ಬಿಜೆಪಿಯ ಗೇಮ್ ಚೇಂಜರ್ ಅಣ್ಣಾಮಲೈ; ಬದುಕು, ರಾಜಕೀಯ ಬಗ್ಗೆ ಮುಕ್ತ ಮಾತು

K Annamalai: ಕರ್ನಾಟಕದ ಜನರು ಎಷ್ಟು ಪ್ರೀತಿ ತೋರಿಸಿದರು ಎಂದರೆ ನಾನು ಮುಂದೆ ಏನು ಮಾಡುತ್ತೀನಿ ಎಂಬ ಪ್ರಶ್ನೆ ಅವರಿಗಿತ್ತು. ಹಾಗಾಗಿ ನೀವು ಏನು ಬೇಕಾದರೂ ಮಾಡಿ ಆದರೆ ನಮ್ಮಲ್ಲಿ ಹೇಳಿ ಹೋಗಿ. ಹೇಳದೇ ಹೋಗಬೇಡಿ ಎಂದು ಕರ್ನಾಟಕದ ಜನರು ಹೇಳಿದ್ದರು. ಅವರಿಗೆ ನನ್ನ ಮೇಲೆ ಪ್ರೀತಿ, ಗೌರವ ಇತ್ತು. ಆ ಹೊತ್ತಲ್ಲಿ ನಾವು ಏನು ಮಾಡಬೇಕು ಎಂದು ಯೋಚಿಸುತ್ತಿರುವಾಗ ನಾನು ಆರಂಭಿಸಿದ ಎನ್​​ಜಿಒ We the leaders Foundation

ಬಿಜೆಪಿಯ ಗೇಮ್ ಚೇಂಜರ್ ಅಣ್ಣಾಮಲೈ; ಬದುಕು, ರಾಜಕೀಯ ಬಗ್ಗೆ ಮುಕ್ತ ಮಾತು
ಕೆ ಅಣ್ಣಾಮಲೈ
Follow us
ರಶ್ಮಿ ಕಲ್ಲಕಟ್ಟ
|

Updated on: Oct 02, 2023 | 8:04 PM

ತಮಿಳು (Tamil) ಯೂಟ್ಯೂಬ್ ಚಾನೆಲ್‌ಗಾಗಿ ನಟಿ ಸುಹಾಸಿನಿ (Suhasini Maniratnam) ತಮಿಳುನಾಡು ಬಿಜೆಪಿ ಅಧ್ಯಕ್ಷ ಕೆ ಅಣ್ಣಾಮಲೈ(K Annamalai ) ಸಂದರ್ಶನ ನಡೆಸಿದ್ದಾರೆ. ಗೇಮ್ ಚೇಂಜರ್ ಎಂಬ ಕಾರ್ಯಕ್ರಮದಲ್ಲಿ ಅಣ್ಣಾಮಲೈ ಅವರಲ್ಲಿ ಕೆಲವು ಪ್ರಶ್ನೆಗಳನ್ನು ಕೇಳಿದ್ದು ಅದಕ್ಕೆ ಅವರು ತುಂಬಾ ಚಂದವಾಗಿ ಅವರು ಉತ್ತರಿಸಿದ್ದಾರೆ. ತಮಿಳು ಭಾಷೆಯಲ್ಲಿ ಇರುವ ಈ ಸಂದರ್ಶನದ ಕನ್ನಡ ಅಕ್ಷರರೂಪ ಇಲ್ಲಿದೆ.

ಪ್ರಶ್ನೆ:  ಪೊಲೀಸ್ ಬದುಕಿನಿಂದಾಚೆಗೆ ನಿಮ್ಮ ಬದುಕಿನ ಟರ್ನಿಂಗ್ ಪಾಯಿಂಟ್ ಎಂದರೆ ಮಧುಕರ್ ಶೆಟ್ಟಿ ಸಾವು ಮತ್ತು We The Leaders Foundation. ಅದಕ್ಕೂ ಇದಕ್ಕೂ ಸಂಬಂಧ ಇದೆಯಾ . ಆ ಸಮಯದಲ್ಲಿ ಏನು ನಡೆದಿತ್ತು?

