AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಶಾರುಖ್ ಖಾನ್, ಅಕ್ಷಯ್ ಕುಮಾರ್ ಸಾಲಿಗೆ ಸೇರಿದ ಸೂರ್ಯ, ಸಾಧನೆಯೇನು?

ಒಂದು ವರ್ಷದ ಹಿಂದಷ್ಟೆ ಒಂದೇ ಒಂದು ಗೆಲುವಿಗಾಗಿ ಹಾತೊರೆಯುತ್ತಿದ್ದ, ಕೈತಪ್ಪಿ ಹೋದ ಸಿನಿಮಾಗಳ ಬಗ್ಗೆ ಬಹಿರಂಗವಾಗಿ ಬೇಸರ ಹೊರಹಾಕಿದ್ದ ಸೂರ್ಯ ಈಗ ಬ್ಲಾಕ್ ಬಸ್ಟರ್ ನಟ ಎನಿಸಿಕೊಂಡಿದ್ದಾರೆ. ಇದರ ಜೊತೆಗೆ ಸೂರ್ಯ, ಬಾಲಿವುಡ್​​ನ ಸೂಪರ್ ಸ್ಟಾರ್​​ಗಳಾದ ಶಾರುಖ್ ಖಾನ್, ಅಕ್ಷಯ್ ಕುಮಾರ್ ಅವರುಗಳ ಸಾಲಿಗೆ ಸೇರಿಕೊಂಡಿದ್ದಾರೆ.

ಶಾರುಖ್ ಖಾನ್, ಅಕ್ಷಯ್ ಕುಮಾರ್ ಸಾಲಿಗೆ ಸೇರಿದ ಸೂರ್ಯ, ಸಾಧನೆಯೇನು?
Srk Suriya Akshay
ಮಂಜುನಾಥ ಸಿ.
|

Updated on: Nov 13, 2026 | 12:50 PM

Share

ಮುಖ್ಯಾಂಶಗಳು

  • ಶಾರುಖ್-ಅಕ್ಷಯ್ ಕುಮಾರ್ ಸಾಲಿಗೆ ಸೂರ್ಯ
  • ವರ್ಷದಲ್ಲಿ ಮೂರು ಬ್ಲಾಕ್ ಬಸ್ಟರ್
  • ಸೂರ್ಯ ನಟನೆ ಮೂರು ಸಿನಿಮಾ ಹಿಟ್ ಆಗಿದೆ

ತಮಿಳು ನಟ ಸೂರ್ಯ, ತಮ್ಮ ವೃತ್ತಿ ಜೀವನದ ಅತ್ಯುತ್ತಮ ಫೇಸ್​​ನಲ್ಲಿದ್ದಾರೆ. ಅವರ ನಟನೆಯ ಮೂರು ಸಿನಿಮಾಗಳು ಬಾಕ್ಸ್ ಆಫೀಸ್​​ನಲ್ಲಿ ಬ್ಲಾಕ್ ಬಸ್ಟರ್ ಆಗಿವೆ. ಒಂದು ವರ್ಷದ ಹಿಂದಷ್ಟೆ ಒಂದೇ ಒಂದು ಗೆಲುವಿಗಾಗಿ ಹಾತೊರೆಯುತ್ತಿದ್ದ, ಕೈತಪ್ಪಿ ಹೋದ ಸಿನಿಮಾಗಳ ಬಗ್ಗೆ ಬಹಿರಂಗವಾಗಿ ಬೇಸರ ಹೊರಹಾಕಿದ್ದ ಸೂರ್ಯ ಈಗ ಬ್ಲಾಕ್ ಬಸ್ಟರ್ ನಟ ಎನಿಸಿಕೊಂಡಿದ್ದಾರೆ. ಇದರ ಜೊತೆಗೆ ಸೂರ್ಯ, ಬಾಲಿವುಡ್​​ನ ಸೂಪರ್ ಸ್ಟಾರ್​​ಗಳಾದ ಶಾರುಖ್ ಖಾನ್, ಅಕ್ಷಯ್ ಕುಮಾರ್ ಅವರುಗಳ ಸಾಲಿಗೆ ಸೇರಿಕೊಂಡಿದ್ದಾರೆ.

