ದಕ್ಷಿಣ ಸಿನಿಮಾ ಇಂಡಸ್ಟ್ರಿಯವರಿಗೆ ಮೈ ಬಣ್ಣದ ಗೀಳಿದೆ; ಚರ್ಚೆಗೆ ಕಾರಣವಾಯ್ತು ರಾಧಿಕಾ ಆಪ್ಟೆ ಹೇಳಿಕೆ

ದಕ್ಷಿಣ ಭಾರತದ ಚಿತ್ರರಂಗದಲ್ಲಿ ಬೆಳ್ಳಗಿರುವ ಉತ್ತರ ಭಾರತದ ನಟಿಯರಿಗೆ ಮಾತ್ರ ಪ್ರಾಮುಖ್ಯತೆ ನೀಡುವುದನ್ನು ತಾನು ಎಂದಿಗೂ ಬೆಂಬಲಿಸುವುದಿಲ್ಲ ಎಂದು ಬಾಲಿವುಡ್ ನಟಿ ರಾಧಿಕಾ ಆಪ್ಟೆ ಸ್ಪಷ್ಟಪಡಿಸಿದ್ದಾರೆ. ಸ್ಥಳೀಯ ಪ್ರತಿಭೆಗಳು ಮತ್ತು ಭಾಷೆ ಬರುವ ನಟಿಯರಿಗೆ ಅವಕಾಶ ಸಿಗಬೇಕು ಎಂಬ ಕಾರಣಕ್ಕೆ ತಾನು ಸೌತ್ ಸಿನಿಮಾಗಳಿಂದ ದೂರ ಉಳಿದೆ ಎಂದು ಅವರು ತಿಳಿಸಿದ್ದಾರೆ.

ದಕ್ಷಿಣ ಸಿನಿಮಾ ಇಂಡಸ್ಟ್ರಿಯವರಿಗೆ ಮೈ ಬಣ್ಣದ ಗೀಳಿದೆ; ಚರ್ಚೆಗೆ ಕಾರಣವಾಯ್ತು ರಾಧಿಕಾ ಆಪ್ಟೆ ಹೇಳಿಕೆ
ರಾಧಿಕಾ
Edited By:

Updated on: Oct 28, 2026 | 11:33 AM

ಬಾಲಿವುಡ್‌ನ ಪ್ರತಿಭಾವಂತ ನಟಿ ರಾಧಿಕಾ ಆಪ್ಟೆ ಅವರು ಸೌತ್ ಸಿನಿಮಾ ಇಂಡಸ್ಟ್ರಿ ಬಗ್ಗೆ ಹೇಳಿಕೆ ಒಂದನ್ನು ನೀಡಿದ್ದಾರೆ. ದಕ್ಷಿಣ ಭಾರತದ ಚಿತ್ರರಂಗದಲ್ಲಿ ಉತ್ತರ ಭಾರತದ ನಟಿಯರಿಗೆ ಮಣೆ ಹಾಕುವುದರ ಹಿಂದೆ ಮೈಬಣ್ಣದ ಗೀಳು ಇದೆ ಎಂದು ಅವರು ನೇರವಾಗಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಈ ನಿರ್ದಿಷ್ಟ ಕಾರಣಕ್ಕಾಗಿಯೇ ತಾನು ದಕ್ಷಿಣದ ಸಿನಿಮಾಗಳಿಂದ ದೂರ ಉಳಿದೆ ಎಂದು ಸಂದರ್ಶನವೊಂದರಲ್ಲಿ ಅವರು ಸ್ಪಷ್ಟಪಡಿಸಿದ್ದಾರೆ. ಈ ಹೇಳಿಕೆ ಚರ್ಚೆ ಹುಟ್ಟುಹಾಕಿದೆ.

ದಕ್ಷಿಣದ ನಿರ್ಮಾಪಕರು ಮತ್ತು ನಿರ್ದೇಶಕರು ಸ್ಥಳೀಯ ಪ್ರತಿಭೆಗಳಿಗೆ ಅವಕಾಶ ನೀಡಬೇಕು ಎಂದು ರಾಧಿಕಾ ಅಭಿಪ್ರಾಯಪಟ್ಟಿದ್ದಾರೆ. ಅಲ್ಲಿನ ನಟಿಯರು ಅದ್ಭುತ ಪ್ರತಿಭೆ ಹೊಂದಿದ್ದು, ಭಾಷೆಯ ಮೇಲೂ ಉತ್ತಮ ಹಿಡಿತ ಹೊಂದಿರುತ್ತಾರೆ. ಆದರೆ ಮುಂಬೈನಿಂದ ಹೋಗಿ, ಭಾಷೆಯೇ ಬಾರದ ನಟಿಯರನ್ನು ಕರೆಸಿ ಡಬ್ಬಿಂಗ್ ಮಾಡಿಸುವುದನ್ನು ತಾನು ಬೆಂಬಲಿಸುವುದಿಲ್ಲ ಎಂದು ಅವರು ಖಡಾಖಂಡಿತವಾಗಿ ನುಡಿದಿದ್ದಾರೆ.