ಉತ್ತರ:  ಕರ್ನಾಟಕದಲ್ಲಿ ನನ್ನ ಸೀನಿಯರ್ ಆಫೀಸರ್ ಆಗಿದ್ದವರು ಮಧುಕರ್ ಶೆಟ್ಟಿ. ತುಂಬಾ ಒಳ್ಳೆಯ, ಪ್ರಾಮಾಣಿಕ, ದಕ್ಷ ಅಧಿಕಾರಿ ಆಗಿದ್ದವರು ಅವರು. ಅವರೊಬ್ಬ ಟಫ್ ಪೊಲೀಸ್ ಅಧಿಕಾರಿ. ಒಬ್ಬ ಪೊಲೀಸ್ ಅಧಿಕಾರಿ ಹೇಗಿರಬೇಕು ಎಂಬುದಕ್ಕೆ ಮಧುಕರ್ ಶೆಟ್ಟಿ ಉದಾಹರಣೆ. ನೋ ನಾನ್ಸನ್ಸ್ ಪರ್ಸನ್. ಅವರ ಕುಟುಂಬ ಯುಎಸ್ ನಲ್ಲಿತ್ತು, ಅವರು ಇಲ್ಲಿ ಒಬ್ಬರೇ ಇರುತ್ತಿದ್ದರು. ಅವರು ಹೈದರಾಬಾದ್​​ನಲ್ಲಿ ಎನ್​​ಪಿಎಯಲ್ಲಿ  (ನ್ಯಾಷನಲ್ ಪೊಲೀಸ್ ಅಕಾಡೆಮಿ)ಯಲ್ಲಿದ್ದಾಗ  ಹೃದಯಾಘಾತದಿಂದ ಸಾವಿಗೀಡಾದರು. ನನಗೆ ಈ ಹೊತ್ತಿಗೆ ತುಂಬಾ ಕಾಡಿದ್ದು ಎಂದರೆ ಕರ್ಮ. ಕರ್ಮ ಅಂದರೆ ಏನು? ಉತ್ತಮವಾದ ಕೆಲಸ ಮಾಡಿದರೆ ಏನಾಗುತ್ತದೆ. ಮಧುಕರ ಶೆಟ್ಟಿಯಂಥಾ ಒಬ್ಬ ವ್ಯಕ್ತಿ 40-42 ರ ಹರೆಯದಲ್ಲಿ ಒಬ್ಬ ವ್ಯಕ್ತಿ ತೀರಿ ಹೋಗುತ್ತಾನೆ ಎಂದರೆ? ಒಳ್ಳೆಯವರಿಗೆ ಕಾಲವಿಲ್ಲವೆ? ನಾವು ಒಳ್ಳೆಯದು ಮಾಡಿದರೆ ನಮಗೆ ಕೊನೇಗಾಲದಲ್ಲಿ ಒಳ್ಳೆಯದಾಗುತ್ತದೆ ಎಂಬುದು ಹಿರಿಯರ ಮಾತು. ಇದೇ ಸಮಯದಲ್ಲಿ ನನಗೆ ಕೈಲಾಶ್- ಮಾನಸರೋವರ್ ಹೋಗುವುದಕ್ಕೆ ಒಂದು ಅವಕಾಶ ಸಿಕ್ಕಿತು. ಒಂದು ಬ್ಯಾಚ್​​ನ ಲೈಸನ್ಸ್ ಆಫೀಸರ್ ಆಗಿ ಹೋಗುವ ಅವಕಾಶ ಆಗಿತ್ತು ಅದು. 50 ದಿನಗಳಿಂತಲೂ ಹೆಚ್ಚು ದಿನದ ಟ್ರಿಪ್ ಅದಾಗಿತ್ತು. ಹಿಮಾಲಯ, ಉತ್ತರಾಖಂಡ್, ಕೈಲಾಶ್.ಸೆಲ್ ಫೋನ್ ಇರಲಿಲ್ಲ. ಯಾವುದೇ ಡಿಸ್ಟರ್ಬೆನ್ಸ್ ಇರಲ್ಲ. ಕೈಲಾಶ್ ತುಂಬಾ ಮ್ಯಾಜಿಕಲ್ ಪ್ಲೇಸ್. ಅಲ್ಲಿ ನನಗೆ ಹೊಸ ಉತ್ಸಾಹ ಬಂತು. ಅದೇನೆಂದರೆ Do something that positive . ಜನರ ಬದುಕನ್ನು ಬದಲಿಸುವ ಕಾರ್ಯವೊಂದನ್ನು ಮಾಡಬೇಕು. ಕೈಲಾಶ್ ನಲ್ಲಿ ನನಗೆ ದಕ್ಕಿದ ಸ್ಫೂರ್ತಿ ಅದಾಗಿತ್ತು. ಅದಾದ ನಂತರ ನನಗೆ 8 ತಿಂಗಳು ನನ್ನ ಕುಟುಂಬವನ್ನು ಇದಕ್ಕಾಗಿ ಸಿದ್ಧಗೊಳಿಸಲು ಬೇಕಾಯಿತು. ರಾಜೀನಾಮೆ ಬಗ್ಗೆ ಹೆಂಡತಿ ಜತೆ ಮಾತನಾಡುವುದಕ್ಕೆ, ನನ್ನ ಆಪ್ತರಲ್ಲಿ ಹೇಳುವುದಕ್ಕೆ ಸಮಯ ತೆಗೆದುಕೊಂಡಿತು. ನಾನು ರಾಜೀನಾಮೆ ನೀಡಿದಾಗ ನನ್ನ ಗೆಳೆಯರಿಗೂ ಭಯ ಆಗಿತ್ತು. ಯಾಕೆಂದರೆ ನಾನೊಬ್ಬ passionate ಪೊಲೀಸ್ ಅಧಿಕಾರಿ ಆಗಿದ್ದೆ. ನಾನು ಪೊಲೀಸ್ ಕೆಲಸದ ಬಗ್ಗೆ ಒಂದು ದಿನವಾದರೂ ಯಾರಲ್ಲಿಯೂ ದೂರು ಹೇಳಿಲ್ಲ. ಅವರು ಹೀಗೆ ಇವರು ಹೀಗೆ ಎಂದು ಯಾವತ್ತೂ ಹೇಳಿದವನು ಅಲ್ಲ. ಪ್ರತಿಯೊಂದು ದಿನವೂ ಪೊಲೀಸ್ ವೃತ್ತಿಯನ್ನು ಖುಷಿಯಿಂದ ಮಾಡುತ್ತಿದ್ದವನು ಏಕಾಏಕಿ ರಾಜೀನಾಮೆ ನೀಡುತ್ತೇನೆ ಎಂದು ಹೇಳಿದಾಗ, ಅಧಿಕಾರದಲ್ಲಿದ್ದವರು ಅಣ್ಣಾಮಲೈ ಅವರಿಗೆ ತೊಂದರೆ ಕೊಡುತ್ತಿದ್ದಾರೇನೋ ಎಂದು ಕೆಲವರಿಗೆ ಅನಿಸಿತ್ತು. ಆ ಹೊತ್ತಲ್ಲಿ ಮುಖ್ಯಮಂತ್ರಿ ಆಗಿದ್ದವರು ಎಚ್.ಡಿ.ಕುಮಾರಸ್ವಾಮಿ. ಆಗ ಅವರು ನನ್ನನ್ನು ಕರೆದು, ತಮ್ಮಾ…ನೀವು ರಾಜೀನಾಮೆ ಕೊಟ್ಟು ಹೋಗುತ್ತಿದ್ದೀರಿ. ಅದಕ್ಕೆ ಕಾರಣ ನಾನು ಎಂದು ಎಲ್ಲರೂ ಹೇಳುತ್ತಾರೆ. ನೀವು ಸ್ವಂತ ನಿರ್ಧಾರದಿಂದ ರಾಜೀನಾಮೆ ಕೊಟ್ಟಿರುವುದಾಗಿ ಒಂದು ವಿಡಿಯೊ ಹೇಳಿಕೆ ನೀಡಿ ಎಂದು ಹೇಳಿದರು. ಹಾಗಾಗಿ ನಾನು ಒಂದು ವಿಡಿಯೊ ಮಾಡಿ, ನಾನು ನನ್ನ ಸ್ವಇಚ್ಛೆಯಿಂದ ರಾಜೀನಾಮೆ ಕೊಡುತ್ತಿರುವೆ, ನನಗೆ ಯಾರೂ ತೊಂದರೆ ಕೊಟ್ಟಿಲ್ಲ ಎಂದು ಹೇಳಿದೆ.

