‘ರಾಮಾಯಣ’ ಚಿತ್ರದ ಪ್ರಚಾರದ ಬಜೆಟ್ ಹಣದಲ್ಲಿ 4 ‘ಕೆಜಿಎಫ್’ ಸಿನಿಮಾ ನಿರ್ಮಿಸಬಹುದು

ರಣಬೀರ್ ಕಪೂರ್, ಸಾಯಿ ಪಲ್ಲವಿ ಹಾಗೂ ರಾಕಿಂಗ್ ಸ್ಟಾರ್ ಯಶ್ ನಟನೆಯ ಬಹುನಿರೀಕ್ಷಿತ 'ರಾಮಾಯಣ' ಚಿತ್ರದ ಪ್ರಚಾರದ ಬಜೆಟ್ ಕೇಳಿ ಇಡೀ ಚಿತ್ರರಂಗವೇ ಬೆಚ್ಚಿಬಿದ್ದಿದೆ. ಸೋನಿ ಪಿಕ್ಚರ್ಸ್ ಸಹಯೋಗದೊಂದಿಗೆ ಈ ಮಹಾಕಾವ್ಯವನ್ನು ಜಾಗತಿಕ ಮಟ್ಟಕ್ಕೆ ಕೊಂಡೊಯ್ಯಲು ಬರೋಬ್ಬರಿ 375 ಕೋಟಿ ರೂಪಾಯಿಯನ್ನು ಕೇವಲ ಪ್ರಚಾರಕ್ಕಾಗಿಯೇ ಮೀಸಲಿಡಲಾಗಿದೆ.

ರಾಮಾಯಣ ಚಿತ್ರದ ಪ್ರಚಾರದ ಬಜೆಟ್ ಹಣದಲ್ಲಿ 4 ‘ಕೆಜಿಎಫ್’ ಸಿನಿಮಾ ನಿರ್ಮಿಸಬಹುದು
ರಣಬೀರ್​-ಯಶ್

Updated on: Jul 30, 2026 | 10:06 AM

ಮುಖ್ಯಾಂಶಗಳು

  • ಬಾಲಿವುಡ್ ಇತಿಹಾಸದಲ್ಲೇ ಮೊದಲು
  • ಕೇವಲ ಪ್ರಚಾರಕ್ಕೆ 375 ಕೋಟಿ ರೂಪಾಯಿ
  • ಹಾಲಿವುಡ್ ರೇಂಜ್‌ನಲ್ಲಿ ರಾಮಾಯಣ ರಿಲೀಸ್ 

ನಿತೇಶ್ ತಿವಾರಿ ನಿರ್ದೇಶನದ ‘ರಾಮಾಯಣ’  (Ramayana) ಭಾರತೀಯ ಚಿತ್ರರಂಗದ ಬಹುನಿರೀಕ್ಷಿತ ಸಿನಿಮಾಗಳಲ್ಲಿ ಒಂದು. ರಣಬೀರ್ ಕಪೂರ್ ಶ್ರೀರಾಮನಾಗಿ ಮತ್ತು ಸಾಯಿ ಪಲ್ಲವಿ ಸೀತೆಯಾಗಿ ನಟಿಸುತ್ತಿದ್ದಾರೆ. ಇನ್ನು ರಾಕಿಂಗ್ ಸ್ಟಾರ್ ಯಶ್ ರಾವಣನ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ದಿನದಿಂದ ದಿನಕ್ಕೆ ಈ ಚಿತ್ರದ ಮೇಲಿನ ಹೈಪ್ ಗಗನಕ್ಕೇರುತ್ತಿದೆ. ಈಗ ಚಿತ್ರದ ಪ್ರಚಾರದ ಬಜೆಟ್ ಕೇಳಿ ಇಡೀ ಚಿತ್ರರಂಗವೇ ಬೆಚ್ಚಿಬಿದ್ದಿದೆ. ಈ ಹಣದಲ್ಲಿ 4 ಕೆಜಿಎಫ್ ನಿರ್ಮಾಣ ಮಾಡಬಹುದು ಎಂಬ ಮಾತು ಕೇಳಿ ಬಂದಿದೆ.

ಈ ಸಿನಿಮಾವನ್ನು ಜಾಗತಿಕ ಮಟ್ಟದಲ್ಲಿ ಬಿಡುಗಡೆ ಮಾಡಲು ಸೋನಿ ಪಿಕ್ಚರ್ಸ್ ಸಂಸ್ಥೆ ಕೈಜೋಡಿಸಿದೆ. ಹಾಲಿವುಡ್ ಸಿನಿಮಾಗಳ ಮಾದರಿಯಲ್ಲಿ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಚಿತ್ರವನ್ನು ರಿಲೀಸ್ ಮಾಡಲು ಪ್ಲಾನ್ ಮಾಡಲಾಗಿದೆ. ಅದಕ್ಕಾಗಿ ಸೋನಿ ಸಂಸ್ಥೆ ಭರ್ಜರಿ ಪ್ರಚಾರದ ತಂತ್ರ ರೂಪಿಸಿದೆ. ಎಲ್ಲವೂ ಅಂದುಕೊಂಡಂತೆ ನಡೆದಿದ್ದರೆ ಜುಲೈ 24ರಂದು ಟ್ರೇಲರ್ ರಿಲೀಸ್ ಆಗಬೇಕಿತ್ತು. ಆದರೆ, ಸೋನಿ ಜೊತೆ ಕೈ ಜೋಡಿಸಿದ ಕಾರಣ ಟ್ರೇಲರ್ ಲಾಂಚ್ ಅನ್ನು ಮುಂದಕ್ಕೆ ಹಾಕಲಾಗಿದೆ.