ಭಾಷೆಯ ಅಡೆತಡೆಯೂ ಕೂಡ ತಾನು ಸೌತ್ ಸಿನಿಮಾಗಳಿಂದ ದೂರವಾಗಲು ಮತ್ತೊಂದು ಮುಖ್ಯ ಕಾರಣ ಎಂದು ನಟಿ ತಿಳಿಸಿದ್ದಾರೆ. ಕೇವಲ ಬಾಯ್ಪಾಠ ಮಾಡಿದ ಸಾಲುಗಳನ್ನು ಹೇಳುವುದಷ್ಟೇ ನಟನೆಯಲ್ಲ. ನಿರ್ದಿಷ್ಟ ಸನ್ನಿವೇಶಕ್ಕೆ ತಕ್ಕಂತೆ ಅಭಿವ್ಯಕ್ತಿಸಲು ಆ ಭಾಷೆ ಚೆನ್ನಾಗಿ ತಿಳಿದಿರಬೇಕು. ಭಾಷೆ ಬಾರದ ಕಾರಣ ತಾನು ಆ ಸಿನಿಮಾಗಳಿಗೆ ಸಂಪೂರ್ಣ ನ್ಯಾಯ ಒದಗಿಸಲು ಸಾಧ್ಯವಿಲ್ಲ ಎಂದು ಭಾವಿಸಿದ್ದಾಗಿ ಅವರು ಹೇಳಿಕೊಂಡಿದ್ದಾರೆ.

ಹಿಂದೆ ತೆಲುಗು ಚಿತ್ರರಂಗದ ಪುರುಷ ಪ್ರಧಾನ ಧೋರಣೆ ಹಾಗೂ ಮಹಿಳಾ ಪಾತ್ರಗಳ ಬಿಂಬನೆಯನ್ನು ರಾಧಿಕಾ ಕಟುವಾಗಿ ಟೀಕಿಸಿದ್ದರು. ಆದರೆ ಈಗ ಹಳೆಯ ದಿನಗಳನ್ನು ಮೆಲುಕು ಹಾಕುತ್ತಾ, ಅಂದಿನ ಸೌತ್ ಚಿತ್ರರಂಗದ ಕೆಲವು ಒಳ್ಳೆಯ ಗುಣಗಳನ್ನು ನೆನಪಿಸಿಕೊಂಡಿದ್ದಾರೆ. ಅಲ್ಲಿನ ಸೆಟ್‌ಗಳಲ್ಲಿ ಎಲ್ಲರೂ ಬಹಳ ಸ್ನೇಹಪರವಾಗಿ, ಕುಟುಂಬದ ಸದಸ್ಯರಂತೆ ಪ್ರೀತಿಯಿಂದ ನೋಡಿಕೊಳ್ಳುತ್ತಿದ್ದರು ಎಂದು ಅವರು ಹಂಚಿಕೊಂಡಿದ್ದಾರೆ.

ಇದನ್ನೂ ಓದಿ: ಲೀಕ್ ಆದ ನನ್ನ ಖಾಸಗಿ ವಿಡಿಯೋನ ವಾಚ್​​ಮನ್ ಕೂಡ ನೋಡುತ್ತಿದ್ದ; ರಾಧಿಕಾ ಆಪ್ಟೆ

ಸುಮಾರು ಹತ್ತು ವರ್ಷಗಳ ಬಳಿಕವೂ ದಕ್ಷಿಣದ ಸಿನಿಮಾಗಳ ಬಗ್ಗೆ ರಾಧಿಕಾ ಆಪ್ಟೆ ನೀಡಿರುವ ಈ ಹೇಳಿಕೆಗಳು ಈಗ ಸಿನಿಮಾರಂಗದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿವೆ. ಸ್ಥಳೀಯ ಕಲಾವಿದರಿಗೆ ಹೆಚ್ಚಿನ ಪ್ರಾಮುಖ್ಯತೆ ಸಿಗಬೇಕು ಎಂಬ ಅವರ ಕಾಳಜಿಗೆ ಹಲವರ ಬೆಂಬಲವೂ ವ್ಯಕ್ತವಾಗುತ್ತಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

 

ಶ್ರೀಲಕ್ಷ್ಮೀ ಎಚ್

ಪತ್ರಕರ್ತೆ ಆಗಬೇಕು ಅಂದುಕೊಂಡವಳು. ಮನೆಯವರ ಒತ್ತಾಯಕ್ಕೆ ಅಕೌಂಟ್ ತೆಗೆದುಕೊಂಡೆ. ಈಗ ಬ್ಯಾಂಕ್ ಎಕ್ಸಾಂಗಳನ್ನು ಬರೆಯುತ್ತಿದ್ದೇನೆ. ಸಮಯ ಸಿಕ್ಕಾಗ ಸುತ್ತಾಡುತ್ತೇನೆ. ಓದಿನ ಬಗ್ಗೆ ಅತೀವ ಆಸಕ್ತಿ. ರವಿ ಬೆಳಗೆರೆ, ತೇಜಸ್ವಿ ನೆಚ್ಚಿನವರು. ಅವರ ಪುಸ್ತಕಗಳನ್ನು ಮತ್ತೆ ಮತ್ತೆ ಓದುತ್ತೇನೆ. ಸಮಯ ಸಿಕ್ಕಾಗ ಪತ್ರಿಕೆಗಳಿಗೆ ಕಥೆಗಳನ್ನು ಬರೆಯುತ್ತೇನೆ. ಸಿನಿಮಾ ಬಗ್ಗೆ ಅತೀವ ಆಸಕ್ತಿ. ಈಗ ಟಿವಿ9 ಕನ್ನಡಕ್ಕೆ ಸಿನಿಮಾ ಸುದ್ದಿಗಳನ್ನು ಬರೆಯುತ್ತಿದ್ದೇನೆ.

Read More
Loading...
Unable to load recommendations.
Follow Us