ಆರು ಒಟಿಟಿಗಳಲ್ಲಿ ಏಕಕಾಲಕ್ಕೆ ರಿಲೀಸ್ ಆಗಲಿದೆ ಪೃಥ್ವಿರಾಜ್ ಹೊಸ ಸಿನಿಮಾ

ಪೃಥ್ವಿರಾಜ್ ಸುಕುಮಾರನ್ ಇತ್ತೀಚೆಗಷ್ಟೆ ‘ಖಲೀಫಾ’ ಹೆಸರಿನ ಮಲಯಾಳಂ ಸಿನಿಮಾನಲ್ಲಿ ನಟನೆ ಮಾಡಿದ್ದರು. ಈ ಸಿನಿಮಾ ಆಗಸ್ಟ್ ತಿಂಗಳಲ್ಲಿ ಚಿತ್ರಮಂದಿರಗಳಲ್ಲಿ ಬಿಡಗುಡೆ ಆಗಿ ಸಾಧಾರಣ ಕಲೆಕ್ಷನ್ ಮಾಡಿತ್ತು. ಕೇವಲ ಮಲಯಾಳಂ ಭಾಷೆಯಲ್ಲಿ ರಿಲೀಸ್ ಆಗಿದ್ದ ಈ ಸಿನಿಮಾ ಇದೀಗ ಒಟಿಟಿಗೆ ಬರುತ್ತಿದೆ. ವಿಶೇಷವೆಂದರೆ ಬರೋಬ್ಬರಿ ಆರು ಒಟಿಟಿಗಳಲ್ಲಿ ಏಕಕಾಲಕ್ಕೆ ರಿಲೀಸ್ ಆಗುತ್ತಿದೆ ಈ ಸಿನಿಮಾ.

ಆರು ಒಟಿಟಿಗಳಲ್ಲಿ ಏಕಕಾಲಕ್ಕೆ ರಿಲೀಸ್ ಆಗಲಿದೆ ಪೃಥ್ವಿರಾಜ್ ಹೊಸ ಸಿನಿಮಾ
Khalifa The Ruler

Updated on: Oct 06, 2026 | 6:54 PM

ಪೃಥ್ವಿರಾಜ್ ಸುಕುಮಾರನ್ ಮೂಲತಃ ಮಲಯಾಳಂ ನಟರಾದರೂ ಹಿಂದಿ, ತೆಲುಗು ತಮಿಳು ಸಿನಿಮಾಗಳಲ್ಲೂ ನಟಿಸುತ್ತಿರುತ್ತಾರೆ. ನಿರ್ದೇಶಕ ಮತ್ತು ನಿರ್ಮಾಪಕರೂ ಆಗಿರುವ ಪೃಥ್ವಿರಾಜ್ ಸುಕುಮಾರನ್ ಇತ್ತೀಚೆಗಷ್ಟೆ ‘ಖಲೀಫಾ’ ಹೆಸರಿನ ಮಲಯಾಳಂ ಸಿನಿಮಾನಲ್ಲಿ ನಟನೆ ಮಾಡಿದ್ದರು. ಈ ಸಿನಿಮಾ ಆಗಸ್ಟ್ ತಿಂಗಳಲ್ಲಿ ಚಿತ್ರಮಂದಿರಗಳಲ್ಲಿ ಬಿಡಗುಡೆ ಆಗಿ ಸಾಧಾರಣ ಕಲೆಕ್ಷನ್ ಮಾಡಿತ್ತು. ಕೇವಲ ಮಲಯಾಳಂ ಭಾಷೆಯಲ್ಲಿ ರಿಲೀಸ್ ಆಗಿದ್ದ ಈ ಸಿನಿಮಾ ಇದೀಗ ಒಟಿಟಿಗೆ ಬರುತ್ತಿದೆ. ವಿಶೇಷವೆಂದರೆ ಬರೋಬ್ಬರಿ ಆರು ಒಟಿಟಿಗಳಲ್ಲಿ ಏಕಕಾಲಕ್ಕೆ ರಿಲೀಸ್ ಆಗುತ್ತಿದೆ ಈ ಸಿನಿಮಾ.

