‘ಕಾಫಿ ವಿತ್ ಕರಣ್ ಸೀಸನ್ 8’ರ ಆರಂಭಕ್ಕೆ ದಿನಗಣನೆ ಶುರುವಾಗಿದೆ. ಎಂದಿನಂತೆ ಕರಣ್ ಜೋಹರ್ ಅವರು ಈ ಕಾರ್ಯಕ್ರಮ ನಡೆಸಿಕೊಡಲಿದ್ದಾರೆ. ಹೊಸ ಸೀಸನ್ನ ಪ್ರೋಮೋನ ಕರಣ್ ಜೋಹರ್ ಹಂಚಿಕೊಂಡಿದ್ದಾರೆ. ಇದಕ್ಕೆ ಪಾಸಿಟಿವ್ ಪ್ರತಿಕ್ರಿಯೆ ವ್ಯಕ್ತವಾಗಿದೆ. ‘ಕಾಫಿ ವಿತ್ ಕರಣ್’ನಲ್ಲಿ (Koffee With Karan) ಸಾಕಷ್ಟು ಸೆಲೆಬ್ರಿಟಿಗಳು ಬಂದು ಹೋಗಿದ್ದಾರೆ. ಕೇವಲ ಚಿತ್ರರಂಗದವರು ಮಾತ್ರವಲ್ಲ ಕ್ರಿಕೆಟರ್ ಕೂಡ ಬಂದಿದ್ದರು. ಸಾಕಷ್ಟು ವಿವಾದಗಳು ಇಲ್ಲಿ ಆಗಿವೆ. ಅನೇಕರ ಕರಿಯರ್ ಮೇಲೆ ಈ ಶೋ ಪ್ರಭಾವ ಬೀರಿದೆ. ಅಡಲ್ಟ್ ಪ್ರಶ್ನೆಗಳನ್ನು ಯಾವುದೇ ಮುಚ್ಚುಮರೆ ಇಲ್ಲದೆ ಕೇಳಲಾಗುತ್ತದೆ. ಈ ಕಾರಣಕ್ಕೆ ಅನೇಕರಿಗೆ ಈ ಶೋ ಕಂಡರೆ ಆಗುವುದಿಲ್ಲ. ಈ ಶೋನಿಂದ ಉಂಟಾದ ಟಾಪ್ 10 ವಿವಾದಗಳು ಇಲ್ಲಿವೆ.
ಹಾರ್ದಿಕ್ ಪಾಂಡ್ಯ ಹಾಗೂ ಕೆಎಲ್ ರಾಹುಲ್ ‘ಕಾಫಿ ವಿತ್ ಕರಣ್’ ಶೋಗೆ ಬಂದು ದೊಡ್ಡ ತಪ್ಪು ಮಾಡಿದ್ದರು. ಇಬ್ಬರೂ ಮಹಿಳೆಯರ ಬಗ್ಗೆ ಅಶ್ಲೀಲ ಕಮೆಂಟ್ ಮಾಡಿದ್ದರು. ಇದು ಇವರ ವೃತ್ತಿ ಜೀವನಕ್ಕೆ ತೊಂದರೆ ಉಂಟು ಮಾಡಿತ್ತು. ಕೆಲವು ಮ್ಯಾಚ್ಗಳಿಂದ ಬಿಸಿಸಿಐ ಇವರನ್ನು ಹೊರಗೆ ಇಟ್ಟಿತ್ತು. ನಂತರ ಅವರು ಕ್ಷಮೆ ಕೇಳಿದ್ದರು.
ಕರಣ್ ಜೋಹರ್ ಅವರನ್ನು ಕಂಡರೆ ಕಂಗನಾ ರಣಾವತ್ ಅವರಿಗೆ ಯಾವಾಗಲೂ ಆಗುವುದಿಲ್ಲ. ಕರಣ್ ಜೋಹರ್ ನೆಪೋಟಿಸಂನ ಕಿಂಗ್ಪಿನ್ ಅನ್ನೋದು ಅವರ ಆರೋಪ. ಸೀಸನ್ ಐದರಲ್ಲಿ ಕರಣ್ ಜೋಹರ್ ಎದುರೇ ಕಂಗನಾ ರಣಾವತ್ ಈ ಬಗ್ಗೆ ಮಾತನಾಡಿದ್ದರು. ಕರಣ್ ಅವರಿಗೆ ಕ್ಲಾಸ್ ತೆಗೆದುಕೊಂಡಿದ್ದರು. ಈ ವಿಡಿಯೋ ಸಾಕಷ್ಟು ವೈರಲ್ ಆಗಿತ್ತು.
