶೇಷವೆಂದರೆ, 2ನೇ ಶುಕ್ರವಾರ (₹2.60 ಕೋಟಿ), ಶನಿವಾರ (₹2.80 ಕೋಟಿ) ಮತ್ತು ಭಾನುವಾರ (₹3.85 ಕೋಟಿ) ವೀಕೆಂಡ್‌ನಲ್ಲಿ ಗಳಿಸಿದಷ್ಟೇ ಬೃಹತ್ ಮೊತ್ತವನ್ನು ಸೋಮವಾರ (₹3.00 ಕೋಟಿ) ಹಾಗೂ ಮಂಗಳವಾರವೂ (₹3.65 ಕೋಟಿ) ಗಳಿಸಿ ಸೈ ಎನಿಸಿಕೊಂಡಿದೆ. ಚಿತ್ರಮಂದಿರಗಳ ಸಂಖ್ಯೆ ಹೆಚ್ಚಾಗುತ್ತಿರುವುದು ಮತ್ತು ವಾರದ ದಿನಗಳಲ್ಲೂ ಹೌಸ್‌ಫುಲ್ ಪ್ರದರ್ಶನ ಕಾಣುತ್ತಿರುವುದು ಸಿನಿಮಾದ ಜಯಭೇರಿಗೆ ಸಾಕ್ಷಿಯಾಗಿದೆ.

ಇದನ್ನೂ ಓದಿ: ಓಂ ಪ್ರಕಾಶ್ ರಾವ್ ನನ್ನ ಗುರುಗಳು: ಹೆಮ್ಮೆಯಿಂದ ಹೇಳಿದ ‘ಪ್ರೇಮದ ಊರಲಿ’ ಡೈರೆಕ್ಟರ್

ಈ ಚಿತ್ರಕ್ಕೆ ಮನೋಜ್ ಕುಮಾರ್ ನಿರ್ದೇಶನ ಇದೆ. ಚಿತ್ರದಲ್ಲಿ ಶ್ರೀರಾಮ್, ರಮಿಕಾ ಶಿವು, ತಪಸ್ವಿನಿ ಪೂಣಚ್ಚ ಬಣ್ಣ ಹಚ್ಚಿದ್ದಾರೆ. ರಂಗಾಯಣ ರಘು ಅವರು ಪ್ರಬುದ್ಧ ಪಾತ್ರಕ್ಕೆ ಬಣ್ಣ ಹಚ್ಚಿ ಭೇಷ್ ಎನಿಸಿಕೊಂಡಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 7:32 am, Wed, 7 October 26

ರಾಜೇಶ್ ಹೆಗಡೆ ದುಗ್ಗುಮನೆ

ರಾಜೇಶ್ ಹೆಗಡೆ ದುಗ್ಗುಮನೆಯವರು ಮೂಲತಃ ಉತ್ತರ ಕನ್ನಡದ ಶಿರಸಿಯವರು. ಇವರು ಪತ್ರಿಕಾ ರಂಗಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More
Loading...
Unable to load recommendations.
Follow Us