ಕರ್ನಾಟಕದ ಜನರು ಎಷ್ಟು ಪ್ರೀತಿ ತೋರಿಸಿದರು ಎಂದರೆ ನಾನು ಮುಂದೆ ಏನು ಮಾಡುತ್ತೀನಿ ಎಂಬ ಪ್ರಶ್ನೆ ಅವರಿಗಿತ್ತು. ಹಾಗಾಗಿ ನೀವು ಏನು ಬೇಕಾದರೂ ಮಾಡಿ ಆದರೆ ನಮ್ಮಲ್ಲಿ ಹೇಳಿ ಹೋಗಿ. ಹೇಳದೇ ಹೋಗಬೇಡಿ ಎಂದು ಕರ್ನಾಟಕದ ಜನರು ಹೇಳಿದ್ದರು. ಅವರಿಗೆ ನನ್ನ ಮೇಲೆ ಪ್ರೀತಿ, ಗೌರವ ಇತ್ತು. ಆ ಹೊತ್ತಲ್ಲಿ ನಾವು ಏನು ಮಾಡಬೇಕು ಎಂದು ಯೋಚಿಸುತ್ತಿರುವಾಗ ನಾನು ಆರಂಭಿಸಿದ ಎನ್​​ಜಿಒ We the leaders Foundation. ಮುಂದಿನ ತಲೆಮಾರಿಗಾಗಿ ಏನಾದರೂ ಮಾಡಬೇಕು ಎಂಬುದು ಧ್ಯೇಯ ಆಗಿತ್ತು. ಶಿಕ್ಷಣದಲ್ಲಿ ಕೌಶಲ್ಯ, ಕೃಷಿಯಲ್ಲಿ ಸಾವಯವ, ಗ್ರಾಮಗಳಲ್ಲಿ ಜನರ ಅಭಿವೃದ್ಧಿಗಾಗಿ ಕೆಲಸ ಮಾಡಬೇಕು. ಹೀಗೆ ಆರಂಭ ಮಾಡಿದ ಫೌಂಡೇಶನ್ ಗೆ 6 ಕಚೇರಿಗಳಿವೆ. ವಿ ದಿ ಲೀಡರ್ಸ್ ನಲ್ಲಿ ನಾನು ಎಲ್ಲಿಗೂ ಹೋಗುವುದಿಲ್ಲ, ನಾನು ಸಂಸ್ಥಾಪಕ. ನೀವೇ ಒಂದು ಪ್ರದೇಶದಲ್ಲಿ ಜನರಿಗೆ ನೇತೃತ್ವ ವಹಿಸಿ ನೀವೇ ನಡೆಸಿಕೊಡಬೇಕು. ಎಲ್ಲಿಯೂ ನನ್ನ ಫೋಟೊಗಳು ಇರಬಾರದು. ಅದೊಂದು ಸೆಲ್ಫ್ ಸಸ್ಚೈನೇಬಲ್ NGO ಆಗಿ ಬೆಳೆದು ಬರುತ್ತದೆ. 8000 ಸ್ವಯಂ ಸೇವಕರು ಇದ್ದಾರೆ. ತುಂಬಾ ಬದಲಾವಣೆಗಳನ್ನು ಮಾಡಿದ ಎನ್​​ಜಿಒ. ನನಗೆ ಹೆಚ್ಚಿನ ಜವಾಬ್ದಾರಿಗಳು ಬಂದ ನಂತರ ನನಗೆ ಅದಕ್ಕಾಗಿ ಹೆಚ್ಚಿನ ಸಮಯವನ್ನು ಕೊಡಲು ಸಾಧ್ಯವಾಗಲಿಲ್ಲ. ಆಗ ಆರಂಭಿಸಿದ್ದು ಈಗ ನೋಡಿದಾಗ ಅಲ್ಲಿ ಸಮುದಾಯದಲ್ಲಿನ ದೊಡ್ಡ ಬದಲಾವಣೆಗೆ ಅದು ಕಾರಣವಾಗಿದೆ.

ಕರ್ನಾಟಕದಲ್ಲಿ ರ‍್ಯಾಡಿಕಲೈಸೇಷನ್ ಆಫ್ ರಿಲೀಜಿಯನ್. ಅದನ್ನು ಅರಿಯುವುದಕ್ಕಾಗಿ ನೀವು ಇಸ್ಲಾಂನ್ನು ಅಭ್ಯಾಸ ಮಾಡಿದ್ದೀರಿ ಎಂದು ಗೊತ್ತಾಯ್ತು. ಎಷ್ಟು ಕಾಲ ಕಲಿತಿರಿ. ಅದು ಕಲಿಯಬೇಕು ಎಂದು ಎನಿಸಿದ್ದು ಯಾಕೆ?

ಉಡುಪಿ, ಚಿಕ್ಕಮಗಳೂರು, ಮಂಗಳೂರಿನಲ್ಲಿ ಧರ್ಮದ ವಿಚಾರದಲ್ಲಿ ಗಲಾಟೆ ಆಗುತ್ತಿತ್ತು. ಹಿಂದೂ- ಮುಸ್ಲಿಂ ನಡುವೆ ದೊಡ್ಡ ದೊಡ್ಡ ಗಲಾಟೆ, ಮರ್ಡರ್, ಸಾವು ಆಗುತ್ತಿತ್ತು. ಆಗ ನಾನು ಇಸ್ಲಾಂ ಬಗ್ಗೆ ಕಲಿಯಲು ಶುರು ಮಾಡಿದೆ. ಆಗ ನಾನು ಮಸೀದಿಗಳಲ್ಲಿ ಹೋಗಿ ಮಾತನಾಡುತ್ತಿದ್ದೆ. ಈಗಲೂ ನನ್ನ ಗೆಳಯರ ಬಳಗದಲ್ಲಿ ಮುಸ್ಲಿಮರು ಇದ್ದಾರೆ. ಇಸ್ಲಾಂ ಬಗ್ಗೆ ಅಭ್ಯಸಿಸಿದಾಗ ಗೊತ್ತಾಗಿದ್ದು ಏನೆಂದರೆ ಉಳ್ಳವರು ಇಲ್ಲದವರಿಗೆ ರಂಜಾನ್ ಮಾಸದಲ್ಲಿ ತಮ್ಮ ಆದಾಯದ ಶೇ2.5ನ್ನು ಕೊಟ್ಟು ಸಹಾಯ ಮಾಡುತ್ತಾರೆ ಎನ್ನುವುದು. ಈ ಹೊತ್ತಲ್ಲಿ ಮಸೀದಿಗಳಲ್ಲಿ ಆಟೋ, ಹೊಲಿಗೆ ಮೆಷೀನ್ ಎಲ್ಲವನ್ನೂ ನೀಡುತ್ತಿದ್ದರು. ಅದನ್ನು ನಾನು ಕೊಡಬೇಕು ಎಂದು ನನ್ನನ್ನು ಕರೆಯುತ್ತಿದ್ದರು. ನಾನು ಎಸ್ಪಿ ಆಗಿದ್ದಾಗ ಹಿಂದೂ – ಮುಸ್ಲಿಂ ಧರ್ಮಗಳ ನಡುವೆ ಜಗಳ ಆಗಬಾರದು ಎಂದು ನಾನು ಎರಡೂ ಧರ್ಮಗಳಲ್ಲಿನ ಜನರು ನನ್ನ ಮೇಲೆ ನಂಬಿಕೆ ಇಟ್ಟಿರುತ್ತಿದ್ದರು. ಅಣ್ಣಾಮಲೈ ಬರುತ್ತಾರೆ, ಅವರು ಮಾತನಾಡಿದರೆ ಸರಿ ಹೋಗುತ್ತದೆ ಎಂಬ ನಂಬಿಕೆ ಅವರಿಗಿರುತ್ತಿತ್ತು. ಈಗಲೂ ಉಡುಪಿ, ಚಿಕ್ಕಮಗಳೂರು , ಮಂಗಳೂರಿನ ಯಾವುದೇ ಮಸೀದಿಗೂ ನಾನು ಈಗ ಹೋಗಿ ಬರಬಹುದು. ಅವರು ಯಾವತ್ತೂ ನನ್ನನ್ನು ಅನ್ಯರಾಗಿ ನೋಡಿಲ್ಲ.