ಪ್ರಸ್ತುತ ಸ್ಟಾರ್ ನಟರುಗಳು ವರ್ಷಕ್ಕೆ ಒಂದು ಸಿನಿಮಾ ಸಹ ನೀಡಲು ಹೆಣಗಾಡುತ್ತಿದ್ದಾರೆ. ಹಾಗೆ ಹೆಣಗಾಡಿ ಬಿಡುಗಡೆ ಮಾಡುವ ಸಿನಿಮಾ ಸಹ ಹಿಟ್ ಆಗುವುದು ಅನುಮಾನ. ಆದರೆ ಸೂರ್ಯ ನಟನೆಯ ಮೂರು ಸಿನಿಮಾಗಳು ಈ ವರ್ಷ ರಿಲೀಸ್ ಆಗಿವೆ ಮಾತ್ರವಲ್ಲದೆ ಮೂರಕ್ಕೆ ಮೂರು ಸಿನಿಮಾಗಳು 200 ಕೋಟಿ ಗಳಿಕೆ ದಾಟಿವೆ. ಇದು ಸಾಮಾನ್ಯ ಸಾಧನೆಯಲ್ಲ. ಈ ಹಿಂದೆ ಶಾರುಖ್ ಖಾನ್ ಮತ್ತು ಅಕ್ಷಯ್ ಕುಮಾರ್ ಮಾತ್ರವೇ ಈ ಸಾಧನೆ ಮಾಡಿದ್ದ ಸೂಪರ್ ಸ್ಟಾರ್ ನಟರಾಗಿದ್ದರು. ಈಗ ಆ ಸಾಲಿಗೆ ಸೂರ್ಯ ಸಹ ಸೇರಿಕೊಂಡಿದ್ದಾರೆ.

ಸೂರ್ಯ ನಟನೆಯ ‘ಕರುಪ್ಪು’ ಸಿನಿಮಾ ಇದೇ ವರ್ಷದ ಆರಂಭದಲ್ಲಿ ರಿಲೀಸ್ ಆಗಿ 350 ಕೋಟಿ ಗಳಿಕೆ ಮಾಡಿತ್ತು. ಅದಾದ ಬಳಿಕ ವಿಶ್ವನಾಥ್ ಆಂಡ್ ಸನ್ಸ್ ಸಿನಿಮಾ ರಿಲೀಸ್ ಆಗಿ ಆ ಸಿನಿಮಾ ಸಹ 210 ಕೋಟಿ ಗಳಿಕೆ ಮಾಡಿತು. ಆ ಸಿನಿಮಾನಲ್ಲಿ ಮಮಿತಾ ಬೈಜು ಸಹ ನಟಿಸಿದ್ದರು. ಇದೀಗ ಸೂರ್ಯ ನಟನೆಯ ‘ಸೀನ್’ ಸಿನಿಮಾ ರಿಲೀಸ್ ಆಗಿದ್ದು, ರಿಲೀಸ್ ಆದ ಒಂದು ವಾರದಲ್ಲೇ ಸಿನಿಮಾ 200 ಕೋಟಿ ಗಳಿಕೆಯನ್ನು ದಾಟಿದೆ. ಈ ಮೂಲಕ ಒಂದೇ ವರ್ಷದಲ್ಲಿ ಮೂರು 200 ಕೋಟಿ ಗಳಿಸಿದ ಸಿನಿಮಾ ನೀಡಿದ ನಟ ಎನಿಸಿಕೊಂಡಿದ್ದಾರೆ ಸೂರ್ಯ.

