ಒಂದೇ ವರ್ಷದಲ್ಲಿ 860 ಕೋಟಿ ರೂ ಬಾಚಿಕೊಂಡ ಸೂರ್ಯ; ಹೊಸ ದಾಖಲೆ

ತಮಿಳು ನಟ ಸೂರ್ಯ 2026ನೇ ಸಾಲಿನಲ್ಲಿ ಹ್ಯಾಟ್ರಿಕ್ ಬ್ಲಾಕ್‌ಬಸ್ಟರ್ ಗೆಲುವು ದಾಖಲಿಸುವ ಮೂಲಕ ಬಾಕ್ಸ್ ಆಫೀಸ್‌ನಲ್ಲಿ 860 ಕೋಟಿ ರೂಪಾಯಿಗೂ ಅಧಿಕ ಗಳಿಕೆ ಕಂಡಿದ್ದಾರೆ. ಕರುಪ್ಪು, ವಿಶ್ವನಾಥ್ ಆ್ಯಂಡ್ ಸನ್ಸ್ ಹಾಗೂ ಸೀನ್ ಚಿತ್ರಗಳ ಭರ್ಜರಿ ಯಶಸ್ಸನ್ನು ಹಿರಿಯ ನಿರ್ಮಾಪಕ ಧನಂಜಯನ್ ಕೊಂಡಾಡಿದ್ದು, ಸೂರ್ಯ ಸ್ಟಾರ್ ಪವರ್ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಒಂದೇ ವರ್ಷದಲ್ಲಿ 860 ಕೋಟಿ ರೂ ಬಾಚಿಕೊಂಡ ಸೂರ್ಯ; ಹೊಸ ದಾಖಲೆ
ಸೂರ್ಯ
Edited By:

Updated on: Nov 17, 2026 | 8:03 AM

ಮುಖ್ಯಾಂಶಗಳು

  • ಸೂರ್ಯ ಸ್ಟಾರ್ ಪವರ್‌ಗೆ ಹಿರಿಯ ನಿರ್ಮಾಪಕ ಧನಂಜಯನ್ ಫಿದಾ
  • ಮೂರು ವಿಭಿನ್ನ ಸಿನಿಮಾಗಳ ಮೂಲಕ 860 ಕೋಟಿ ಬಾಚಿದ ಕಾಲಿವುಡ್ ಸ್ಟಾರ್
  • 900 ಕೋಟಿ ಕ್ಲಬ್‌ನತ್ತ ದಾಪುಗಾಲಿಟ್ಟ ಸೂರ್ಯ ಅವರ 2026ರ ಕಲೆಕ್ಷನ್

ಕಾಲಿವುಡ್ ಸ್ಟಾರ್ ನಟ ಸೂರ್ಯ 2026ನೇ ಸಾಲಿನಲ್ಲಿ ಬಾಕ್ಸ್ ಆಫೀಸ್‌ನಲ್ಲಿ ಹೊಸ ಇತಿಹಾಸ ಸೃಷ್ಟಿಸಿದ್ದಾರೆ. ಈ ವರ್ಷ ಬಿಡುಗಡೆಯಾದ ಸೂರ್ಯ ಅವರ ಮೂರು ವಿಭಿನ್ನ ಸಿನಿಮಾಗಳು ಬ್ಲಾಕ್‌ಬಸ್ಟರ್ ಹಿಟ್ ಆಗಿವೆ. ಒಂದೇ ವರ್ಷದಲ್ಲಿ ಹ್ಯಾಟ್ರಿಕ್ ಗೆಲುವು ದಾಖಲಿಸುವ ಮೂಲಕ ಸೂರ್ಯ ಬರೋಬ್ಬರಿ 860 ಕೋಟಿ ರೂಪಾಯಿಗೂ ಅಧಿಕ ಕಲೆಕ್ಷನ್ ಮಾಡಿದ್ದಾರೆ. ನಟನ ಈ ಅಭೂತಪೂರ್ವ ಯಶಸ್ಸನ್ನು ಹಿರಿಯ ನಿರ್ಮಾಪಕ ಹಾಗೂ ವಿತರಕ ಜಿ. ಧನಂಜಯನ್ ಮನಸಾರೆ ಕೊಂಡಾಡಿದ್ದಾರೆ.

ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ಧನಂಜಯನ್, ಸೂರ್ಯ ಅವರ ಸ್ಟಾರ್ ಪವರ್ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ‘2026ರಲ್ಲಿ ಸೂರ್ಯ ಅವರು ‘ಕರುಪ್ಪು’, ‘ವಿಶ್ವನಾಥ್ ಆ್ಯಂಡ್ ಸನ್ಸ್’ ಹಾಗೂ ‘ಸೀನ್’ ಸಿನಿಮಾಗಳ ಮೂಲಕ ಹ್ಯಾಟ್ರಿಕ್ ಹಿಟ್ ನೀಡಿದ್ದಾರೆ. ಮೂರು ವಿಭಿನ್ನ ಶೈಲಿಯ ಚಿತ್ರಗಳೂ ಬಾಕ್ಸ್ ಆಫೀಸ್‌ನಲ್ಲಿ ಭರ್ಜರಿ ಯಶಸ್ಸು ಕಂಡಿವೆ. ಜಗತ್ತಿಗೆ ತಮ್ಮ ಸ್ಟಾರ್ ಪವರ್ ಏನೆಂಬುದನ್ನು ಸೂರ್ಯ ತೋರಿಸಿಕೊಟ್ಟಿದ್ದಾರೆ’ ಎಂದು ಬರೆದುಕೊಂಡಿದ್ದಾರೆ.

Loading...

ಕೇವಲ ಸೂರ್ಯ ಅವರಿಗೆ ಮಾತ್ರವಲ್ಲದೆ ಇಡೀ ತಮಿಳು ಚಿತ್ರರಂಗಕ್ಕೆ ಇದು ಹೆಮ್ಮೆಯ ಕ್ಷಣ ಎಂದು ಧನಂಜಯನ್ ಬಣ್ಣಿಸಿದ್ದಾರೆ. ‘2026ರಲ್ಲಿ ಸೂರ್ಯ ಒಬ್ಬರೇ ತಮಿಳು ಬಾಕ್ಸ್ ಆಫೀಸ್‌ಗೆ 860 ಕೋಟಿ ರೂಪಾಯಿಗೂ ಹೆಚ್ಚು ಕೊಡುಗೆ ನೀಡಿದ್ದಾರೆ. ಇದು ಕಾಲಿವುಡ್‌ಗೆ ಅತ್ಯುತ್ತಮ ಸಮಯ. 2027 ಹಾಗೂ ಮುಂದಿನ ದಿನಗಳಲ್ಲೂ ಅವರ ಈ ಗೆಲುವಿನ ಓಟ ಹೀಗೆಯೇ ಮುಂದುವರಿಯಲಿದೆ’ ಎಂದು ಭವಿಷ್ಯ ನುಡಿದಿದ್ದಾರೆ. ಜೊತೆಗೆ ಮೂರೂ ಸಿನಿಮಾಗಳ ನಿರ್ಮಾಪಕರಿಗೆ ಶುಭಾಶಯ ತಿಳಿಸಿದ್ದಾರೆ.

ಇದನ್ನೂ ಓದಿ: ಶಾರುಖ್ ಖಾನ್, ಅಕ್ಷಯ್ ಕುಮಾರ್ ಸಾಲಿಗೆ ಸೇರಿದ ಸೂರ್ಯ, ಸಾಧನೆಯೇನು?

