ಐತಿಹಾಸಿಕ ದಾಖಲೆ ಬರೆದ ‘ಇರುಮುಡಿ’ ಸಿನಿಮಾ

Ravi Teja movie: ಯಾವುದೇ ಅಬ್ಬರ ಇಲ್ಲದೆ ಬಿಡುಗಡೆ ಆದ ಸಾಧಾರಣ ಬಜೆಟ್​​ನ ತೆಲುಗು ಸಿನಿಮಾ ‘ಇರುಮುಡಿ’ ಬಾಕ್ಸ್ ಆಫೀಸ್​​ನಲ್ಲಿ ದಾಖಲೆಗಳ ಮೇಲೆ ದಾಖಲೆಗಳನ್ನು ಬರೆಯುತ್ತಿದೆ. ತೆಲುಗು ಚಿತ್ರರಂಗದ ಇತಿಹಾಸದಲ್ಲೇ ಯಾವ ಸಿನಿಮಾ ಸಹ ಬರೆಯದ ದಾಖಲೆಯನ್ನು ಬರೆದಿದೆ ಈ ಸಿನಿಮಾ. ‘ಟಾಕ್ಸಿಕ್’ಗೂ ಠಕ್ಕರ್ ಕೊಡಲು ರೆಡಿಯಾಗಿದೆ.

ಐತಿಹಾಸಿಕ ದಾಖಲೆ ಬರೆದ ‘ಇರುಮುಡಿ’ ಸಿನಿಮಾ
Irumudi Movie

Updated on: Aug 25, 2026 | 12:40 PM

ತೆಲುಗು ಸ್ಟಾರ್ ನಟರುಗಳಲ್ಲಿ ಒಬ್ಬರಾದ ರವಿತೇಜ (Ravi Teja) ಕಳೆದ ಕೆಲ ವರ್ಷಗಳಲ್ಲಿ ನಟಿಸಿದ ಸಿನಿಮಾಗಳು ಒಂದರ ಹಿಂದೊಂದರಂತೆ ಸೋತಿದ್ದವು. ಒಂದು ಸಮಯದಲ್ಲಿ ಮಾಸ್ ಮಹಾರಾಜ ಎನಿಸಿಕೊಂಡಿದ್ದ ರವಿತೇಜ ಸತತ ಸೋಲುಗಳಿಂದ ಕಂಗೆಟ್ಟಿದ್ದರು. ಆದರೆ ಈಗ ಐತಿಹಾಸಿಕ ಹಿಟ್ ಸಿನಿಮಾ ಒಂದನ್ನು ನೀಡಿದ್ದಾರೆ. ರವಿತೇಜ, ‘ಇರುಮುಡಿ’ ಹೆಸರಿನ ಸಿನಿಮಾನಲ್ಲಿ ನಟಿಸಿದ್ದು, ಕೆಲವೇ ದಿನಗಳ ಹಿಂದಷ್ಟೆ ಸಿನಿಮಾ ಬಿಡುಗಡೆ ಆಗಿದ್ದು, ತೆಲುಗು ರಾಜ್ಯಗಳಲ್ಲಿ ಅಕ್ಷರಷಃ ಅಬ್ಬರಿಸುತ್ತಿದೆ. ಯಾವ ಮಟ್ಟಿಗೆಂದರೆ ತೆಲುಗು ಚಿತ್ರರಂಗದಲ್ಲಿ ಯಾವ ಸಿನಿಮಾ ಸಹ ಮಾಡದಿದ್ದ ಅಪರೂಪದ ದಾಖಲೆಯೊಂದನ್ನು ಬರೆದಿದೆ.