ಇದನ್ನೂ ಓದಿ:ಪ್ರಕೃತಿಯ ಮಡಿಲಲ್ಲಿ ಸೂರ್ಯ ನಮಸ್ಕಾರ ಮಾಡಿದ ಸೈಫ್

2023 ರಲ್ಲಿ ಶಾರುಖ್ ಖಾನ್ ನಟನೆಯ ‘ಜವಾನ್’, ‘ಪಠಾಣ್’ ಮತ್ತು ‘ಡಂಕಿ’ ಸಿನಿಮಾಗಳು ಒಂದೇ ವರ್ಷದಲ್ಲಿ ರಿಲೀಸ್ ಆಗಿ ಮೂರೂ ಸಿನಿಮಾಗಳು ಭಾರಿ ದೊಡ್ಡ ಗಳಿಕೆ ಮಾಡಿದ್ದವು. ಇನ್ನು ಅಕ್ಷಯ್ ಕುಮಾರ್ ಅವರಿಗೆ 2019 ಅದ್ಭುತ ವರ್ಷವಾಗಿತ್ತು. ಆ ವರ್ಷ ಅವರ ನಟನೆಯ ನಾಲ್ಕು ಸಿನಿಮಾಗಳು ರಿಲೀಸ್ ಆಗಿದ್ದವು. ಅವುಗಳಲ್ಲಿ ‘ಗುಡ್ ನ್ಯೂಜ್’, ‘ಮಿಷನ್ ಮಂಗಲ್’, ‘ಹೌಸ್​ಫಲ್ 4’ ಸಿನಿಮಾಗಳು 200 ಕೋಟಿಗೂ ಹೆಚ್ಚು ಗಳಿಕೆ ಮಾಡಿದ್ದವು. ಅದೇ ವರ್ಷ ರಿಲೀಸ್ ಆಗಿದ್ದ ‘ಕೇಸರಿ’ ಸಿನಿಮಾ ಸಹ ಹಿಟ್ ಆಗಿ 150 ಕೋಟಿ ಹಣ ಗಳಿಸಿತ್ತು.

ಒಂದೇ ವರ್ಷದಲ್ಲಿ ಮೂರು 200 ಕೋಟಿ ಸಿನಿಮಾ ನೀಡಿದ ಸಾಲಿನಲ್ಲಿ ಈ ಮೊದಲು ಶಾರುಖ್ ಖಾನ್ ಮತ್ತು ಅಕ್ಷಯ್ ಕುಮಾರ್ ಮಾತ್ರವೇ ಇದ್ದರು. ಈಗ ಸೂರ್ಯ ಸಹ ಸೇರಿಕೊಂಡಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us
ಮಂಜುನಾಥ ಸಿ.
ಮಂಜುನಾಥ ಸಿ.

ಮಂಜುನಾಥ ಸಿ, ಬೆಂಗಳೂರು ಗ್ರಾಮಾಂತರ, ವಿಜಯರಪುರ ಪಟ್ಟಣ ನಿವಾಸಿ. ಕಳೆದ ಏಳು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯನಾಗಿದ್ದೇನೆ. ಕಳೆದ ಐದು ವರ್ಷದಿಂದ ಡಿಜಿಟಲ್ ಪತ್ರಿಕೋದ್ಯಮದಲ್ಲಿ ತೊಡಗಿಕೊಂಡಿದ್ದೇನೆ. ಈ ಹಿಂದೆ ಪ್ರಜಾವಾಣಿ, ಒನ್ ಇಂಡಿಯಾ ಕನ್ನಡ ಸಂಸ್ಥೆಗಳ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ್ದೇನೆ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್​ನ ಸಿನಿಮಾ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಮೆಚ್ಚಿನ ಹವ್ಯಾಸ ಸಿನಿಮಾ ವೀಕ್ಷಣೆ, ಪುಸ್ತಕಗಳನ್ನು ಓದುವುದು.