ಈ ಹಿಂದೆ ಓಣಂ ಹಬ್ಬದ ಸಂದರ್ಭದಲ್ಲಿ ಬಿಡುಗಡೆಯಾಗಿದ್ದ ಈ ಗ್ಯಾಂಗ್‌ಸ್ಟರ್ ಚಿತ್ರವು ಸುಮಾರು 45 ಕೋಟಿ ರೂ.ಗಳಿಗೂ ಅಧಿಕ ಕಲೆಕ್ಷನ್ ಮಾಡಿತ್ತು. ವಿಮರ್ಶಕರಿಂದ ಮತ್ತು ಪ್ರೇಕ್ಷಕರಿಂದ ಮಿಶ್ರ ಪ್ರತಿಕ್ರಿಯೆ ಪಡೆದುಕೊಂಡಿದ್ದ ಈ ಚಿತ್ರವು ಈಗ ಡಿಜಿಟಲ್ ವೀಕ್ಷಕರನ್ನು ರಂಜಿಸಲು ಬರುತ್ತಿದೆ. ಅಕ್ಟೋಬರ್ 9ರಿಂದ ಈ ಸಿನಿಮಾ ವಿವಿಧ ಭಾಷೆಗಳಲ್ಲಿ ಒಟಿಟಿಯಲ್ಲಿ ಲಭ್ಯವಾಗಲಿದೆ. ಪ್ರಮುಖವಾಗಿ ಅಮೆಜಾನ್ ಪ್ರೈಮ್ ವಿಡಿಯೋ ಮತ್ತು ಲಯನ್ಸ್‌ಗೇಟ್ ಪ್ಲೇ ಪ್ಲಾಟ್‌ಫಾರ್ಮ್‌‌ಗಳಲ್ಲಿ ಮಲಯಾಳಂ, ತೆಲುಗು, ತಮಿಳು, ಕನ್ನಡ ಹಾಗೂ ಹಿಂದಿ ಭಾಷೆಗಳಲ್ಲಿ ವೀಕ್ಷಿಸಲು ಸಿಗಲಿದೆ.

ಇದಲ್ಲದೆ, ಎಪಿ ಇಂಟರ್‌ನ್ಯಾಷನಲ್ ಸೌತ್ ಸಿನಿಮಾ ಚಂದಾದಾರರಿಗೆ ಪ್ರೈಮ್ ಹಾಗೂ ಸಿಂಪ್ಲಿ ಸೌತ್ ಆ್ಯಪ್ ಮೂಲಕವೂ ಎಲ್ಲಾ ದಕ್ಷಿಣ ಭಾರತೀಯ ಭಾಷೆಗಳಲ್ಲಿ ಚಿತ್ರ ವೀಕ್ಷಣೆಗೆ ಸಿಗಲಿದೆ. ಆಹಾ ಒಟಿಟಿಯಲ್ಲಿ ತಮಿಳು ಮತ್ತು ತೆಲುಗು ಭಾಷೆಗಳಲ್ಲಿ ಹಾಗೂ ಮನೋರಮಾ ಮ್ಯಾಕ್ಸ್‌ನಲ್ಲಿ ಮಲಯಾಳಂ ಭಾಷೆಯಲ್ಲಿ ಇದು ಪ್ರಸಾರವಾಗಲಿದೆ. ಮಧ್ಯಪ್ರಾಚ್ಯ ಮತ್ತು ಉತ್ತರ ಆಫ್ರಿಕಾ ಭಾಗದ ವೀಕ್ಷಕರಿಗಾಗಿ ಸ್ಟಾರ್‌ಪ್ಲೇ ಪ್ಲಾಟ್‌ಫಾರ್ಮ್‌ನಲ್ಲೂ ಲಭ್ಯವಿರಲಿದೆ. ಅಲ್ಲಿಗೆ ಒಟ್ಟಿಗೆ ಆರು ಒಟಿಟಿಗಳಲ್ಲಿ ಏಕಕಾಲಕ್ಕೆ ಸಿನಿಮಾ ರಿಲೀಸ್ ಆಗುತ್ತಿದೆ.