ಮುಸ್ಲಿಮರಲ್ಲಿನ ವಿಭಾಗಗಳಲ್ಲಿ ಸಮಸ್ಯೆ ಇದ್ದರೂ ಕೂಡಾ ಪಂಚಾಯತಿಗಾಗಿ ಅವರು ನಮ್ಮ ಆಫೀಸಿಗೆ ಬರುತ್ತಿದ್ದರು. ಅವರ ಮನೆಗೆ ಹೋಗಿ ಊಟ ಮಾಡುತ್ತೇನೆ. ಅವರ ಜತೆ ತುಂಬಾ ಮಾತನಾಡುತ್ತೇನೆ. ಅವರ ಖುರಾನ್, ಹದೀಸ್ ವಿಷಯಗಳ ಬಗ್ಗೆಯೂ ತುಂಬಾ ಆಳವಾಗಿ ಅಧ್ಯಯನ ಮಾಡಿದ್ದೆ. ಭಗವದ್ಗೀತೆಯನ್ನು ಯಾವ ರೀತಿ ಅಧ್ಯಯನ ಮಾಡಿದ್ದೆನೋ ಅದೇ ರೀತಿ ಖುರಾನ್ ನ್ನು ಕೂಡಾ ಅರಿತುಕೊಂಡೆ. ನನ್ನ ಮೂಲ ಉದ್ದೇಶ ಏನೆಂದರೆ ನಾವು ಯಾವತ್ತೂ ಇಂಥಾ ಧರ್ಮದ ಆಯ್ಕೆ ಮಾಡುವ ಹಕ್ಕು ನಮಗಿಲ್ಲ. ಅಪ್ಪ ಅಮ್ಮನಿಗೆ ಮಗುವಾಗಿ ಹುಟ್ಟಿದಾಗ ನಾವು ಯಾವ ಧರ್ಮ ಆಯ್ಕೆ ಮಾಡಬೇಕು ಎಂಬ ಹಕ್ಕು ಆ ಮಗುವಿಗೆ ಇರುವುದಿಲ್ಲ. ನೀವು ಆ ಧರ್ಮದಲ್ಲಿ ಹುಟ್ಟಿ ಬಿಡುತ್ತೀರಿ. ಹೀಗಿರುವಾಗ ಇನ್ನೊಂದು ಧರ್ಮವನ್ನು ಕೂಡಾ ಅರಿತುಕೊಂಡಿರಬೇಕು ಎಂಬುದು ನನ್ನ ಆಸೆ. ಹಾಗಾದರೆ ಸಮಾಜದಲ್ಲಿ ಸಮಸ್ಯೆಗಳೂ ಇರುವುದಿಲ್ಲ. ನಾನು ಏನಾದರೂ ಭಾಷಣ ಮಾಡುವಾಗ ನಾನು ನನ್ನ ಪ್ರೀತಿಯ ಇಸ್ಲಾಂ ಧರ್ಮದ ಸಹೋದರ ಸಹೋದರಿಯರೇ ಅಂತೀನಿ. ನಾನು ಬಿಜೆಪಿಯ ನಾಯಕ. ವೋಟು ಗಿಟ್ಟಿಸುವುದಕ್ಕಾಗಿ ನಾನು ಹೀಗೆ ಮಾಡುತ್ತಿದ್ದೇನೆ ಎಂದು ಕೆಲವರು ಅಂದುಕೊಂಡಿರಬಹುದು. ಆದರೆ ಈಗಲೂ ನೀವು ನನಗೆ ಬೈಬಲ್ ಕೊಟ್ಟರೆ ನಾನು ಚಪ್ಪಲಿ ಕಳಚಿದ ನಂತರವೇ ಬೈಬಲ್ ನ್ನು ಸ್ವೀಕರಿಸುವೆ. ಡಟ್ಸ್ ಮೈ ವೇ ಆಫ್ ಹಿಂದುತ್ವ.

ನನ್ನ ಹಿಂದುತ್ವ ಎಂದರೆ ಇನ್ನೊಂದು ಧರ್ಮವನ್ನು ಗೌರವದಿಂದ ಕಾಣುವುದಾಗಿದೆ. ಯಾವತ್ತೂ ನನ್ನ ಧರ್ಮ ದೊಡ್ಡದು ಎಂಬುದು ಹೇಳಬಾರದು. ಇನ್ನು ಪಾಲಿಟಿಕ್ಸ್ ಎಲ್ಲ ಪರ್ಸೆಪ್ಶನ್. ಅದನ್ನು ಒಡೆಯಲು, ನೀವು ಯಾರು ಎಂಬುದನ್ನು ತೋರಿಸಲು ಸಮಯ ಹಿಡಿಯುತ್ತದೆ. ನಾನು ಬಿಜೆಪಿ ನಾಯಕನಾದ ನಂತರ ಬಿಜೆಪಿ ಇಫ್ತಾರ್ ಕೂಟ ಏರ್ಪಡಿಸುತ್ತದೆ. ತುಂಬಾ ಜನರು ಅದರಲ್ಲಿ ಭಾಗವಹಿಸಿದ್ದರು. ನಾನು ಹೇಳುವುದೇನೆಂದರೆ ನಮ್ಮ ಧರ್ಮದ ಗುರುತಿನೊಂದಿಗೆ ಇಫ್ತಾರ್ ಆಚರಿಸಬೇಕು ಎನ್ನುವುದು. ನಾವು ಯಾರೂ ಸೆಕ್ಯುಲರಿಸಂಗಾಗಿ ಮೋಸ ಮಾಡಬಾರದು. ಇಸ್ಲಾಂ ಸಹೋದರ ಸಹೋದರಿಯರು ಇಫ್ತಾರ್ ಆಚರಿಸುವಾಗ, ಅವರ ಉಪವಾಸದ ವ್ರತಗಳ ಸಮಯದಲ್ಲಿ ನಾನೂ ವ್ರತದಲ್ಲಿರುತ್ತೇನೆ. ಎರಡು ಇಫ್ತಾರ್​​ಗೆ ನಾನು ಉಪವಾಸ ಇದ್ದು, ಅವರ ಜತೆ ಇಫ್ತಾರ್ ಕೂಟ ಮಾಡಿದ್ದೆ. ಅದಕ್ಕಾಗಿ ಸ್ಕಲ್ ಕ್ಯಾಪ್ ಹಾಕಬೇಕಾದ ಅಗತ್ಯವಿಲ್ಲ. ಅಲ್ಲಿಯವರೆಗೆ ಹೇಗೆ ಇದ್ದೇನೋ ಅದೇ ರೀತಿ ಅಲ್ಲಿಯೂ ಇರುತ್ತೇನೆ. ಅವರು ನಮ್ಮ ಜತೆ ಹೇಗೆ ಇರುತ್ತಾರೆ ಅದೇ ರೀತಿ ನಾವು ಅವರ ಜತೆ ಇರುತ್ತೇವೆ, ನನ್ನ ಜಾತ್ಯಾತೀತದ ಕಲ್ಪನೆಯೇ ವಿಭಿನ್ನವಾಗಿದೆ. ಧರ್ಮ ಮನುಷ್ಯನನ್ನು ವಿಭಜಿಸುತ್ತದೆ ಎಂದು ಹೇಳುವ ವ್ಯಕ್ತಿ ನಾನಲ್ಲ. ನಾನು ನಾನಾಗಿಯೇ ಇರುತ್ತೇನೆ. ನಾನು ಶಬರಿಮಲೆಗೆ ಹೋಗುತ್ತೇನೆ. ವ್ರತಾಚರಣೆ ಮಾಡುತ್ತೇನೆ.ಕೈಲಾಸಕ್ಕೆ ಹೋಗುತ್ತೇನೆ. ಇದರ್ಥ ಇನ್ನೊಬ್ಬರನ್ನು ಕೀಳಾಗಿ ಕಾಣುವುದಲ್ಲ, ಅವರಲ್ಲಿ ಒಬ್ಬನಾಗಿ ಬಿಡಲು ಅವರಂತೆಯೇ ಉಡುಗೆ ಉಡಬೇಕು ಅಂತೇನಿಲ್ಲ.