Read More
ಪ್ರಶಾಂತಿ ಕುಟೀರ ಸುವರ್ಣ ಮಹೋತ್ಸವದಲ್ಲಿ ಮೋದಿ ಭಾಗಿ ನೇರಪ್ರಸಾರ
ಪ್ರಶಾಂತಿ ಕುಟೀರ ಸುವರ್ಣ ಮಹೋತ್ಸವದಲ್ಲಿ ಮೋದಿ ಭಾಗಿ ನೇರಪ್ರಸಾರ
ಮೋದಿ ಸಂಚರಿಸುವಲ್ಲೆಲ್ಲ ಕೈ-ಕಮಲ ಕಾರ್ಯಕರ್ತರ ಫ್ಲೆಕ್ಸ್​ಗಳು ಝಗಮಗ!
ಮೋದಿ ಸಂಚರಿಸುವಲ್ಲೆಲ್ಲ ಕೈ-ಕಮಲ ಕಾರ್ಯಕರ್ತರ ಫ್ಲೆಕ್ಸ್​ಗಳು ಝಗಮಗ!
ಲಾಭ ಪಡೆಯಲು ಕಳ್ಳಾಟ ಆಡಿದ್ರಾ ಆಸಿಯಾ? ಸೌಂದರ್ಯಾ ಛೀಮಾರಿ
ಲಾಭ ಪಡೆಯಲು ಕಳ್ಳಾಟ ಆಡಿದ್ರಾ ಆಸಿಯಾ? ಸೌಂದರ್ಯಾ ಛೀಮಾರಿ
ಇಂದು ಈ ರಾಶಿಯವರು ಅತಿಯಾಗಿ ನಂಬಿದವರಿಂದ ಮೋಸ ಹೋಗುವ ಸಾಧ್ಯತೆ
ಇಂದು ಈ ರಾಶಿಯವರು ಅತಿಯಾಗಿ ನಂಬಿದವರಿಂದ ಮೋಸ ಹೋಗುವ ಸಾಧ್ಯತೆ
ಡಾ.ರಮ್ಯಾ ಬರೆದಿರುವ ‘ಚಲಿಸುವ ಬಂಡೆ’ ಪುಸ್ತಕದಲ್ಲಿ ಯಾವೆಲ್ಲಾ ವಿಚಾರಗಳಿವೆ?
ಡಾ.ರಮ್ಯಾ ಬರೆದಿರುವ ‘ಚಲಿಸುವ ಬಂಡೆ’ ಪುಸ್ತಕದಲ್ಲಿ ಯಾವೆಲ್ಲಾ ವಿಚಾರಗಳಿವೆ?
ಲೀಲಾವತಿ ಆಸ್ಪತ್ರೆಯಲ್ಲಿ ಸಿಬ್ಬಂದಿ ಕೊರತೆ ಬಗ್ಗೆ ವಿನೋದ್ ರಾಜ್ ಬೇಸರ
ಲೀಲಾವತಿ ಆಸ್ಪತ್ರೆಯಲ್ಲಿ ಸಿಬ್ಬಂದಿ ಕೊರತೆ ಬಗ್ಗೆ ವಿನೋದ್ ರಾಜ್ ಬೇಸರ
ಸರ್ಕಾರಿ ಶಾಲಾ ಮಕ್ಕಳಿಗೆ ಇನ್ಮುಂದೆ ಹೊಸ ವಿನ್ಯಾಸದ ಸಮವಸ್ತ್ರ?
ಸರ್ಕಾರಿ ಶಾಲಾ ಮಕ್ಕಳಿಗೆ ಇನ್ಮುಂದೆ ಹೊಸ ವಿನ್ಯಾಸದ ಸಮವಸ್ತ್ರ?
ಶಿವರಾಜ್ ಕೆಆರ್ ಪೇಟೆ ಹೊಸ ಸಿನಿಮಾ ‘ಹವಾಮಾನ ವರದಿ’ ಶುರುವಾಗಿದ್ದು ಹೀಗೆ..
ಶಿವರಾಜ್ ಕೆಆರ್ ಪೇಟೆ ಹೊಸ ಸಿನಿಮಾ ‘ಹವಾಮಾನ ವರದಿ’ ಶುರುವಾಗಿದ್ದು ಹೀಗೆ..
ಬೆಂಗಳೂರಿನ ಮನಮೋಹಕ ತಾಣ ನಲ್ಲಿಗುಡ್ಡೆ ಅಭಿವೃದ್ಧಿಗೆ ಸರ್ಕಾರದ ಒತ್ತು
ಬೆಂಗಳೂರಿನ ಮನಮೋಹಕ ತಾಣ ನಲ್ಲಿಗುಡ್ಡೆ ಅಭಿವೃದ್ಧಿಗೆ ಸರ್ಕಾರದ ಒತ್ತು
‘ಹವಾಮಾನ ವರದಿ’ ಸಿನಿಮಾ ಬಗ್ಗೆ ನಾಯಕಿ ನಿರೀಕ್ಷಾ ರಾವ್ ಮಾತು: ವಿಡಿಯೋ
‘ಹವಾಮಾನ ವರದಿ’ ಸಿನಿಮಾ ಬಗ್ಗೆ ನಾಯಕಿ ನಿರೀಕ್ಷಾ ರಾವ್ ಮಾತು: ವಿಡಿಯೋ