ಇದನ್ನೂ ಓದಿ:ಪೃಥ್ವಿರಾಜ್ ಸುಕುಮಾರನ್ ನಟನೆಯ ‘ಆಡು ಜೀವಿತಂ’ ಚಿತ್ರಕ್ಕಿಲ್ಲ ಪ್ರಶಸ್ತಿ; ಶುರುವಾಯ್ತು ಚರ್ಚೆ

ವ್ಯಾಸಕ್ ನಿರ್ದೇಶನ ಮಾಡಿದ್ದ ‘ಖಲೀಫಾ’ ಸಿನಿಮಾ ಆಕ್ಷನ್ ಥ್ರಿಲ್ಲರ್ ಸಿನಿಮಾ ಆಗಿದೆ. ಸಿನಿಮಾನಲ್ಲಿ ಫೃಥ್ವಿರಾಜ್ ಸುಕುಮಾರನ್ ಜೊತೆಗೆ ಮಾಳವಿಕಾ ಶರ್ಮಾ ನಾಯಕಿಯಾಗಿ ನಟಿಸಿದ್ದರು. ಬಾಲಿವುಡ್ ನಟ ನೀಲ್ ನಿತಿನ್ ಮುಖೇಶ್ ಸಹ ಇದ್ದರು. ಜೊತೆಗೆ ಇನ್ನೂ ಕೆಲವು ಪ್ರತಿಭಾವಂತ ನಟ-ನಟಿಯರು ಈ ಸಿನಿಮಾನಲ್ಲಿ ನಟನೆ ಮಾಡಿದ್ದರು. ಒಳ್ಳೆಯ ಪ್ರಚಾರದೊಂದಿಗೆ ಸಿನಿಮಾ ರಿಲೀಸ್ ಆಗಿತ್ತಾದರೂ ದೊಡ್ಡ ಮಟ್ಟದ ಯಶಸ್ಸನ್ನು ಬಾಕ್ಸ್ ಆಫೀಸ್​​ನಲ್ಲಿ ಗಳಿಸಲಿಲ್ಲ. ಪೃಥ್ವಿರಾಜ್ ಸುಕುಮಾರನ್ ಅವರು ರಾಝಮೌಳಿ ನಿರ್ದೇಶನದ ‘ವಾರಣಾಸಿ’ ಸಿನಿಮಾದ ವಿಲನ್ ಪಾತ್ರದಲ್ಲಿ ನಟನೆ ಮಾಡುತ್ತಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಮಂಜುನಾಥ ಸಿ.

ಮಂಜುನಾಥ ಸಿ, ಬೆಂಗಳೂರು ಗ್ರಾಮಾಂತರ, ವಿಜಯರಪುರ ಪಟ್ಟಣ ನಿವಾಸಿ. ಕಳೆದ ಏಳು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯನಾಗಿದ್ದೇನೆ. ಕಳೆದ ಐದು ವರ್ಷದಿಂದ ಡಿಜಿಟಲ್ ಪತ್ರಿಕೋದ್ಯಮದಲ್ಲಿ ತೊಡಗಿಕೊಂಡಿದ್ದೇನೆ. ಈ ಹಿಂದೆ ಪ್ರಜಾವಾಣಿ, ಒನ್ ಇಂಡಿಯಾ ಕನ್ನಡ ಸಂಸ್ಥೆಗಳ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ್ದೇನೆ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್​ನ ಸಿನಿಮಾ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಮೆಚ್ಚಿನ ಹವ್ಯಾಸ ಸಿನಿಮಾ ವೀಕ್ಷಣೆ, ಪುಸ್ತಕಗಳನ್ನು ಓದುವುದು.

Read More
Loading...
Unable to load recommendations.
Follow Us