ಆಲಿಯಾ ಭಟ್, ವರುಣ್ ಧವನ್ ಹಾಗೂ ಸಿದ್ದಾರ್ಥ್ ಮಲ್ಹೋತ್ರ ‘ಸ್ಟುಡೆಂಟ್ ಆಫ್ ದಿ ಇಯರ್’ ಚಿತ್ರದ ಮೂಲಕ ಬಣ್ಣದ ಬದುಕು ಆರಂಭಿಸಿದ್ದರು. ಈ ಚಿತ್ರ ರಿಲೀಸ್ ಆಗಿದ್ದು 2012ರಲ್ಲಿ. ಈ ಚಿತ್ರದ ಪ್ರಮೋಷನ್ಗೆ ಈ ಮೂವರು ಆಗಮಿಸಿದ್ದರು. ಈ ವೇಳೆ ಭಾರತದ ರಾಷ್ಟ್ರಪತಿ ಯಾರು ಎಂದು ಆಲಿಯಾಗೆ ಕೇಳಲಾಯಿತು. ಇದಕ್ಕೆ ಆಲಿಯಾ ಪ್ರಣಬ್ ಮುಖರ್ಜಿ ಎಂದು ಉತ್ತರಿಸುವ ಬದಲು ಪೃಥ್ವಿರಾಜ್ ಚೌಹಾಣ್ ಎಂದಿದ್ದರು. ಆಲಿಯಾ ಸಾಮಾನ್ಯ ಜ್ಞಾನದ ಬಗ್ಗೆ ಟೀಕೆ ಮಾಡಲಾಯಿತು.
ರಣವೀರ್ ಸಿಂಗ್ ಹಾಗೂ ಅನುಷ್ಕಾ ಶರ್ಮಾ ಒಟ್ಟಾಗಿ ಕಾಫಿ ವಿತ್ ಕರಣ್ ಶೋಗೆ ಬಂದಿದ್ದರು. ರಣವೀರ್ ಅವರು ಮನಸ್ಸಿಗೆ ಬಂದಂತೆ ಹೇಳಿಕೆ ನೀಡಿ ಸುದ್ದಿ ಆಗುತ್ತಾರೆ. ಆದಿನ ಆಗಿದ್ದೂ ಅದೇ. ಅನುಷ್ಕಾ ಶರ್ಮಾ ಬ್ಯಾಕ್ ಬಗ್ಗೆ ಮಾತನಾಡಿ ಟೀಕೆಗೆ ಒಳಗಾಗಿದ್ದರು. ‘ನಾನು ಅದನ್ನು ಪಿಂಚ್ ಮಾಡ್ಲಾ?’ ಎಂದು ಕೇಳಿದ್ದರು. ಇದನ್ನು ಕೇಳಿ ಅನುಷ್ಕಾ ಶಾಕ್ ಆದರು. ಆ ರೀತಿ ಮಾತನಾಡದಂತೆ ಸಿಟ್ಟಲ್ಲೇ ಹೇಳಿದ್ದರು.
ಕರೀನಾ ಕಪೂರ್ ಅವರು ಹಾಗೂ ಸೈಫ್ ಅಲಿ ಖಾನ್ ಅವರು ಕಾಫಿ ವಿತ್ ಕರಣ್ ಶೋಗೆ ಬಂದಿದ್ದರು. ‘ಪ್ರಿಯಾಂಕಾ ಚೋಪ್ರಾ ಆ್ಯಕ್ಸೆಂಟ್ನ ಎಲ್ಲಿಂದ ಕಲಿತರು’ ಎಂದು ಹೇಳಿ ನಕ್ಕಿದ್ದರು. ಅದೇ ಸೀಸನ್ನಲ್ಲಿ ಆಗಮಿಸಿದ್ದ ಪ್ರಿಯಾಂಕಾ ಅವರು, ‘ಕರೀನಾ ಬಾಯ್ಫ್ರೆಂಡ್ (ಸೈಫ್ ಅಲಿ ಖಾನ್) ಎಲ್ಲಿ ಕಲಿತರೋ ನಾನು ಅಲ್ಲಿಯೇ ಕಲಿತೆ’ ಎಂದು ತಿರುಗೇಟು ನೀಡಿದ್ದರು.
ಅನಿಲ್ ಕಪೂರ್ ಅವರು ‘ಕಾಫಿ ವಿತ್ ಕರಣ್ ಸೀಸನ್ 4’ರಲ್ಲಿ ಆಗಮಿಸಿದ್ದರು. ‘ಅಭಯ್ ಡಿಯೋಲ್ ಅವರಿಗೆ ಎಲ್ಲಾ ವಿಚಾರದಲ್ಲೂ ಸಹಾಯ ಬೇಕು’ ಎಂದು ಹೇಳಿದ್ದರು. ಅನಿಲ್ ಅವರನ್ನು ಅಭಯ್ ಡಿಯೋಲ್ ಫ್ಯಾನ್ಸ್ ಟೀಕೆ ಮಾಡಿದರು.
