
‘ದಿ ಟ್ರೇಟರ್ಸ್’ ಹಾಗೂ ‘ಲಾಕಪ್: ಸಚ್ ಯಾ ಸಜಾ’ ರಿಯಾಲಿಟಿ ಶೋಗಳ ಮೂಲಕ ಗುರುತಿಸಿಕೊಂಡಿರುವ ‘ರೆಬೆಲ್ ಕಿಡ್’ ಖ್ಯಾತಿಯ ಇನ್‌ಫ್ಲುಯೆನ್ಸರ್ ಅಪೂರ್ವ ಮುಖಿಜಾ ಮತ್ತೆ ಸುದ್ದಿಯಲ್ಲಿದ್ದಾರೆ. ಉನ್ನತ ವ್ಯಾಸಂಗಕ್ಕಾಗಿ ಭಾರತ ತೊರೆದು ನ್ಯೂಯಾರ್ಕ್‌ನಲ್ಲಿ ನೆಲೆಸಿರುವ ಅಪೂರ್ವ, ತಮ್ಮ ದಿಟ್ಟ ಶೈಲಿಯಿಂದಲೇ ಸದಾ ಸೋಷಿಯಲ್ ಮೀಡಿಯಾದಲ್ಲಿ ಸಕ್ರಿಯರಾಗಿರುತ್ತಾರೆ. ಇದೀಗ ಅವರ ವೀಡಿಯೊವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಅಭಿಮಾನಿಗಳನ್ನು ಅಚ್ಚರಿಗೆ ತಳ್ಳಿದೆ.
ಪಾರ್ಟಿಯೊಂದರಲ್ಲಿ ಚಿತ್ರೀಕರಿಸಲಾಗಿದೆ ಎನ್ನಲಾದ ಈ ವಿಡಿಯೋದಲ್ಲಿ ಅಪೂರ್ವ ಮುಖಿಜಾ ಹಾಗೂ ಪ್ರಸಿದ್ಧ ಡಿಜೆ ಅಮೀನ್ ಜಾಜ್ ರೊಮ್ಯಾಂಟಿಕ್ ಆಗಿ ಕಾಣಿಸಿಕೊಂಡಿದ್ದಾರೆ. ವಿಡಿಯೋದ ಆರಂಭದಲ್ಲಿ ಅಮೀನ್ ಅವರು ಅಪೂರ್ವಾ ಅವರಿಗೆ ಮುತ್ತಿಡಲು ಯತ್ನಿಸಿದಾಗ ಆಕೆಯ ಗಮನ ಬೇರೆಡೆ ಇರುತ್ತದೆ. ಆದರೆ, ಮರುಕ್ಷಣವೇ ಅಪೂರ್ವ ಸ್ವತಃ ಮುಂಚೂಣಿ ತೆಗೆದುಕೊಂಡು ಅಮೀನ್ ಅವರ ತುಟಿಗೆ ಚುಂಬಿಸುತ್ತಾರೆ (ಲಿಪ್‌ಲಾಕ್). ಈ ವಿಡಿಯೋ ಹೊರಬಿದ್ದ ತಕ್ಷಣವೇ ಇಬ್ಬರ ನಡುವಿನ ಡೇಟಿಂಗ್ ವದಂತಿಗಳು ಮತ್ತೆ ಕಾವು ಪಡೆದುಕೊಂಡಿವೆ.
Holy shit 🤯
Isn’t it Apoorva Makhija, The rebel kid lol😭 pic.twitter.com/NrM2CLwAjT
— Chota Don (@choga_don) September 8, 2026
ಅಪೂರ್ವ ಮತ್ತು ಅಮೀನ್ ಡೇಟಿಂಗ್ ಮಾಡುತ್ತಿದ್ದಾರೆ ಎಂಬ ಊಹಾಪೋಹಗಳು ಈ ಹಿಂದೆಯೂ ಕೇಳಿಬಂದಿದ್ದವು. ಇಬ್ಬರೂ ಹಲವು ಬಾರಿ ಒಟ್ಟಿಗೆ ಸಾರ್ವಜನಿಕವಾಗಿ ಕಾಣಿಸಿಕೊಂಡಿದ್ದಲ್ಲದೆ, ಅಮೀನ್ ಅವರ ಪಾಡ್‌ಕ್ಯಾಸ್ಟ್‌ನಲ್ಲೂ ಅಪೂರ್ವ ಭಾಗವಹಿಸಿದ್ದರು. ಹೀಗಾಗಿ ಇಬ್ಬರ ನಡುವೆ ಕೇವಲ ಸ್ನೇಹಕ್ಕಿಂತ ಹೆಚ್ಚಿನ ಸಂಬಂಧವಿದೆ ಎಂದು ನೆಟ್ಟಿಗರು ಊಹಿಸುತ್ತಿದ್ದರು. ಇದೀಗ ಈ ಲಿಪ್‌ಲಾಕ್ ವಿಡಿಯೋ ಲೀಕ್ ಆಗಿರುವುದು ಅವರ ಪ್ರೇಮ ವದಂತಿಗೆ ಮತ್ತಷ್ಟು ಪುಷ್ಟಿ ನೀಡಿದೆ.
ಇದನ್ನೂ ಓದಿ: ಬಿಗ್ಬಾಸ್ ಮನೆಯಲ್ಲಿ ಟಾರ್ಗೆಟ್ ಆಗುತ್ತಿದ್ದಾರಾ ನಟಿ ಆಸಿಯಾ ಫಿರ್ದೋಸ್?
ಅಮೀನ್ ಜಾಜ್ ಭಾರತದ ಜನಪ್ರಿಯ ಡಿಜೆ, ಮ್ಯೂಸಿಕ್ ಪ್ರೊಡ್ಯೂಸರ್, ಕಂಟೆಂಟ್ ಕ್ರಿಯೇಟರ್ ಹಾಗೂ ಪಾಡ್‌ಕ್ಯಾಸ್ಟರ್. ‘ಅನ್‌ಟ್ರಿಗರ್ಡ್ ಪಾಡ್‌ಕ್ಯಾಸ್ಟ್’ ಮೂಲಕ ಪ್ರಸಿದ್ಧರಾಗಿರುವ ಇವರು, ‘ಜೆನ್ ಝೀ’ ಜನಾಂಗದ ವಿಷಯಗಳ ಕುರಿತು ಹೆಚ್ಚು ಮಾತನಾಡುತ್ತಾರೆ. ಇತ್ತ ಅಪೂರ್ವ ಮುಖಿಜಾ ಹಲವು ರಿಯಾಲಿಟಿ ಶೋಗಳು ಹಾಗೂ ಒಟಿಟಿ ಪ್ರಾಜೆಕ್ಟ್‌ಗಳ ಮೂಲಕ ದೊಡ್ಡ ಮಟ್ಟದ ಫಾಲೋಯಿಂಗ್ ಹೊಂದಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.