ರಾಕೇಶ್ ಅಡಿಗ (Rakesh Adiga) ಅವರು ಬಿಗ್ ಬಾಸ್ ಮನೆಯಲ್ಲಿ ಭಿನ್ನವಾಗಿ ಗುರುತಿಸಿಕೊಳ್ಳುತ್ತಿದ್ದಾರೆ. ಅವರು ವಿವಾದ ಹಾಗೂ ಜಗಳಗಳಿಂದ ಆದಷ್ಟು ದೂರವೇ ಇರೋಕೆ ಪ್ರಯತ್ನಿಸುತ್ತಾರೆ. ಇದು ಮನೆಯವರ ಗಮನಕ್ಕೂ ಬಂದಿದೆ. ಅವರು ಯಾವಾಗಲೂ ಸಿಟ್ಟೇ ಮಾಡಿಕೊಂಡಿಲ್ಲ ಎಂಬ ವಿಚಾರ ಬಿಗ್ ಬಾಸ್ ಮನೆಯಲ್ಲಿ ಚರ್ಚೆಗೆ ಬಂತು. ರಾಕೇಶ್ (Rakesh Adiga) ನಿತ್ಯ ಧ್ಯಾನ ಮಾಡುತ್ತಾರೆ. ಈ ಕಾರಣದಿಂದಲೂ ಅವರು ತಮ್ಮನ್ನು ತಾವು ನಿಯಂತ್ರಿಸಿಕೊಳ್ಳುತ್ತಿದ್ದಾರೆ ಎನ್ನುವ ಮಾತಿದೆ. ಈ ಮಧ್ಯೆ ಬಿಗ್ ಬಾಸ್ ಮನೆಯಲ್ಲಿ ನಡೆದ ಒಂದು ಘಟನೆ ಅಚ್ಚರಿ ಮೂಡಿಸಿದೆ. ರಾಕೇಶ್ ಅಡಿಗ ಒಟ್ಟೊಟ್ಟಿಗೆ ಇಬ್ಬರಿಗೆ ಕಿಸ್ ಮಾಡಿದ್ದಾರೆ.
ರಾಕೇಶ್ ಅಡಿಗ ಅವರು ಕೆಲವೊಮ್ಮೆ ಫ್ಲರ್ಟ್ ಮಾಡುತ್ತಾ ಸಮಯ ಕಳೆಯುತ್ತಾರೆ. ಆದರೆ, ಗಂಭೀರ ವಿಚಾರ ಬಂದಾಗ ಅವರು ತುಂಬಾನೇ ಸೀರಿಯಸ್ ಸ್ವರೂಪ ಪಡೆದುಕೊಳ್ಳುತ್ತಾರೆ. ಸೋನು ಶ್ರೀನಿವಾಸ್ ಗೌಡ ವಿಚಾರದಲ್ಲಿ ಅವರು ಇವೆರಡನ್ನೂ ಮಾಡುತ್ತಾರೆ. ಸೋನು ಜತೆ ಅವರಿಗೆ ಒಳ್ಳೆಯ ಬಾಂಡಿಂಗ್ ಇದೆ. ಸೋನು ಕೂಡ ರಾಕೇಶ್ ಜತೆ ಹೆಚ್ಚು ಕ್ಲೋಸ್ ಆಗಿರಲು ಪ್ರಯತ್ನಿಸುತ್ತಾರೆ. ಸೆಪ್ಟೆಂಬರ್ 9ರ ಎಪಿಸೋಡ್ನಲ್ಲೂ ಇದೇ ಆಗಿದೆ.
ರಾಕೇಶ್ ಅಡಿಗ ಹಾಗೂ ಸೋನು ಶ್ರೀನಿವಾಸ್ ಗೌಡ ಬೆಡ್ಮೇಲೆ ಒಟ್ಟಾಗಿ ಕುಳಿತಿದ್ದರು. ಈ ವೇಳೆ ಸೋನು ಕಿಸ್ ಮಾಡುವಂತೆ ರಾಕೇಶ್ ಬಳಿ ಕೇಳಿಕೊಂಡರು. ಅವರು ಒಂದೇ ಒಂದು ಕ್ಷಣವೂ ಯೋಚಿಸದೇ ಸೋನು ಕೆನ್ನೆಗೆ ಮುತ್ತಿಟ್ಟರು. ಅಲ್ಲಿಯೇ ಇದ್ದ ಜಯಶ್ರೀ ಆರಾಧ್ಯ ಇದನ್ನು ನೋಡಿ ನಕ್ಕರು. ಜತೆಗೆ ತಮಗೆ ಕಿಸ್ ಮಾಡುವಂತೆ ಕೋರಿದರು.
‘ರಾಕೇಶ್ ನನಗೂ ಕಿಸ್ ಮಾಡು. ಅವಳ ರಿಯಾಕ್ಷನ್ ಹೇಗಿರುತ್ತದೆ ಅನ್ನೋದನ್ನು ನೋಡಬೇಕು’ ಎಂದರು ಜಯಶ್ರೀ. ಜಯಶ್ರೀ ಇದ್ದ ಜಾಗಕ್ಕೆ ತೆರಳಿದ ರಾಕೇಶ್ ಅವರು ಜಯಶ್ರೀಗೆ ಕಿಸ್ ಮಾಡಿಯೇ ಬಿಟ್ಟರು. ಇದನ್ನು ನೋಡಿ ಸೋನು ಕೊಂಚ ಹೊಟ್ಟೆ ಉರಿದುಕೊಂಡರು. ಇದನ್ನು ತೋರಿಸಿದರು ಕೂಡ. ಈ ವಿಚಾರ ನೋಡಿ ರಾಕೇಶ್ ಹಾಗೂ ಜಯಶ್ರೀ ನಕ್ಕರು. ಇಬ್ಬರಿಗೂ ಒಟ್ಟೊಟ್ಟಿಗೆ ಕಿಸ್ ಮಾಡಿದ್ದನ್ನು ನೋಡಿ ವೀಕ್ಷಕರು ಅಚ್ಚರಿ ಹೊರಹಾಕಿದ್ದಾರೆ.
ಇದನ್ನೂ ಓದಿ: ಬಿಗ್ ಬಾಸ್ ಹೊಸ ಸೀಸನ್ ನಡೆಸಿಕೊಡಲು ಕಮಲ್ ಹಾಸನ್ ರೆಡಿ; ಈ ಬಾರಿ ಹೇಗಿರಲಿದೆ ದೊಡ್ಮನೆ ಸೆಟ್?
ಬಿಗ್ ಬಾಸ್ ಮನೆಯಲ್ಲಿ ಸ್ಪರ್ಧೆ ಹೆಚ್ಚಿದೆ. 9 ಸ್ಪರ್ಧಿಗಳು ಉಳಿದುಕೊಂಡಿದ್ದು, ರೂಪೇಶ್, ಸಾನ್ಯಾ ಹಾಗೂ ರಾಕೇಶ್ ಫಿನಾಲೇ ವೀಕ್ ತಲುಪಿದ್ದಾರೆ. ಉಳಿದ ಆರು ಮಂದಿ ನಾಮಿನೇಷನ್ ಲಿಸ್ಟ್ನಲ್ಲಿ ಇದ್ದಾರೆ. ಈ ವಾರ ಕೆಲವರು ಬಿಗ್ ಬಾಸ್ ಮನೆಯಿಂದ ಹೊರ ಹೋಗೋದು ಪಕ್ಕಾ ಆಗಿದೆ.
Published On - 6:30 am, Wed, 7 September 22