‘ಇರುಮುಡಿ’ ಸಿನಿಮಾ ಆಗಸ್ಟ್ 21 ರಂದು ಬಿಡುಗಡೆ ಆಗಿದೆ. ಸಿನಿಮಾ ಬಿಡುಗಡೆ ಆದ ಕೇವಲ 38 ಗಂಟೆಗಳಲ್ಲಿ ಸಿನಿಮಾ ತಮ್ಮ ಬಜೆಟ್​​ ಅನ್ನು ಬಾಕ್ಸ್ ಆಫೀಸ್​​ನಿಂದ ಮರಳಿ ಪಡೆದಿದೆ. ಯಾವುದೇ ಅಬ್ಬರ ಇಲ್ಲದೆ ಸಿನಿಮಾ ಬಿಡುಗಡೆ ಆಗಿದ್ದರೂ ಸಹ ಜನ ಮುಗಿಬಿದ್ದು ಸಿನಿಮಾ ನೋಡುತ್ತಿದ್ದಾರೆ. ವಿಶೇಷವೆಂದರೆ ಸಿನಿಮಾಕ್ಕೆ ಕುಟುಂಬಗಳು ಒಟ್ಟಾಗಿ ಚಿತ್ರಮಂದಿರಕ್ಕೆ ಬರುತ್ತಿವೆ. ಸಿನಿಮಾ ಬಿಡುಗಡೆ ಆದ ದಿನ ಹೈದರಾಬಾದ್​​ನಲ್ಲಿ ಪ್ರದರ್ಶಿಸಲಾಗಿದ್ದ ಎಲ್ಲ 262 ಶೋಗಳು ಸಹ ಹೌಸ್​​ಫುಲ್ ಆಗಿದೆ. ಈ ರೀತಿಯ ಅಪರೂಪದ ದಾಖಲೆಯನ್ನು ತೆಲುಗಿನ ಇನ್ಯಾವ ಸಿನಿಮಾ ಸಹ ಮಾಡಿದ್ದಿಲ್ಲ.

ಹೈದರಾಬಾದ್​ ಮಾತ್ರವೇ ಅಲ್ಲದೆ ಆಂಧ್ರ-ತೆಲಂಗಾಣದ ಹಲವಾರು ಚಿತ್ರಮಂದಿರಗಳಲ್ಲಿ ಮೊದಲ ಮೂರು ದಿನದ ನೈಟ್​ ಶೋಗಳು ಹೌಸ್ ಫುಲ್ ಆಗಿದ್ದವು. ಕುಟುಂಬ ಪ್ರೇಕ್ಷಕರು ಸರಣಿಯಲ್ಲಿ ಬಂದು ‘ಇರುಮುಡಿ’ ಸಿನಿಮಾ ನೋಡಿ ಖುಷಿ ಪಡುತ್ತಿದ್ದಾರೆ. ಇದೇ ಕಾರಣಕ್ಕೆ ಈ ಸಿನಿಮಾ ಬಾಕ್ಸ್ ಆಫೀಸ್​​ನಲ್ಲಿ ದಾಖಲೆಗಳನ್ನು ಬರೆಯುತ್ತಿದೆ. ಬುಕ್​​ ಮೈ ಶೋನಲ್ಲಿ ಕೇವಲ ಒಂದೇ ಗಂಟೆಯಲ್ಲಿ ಈ ಸಿನಿಮಾ 36 ಸಾವಿರ ಟಿಕೆಟ್​​ಗಳು ಮಾರಾಟವಾಗಿದ್ದು, ಇದೂ ಸಹ ದಾಖಲೆಯೇ ಆಗಿದೆ.