ವರದಿಗಳ ಪ್ರಕಾರ ಅಂತಾರಾಷ್ಟ್ರೀಯ ಪ್ರಚಾರಕ್ಕಾಗಿ ಸೋನಿ ಸಂಸ್ಥೆ ಬರೋಬ್ಬರಿ 235 ಕೋಟಿ ರೂಪಾಯಿ ಖರ್ಚು ಮಾಡುತ್ತಿದೆ. ಇದರ ಜೊತೆಗೆ ಚಿತ್ರದ ನಿರ್ಮಾಪಕರು ಕೂಡ 140 ಕೋಟಿ ರೂಪಾಯಿ ಹೂಡಿಕೆ ಮಾಡುತ್ತಿದ್ದಾರೆ. ಹೀಗಾಗಿ ಚಿತ್ರದ ಒಟ್ಟು ಪ್ರಚಾರದ ಬಜೆಟ್ ಬರೋಬ್ಬರಿ 375 ಕೋಟಿ ರೂಪಾಯಿ ತಲುಪಿದೆ.

ಭಾರತೀಯ ಚಿತ್ರರಂಗದ ಇತಿಹಾಸದಲ್ಲೇ ಇಷ್ಟೊಂದು ದೊಡ್ಡ ಮೊತ್ತವನ್ನು ಪ್ರಚಾರಕ್ಕೆ ಬಳಸುತ್ತಿರುವುದು ಇದೇ ಮೊದಲು. ಈ ಸಿನಿಮಾವನ್ನು ಜಾಗತಿಕ ಮಟ್ಟದಲ್ಲಿ ಗುರುತಿಸುವಂತೆ ಮಾಡಲು ಚಿತ್ರತಂಡ ಹಠಕ್ಕೆ ಬಿದ್ದಿದೆ. ಈ ಮೂಲಕ ಸಿನಿಮಾವನ್ನು ವಿಶ್ವಮಟ್ಟಕ್ಕೆ ಕೊಂಡೊಯ್ಯುವ ದೊಡ್ಡ ಕನಸು ಚಿತ್ರತಂಡಕ್ಕಿದೆ.

ಇದನ್ನೂ ಓದಿ: ‘ರಾಮಾಯಣ’ ಸಿನಿಮಾಕ್ಕೆ ಎರಡು ವರ್ಷ ತಯಾರಿ, ರಣ್​​ಬೀರ್ ಕಪೂರ್ ಮಾಹಿತಿ

ಇತ್ತೀಚೆಗೆ ಸ್ಯಾನ್ ಡಿಯಾಗೋ ಕಾಮಿಕ್-ಕಾನ್ ಕಾರ್ಯಕ್ರಮದಲ್ಲೂ ರಾಮಾಯಣ ಸಿನಿಮಾ ದೊಡ್ಡ ಮಟ್ಟದಲ್ಲಿ ಸದ್ದು ಮಾಡಿತ್ತು. ಚಿತ್ರದಲ್ಲಿ ಅದ್ಭುತವಾದ ವಿಶ್ಯುವಲ್ ಎಫೆಕ್ಟ್ಸ್ ಇರಲಿವೆ. ಚಿತ್ರವು ಐಮ್ಯಾಕ್ಸ್ ಪರದೆಯ ಮೇಲೆ ಮೂಡಿಬರಲಿದೆ. ಎ.ಆರ್. ರೆಹಮಾನ್ ಮತ್ತು ಹಾಲಿವುಡ್‌ನ ಹ್ಯಾನ್ಸ್ ಜಿಮ್ಮರ್ ಚಿತ್ರಕ್ಕೆ ಸಂಗೀತ ನೀಡುತ್ತಿದ್ದಾರೆ. ಟ್ರೇಲರ್ ಬಿಡುಗಡೆಯಾದ ಬಳಿಕ ಚಿತ್ರದ ಮೇಲಿನ ನಿರೀಕ್ಷೆ ಮತ್ತಷ್ಟು ಹೆಚ್ಚಾಗಲಿದೆ.

ಪ್ರಶ್ನೆ: ರಾಮಾಯಣ ರಿಲೀಸ್ ಯಾವಾಗ?
ಉತ್ತರ: ದೀಪಾವಳಿ

ಪ್ರಶ್ನೆ: ರಾಮಾಯಣದಲ್ಲಿ ರಾವಣ ಪಾತ್ರಧಾರಿ ಯಾರು?
ಉತ್ತರ:
ಯಶ್ 

ಪ್ರಶ್ನೆ: ರಾಮಾಯಣದಲ್ಲಿ ರಾಮನ ಪಾತ್ರಧಾರಿ ಯಾರು?
ಉತ್ತರ:
ರಣಬೀರ್ ಕಪೂರ್

Published On - 10:32 am, Sat, 25 July 26

ರಾಜೇಶ್ ದುಗ್ಗುಮನೆ

ರಾಜೇಶ್​ ಹೆಗಡೆಯವರು ಪತ್ರಿಕೋದ್ಯಮಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More
Loading...
Unable to load recommendations.
Follow Us