ಕ್ರಿಕೆಟರ್ ಡೇವಿಡ್ ವಾರ್ನರ್ಗೆ ಭಾರತದ ಜೊತೆ ಹಾಗೂ ಇಲ್ಲಿನ ಚಿತ್ರರಂಗದ ಜೊತೆ ಒಳ್ಳೆಯ ನಂಟು ಬೆಳೆದಿದೆ. ಅವರು ಐಪಿಲ್ನಲ್ಲಿ ಈ ಮೊದಲು ಹೈದರಾಬಾದ್ ತಂಡವನ್ನು ಪ್ರತಿನಿಧಿಸುತ್ತಿದ್ದರು. ಆ ಸಂದರ್ಭದಲ್ಲಿ ಟಾಲಿವುಡ್ ಜೊತೆ ಅವರಿಗೆ ಒಳ್ಳೆಯ ನಂಟು ಬೆಳೆದಿದೆ. ಈ ಕಾರಣದಿಂದಲೇ ಅವರು ಎಸ್ಎಸ್ ರಾಜಮೌಳಿ ಜೊತೆ ಕೆಲವು ಜಾಹೀರಾತುಗಳಲ್ಲಿ ನಟಿಸಿದ್ದರು. ಈ ಜಾಹೀರಾತು ಸಖತ್ ವೈರಲ್ ಆಗಿತ್ತು. ಈಗ ಅವರು ‘ಪುಷ್ಪ 2’ ಚಿತ್ರದ ಟ್ರೇಲರ್ ನೋಡಿ ಮೆಚ್ಚಿಕೊಂಡಿದ್ದಾರೆ.
ಬಿಹಾರದ ಪಾಟ್ನಾದಲ್ಲಿ ‘ಪುಷ್ಪ 2’ ಟ್ರೇಲರ್ ರಿಲೀಸ್ ಆಗಿದೆ. ಈ ಚಿತ್ರದ ಟ್ರೇಲರ್ ಲಾಂಚ್ ಈವೆಂಟ್ಗೆ ದೊಡ್ಡ ಸಂಖ್ಯೆಯಲ್ಲಿ ಜನರು ಸೇರಿದ್ದರು. ಇದು ‘ಪುಷ್ಪ 2’ ಚಿತ್ರದ ಬಗ್ಗೆ ಇರೋ ಕ್ರೇಜ್ಗೆ ಉತ್ತಮ ಉದಾಹರಣೆ ಆಗಿದೆ. ಸಖತ್ ಮಾಸ್ ಆಗಿರೋ ‘ಪುಷ್ಪ 2’ ಟ್ರೇಲರ್ ಗಮನ ಸೆಳೆಯಿತು. ಈಗ ಡೇವಿಡ್ ವಾರ್ನರ್ ಕೂಡ ಟ್ರೇಲರ್ ನೋಡಿ ಮೆಚ್ಚಿಕೊಂಡಿದ್ದಾರೆ.
‘ಪುಷ್ಪ 2’ ಟ್ರೇಲರ್ ನೋಡಿದ ಬಳಿಕ ಇನ್ಸ್ಟಾಗ್ರಾಮ್ನಲ್ಲಿ ಪೋಸ್ಟ್ ಮಾಡಿರುವ ಡೇವಿಡ್ ವಾರ್ನರ್, ಮೆಚ್ಚುಗೆ ಸೂಚಿಸಿದ್ದಾರೆ. ‘ಪುಷ್ಪ 2’ ಪೋಸ್ಟರ್ ಹಂಚಿಕೊಂಡಿರುವ ಅವರು, ‘ಉತ್ತಮ ಕೆಲಸ ಸಹೋದರ’ ಎಂದು ಬರೆದಿದ್ದಾರೆ. ಇದನ್ನು ಅಲ್ಲು ಅರ್ಜುನ್ ಅಭಿಮಾನಿಗಳು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುತ್ತಿದ್ದಾರೆ. ಇದಕ್ಕೆ ಫ್ಯಾನ್ಸ್ ನಾನಾ ರೀತಿಯಲ್ಲಿ ಕಮೆಂಟ್ ಮಾಡುತ್ತಾ ಇದ್ದಾರೆ.
‘ಪುಷ್ಪ’ ಚಿತ್ರದ ‘ತಗ್ಗೋದೇ ಇಲ್ಲ’ ಲೈನ್ ಸಖತ್ ಟ್ರೆಂಡ್ ಆಗಿತ್ತು. ‘ಪುಷ್ಪ’ ಚಿತ್ರದ ಈ ಐಕಾನಿಕ್ ಡೈಲಾಗ್ನ ಡೇವಿಡ್ ವಾರ್ನರ್ ಅವರು ಗ್ರೌಂಡ್ನಲ್ಲಿ ಮಾಡುತ್ತಿದ್ದರು. ಈ ಮೂಲಕ ಗಮನ ಸೆಳೆದಿದ್ದರು. ಸದ್ಯ ಅವರು ಅಂತಾರಾಷ್ಟ್ರೀಯ ಕ್ರಿಕೆಟ್ನಿಂದ ನಿವೃತ್ತಿ ಪಡೆದಿದ್ದಾರೆ. ಲೀಗ್ ಹಂತದ ಆಟಗಳನ್ನು ಮಾತ್ರ ಆಡುತ್ತಿದ್ದಾರೆ.
Warner bhAAi wishes !#DavidWarner #AlluArjun #Pushpa2 pic.twitter.com/AsQhkZdkAi
— Fukkard (@Fukkard) November 18, 2024
‘ಪುಷ್ಪ 2’ ಟ್ರೇಲರ್ ನೋಡಿದ ಬಳಿಕ ಚಿತ್ರದ ಮೇಲಿರುವ ಕ್ರೇಜ್ ಹೆಚ್ಚಿದೆ. ಅಲ್ಲು ಅರ್ಜುನ್ ಅವರು ‘ಪುಷ್ಪ ಅಂದ್ರೆ ಫ್ಲವರ್ ಅಂದುಕೊಂಡ್ಯಾ, ಅಲ್ಲ ಫೈಯರ್’ ಎನ್ನುತ್ತಿದ್ದರು. ಈಗ ಈ ಸಾಲುಗಳನ್ನು ಬದಲಾಯಿಸಲಾಗಿದೆ. ‘ಪುಷ್ಪ ಅಂದ್ರೆ ಫ್ಲವರ್ ಅಂದುಕೊಂಡ್ಯಾ, ಅಲ್ಲ ವೈಲ್ಡ್ ಫಯರ್’ ಎಂದು ಬದಲಿಸಲಾಗಿದೆ.
ಇದನ್ನೂ ಓದಿ: ‘ಪುಷ್ಪ 2’ ಟ್ರೇಲರ್ ಲಾಂಚ್ನಲ್ಲಿ ಜನಸಾಗರ; ಬಿಹಾರದಲ್ಲಿ ಅಲ್ಲು ಅರ್ಜುನ್ ಕ್ರೇಜ್ ಹೇಗಿದೆ ನೋಡಿ
ಅಲ್ಲು ಅರ್ಜುನ್, ರಶ್ಮಿಕಾ ಮಂದಣ್ಣ ಸೇರಿ ಅನೇಕರು ಈ ಸಿನಿಮಾದಲ್ಲಿ ನಟಿಸಿದ್ದಾರೆ. ಸುಕುಮಾರ್ ನಿರ್ದೇಶನ ಇರುವ ಈ ಚಿತ್ರಕ್ಕೆ ಮೈತ್ರಿ ಮೂವೀ ಮೇಕರ್ಸ್ ಬಂಡವಾಳ ಹೂಡಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.