ಇದನ್ನೂ ಓದಿ:ರವಿತೇಜ ನಟನೆಯ 77ನೇ ಸಿನಿಮಾಗೆ ‘ಇರುಮುಡಿ’ ಶೀರ್ಷಿಕೆ: ಫಸ್ಟ್ ಲುಕ್ ರಿಲೀಸ್

‘ಇರುಮುಡಿ’ ಸಿನಿಮಾ ಬಿಡುಗಡೆ ಆಗಿ ಕೇವಲ ನಾಲ್ಕೇ ದಿನದಲ್ಲಿ 100 ಕೋಟಿ ಕ್ಲಬ್ ಸೇರಿಕೊಂಡಿದೆ. ಕೌಟುಂಬಿಕ ಸಿನಿಮಾಗಳ ಕಾಲ ಮುಗಿಯಿತು, ಇನ್ನೇನಿದ್ದರು ಮಾಸ್ ಪ್ಯಾನ್ ಇಂಡಿಯಾ ಸಿನಿಮಾಗಳ ಕಾಲವಷ್ಟೆ ಎಂದುಕೊಳ್ಳುತ್ತಿರುವಾಗಲೇ ‘ಇರುಮುಡಿ’ ಸಿನಿಮಾ ಅದನ್ನು ಸುಳ್ಳು ಮಾಡಿದ್ದು, ಕೌಟುಂಬಿಕ ಸಿನಿಮಾಗಳಿಗೆ ಇನ್ನೂ ಕಾಲವಿದೆ ಎಂದು ತೋರಿಸಿಕೊಟ್ಟಿದೆ.

‘ಇರುಮುಡಿ’ ಸಿನಿಮಾ ಆಂಧ್ರ ಮತ್ತು ತೆಲಂಗಾಣಗಳಲ್ಲಿ ಅಬ್ಬರದ ಪ್ರದರ್ಶನ ಕಾಣುತ್ತಿದ್ದು, ಇದು ‘ಟಾಕ್ಸಿಕ್’ಗೆ ಸಮಸ್ಯೆ ಕೊಡುವ ಸಾಧ್ಯತೆ ಇದೆ. ಸಿನಿಮಾದ ಶೋಗಳ ಸಂಖ್ಯೆ, ಚಿತ್ರಮಂದಿರಗಳ ಸಂಖ್ಯೆ ದಿನದಿಂದ ದಿನಕ್ಕೆ ಏರಿಕೆ ಆಗುತ್ತಲೇ ಸಾಗುತ್ತಿದ್ದು, ನಾಳೆ (ಆಗಸ್ಟ್ 26) ‘ಟಾಕ್ಸಿಕ್’ ಸಿನಿಮಾ ಬಿಡುಗಡೆ ಆಗಲಿದ್ದು, ‘ಟಾಕ್ಸಿಕ್’ ಸಿನಿಮಾಕ್ಕೆ ಸೂಕ್ತ ಸಂಖ್ಯೆಯ ಚಿತ್ರಮಂದಿರಗಳು ಸಿಗದೇ ಹೋಗುವ ಸಾಧ್ಯತೆಯನ್ನೂ ತಳ್ಳಿ ಹಾಕುವಂತಿಲ್ಲ. ಅಲ್ಲದೆ, ‘ಇರುಮುಡಿ’ ಸಿನಿಮಾ ‘ಟಾಕ್ಸಿಕ್’ಗೆ ಪ್ರಬಲ ಪೈಪೋಟಿಯನ್ನು ಆಂಧ್ರ ಮತ್ತು ತೆಲಂಗಾಣಗಳಲ್ಲಿ ಕೊಡುವ ಸಾಧ್ಯತೆಯೂ ದಟ್ಟವಾಗಿದೆ.

‘ಇರುಮುಡಿ’ ಸಿನಿಮಾದ ಹೆಸರೇ ಹೇಳುವಂತೆ ಇದು ಅಯ್ಯಪ್ಪ ಸ್ವಾಮಿಯ ಭಕ್ತನ ಕತೆ. ಅದರ ಜೊತೆಗೆ ಒಂದು ಸಸ್ಪೆನ್ಸ್ ಆಕ್ಷನ್ ಥ್ರಿಲ್ಲರ್ ಕತೆಯನ್ನೂ ಸಹ ಈ ಸಿನಿಮಾ ಒಳಗೊಂಡಿದೆ. ‘ಇರುಮುಡಿ’ ಸಿನಿಮಾನಲ್ಲಿ ರವಿತೇಜ ನಾಯಕ, ಪ್ರಿಯಾ ಭವಾನಿ ನಾಯಕಿ, ಸಿನಿಮಾ ಅನ್ನು ಶಿವ ನಿರ್ವಾಣ ನಿರ್ದೇಶನ ಮಾಡಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 12:37 pm, Tue, 25 August 26

Loading...
Unable to load recommendations.
Follow Us