‘ಗೇಮ್ ಚೇಂಜರ್​’ನ ಭೇಟಿ ಮಾಡಿದ ‘ಗೇಮ್ ಚೇಂಜರ್’; ಹೊಸ ಸಿನಿಮಾ ಬಗ್ಗೆ ಮಾತುಕತೆ?

|

Updated on: Oct 05, 2023 | 7:06 AM

‘ಧೋನಿ ಎಂಟರ್​ಟೇನ್​ಮೆಂಟ್’ ನಿರ್ಮಾಣ ಸಂಸ್ಥೆಯ ಮೂಲಕ ಅವರು ಸಿನಿಮಾ ನಿರ್ಮಾಣಕ್ಕೆ ಇಳಿದಿದ್ದಾರೆ. ‘ಲೆಟ್ಸ್ ಗೆಟ್ ಮ್ಯಾರೀಡ್’ ಹೆಸರಿನ ಚಿತ್ರವನ್ನೂ ಅವರು ನಿರ್ಮಾಣ ಮಾಡಿದ್ದಾರೆ. ಈಗ ಅವರು ರಾಮ್ ಚರಣ್​ನ ಭೇಟಿ ಮಾಡಿದ್ದಾರೆ.

‘ಗೇಮ್ ಚೇಂಜರ್​’ನ ಭೇಟಿ ಮಾಡಿದ ‘ಗೇಮ್ ಚೇಂಜರ್’; ಹೊಸ ಸಿನಿಮಾ ಬಗ್ಗೆ ಮಾತುಕತೆ?
ಧೋನಿ-ರಾಮ್ ಚರಣ್
Follow us on

ಭಾರತದ ಮಾಜಿ ಕ್ರಿಕೆಟಿಗ, ಚೆನ್ನೈ ಸೂಪರ್ ಕಿಂಗ್ಸ್ ಕ್ಯಾಪ್ಟನ್ ಎಂಎಸ್​ ಧೋನಿ (MS Dhoni) ಗೇಮ್ ಚೇಂಜರ್ ಎಂದೇ ಫೇಮಸ್. ಎಂತಹುದೇ ಕಷ್ಟದ ಪಂದ್ಯ ಇದ್ದರೂ ಆ ಆಟದ ದಿಕ್ಕನ್ನು ಬದಲಿಸುವ ಶಕ್ತಿಯನ್ನು ಅವರು ಹೊಂದಿದ್ದರು. ಇನ್ನು, ರಾಮ್ ಚರಣ್ ಅವರು ‘ಗೇಮ್ ಚೇಂಜರ್’ ಸಿನಿಮಾ ಕೆಲಸದಲ್ಲಿ ಬ್ಯುಸಿ ಆಗಿದ್ದಾರೆ. ಇಬ್ಬರೂ ಗೇಮ್​ ಚೇಂಜರ್​ಗಳು ಒಂದು ಕಡೆ ಸೇರಿದ್ದಾರೆ. ಈ ಸಂದರ್ಭದ ಫೋಟೋ ವೈರಲ್ ಆಗಿದೆ. ಹೊಸ ಸಿನಿಮಾದ ಬಗ್ಗೆ ಮಾತುಕತೆ ಶುರುವಾಗಿದೆಯೇ ಎನ್ನುವ ಪ್ರಶ್ನೆ ಮೂಡಿದೆ.

ಧೋನಿ ಅವರು ಚಿತ್ರರಂಗದ ಯಾರನ್ನೇ ಭೇಟಿ ಮಾಡಿದರೂ ಕುತೂಹಲ ಮೂಡುತ್ತದೆ. ಅದಕ್ಕೆ ಕಾರಣ ಅವರು ನಿರ್ಮಾಣ ಸಂಸ್ಥೆ ಹೊಂದಿರುವುದು. ‘ಧೋನಿ ಎಂಟರ್​ಟೇನ್​ಮೆಂಟ್’ ನಿರ್ಮಾಣ ಸಂಸ್ಥೆಯ ಮೂಲಕ ಅವರು ಸಿನಿಮಾ ನಿರ್ಮಾಣಕ್ಕೆ ಇಳಿದಿದ್ದಾರೆ. ‘ಲೆಟ್ಸ್ ಗೆಟ್ ಮ್ಯಾರೀಡ್’ ಹೆಸರಿನ ಚಿತ್ರವನ್ನೂ ಅವರು ನಿರ್ಮಾಣ ಮಾಡಿದ್ದಾರೆ. ಈಗ ಅವರು ರಾಮ್ ಚರಣ್​ನ ಭೇಟಿ ಮಾಡಿದ್ದಾರೆ.

