Updated on: Oct 03, 2023 | 10:06 PM
ಟೀಮ್ ಇಂಡಿಯಾದ ಯಶಸ್ವಿ ನಾಯಕ ಮಹೇಂದ್ರ ಸಿಂಗ್ ಧೋನಿ ಮತ್ತೊಮ್ಮೆ ಸೋಷಿಯಲ್ ಮೀಡಿಯಾದಲ್ಲಿ ಸಂಚಲನ ಸೃಷ್ಟಿಸಿದ್ದಾರೆ. ಆದರೆ ಈ ಬಾರಿ ಆಟದಿಂದಲ್ಲ, ಬದಲಾಗಿ ತಮ್ಮ ಹೊಸ ಲುಕ್ನಿಂದ ಎಂಬುದು ವಿಶೇಷ.
ಉದ್ದ ಕೂದಲಿಗೆ ಗೋಲ್ಡನ್ ಟಚ್ ನೀಡಿರುವ ಧೋನಿ ಯಾವುದೇ ಸ್ಟಾರ್ ನಟರಿಗೂ ಕಮ್ಮಿ ಇಲ್ಲವೆಂಬಂತೆ ಪೋಸ್ ನೀಡಿದ್ದಾರೆ. ಈ ಫೋಟೊಗಳು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.
ಹೀಗೆ ವೈರಲ್ ಆಗಲು ಮುಖ್ಯ ಕಾರಣ ಧೋನಿಯ ವಿಂಟೇಜ್ ಲುಕ್. ಅಂದರೆ ಇದೇ ಮಾದರಿಯ ಉದ್ದ ಕೂದಲಿನೊಂದಿಗೆ ಮಹೇಂದ್ರ ಸಿಂಗ್ ಧೋನಿ ಟೀಮ್ ಇಂಡಿಯಾಗೆ ಎಂಟ್ರಿ ಕೊಟ್ಟಿದ್ದರು. ಅಲ್ಲದೆ ಆ ಲುಕ್ ಮೂಲಕ ಹೊಸ ಟ್ರೆಂಡ್ ಸೃಷ್ಟಿಸಿದ್ದರು.
ಆದರೆ 2011 ರಲ್ಲಿ ಟೀಮ್ ಇಂಡಿಯಾ ವಿಶ್ವಕಪ್ ಗೆದ್ದ ಬಳಿಕ ಧೋನಿ ಉದ್ದ ಕೂದಲಿಗೆ ವಿದಾಯ ಹೇಳಿದ್ದರು. ಇದಾದ ಬಳಿಕ ಹಲವು ಬಾರಿ ಹೇರ್ ಸ್ಟೈಲ್ ಬದಲಿಸುವ ಮೂಲಕ ಗಮನ ಸೆಳೆದಿದ್ದರು.
ಇದೀಗ ತಮ್ಮ ಹಳೆಯ ಸ್ಟೈಲ್ಗೆ ಹೊಸ ಟಚ್ ನೀಡುವ ಮೂಲಕ ಮಹೇಂದ್ರ ಸಿಂಗ್ ಧೋನಿ ಕಂಗೊಳಿಸಿದ್ದಾರೆ. ಹೀಗಾಗಿಯೇ ಧೋನಿಯ ಹೊಸ ಲುಕ್ ಸೋಷಿಯಲ್ ಮೀಡಿಯಾದಲ್ಲಿ ಸೆನ್ಸೇಷನ್ ಸೃಷ್ಟಿಸಿದೆ.
ಇನ್ನು ಧೋನಿಯ ಹೊಸ ಲುಕ್ ಅನ್ನು ವಿನ್ಯಾಸಗೊಳಿಸಿರುವುದು ಮತ್ಯಾರೂ ಅಲ್ಲ, ಖ್ಯಾತ ಹೇರ್ ಸ್ಟೈಲಿಸ್ಟ್ ಆಲೀಮ್ ಹಕೀಮ್. ಬಾಲಿವುಡ್ ಸೆಲೆಬ್ರಿಟಿಗಳು, ಟೀಮ್ ಇಂಡಿಯಾ ಆಟಗಾರರ ಹೇರ್ ಸ್ಟೈಲ್ ಹಿಂದಿರುವ ಕೈಚಳಕ ಕೂಡ ಇವರದ್ದೇ. ಇದೀಗ ಧೋನಿಯ ತಲೆಗೆ ಕೈ ಹಾಕಿ ಹೊಸ ಲುಕ್ ನೀಡಿದ್ದಾರಷ್ಟೇ.