ಪ್ರಶ್ನೆ: ನಾವು ಭೇಟಿ ಮಾಡಿದ ಕಿರಿಯ ರಾಜಕಾರಣಿ ನೀವು. ಎಂಜಿನಿಯಂರಿಂಗ್ ಪದವಿ, ಮ್ಯಾನೇಜ್ ಮೆಂಟ್ ಪದವಿ ,ಪೊಲೀಸ್ ಅಧಿಕಾರಿ, ಈಗ ರಾಜಕಾರಣಿ. ಈಗ ಇರುವ ಯುವಜನಾಂಗ ನಿಮ್ಮಂತೆ ಆಗಬೇಕು ಎಂಬುದು ನಮ್ಮ ಆಸೆ. ಆದರೆ ಯುವಜನಾಂಗ ಯಾವತ್ತೂ ಜೋಶ್ ಬೇಡುತ್ತದೆ. ಒಂದು ಸಿನಿಮಾ ನೋಡಿದಾಗ, ಒಂದು ಪೋಸ್ಟ್ ನೋಡಿದಾಗ ರೋಮಾಂಚನವಾಗಬೇಕು ಎಂದು ಬಯಸುವವರು. ಅದಕ್ಕಾಗಿ ಅವರು ಡ್ರಗ್ಸ್ ಮೊರೆ ಹೋಗುತ್ತಾರೆ. ಮಾದಕ ವಸ್ತು ಮುಕ್ತ ದೇಶದ ಬಗ್ಗೆ ನಿಮ್ಮಅನಿಸಿಕೆ

ಉತ್ತರ:   ನಾನು ಪೊಲೀಸ್ ಕೆಲಸಕ್ಕೆ ರಾಜೀನಾಮೆ ನೀಡಿದ ಕೂಡಲೇ ಏನು ಮಾಡಬೇಕು ಎಂಬುದು ನನಗೆ ಗೊತ್ತಿರಲಿಲ್ಲ. 9 ವರ್ಷಗಳಿಂದ ಇದೇ ಯುನಿಫಾರ್ಮ್ ಹಾಕಿ ಬೆಳಗ್ಗಿನಿಂದ ರಾತ್ರಿವರೆಗೆ ಇದೇ ಕೆಲಸ ಮಾಡಿದವನು ನಾನು. ಹೀಗಿರುವಾಗ ನಾನು ಸಾಮಾನ್ಯ ವ್ಯಕ್ತಿಯ ಬದುಕಿಗೆ ಬದಲಾಗಬೇಕು. ಅಂದರೆ ಸಾಮಾನ್ಯರಂತೆ ಬದುಕಬೇಕು. ಹೆಚ್ಚಿನ ಹೊತ್ತು ಮನೆಯಲ್ಲಿರಬೇಕು, ಸಮಾಜದಲ್ಲಿರಬೇಕು. ಆಗ ಒಬ್ಬರು ಹೇಳಿದರು ನೀವು ಹೋಗಿ ವಿಪಾಸನ ಮಾಡಬೇಕು ಎಂದು. ವಿಪಾಸನ ಮಾಡು ನೀನು ಬದಲಾಗುತ್ತಿ ಎಂದು ಅವರು ಹೇಳಿದರು. ಅದು ಬೌದ್ಧ ಮತದ ಧ್ಯಾನತಂತ್ರ. ನೀವು ಇದನ್ನು ಕರ್ನಾಟಕ, ತಮಿಳುನಾಡಿನಲ್ಲಿ ಮಾಡಬೇಡಿ. ಯಾಕೆಂದರೆ ಜನರಿಗೆ ನಿಮ್ಮನ್ನು ಗೊತ್ತು. ಅದರಿಂದ ನಿಮಗೆ ತೊಂದರೆ ಆಗುತ್ತದೆ ಎಂದು ಅವರು ಹೇಳಿದರು. ಹಾಗಾಗಿ ನಾನು ಮುಂಬೈನಲ್ಲಿ ಹೋಗಿ ವಿಪಾಸನ ಮಾಡಿದೆ. ಅಲ್ಲಿ ಹೋದಾಗ ಸಿಕ್ಕಿದ ಮೊದಲ ನಿರ್ದೇಶನ ಏನು ಅಂದರೆ ಮೊಬೈಲ್ ಫೋನ್ ದೂರವಿಡಿ ಎಂಬುದು. ಹಾಗೆ ನಾನು ಅದನ್ನು ದೂರವಿಟ್ಟೆ. 10 ದಿನ ಮಾತನಾಡಲೇ ಕೂಡದು ಎಂದು ಹೇಳಿದರು. ಹತ್ತು ದಿನ ಏನು ಮಾಡಲಿ ಎಂದು ಕೇಳಿದೆ. ನೀವು ನಿಮ್ಮ ಉಸಿರಾಟವನ್ನು ಮಾತ್ರ ಗಮನಿಸಬೇಕು ಎಂದು ಅವರು ಹೇಳಿದರು. ಹಾಗಾದರೆ ಊಟ ಹೇಗೆ ಮಾಡುವುದು ಎಂದು ಕೇಳಿದೆ. ಆಗ ಅವರು ಅಲ್ಲಿ ಊಟ ಇರುತ್ತದೆ. ನೀವು ತಟ್ಟೆ ತೆಗೆದುಕೊಂಡು ಹೋಗಿ ಉಟ ಮಾಡಬೇಕು. ಆಗ ಇನ್ನೊಬ್ಬರ ಮುಖ ಕೂಡಾ ನೀವು ನೋಡುವಂತಿಲ್ಲ ಎಂದು ಹೇಳಿದರು . ನನ್ನ ಬದುಕಿನ ಕಠಿಣ 10 ದಿನಗಳು ಎಂದರೆ ವಿಪಾಸನ. ಯಾಕೆಂದರೆ ನಾನು ಮಾತನಾಡುವ ಮನುಷ್ಯ. ಭಾಷಣ ಮಾಡುವವ. ಹಾಗೆ ಮೂರು ದಿನ ಕಳೆಯಿತು. ಮೂರನೇ ದಿನ ನನಗೆ ಹೀಗೆ ಮಾತು ಹಿಡಿದು ನಿಲ್ಲುವುದು ಹೇಗೆ ಎಂದು ಅನಿಸಿಬಿಟ್ಟಿತು. ನಾಲ್ಕನೇ ದಿನ ನನ್ನ ಮನಸ್ಸಿಗೆ ಸಮಾಧಾನ ಸಿಕ್ಕಿದಂತಾಯಿತು. ಆಮೇಲಿನ ದಿನ ಪೂರ್ತಿ ಸಮಾಧಾನ, ಶಾಂತಿ. ಅಂದರೆ ಅದು ಸಂತೋಷದ ಉತ್ತುಂಗ ಆಗಿತ್ತು. ಡ್ರಗ್, ಇನ್ಯಾವುದೋ ಮಾದಕ ವಸ್ತುವಿನಿಂದ ಉನ್ಮಾದ ಸಿಗುತ್ತೆ ಅಂತಾರೆ. ಆದರೆ ನನ್ನ ಪಾಲಿನ ಉನ್ಮಾದ ಅದಾಗಿತ್ತು. ಅದನ್ನು ನಾವು ಅರಿಯಬೇಕು. ನಮ್ಮ ದೇಹದಲ್ಲಿಯೇ ಉನ್ಮಾದ ಇರುತ್ತದೆ. ನಮ್ಮ ದೇಹದಲ್ಲಿಯೇ ಡ್ರಗ್ ಇರುತ್ತದೆ. ಅದೇ ನಮಗೆ ಕಿಕ್ ಕೊಡುತ್ತದೆ. 10 ದಿನ ವಿಪಾಸನಾ ಮುಗಿಸಿ ಬಂದ ನಂತರ ನನ್ನ ಪತ್ನಿ ಕೇಳಿದಳು ಏನು, ನೀವೇನು ಮಾತಾಡುತ್ತಿಲ್ಲ ಎಂದು. ನೀನೂ ಕೂಡಾ ಹೋಗಿ ವಿಪಾಸನ ಮಾಡು ಎಂದು. ಅವಳೂ ಅದನ್ನು ಮಾಡಿಬಂದಳು.

