AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ತಮಿಳುನಾಡು ಸಿಎಂ ವಿಜಯ್​ ಸಾಧನೆ ಕೊಂಡಾಡಿದ ರಾಮ್ ಚರಣ್: ಹೇಳಿದ್ದೇನು?

Thalapathy Vijay: ದೇಶದ ಪ್ರಮುಖ ನಗರಗಳಲ್ಲಿ ಸುತ್ತಾಡಿ ‘ಪೆದ್ದಿ’ ಸಿನಿಮಾದ ಪ್ರಚಾರ ಮಾಡುತ್ತಿರುವ ರಾಮ್ ಚರಣ್ ಇಂದು (ಮೇ 30) ಚೆನ್ನೈಗೆ ಭೇಟಿ ನೀಡಿದ್ದರು. ಚೆನ್ನೈನಲ್ಲಿ ಆಯೋಜಿಸಿದ್ದ ಕಾರ್ಯಕ್ರದಲ್ಲಿ ಮಾತನಾಡಿದ ನಟ ರಾಮ್ ಚರಣ್, ತಮ್ಮ ‘ಪೆದ್ದಿ’ ಸಿನಿಮಾದ ಬಗ್ಗೆ ಮಾತನಾಡುವ ಜೊತೆಗೆ ಸಿನಿಮಾರಂಗದಿಂದ ರಾಜಕೀಯಕ್ಕೆ ಪ್ರವೇಶಿಸಿ ಇತ್ತೀಚೆಗಷ್ಟೆ ತಮಿಳುನಾಡಿನ ಸಿಎಂ ಸಹ ಆಗಿರುವ ವಿಜಯ್ ಅವರ ಸಾಧನೆಯನ್ನು ಕೊಂಡಾಡಿದರು.

ತಮಿಳುನಾಡು ಸಿಎಂ ವಿಜಯ್​ ಸಾಧನೆ ಕೊಂಡಾಡಿದ ರಾಮ್ ಚರಣ್: ಹೇಳಿದ್ದೇನು?
Ram Charan Cm Vijay
ಮಂಜುನಾಥ ಸಿ.
|

Updated on:May 30, 2026 | 8:34 PM

Share

ರಾಮ್ ಚರಣ್ (Ram Charan) ನಟನೆಯ ‘ಪೆದ್ದಿ’ ಸಿನಿಮಾ ಕೆಲವೇ ದಿನಗಳಲ್ಲಿ ಬಿಡುಗಡೆ ಆಗಲಿದ್ದು, ಭರ್ಜರಿ ಪ್ರಚಾರದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ ರಾಮ್ ಚರಣ್. ದೇಶದ ಪ್ರಮುಖ ನಗರಗಳಲ್ಲಿ ಸುತ್ತಾಡಿ ಪ್ರಚಾರ ಮಾಡುತ್ತಿರುವ ರಾಮ್ ಚರಣ್ ಇಂದು (ಮೇ 30) ಚೆನ್ನೈಗೆ ಭೇಟಿ ನೀಡಿದ್ದರು. ಚೆನ್ನೈನಲ್ಲಿ ಆಯೋಜಿಸಿದ್ದ ಕಾರ್ಯಕ್ರದಲ್ಲಿ ಮಾತನಾಡಿದ ನಟ ರಾಮ್ ಚರಣ್, ತಮ್ಮ ‘ಪೆದ್ದಿ’ ಸಿನಿಮಾದ ಬಗ್ಗೆ ಮಾತನಾಡುವ ಜೊತೆಗೆ ಸಿನಿಮಾರಂಗದಿಂದ ರಾಜಕೀಯಕ್ಕೆ ಪ್ರವೇಶಿಸಿ ಇತ್ತೀಚೆಗಷ್ಟೆ ತಮಿಳುನಾಡಿನ ಸಿಎಂ ಸಹ ಆಗಿರುವ ವಿಜಯ್ ಅವರ ಸಾಧನೆಯನ್ನು ಕೊಂಡಾಡಿದರು.

