ಅಪ್ಪು ಇಲ್ಲದೇ ಕಳೆಯಿತು 2 ತಿಂಗಳು; ನೇತ್ರದಾನದ ಬಗ್ಗೆ ವಿಶೇಷ ಮಾಹಿತಿ ಹಂಚಿಕೊಂಡ ರಾಘಣ್ಣ
8884018800 ಫೋನ್ ನಂಬರ್ಗೆ ಮಿಸ್ ಕಾಲ್ ಕೊಟ್ಟರೆ ಸಾಕು, ನೇತ್ರದಾನಕ್ಕೆ ಬೇಕಾದ ಫಾರ್ಮ್ ಲಿಂಕ್ ಸಿಗುತ್ತದೆ. ಈ ಬಗ್ಗೆ ಸುದ್ದಿಗೋಷ್ಠಿಯಲ್ಲಿ ರಾಘವೇಂದ್ರ ರಾಜ್ಕುಮಾರ್ ಮಾಹಿತಿ ನೀಡಿದ್ದಾರೆ.
ನಟ ಪುನೀತ್ ರಾಜ್ಕುಮಾರ್ (Puneeth Rajkumar) ಅವರನ್ನು ಕಳೆದುಕೊಂಡು 2 ತಿಂಗಳು ಆಗಿದೆ. ಈ ಸಂದರ್ಭದಲ್ಲಿ ಡಾ. ರಾಜ್ಕುಮಾರ್ ಕುಟುಂಬದವರು ಅಪ್ಪು ಸಮಾಧಿಗೆ ಪೂಜೆ ಸಲ್ಲಿಸಿದ್ದಾರೆ. ಈ ವೇಳೆ ಮಾತನಾಡಿದ ರಾಘವೇಂದ್ರ ರಾಜ್ಕುಮಾರ್ (Raghavendra Rajkumar) ಅವರು ಒಂದು ವಿಶೇಷ ಮಾಹಿತಿ ಹಂಚಿಕೊಂಡರು. ಪುನೀತ್ ನಿಧನದ ಬಳಿಕ ನೇತ್ರದಾನದ ಬಗ್ಗೆ ಸಮಾಜದಲ್ಲಿ ಜಾಗೃತಿ ಹೆಚ್ಚಿದೆ. ನೇತ್ರದಾನಕ್ಕೆ (Eye Donation) ನೋಂದಣಿ ಮಾಡಿಕೊಳ್ಳುವವರ ಸಂಖ್ಯೆಯಲ್ಲಿ ಗಣನೀಯವಾಗಿ ಏರಿಕೆ ಆಗಿದೆ. ಈಗ ನೇತ್ರದಾನ ನೋಂದಣಿ ಮಾಡುವುದು ಇನ್ನಷ್ಟು ಸುಲಭ ಆಗಿದೆ. 8884018800 ಫೋನ್ ನಂಬರ್ಗೆ ಮಿಸ್ ಕಾಲ್ ಕೊಟ್ಟರೆ ಸಾಕು, ನೇತ್ರದಾನಕ್ಕೆ ಬೇಕಾದ ಫಾರ್ಮ್ ಲಿಂಕ್ ಸಿಗುತ್ತದೆ ಎಂದು ರಾಘಣ್ಣ ಹೇಳಿದ್ದಾರೆ. ಈ ಬಗ್ಗೆ ಡಾಕ್ಟರ್ ಭುಜಂಗ ಶೆಟ್ಟಿ (Dr Bhujang Shetty) ಕೂಡ ಮಾಹಿತಿ ತಿಳಿಸಿದ್ದಾರೆ.
ಇದನ್ನೂ ಓದಿ:
‘ಚಿತ್ರರಂಗಕ್ಕೆ ಪುನೀತ್ ರೀತಿಯ ನಟ ಬೇಕು; ನಿಖಿಲ್ ಹೆಚ್ಚು ಸಿನಿಮಾ ಮಾಡಲಿ’: ಎಚ್.ಡಿ. ಕುಮಾರಸ್ವಾಮಿ
Year Ender 2021: ಚಿತ್ರರಂಗದ ಪಾಲಿಗೆ ಕಪ್ಪು ಚುಕ್ಕೆಯಾದ 2021; ಮರೆಯೋಕೆ ಆಗಲ್ಲ ಪುನೀತ್ ನಿಧನದ ನೋವು