ರಾಮ್ ಚರಣ್ ಅವರು ಸದ್ಯ ‘ಗೇಮ್ ಚೇಂಜರ್’ ಸಿನಿಮಾ ಕೆಲಸಗಳಲ್ಲಿ ಬ್ಯುಸಿ ಇದ್ದಾರೆ. ಆ ಬಳಿಕ ಅವರು ಯಾರ ಜೊತೆ ಕೈ ಜೋಡಿಸುತ್ತಾರೆ ಎನ್ನುವ ಕುತೂಹಲ ಇದೆ. ರಾಮ್ ಚರಣ್ ಮುಂದಿನ ಚಿತ್ರಕ್ಕೆ ಧೋನಿ ನಿರ್ಮಾಣ ಮಾಡಲು ಆಸಕ್ತಿ ತೋರಿಸಿದ್ದಾರೋ ಅಥವಾ ಇದೊಂದು ಸಹಜ ಭೇಟಿಯೋ ಎನ್ನುವ ಬಗ್ಗೆ ಇವರ ಕಡೆಯಿಂದ ಸ್ಪಷ್ಟನೆ ಸಿಗಬೇಕಿದೆ.

ಇನ್​ಸ್ಟಾಗ್ರಾಮ್​ನಲ್ಲಿ ಫೋಟೋ ಪೋಸ್ಟ್ ಮಾಡಿರುವ ರಾಮ್ ಚರಣ್, ‘ಧೋನಿಯನ್ನುನ ಭೇಟಿ ಮಾಡಿದ್ದು ಖುಷಿ ಎನಿಸುತ್ತಿದೆ’ ಎಂದು ಬರೆದುಕೊಂಡಿದ್ದಾರೆ. ಇದಕ್ಕೆ ಅನೇಕರು, ‘ಇಬ್ಬರು ಗೇಮ್ ಚೇಂಜರ್​ಗಳು’ ಎಂದು ಕಮೆಂಟ್ ಮಾಡಿದ್ದಾರೆ.

ಇದನ್ನೂ ಓದಿ: ಧೋನಿಯ ಹೊಸ ಲುಕ್​ಗೆ ಅಭಿಮಾನಿಗಳು ಫಿದಾ: ಇಲ್ಲಿದೆ ಫೋಟೋಸ್

ಧೋನಿ ಅವರು ಐಪಿಎಲ್​​ ಆಡುತ್ತಿದ್ದಾರೆ. ಅವರಿಗೆ ಮೊದಲಿನಿಂದಲೂ ಸಿನಿಮಾ ಮೇಲೆ ಆಸಕ್ತಿ ಇತ್ತು. ಅವರ ಕುರಿತು ಬಯೋಪಿಕ್ ಕೂಡ ಬಂದಿದೆ. ಈ ಹಿನ್ನೆಲೆಯಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್​ನಿಂದ ನಿವೃತ್ತಿ ಪಡೆದ ಧೋನಿ ಅವರು ಸಿನಿಮಾ ನಿರ್ಮಾಣಕ್ಕೆ ಇಳಿದರು. ಈ ಸಂಸ್ಥೆ ನಿರ್ಮಾಣ ಮಾಡಿದ ಮೊದಲ ಚಿತ್ರ ‘ಲೆಟ್ಸ್ ಗೆಟ್ ಮ್ಯಾರೀಡ್’ ಸೋತಿದೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