‘ವಿಜಯ್ ಅವರು ತಮ್ಮ ವೃತ್ತಿಜೀವನದ ಉತ್ತುಂಗದಲ್ಲಿದ್ದಾಗಲೇ ಸಾರ್ವಜನಿಕ ಸೇವೆಯಲ್ಲಿ ತೊಡಗಿಸಿಕೊಳ್ಳಲು ಸಿನಿಮಾರಂಗದಿಂದ ದೂರ ಸರಿದಿದ್ದಾರೆ. ಚಲನಚಿತ್ರ ರಂಗದ ವ್ಯಕ್ತಿಯಾಗಿ ತಮಗೆ ಅವರ ಬಗ್ಗೆ ಹೆಮ್ಮೆ ಇದೆ. ಸಾರ್ವಜನಿಕ ಸೇವೆಗೆ ಮಾಡಲೆಂದು ನೀವು (ವಿಜಯ್) ನಿಮ್ಮ ಯಶಸ್ಸಿನ ಉತ್ತುಂಗದಲ್ಲಿದ್ದಾಗ ನಿಮ್ಮ ತಾರಾ ಪಟ್ಟ (ಸ್ಟಾರ್‌ಡಮ್) ಮತ್ತು ವೃತ್ತಿಜೀವನವನ್ನು ತ್ಯಜಿಸಿದ್ದೀರಿ. ಚಿತ್ರರಂಗದ ಒಬ್ಬ ವ್ಯಕ್ತಿಯಾಗಿ ನನಗೆ ಇದು ತುಂಬಾ ತುಂಬಾ ಹೆಮ್ಮೆಯ ವಿಷಯವಾಗಿದೆ, ಮತ್ತು ನಾನು ತಮಿಳುನಾಡಿನ ಜನತೆಗೆ ಹಾಗೂ ವಿಜಯ್ ಸರ್ ಅವರಿಗೆ ಅಭಿನಂದನೆಗಳನ್ನು ಸಲ್ಲಿಸುತ್ತೇನೆ’ ಎಂದಿದ್ದಾರೆ.

ಇದಕ್ಕೂ ಮುನ್ನ, ಚರಣ್ ಅವರು ಟ್ವಿಟರ್ ನಲ್ಲೂ ವಿಜಯ್ ಅವರಿಗೆ ಅಭಿನಂದನೆ ಸಲ್ಲಿಸಿದ್ದರು. ತಮ್ಮ ಪೋಸ್ಟ್‌ನಲ್ಲಿ ಅವರು, ‘ತಮಿಳುನಾಡು ಚುನಾವಣೆಯಲ್ಲಿ ಅತ್ಯದ್ಭುತ ಜಯ ಸಾಧಿಸಿದ ವಿಜಯ್ ಅವರಿಗೆ ಹೃತ್ಪೂರ್ವಕ ಅಭಿನಂದನೆಗಳು. ನಿಮ್ಮ ದೂರದೃಷ್ಟಿ ಮತ್ತು ಜನರೊಂದಿಗಿನ ಒಡನಾಟವು ನಿಜವಾಗಿಯೂ ಮನ ಮುಟ್ಟಿದೆ. ತಮಿಳುನಾಡನ್ನು ನಿರಂತರ ಪ್ರಗತಿಯತ್ತ ಮುನ್ನಡೆಸುವಲ್ಲಿ ನಿಮಗೆ ಉತ್ತಮ ಯಶಸ್ಸು ಸಿಗಲಿ ಎಂದು ಹಾರೈಸುತ್ತೇನೆ’ ಎಂದು ಬರೆದುಕೊಂಡಿದ್ದರು.

ಇದನ್ನೂ ಓದಿ:ರಾಮ್ ಚರಣ್ ಹೊಸ ಬಾಡಿಗಾರ್ಡ್ ಯಾರು ಗೊತ್ತಾ? ದಿನದ ಸಂಬಳ ಎಷ್ಟು?

