ನಟ ಹಾಗೂ ನಿರ್ಮಾಪಕ ರಾನಾ ದಗ್ಗುಬಾಟಿ ಅವರಿಗೆ ಸಾಕಷ್ಟು ಜನಪ್ರಿಯತೆ ಇದೆ. ಆದರೆ, ಅವರಿಗೆ ಖುಷಿ ಇಲ್ಲ. ಅವರು ಇತ್ತೀಚೆಗೆ ಜನ್ಮದಿನ ಆಚರಿಸಿಕೊಳ್ಳಬೇಕಿತ್ತು. ಅವರ ಸಂಬಂಧಿ ಅಲ್ಲು ಅರ್ಜುನ್ ಬಂಧನಕ್ಕೆ ಒಳಗಾಗಿರುವುದರಿಂದ ಟೆನ್ಷನ್ನಲ್ಲಿ ಇದ್ದರು. ಅವರು ಬರ್ತ್ಡೇ ಆಚರಿಸಿಕೊಳ್ಳುವ ಯಾವುದೇ ಮೂಡ್ನಲ್ಲಿ ಇಲ್ಲ. ಅವರು ಹಲವು ಆರೋಗ್ಯ ಸಮಸ್ಯೆಗಳನ್ನು ಎದುರಿಸಿದ್ದರು. ಅವರ ಈ ಬಗ್ಗೆ ಓಪನ್ ಆಗಿ ಮಾತನಾಡಿದ್ದು ಕಡಿಮೆ.
ರಾನಾ ದಗ್ಗುಬಾಟಿ ಹಲವು ಸೂಪರ್ ಹಿಟ್ ಚಿತ್ರಗಳನ್ನು ನೀಡಿದ್ದಾರೆ. ಅವರು ‘ಬಾಹುಬಲಿ’ ಸರಣಿಯಲ್ಲಿ ಪ್ರಮುಖ ವಿಲನ್ ಪಾತ್ರ ಮಾಡಿ ಗಮನ ಸೆಳೆದಿದ್ದರು. ಅವರು ವೆಬ್ ಸೀರಿಸ್ನಲ್ಲಿ ನಟಿಸಿಯೂ ಫೇಮಸ್ ಆಗಿದ್ದಾರೆ. ಅವರದ್ದೇ ಆದ ಟಾಕ್ ಶೋ ಕೂಡ ಬರುತ್ತಿದೆ. ಅವರು ಬಳಲಿದ ಅನಾರೋಗ್ಯದ ಸಮಸ್ಯೆಗಳು ಒಂದೆರಡಲ್ಲ. ಆ ಬಗ್ಗೆ ಇಲ್ಲಿದೆ ವಿವರ.
ಈ ಮೊದಲು ರಾನಾ ಅವರು ಕಿಡ್ನಿ ಟ್ರಾನ್ಸ್ಪ್ಲಾಂಟ್ ಮಾಡಿಕೊಂಡಿದ್ದರು. ಅಲ್ಲದೆ, ಕಾರ್ನಿಯಾ ಟ್ರಾನ್ಸ್ಪ್ಲಾಂಟ್ ಕೂಡ ಆಗಿದೆ. ಇನ್ನು, ಅವರಿಗೆ ಹೃದಯ ಸಮಸ್ಯೆ ಕೂಡ ಇದೆ. ಈ ಬಗ್ಗೆ ಅವರು ಈ ಮೊದಲು ಮಾತನಾಡಿದ್ದರು. ‘ನಾನು ಮಾಯೋದಲ್ಲಿ (ಅಮೆರಿಕದಲ್ಲಿರುವ ಆಸ್ಪತ್ರೆ) ಇದ್ದೆ. ನನಗೆ ಏನಾಗಿದೆ ಎಂಬುದನ್ನು ಪತ್ತೆ ಹಚ್ಚಿದ ಏಕೈಕ ಆಸ್ಪತ್ರೆ. ನೀವು ತೊಂದರೆಗೆ ಸಿಲುಕಿದಾಗ ಜೀವನವನ್ನು ಬೇರೆ ರೀತಿಯಲ್ಲಿ ನೋಡುತ್ತೀರಿ’ ಎಂದಿದ್ದರು ಅವರು.
‘ಎಲ್ಲರೂ ನನ್ನನ್ನು ಬಾಹುಬಲಿ ಚಿತ್ರದಲ್ಲಿ ದೊಡ್ಡದಾಗಿ ನೋಡಿದ್ದಾರೆ. ಹಾಗಾಗಿ, ಎಲ್ಲರೂ ನನಗೆ ಅನಾರೋಗ್ಯವಿದೆಯೇ ಎಂದು ಕೇಳಿದ್ದರು. ನಾನು ಅವರಿಗೆ ಉತ್ತರಿಸಲು ಹೋಗಿಲ್ಲ. ನಗರದಲ್ಲಿ ಜನರೊಂದಿಗೆ ವಾಸಿಸಲು ನನಗೆ ಕಷ್ಟವಾಯಿತು. ಜನರು ನನ್ನ ಆರೋಗ್ಯದ ಬಗ್ಗೆ ಕೇಳಿದರೆ ಸಿಟ್ಟು ಬರುತ್ತಿತ್ತು. ನೀವು ಕಿಡ್ನಿ ಅಥವಾ ಕಣ್ಣನ್ನು ದಾನ ಮಾಡಲು ರೆಡಿ ಇಲ್ಲ ಎಂದರೆ ಆ ಬಗ್ಗೆ ಮಾತನಾಡಬೇಡಿ ಎನ್ನುತ್ತಿದ್ದೆ’ ಎಂಬುದಾಗಿ ಅವರು ಹೇಳಿದ್ದಾರೆ.
ಇದನ್ನೂ ಓದಿ: ‘ಇದೆಲ್ಲ ನಮ್ಮ ತಲೆಯಲ್ಲಿ ಇರೋದು’; ಇಂಡಸ್ಟ್ರಿ ಬಗ್ಗೆ ಅಪಸ್ವರ ತೆಗೆದಿದ್ದ ರಾನಾ ದಗ್ಗುಬಾಟಿ
‘ಕಾದನ್’ ಸಿನಿಮಾದಲ್ಲಿ ರಾನಾ ನಟಿಸಿದ್ದರು. ಈ ಚಿತ್ರದ ಶೂಟ್ಗಾಗಿ ಅವರು ಕಾಡಿನಲ್ಲಿ ಇರಬೇಕಾಯಿತು. ಇದು ಅವರಿಗೆ ಸಾಕಷ್ಟು ಖುಷಿ ನೀಡಿತ್ತಂತೆ. ಕಾಡಿನಲ್ಲಿ ಯಾರೊಬ್ಬರೂ ನನ್ನ ಜಡ್ಜ್ ಮಾಡುವುದಿಲ್ಲ ಎಂಬ ಖುಷಿ ಇದೆ ಎಂದು ಅವರು ಹೇಳಿಕೊಂಡಿದ್ದರು.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.