ಇದನ್ನು ನಾನು ಯಾಕೆ ಹೇಳಿದೆ ಎಂದರೆ ನಮ್ಮ ಮಕ್ಕಳಿಗೆ ವಿಪಾಸನ, ಮೆಡಿಟೇಷನ್, ಯೋಗ, ಬ್ರೀಥಿಂಗ್ ಇದನ್ನೆಲ್ಲ ನಾವು ತೋರಿಸುವುದೇ ಇಲ್ಲ. ಅವರ ಬದುಕು ಟಕ್ ಟಕ್ ಟಕ್ ಅಂತ ಬದುಕಿ ಬಿಡುತ್ತಾರೆ. ಹೀಗೆಲ್ಲ ಮಾಡಿದರೆ ಅವರಿಗೆ ಅವರ ಬದುಕು ನಿಯಂತ್ರಣದಲ್ಲಿರುತ್ತದೆ. ಡ್ರಗ್ಸ್ ಸೇವಿಸುವಮಕ್ಕಳು ನಮ್ಮ ಜತೆ ವ್ಯಯಿಸುವ ಸಮಯ ಕಮ್ಮಿ. ಶೇ 10 ಸಮಯ ಅವರು ನಮ್ಮೊಂದಿಗೆ ಕಳೆಯುತ್ತಾರೆ. ಶೇ 90 ಅವರು ಹೊರಗಡೆ, ಗೆಳೆಯರೊಂದಿಗೆ ಕಳೆಯುತ್ತಾರೆ. ಅವರು ತಮ್ಮದೇ ಜಗತ್ತಿನಲ್ಲಿ ತಮಗೆ ಎಲ್ಲವೂ ಬೇಗನೆ ದಕ್ಕಿಬಿಡಬೇಕು ಎಂದು ಬಯಸುತ್ತಾರೆ. ಈಗಲೇ ಯಶಸ್ಸು ಕಾಣಬೇಕು ಎಂದು ಅವರು ಬಯಸುತ್ತಾರೆ. ಅದಕ್ಕಾಗಿ ನೀವು ಶಾರ್ಟ್ ಕಟ್ ಬಳಸಬೇಡಿ. ನೀವು ಯಶಸ್ಸು ಗಳಿಸುವುದಕ್ಕಾಗಿ ಆ ಪ್ರಕ್ರಿಯೆಗಳ ಮೂಲಕವೇ ಹೋಗಿ.ಈಗಲೇ ಎಲ್ಲವೂ ಆಗಿ ಬಿಡಬೇಕು ಎಂದು ಬಯಸಿದರ ಅದು ಸಾಧ್ಯವಿಲ್ಲ. ಇದು ಸಾಧ್ಯವಾಗದೇ ಇದ್ದಾಗ ಆ ಒತ್ತಡ ನಿವಾರಣೆಗೆ ಅವರು ಡ್ರಗ್ಸ್ ಮೊರೆ ಹೋಗುತ್ತಾರೆ.

ಅಪ್ಪ ಅಮ್ಮ ತಮ್ಮ ಮಕ್ಕಳಿಗೆ ಕಠಿಣ ಪರಿಶ್ರಮ, ತ್ಯಾಗ ತುಂಬಾ ವರ್ಷಗಳ ನಂತರ ಸಹಾಯಕ್ಕೆ ಬರುತ್ತದೆ ಎಂಬುದನ್ನು ಹೇಳಿಕೊಡಬೇಕು. ಡ್ರಗ್ಸ್ ಮಕ್ಕಳಿಗೆ ತುಂಬಾ ಸಮಸ್ಯೆ ಆಗಿತ್ತು. ಎಲ್ಲದಕ್ಕೂ ಡ್ರಗ್ಸ್ ಪರಿಹಾರ ಎಂದು ಮಕ್ಕಳು ಅಂದುಕೊಂಡಿರುತ್ತಾರೆ. ಇದು ಇಲ್ಲದಾಗಿಸಲು ಮಕ್ಕಳಿಗೆ ಯೋಗ, ವಿಪಾಸನ ,ಬ್ರೀಥಿಂಗ್ ಹೇಳಿಕೊಡಬೇಕು.