ಈ ವರ್ಷ ಸೂರ್ಯ ನಟನೆಯ ಆರ್.ಜೆ. ಬಾಲಾಜಿ ನಿರ್ದೇಶನದ ‘ಕರುಪ್ಪು’ ಸಿನಿಮಾ ವಿಶ್ವದಾದ್ಯಂತ 310 ಕೋಟಿ ರೂಪಾಯಿ ಗಳಿಸಿತ್ತು. ನಂತರ ವೆಂಕಿ ಅಟ್ಲೂರಿ ನಿರ್ದೇಶನದ ‘ವಿಶ್ವನಾಥ್ ಆ್ಯಂಡ್ ಸನ್ಸ್’ 209 ಕೋಟಿ ರೂಪಾಯಿ ಬಾಚಿಕೊಂಡಿತ್ತು. ಇದೀಗ ಜಿತು ಮಾಧವನ್ ನಿರ್ದೇಶನದ ‘ಸೀನ್’ ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಅಬ್ಬರಿಸುತ್ತಿದೆ. ಅಂಧ ಡಿಎಸ್‌ಪಿ ಪಾತ್ರದಲ್ಲಿ ಸೂರ್ಯ ಮಿಂಚಿರುವ ಈ ಚಿತ್ರ ಈಗಾಗಲೇ 243 ಕೋಟಿ ರೂಪಾಯಿ ದಾಟಿದ್ದು, ಥಿಯೇಟರ್‌ಗಳಲ್ಲಿ ಯಶಸ್ವಿ ಪ್ರದರ್ಶನ ಕಾಣುತ್ತಿದೆ.

ನಸ್ಲೆನ್ ಹಾಗೂ ನಜ್ರಿಯಾ ನಜೀಮ್ ಪ್ರಮುಖ ಪಾತ್ರಗಳಲ್ಲಿ ನಟಿಸಿರುವ ‘ಸೀನ್’ ಚಿತ್ರವನ್ನು ಸೂರ್ಯ ಮತ್ತು ಜ್ಯೋತಿಕಾ ತಮ್ಮ ಹೋಮ್ ಬ್ಯಾನರ್‌ನಲ್ಲಿ ನಿರ್ಮಿಸಿದ್ದಾರೆ. ನವೆಂಬರ್ 20ರಂದು ಧನುಷ್ ನಟನೆಯ ‘ಓಂ: ಚಾಪ್ಟರ್ 1’ ಬಿಡುಗಡೆಯಾಗುವವರೆಗೂ ‘ಸೀನ್’ ಚಿತ್ರಕ್ಕೆ ದೊಡ್ಡ ಪೈಪೋಟಿ ಇಲ್ಲ. ಹೀಗಾಗಿ ವರ್ಷದ ಅಂತ್ಯದ ವೇಳೆಗೆ ಸೂರ್ಯ ಅವರ ಒಟ್ಟು ಬಾಕ್ಸ್ ಆಫೀಸ್ ಗಳಿಕೆ 900 ಕೋಟಿ ರೂಪಾಯಿ ದಾಟುವ ನಿರೀಕ್ಷೆಯಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ಶ್ರೀಲಕ್ಷ್ಮೀ ಎಚ್

ಪತ್ರಕರ್ತೆ ಆಗಬೇಕು ಅಂದುಕೊಂಡವಳು. ಮನೆಯವರ ಒತ್ತಾಯಕ್ಕೆ ಕಾಮರ್ಸ್ ತೆಗೆದುಕೊಂಡೆ. ಈಗ ಬ್ಯಾಂಕ್ ಎಕ್ಸಾಂಗಳನ್ನು ಬರೆಯುತ್ತಿದ್ದೇನೆ. ಸಮಯ ಸಿಕ್ಕಾಗ ಸುತ್ತಾಡುತ್ತೇನೆ. ಓದಿನ ಬಗ್ಗೆ ಅತೀವ ಆಸಕ್ತಿ. ರವಿ ಬೆಳಗೆರೆ, ತೇಜಸ್ವಿ ನೆಚ್ಚಿನವರು. ಅವರ ಪುಸ್ತಕಗಳನ್ನು ಮತ್ತೆ ಮತ್ತೆ ಓದುತ್ತೇನೆ. ಸಮಯ ಸಿಕ್ಕಾಗ ಪತ್ರಿಕೆಗಳಿಗೆ ಕಥೆಗಳನ್ನು ಬರೆಯುತ್ತೇನೆ. ಸಿನಿಮಾ ಬಗ್ಗೆ ಅತೀವ ಆಸಕ್ತಿ. ಈಗ ಫ್ರೀಲ್ಯಾನ್ಸಿಂಗ್ ಮಾಡುತ್ತಿದ್ದು, ಟಿವಿ9 ಕನ್ನಡದಲ್ಲಿಯೂ ಬರೆಯುತ್ತಿದ್ದೇನೆ.

Read More
Loading...
Unable to load recommendations.
Follow Us