ದೀಪಿಕಾ ಪಡುಕೋಣೆ ಹಾಗೂ ರಣಬೀರ್ ಕಪೂರ್ ಒಂದು ಕಾಲದಲ್ಲಿ ಒಟ್ಟಿಗೆ ಸುತ್ತಾಡಿದ್ದರು. ನಂತರ ಇಬ್ಬರೂ ಬ್ರೇಕಪ್ ಮಾಡಿಕೊಂಡರು. ಕಾಫಿ ವಿತ್ ಕರಣ್ ಶೋಗೆ ಬಂದಿದ್ದ ಸೋನಮ್ ಹಾಗೂ ದೀಪಿಕಾ ಪಡುಕೋಣೆ ಅವರು ಗಮನ ಸೆಳೆದಿದ್ದರು. ರಣಬೀರ್ ಕಪೂರ್ ಅವರು ಯಾವ ಬ್ರ್ಯಾಂಡ್ನ ಪ್ರಚಾರ ಮಾಡಬೇಕು ಎಂದು ದೀಪಿಕಾಗೆ ಕೇಳಲಾಗಿತ್ತು. ಇದಕ್ಕೆ ದೀಪಿಕಾಗೆ ‘ಕಾಂಡೋಮ್ ಜಾಹೀರಾತು’ ಎಂದಿದ್ದರು.
ಕರಣ್ ಜೋಹರ್ ಶೋನಲ್ಲಿ ಇಮ್ರಾನ್ ಹಶ್ಮಿ ಬಂದಿದ್ದರು. ಅವರು ಐಶ್ವರ್ಯಾ ರೈ ಅವರನ್ನು ಟೀಕೆ ಮಾಡಿದ್ದರು. ಐಶ್ವರ್ಯಾ ರೈ ಅವರನ್ನು ನೋಡಿದಾಗ ಏನು ನೆನಪಾಗುತ್ತದೆ ಎಂದು ಇಮ್ರಾನ್ ಹಶ್ಮಿಗೆ ಕೇಳಲಾಗಿತ್ತು. ಇದಕ್ಕೆ ಅವರು ‘ಪ್ಲಾಸ್ಟಿಕ್’ ಎನ್ನುವ ಉತ್ತರ ನೀಡಿದ್ದರು.
ಇದನ್ನೂ ಓದಿ: ಗೇ ಎಂಬ ಕಾರಣಕ್ಕೆ ಕರಣ್ ಜೋಹರ್ ಮದುವೆ ಆಗಿಲ್ವಾ? ಅಸಲಿ ಕಾರಣ ತಿಳಿಸಿದ ನಿರ್ಮಾಪಕ
ಸೋನಮ್ ಕಪೂರ್ ಅವರು ದೀಪಿಕಾ ಯಾರು ಎಂದು ಗೊತ್ತಿಲ್ಲ ಹೇಳಿದ್ದರು. ‘ಕರಣ್, ನನಗೆ ಅವಳ ಪರಿಚಯವೇ ಇಲ್ಲ. ನಾನು ಅವಳೊಂದಿಗೆ ಕೊನೆಯದಾಗಿ ಸಂವಾದ ನಡೆಸಿದ್ದು ಇದೇ ಶೋನಲ್ಲಿ. ಪ್ರಿಯಾಂಕಾ ಚೋಪ್ರಾ ಮತ್ತು ದೀಪಿಕಾ ಪಡುಕೋಣೆ ನಡುವೆ ಉತ್ತಮ ನಟಿ ಯಾರು ಎಂದು ಯಾರಾದರೂ ಕೇಳಿದರೆ, ನಾನು ಪ್ರಿಯಾಂಕಾ ಎಂದು ಹೇಳುತ್ತೇನೆ. ಇದು ನನ್ನ ಅಭಿಪ್ರಾಯ. ನಾನು ದೀಪಿಕಾಳನ್ನು ಇಷ್ಟಪಡುವುದಿಲ್ಲ ಎಂದು ಇದರ ಅರ್ಥವಲ್ಲ’ ಎಂದಿದ್ದರು ಸೋನಮ್.
ಸಲ್ಮಾನ್ ಖಾನ್ ಅವರು ಕಾಫಿ ವಿತ್ ಕರಣ್ ಶೋಗೆ ಬಂದಿದ್ದರು. ಅವರು ರಿಲೇಶನ್ಶಿಪ್ ವಿಚಾರವಾಗಿ ಮಾತನಾಡಿದ್ದರು. ‘ನಾನು ವರ್ಜಿನ್ ಹಾಗೂ ಒಬ್ಬನೇ ಮಲಗುತ್ತೇನೆ’ ಎಂದು ಹೇಳಿದ್ದರು. ಈ ಹೇಳಿಕೆ ಸಾಕಷ್ಟು ಚರ್ಚೆ ಹುಟ್ಟುಹಾಕಿತ್ತು.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 8:32 am, Thu, 5 October 23