ಇದನ್ನೂ ಓದಿ:  ಎನ್‌ಡಿಎ- ಎಐಎಡಿಎಂಕೆ ಬ್ರೇಕಪ್​​ಗೆ ಅಣ್ಣಾಮಲೈ ಕಾರಣ? ಬಿಜೆಪಿ ನಾಯಕನ ಕಿರು ಪರಿಚಯ

ಪ್ರಶ್ನೆ:  ನಿಮ್ಮ ದಾಂಪತ್ಯದಲ್ಲಿನ ಹೊಂದಾಣಿಕೆ ಬಗ್ಗೆ ಹೇಳಿ

ಉತ್ತರ: ನನ್ನ ಹೆಂಡ್ತಿ ಬಗ್ಗೆ ನಾನು ಸುಳ್ಳು ಹೇಳಲಾರೆ . ನನ್ನ ಹೆಂಡ್ತಿ ಬಗ್ಗೆ ಇಲ್ಲಿರುವ ಹೆಚ್ಚಿನವರಿಗೆ ಗೊತ್ತು, ನಮ್ಮ ಸ್ನೇಹಿತರು ಇಲ್ಲಿದ್ದಾರೆ. ನಾನು ಒಂದು ಮಾತು ಹೇಳುತ್ತೇನೆ. ಜಗತ್ತಿನಲ್ಲಿ ಹೆಚ್ಚು ಬ್ಯಾಲೆನ್ಸ್ ಮಾಡುವ ಹುಡುಗಿ ನನ್ನ ಹೆಂಡತಿ. ಪೊಲೀಸ್​​ನವರಿಗೆ ಹೇಳಲಾಗುತ್ತದೆ, ನೀವು ಮನೆಗೆ ಬರುವಾಗ ನಿಮ್ಮ ಪ್ರತಿಷ್ಠೆ,ಅಧಿಕಾರ ಎಲ್ಲವೂ ಚಪ್ಪಲಿಯಂತೆ ಹೊರಗೆ ಇಟ್ಟಿರಬೇಕು ಎಂದು. ಬ್ಯಾಲೆನ್ಸ್ ಮಾಡಿ ಬದುಕನ್ನು ಮುಂದೆ ಸಾಗಿವುಸುದು ಅಷ್ಟು ಸುಲಭ ಅಲ್ಲ. ನನ್ನ ಬದುಕಿನಲ್ಲಿ ಪ್ರಮುಖ ವ್ಯಕ್ತಿಗಳು ಇಬ್ಬರೇ, ನಮ್ಮ ಅಮ್ಮ ಮತ್ತು ಹೆಂಡತಿ. ಜಗತ್ತೇ ಎದುರಾದರೂ ಅವರು ನನ್ನ ಜತೆ ಇರುತ್ತಾರೆ. ನನ್ನ ಬದುಕು ತುಂಬಾ ಸರಳವಾಗಿದೆ. ಜನರು ತುಂಬಾ ಜಡ್ಜ್ ಮೆಂಟಲ್ ಆಗಿರುತ್ತಾರೆ. ಆದರೆ ನನ್ನ ಬದುಕಿನ ಎರಡು ಪಿಲ್ಲರ್​​ಗಳೆಂದರೆ ನನ್ನ ಅಮ್ಮ ಮತ್ತು ಪತ್ನಿ. ನಾನು ಏನು ಮಾಡಿದರೂ ನನ್ನ ಮಗ ಸೂಪರ್ ಎಂದು ಭಾವಿಸುವವರು ನಮ್ಮಮ್ಮ. ಇನ್ನು ಇದನ್ನೆಲ್ಲ ಬಿಟ್ಟು ದನ ಮೇಯಿಸೋಕೆ ಹೋದರೂ ಸೂಪರ್ ಅಂತ ಹೇಳುವವರು ನಮ್ಮಮ್ಮ. ನನ್ನಲ್ಲಿ ಏನೂ ಇಲ್ಲದೇ ಇದ್ದಾಗ, ನಾನು ಕಾಲೇಜು ವಿದ್ಯಾರ್ಥಿ ಆಗಿದ್ದಾಗ ನನ್ನ ಜತೆ ಬಂದವಳು ನನ್ನ ಹೆಂಡತಿ. ಅಲ್ಲಿಂದ 20 ವರ್ಷ ನನ್ನ ಬದುಕಿನ ಪಯಣದಲ್ಲಿ ಜತೆಯಾಗಿದ್ದಾಳೆ. ಆಕೆ ಅಷ್ಟು ವರ್ಷದಿಂದ ನನ್ನ ಬೆಸ್ಟ್ ಫ್ರೆಂಡ್. ಅವರಿಗೆ ನನ್ನ ಬಗ್ಗೆ ಚೆನ್ನಾಗಿ ಗೊತ್ತು. ನನ್ನ ಮಗ ಚಿಕ್ಕದಿರುವಾಗ, ನಾನು ಪೊಲೀಸ್ ಅಧಿಕಾರಿ ಆಗಿದ್ದಾಗ ತುಂಬಾ ಜನ ಸೆಲ್ಫಿ ತೆಗೆದುಕೊಳ್ಳುವರು. ನಾನು ಆಗ ನಮ್ಮ ಮಗನಿಗೆ ಹೇಳುತ್ತಿದ್ದೆವು ಈ ಸೆಲ್ಫಿ ಎಲ್ಲ ಸುಮ್ಮನೆ. ಇದು ದೊಡ್ಡ ಸಂಗತಿ ಏನೂ ಅಲ್ಲ ಎಂದು.ಅದು ಇಂಪಾರ್ಟೆಂಟ್ ಅಲ್ಲ ಎಂದು ಹೇಳಿಕೊಡುತ್ತಿದ್ದೆವು.

ಅಂದು ನೋಡಿದ ಅಣ್ಣಾಮಲೈ ಅವರನ್ನೇ ಜನರು ಇಂದೂ ನೋಡಬೇಕು. ಅಧಿಕಾರ, ಪ್ರತಿಷ್ಠೆ ಇದ್ಯಾವುದೂ ಇಲ್ಲದೆ. ತುಂಬಾ ಜನ ನಮ್ಮನ್ನು ಹೊಗಳುತ್ತಾರೆ, ತೆಗಳುತ್ತಾರೆ. ಆದರೆ ಊರಿಗೆ ಹೋದರೆ ಅಲ್ಲಿ ನಮ್ಮದೇ ಜನ. ನಮ್ಮ ಬದುಕಿನಲ್ಲಿ ಪರಿಶ್ರಮ, ತ್ಯಾಗ ಇರಬೇಕು.