ರಾಮ್ ಚರಣ್ ಅವರ ತಂದೆ ಮೆಗಾಸ್ಟಾರ್ ಚಿರಂಜೀವಿ ಸಹ ಕೆಲ ದಿನಗಳ ಹಿಂದೆ ಖುದ್ದು ಸಿಎಂ ವಿಜಯ್ ಅವರಿಗೆ ಕರೆ ಮಾಡಿ ಮಾತನಾಡಿದ್ದರು. ವಿಜಯ್ ಅವರ ಅಭೂತಪೂರ್ವ ಚುನಾವಣಾ ಗೆಲುವಿಗೆ ಅವರು ಅಭಿನಂದಿಸಿದ್ದರು. ಅಲ್ಲದೆ, ಅದಕ್ಕೂ ಮುಂಚೆ ವಿಜಯ್ ನಟನೆಯ ‘ಜನ ನಾಯಗನ್’ ಸಿನಿಮಾ ಲೀಕ್ ಆದಾಗಲೂ ಸಹ ಅದನ್ನು ತೀವ್ರವಾಗಿ ಖಂಡಿಸಿ, ವಿಜಯ್ ಪರ ಧ್ವನಿ ಎತ್ತಿದ್ದರು.

ಇನ್ನು ರಾಮ್ ಚರಣ್ ಅವರ ಚಿಕ್ಕಪ್ಪ, ಪ್ರಸ್ತುತ ಆಂಧ್ರ ಪ್ರದೇಶ ಡಿಸಿಎಂ ಸಹ ಇತ್ತೀಚೆಗೆ ವಿಜಯ್ ಅವರ ಗೆಲುವಿನ ಬಗ್ಗೆ ಮಾತನಾಡಿದ್ದರು, ‘ವಿಜಯ್ ಗೆಲುವು ತಮಗೆ ಅಸೂಯೆ ತಂದಿದೆ’ ಎಂದಿದ್ದರು. ವಿಜಯ್ ಬಲು ಸುಲಭವಾಗಿ ಸಿಎಂ ಆಗಿಬಿಟ್ಟರು. ಪೋಸ್ಟರ್​​ಗಳನ್ನು ಹಾಕಿ ಜನರನ್ನು ಸೆಳೆದರು. ಆದರೆ ನನ್ನನ್ನು ನಮ್ಮ ಜನ ಕಳೆದ 15 ವರ್ಷಗಳಿಂದಲೂ ಅಲೆಸಿದರು’ ಎಂದು ಹೇಳಿ ನಕ್ಕಿದ್ದರು ಪವನ್ ಕಲ್ಯಾಣ್.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 8:33 pm, Sat, 30 May 26

Follow Us
Manjunatha C
Manjunatha C

ಮಂಜುನಾಥ ಸಿ, ಬೆಂಗಳೂರು ಗ್ರಾಮಾಂತರ, ವಿಜಯರಪುರ ಪಟ್ಟಣ ನಿವಾಸಿ. ಕಳೆದ ಏಳು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯನಾಗಿದ್ದೇನೆ. ಕಳೆದ ಐದು ವರ್ಷದಿಂದ ಡಿಜಿಟಲ್ ಪತ್ರಿಕೋದ್ಯಮದಲ್ಲಿ ತೊಡಗಿಕೊಂಡಿದ್ದೇನೆ. ಈ ಹಿಂದೆ ಪ್ರಜಾವಾಣಿ, ಒನ್ ಇಂಡಿಯಾ ಕನ್ನಡ ಸಂಸ್ಥೆಗಳ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ್ದೇನೆ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್​ನ ಸಿನಿಮಾ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಮೆಚ್ಚಿನ ಹವ್ಯಾಸ ಸಿನಿಮಾ ವೀಕ್ಷಣೆ, ಪುಸ್ತಕಗಳನ್ನು ಓದುವುದು.

Read More