Puneeth Rajkumar Last Rites: ಪುನೀತ್ ಅಂತ್ಯಕ್ರಿಯೆ ವೇಳೆ ಶಿವಣ್ಣ ಆಕ್ರಂದನ; ಅಭಿಮಾನಿಗಳ ಕರುಳು ಹಿಂಡುವಂತಿತ್ತು ಆ ನೋವಿನ ಕ್ಷಣ

| Updated By: ಮದನ್​ ಕುಮಾರ್​

Updated on: Oct 31, 2021 | 8:42 AM

ಪುನೀತ್​ ರಾಜ್​ಕುಮಾರ್​ ಅಂತ್ಯಕ್ರಿಯೆ ವೇಳೆ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು. ಅಣ್ಣ ಶಿವರಾಜ್​ಕುಮಾರ್​, ಪತ್ನಿ ಅಶ್ವಿನಿ, ಮಕ್ಕಳಾದ ಧೃತಿ ಹಾಗೂ ವಂದಿತಾ ಕಣ್ಣೀರು ಹಾಕುತ್ತಿರುವ ದೃಶ್ಯ ಮನ ಕಲಕುವಂತಿತ್ತು.

ಸಹೋದರ ಪುನೀತ್​ ರಾಜ್​ಕುಮಾರ್​ ಬಗ್ಗೆ ಅಪಾರ ಅಭಿಮಾನ ಇಟ್ಟುಕೊಂಡಿದ್ದರು ನಟ ಶಿವರಾಜ್​ಕುಮಾರ್​. ಎಲ್ಲ ವೇದಿಕೆಗಳಲ್ಲೂ ಅವರು ಪುನೀತ್​ ಬಗ್ಗೆ ಮಾತನಾಡುತ್ತಿದ್ದರು. ಆದರೆ ಅಂಥ ಹೆಮ್ಮೆಯ ತಮ್ಮನನ್ನೇ ಕಳೆದುಕೊಂಡ ಬಳಿಕ ಶಿವಣ್ಣನಿಗೆ ಮುಗಿಲು ಕಳಚಿ ತಲೆ ಮೇಲೆ ಬಿದ್ದಂತಾಗಿದೆ. ಸಹೋದರನ ಅಂತ್ಯಕ್ರಿಯೆ ವೇಳೆ ಅವರು ಬಿಕ್ಕಿ ಬಿಕ್ಕಿ ಅತ್ತಿದ್ದಾರೆ. ಶಿವರಾಜ್​ಕುಮಾರ್​ ಅವರನ್ನು ಈ ರೀತಿ ನೋಡುವಾಗ ಅಭಿಮಾನಿಗಳ ಕರುಳು ಹಿಂಡುತ್ತದೆ. ಆದರೆ ವಿಧಿಗೆ ಯಾವುದೇ ಕರುಣೆ ಇಲ್ಲ. ಎಲ್ಲರ ಪ್ರೀತಿಯ ನಟನನ್ನು ಜವರಾಯ ಹೊತ್ತೊಯ್ದಿದ್ದಾನೆ.

ಡಾ. ರಾಜ್​ಕುಮಾರ್​ ಸಮಾಧಿಯಿಂದ 125 ಅಡಿ ಅಂತರ ಹಾಗೂ ಪಾರ್ವತಮ್ಮ ರಾಜ್​ಕುಮಾರ್​ ಸಮಾಧಿಯಿಂದ 45 ಅಡಿ ಅಂತರದಲ್ಲಿ ಪುನೀತ್​ ರಾಜ್​ಕುಮಾರ್​​ ಅವರ ಅಂತ್ಯಕ್ರಿಯೆ ಮಾಡಲಾಗಿದೆ. ಈ ವೇಳೆ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು. ಪುನೀತ್​ ಪತ್ನಿ ಅಶ್ವಿನಿ, ಮಕ್ಕಳಾದ ಧೃತಿ ಹಾಗೂ ವಂದಿತಾ ಕಣ್ಣೀರು ಹಾಕುತ್ತಿರುವ ದೃಶ್ಯ ಮನ ಕಲಕುವಂತಿತ್ತು. ಚಿತ್ರರಂಗ ಹಾಗೂ ರಾಜಕೀಯದ ಅನೇಕ ಗಣ್ಯರು ಭಾಗಿ ಆಗಿದ್ದರು. ಕಂಠೀರವ ಸ್ಟುಡಿಯೋ ಆವರಣದ ಒಳಗೆ ಕುಟುಂಬದವರಿಗೆ ಮತ್ತು ಗಣ್ಯರಿಗೆ ಮಾತ್ರ ಪ್ರವೇಶ ನೀಡಲಾಗಿತ್ತು.

ಇದನ್ನೂ ಓದಿ:

Puneeth Rajkumar Funeral: ತಂದೆ-ತಾಯಿ ಸಮಾಧಿ ಪಕ್ಕದಲ್ಲೇ ಅಪ್ಪು ಚಿರ ನಿದ್ರೆ; ಈಡಿಗ ಸಂಪ್ರದಾಯದಂತೆ ಪುನೀತ್​ ಅಂತ್ಯಕ್ರಿಯೆ

Puneeth Rajkumar: ಶಿವಣ್ಣನ ಎದುರು ಪುನೀತ್​ ಹೇಳಿಕೊಂಡಿದ್ದ ಆಸೆ ಈಡೇರಲೇ ಇಲ್ಲ; ಅಭಿಮಾನಿಗಳ ಹೃದಯ ನುಚ್ಚುನೂರು