ಪ್ರಶ್ನೆ: ನಿಮ್ಮ ಮುಂದಿನ ಯೋಜನೆ ದೆಹಲಿಯಾ ತಮಿಳುನಾಡಾ?

ಉತ್ತರ: ಇಂಡಿಯಾ ಫಸ್ಟ್, ಸ್ಟೇಟ್ ನೆಕ್ಸ್ಟ್ ತಮಿಳುನಾಡಾ ದೆಹಲಿಯಾ ಎಂದು ಕೇಳಿದರೆ ನಾನೇ ಕಟ್ಟಿಕೊಂಡಒಂದು ಜಗತ್ತನ್ನು ಬಿಟ್ಟು ತಮಿಳುನಾಡಿಗೆ ಬಂದೀನಿ. ಇಲ್ಲಿ ಬಿಟ್ಟು ಹೋಗಲಾರೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ರಸ್ತೆ ದಾಟುವಾಗ ಬಸ್ ಡಿಕ್ಕಿ ಹೊಡೆದು ಕಾಲೇಜು ಯುವತಿ ಭೀಕರ ಸಾವು
ರಸ್ತೆ ದಾಟುವಾಗ ಬಸ್ ಡಿಕ್ಕಿ ಹೊಡೆದು ಕಾಲೇಜು ಯುವತಿ ಭೀಕರ ಸಾವು
ಬೃಹತ್ ಹೆಬ್ಬಾವನ್ನು ಮೈಗೆಲ್ಲ ಸುತ್ತಿಕೊಂಡ ವಿಡಿಯೋ ನೋಡಿದರೆ ಶಾಕ್ ಗ್ಯಾರಂಟಿ
ಬೃಹತ್ ಹೆಬ್ಬಾವನ್ನು ಮೈಗೆಲ್ಲ ಸುತ್ತಿಕೊಂಡ ವಿಡಿಯೋ ನೋಡಿದರೆ ಶಾಕ್ ಗ್ಯಾರಂಟಿ
ಮಕ್ಕಳು ಕ್ರೀಡಾಪಟುಗಳಾಗಿದ್ದರೆ ಕೃಪಾಂಕ ನೀಡುವ ಬಗ್ಗೆ ಪರಾಮರ್ಶೆ: ಸಿಎಂ
ಮಕ್ಕಳು ಕ್ರೀಡಾಪಟುಗಳಾಗಿದ್ದರೆ ಕೃಪಾಂಕ ನೀಡುವ ಬಗ್ಗೆ ಪರಾಮರ್ಶೆ: ಸಿಎಂ
ಡ್ಯಾನ್ಸ್ ವೇದಿಕೆಯಾಗಿ ಬದಲಾದ ಬಿಗ್ ಬಾಸ್ ಮನೆ; ಧರ್ಮ-ಐಶೂ ಮಸ್ತ್ ಕುಣಿತ
ಡ್ಯಾನ್ಸ್ ವೇದಿಕೆಯಾಗಿ ಬದಲಾದ ಬಿಗ್ ಬಾಸ್ ಮನೆ; ಧರ್ಮ-ಐಶೂ ಮಸ್ತ್ ಕುಣಿತ
ಯತೀಂದ್ರ ಸಿದ್ದರಾಮಯ್ಯಗೆ ಸಂವಿಧಾನ ಕೈಯಲ್ಲಿ ಹಿಡಿಯುವ ನೈತಿಕತೆ ಇಲ್ಲ: ಅಶೋಕ
ಯತೀಂದ್ರ ಸಿದ್ದರಾಮಯ್ಯಗೆ ಸಂವಿಧಾನ ಕೈಯಲ್ಲಿ ಹಿಡಿಯುವ ನೈತಿಕತೆ ಇಲ್ಲ: ಅಶೋಕ
ಬಸ್​​ನಿಂದ ಎಳೆದೊಯ್ದು ಕಂಡಕ್ಟರ್ ಮೇಲೆ ಮಾರಣಾಂತಿಕ ಹಲ್ಲೆ
ಬಸ್​​ನಿಂದ ಎಳೆದೊಯ್ದು ಕಂಡಕ್ಟರ್ ಮೇಲೆ ಮಾರಣಾಂತಿಕ ಹಲ್ಲೆ
ಲೈಸೆನ್ಸ್ ಹಂಚಿಕೆಯಲ್ಲಿ ಅವ್ಯಾಹತ ಭ್ರಷ್ಟಾಚಾರ: ಗುರುಸ್ವಾಮಿ, ಸಂಘದ ಅಧ್ಯಕ್ಷ
ಲೈಸೆನ್ಸ್ ಹಂಚಿಕೆಯಲ್ಲಿ ಅವ್ಯಾಹತ ಭ್ರಷ್ಟಾಚಾರ: ಗುರುಸ್ವಾಮಿ, ಸಂಘದ ಅಧ್ಯಕ್ಷ
ಕೊವಿಡ್ ಹಗರಣದ ತನಿಖೆಗೆ SIT ರಚನೆ: ಡಾ ಸಿಎನ್ ಮಂಜುನಾಥ್​ಗೂ ಸಂಕಷ್ಟ?
ಕೊವಿಡ್ ಹಗರಣದ ತನಿಖೆಗೆ SIT ರಚನೆ: ಡಾ ಸಿಎನ್ ಮಂಜುನಾಥ್​ಗೂ ಸಂಕಷ್ಟ?
ಫಲಿತಾಂಶಕ್ಕೆ ಮೊದಲೇ ಗೂಬೆ ಕೂರಿಸುವ ಕೆಲಸ ಶುರುಮಾಡಿದ ಯೋಗೇಶ್ವರ್
ಫಲಿತಾಂಶಕ್ಕೆ ಮೊದಲೇ ಗೂಬೆ ಕೂರಿಸುವ ಕೆಲಸ ಶುರುಮಾಡಿದ ಯೋಗೇಶ್ವರ್
ಜಮೀರ್ ಅಹ್ಮದ್ ಮಾಡಿದ ಕಾಮೆಂಟ್​​ಗೆ ನಾವ್ಯಾರೂ ಪ್ರತಿಕ್ರಿಯಿಸಿಲ್ಲ: ನಿಖಿಲ್
ಜಮೀರ್ ಅಹ್ಮದ್ ಮಾಡಿದ ಕಾಮೆಂಟ್​​ಗೆ ನಾವ್ಯಾರೂ ಪ್ರತಿಕ್ರಿಯಿಸಿಲ್ಲ: ನಿಖಿಲ್