ಜಾಮೀನಿಗೆ ಅರ್ಜಿ ಸಲ್ಲಿಸಿದ ಪ್ರದೋಶ್, ನೀಡಿದ ಕಾರಣ ಏನು?

ಮಾಫಿ ಸಾಕ್ಷಿಯಾಗಿ ಬದಲಾಗಿರುವ ಪ್ರದೋಶ್, ಪ್ರಕರಣದ ಎಲ್ಲ ವಿಷಯಗಳನ್ನು ನ್ಯಾಯಾಲಯದ ಮುಂಚೆ ಇಟ್ಟಿದ್ದಾರೆ. ಪೊಲೀಸರ ಒತ್ತಾಯದಿಂದಲೇ ಪ್ರದೋಶ್ ಮಾಫಿ ಸಾಕ್ಷಿ ಹೇಳಿಕೆ ನೀಡಿದ್ದಾರೆ ಎಂದು ಈಗಾಗಲೇ ದರ್ಶನ್ ಪರ ವಕೀಲರು ಆರೋಪ ಮಾಡಿದ್ದಾರೆ. ಇದರ ನಡುವೆ ಪ್ರದೋಶ್, ಜಾಮೀನಿಗಾಗಿ ಅರ್ಜಿ ಹಾಕಿದ್ದಾರೆ. ಬರೋಬ್ಬರು ಮೂರು ವಾರಗಳ ಜಾಮೀನು ಕೋರಿ ಪ್ರದೋಶ್ ಮನವಿ ಮಾಡಿದ್ದಾರೆ.

ಜಾಮೀನಿಗೆ ಅರ್ಜಿ ಸಲ್ಲಿಸಿದ ಪ್ರದೋಶ್, ನೀಡಿದ ಕಾರಣ ಏನು?
Pradosh

Updated on: Oct 23, 2026 | 6:29 PM

ರೇಣುಕಾ ಸ್ವಾಮಿ ಕೊಲೆ ಪ್ರಕರಣಕ್ಕೆ ಅತಿ ದೊಡ್ಡ ತಿರುವನ್ನು ಪ್ರದೋಶ್ ನೀಡಿದ್ದಾರೆ. ಮಾಫಿ ಸಾಕ್ಷಿಯಾಗಿ ಬದಲಾಗಿರುವ ಪ್ರದೋಶ್, ಪ್ರಕರಣದ ಎಲ್ಲ ವಿಷಯಗಳನ್ನು ನ್ಯಾಯಾಲಯದ ಮುಂಚೆ ಇಟ್ಟಿದ್ದಾರೆ. ಪೊಲೀಸರ ಒತ್ತಾಯದಿಂದಲೇ ಪ್ರದೋಶ್ ಮಾಫಿ ಸಾಕ್ಷಿ ಹೇಳಿಕೆ ನೀಡಿದ್ದಾರೆ ಎಂದು ಈಗಾಗಲೇ ದರ್ಶನ್ ಪರ ವಕೀಲರು ಆರೋಪ ಮಾಡಿದ್ದಾರೆ. ಇದರ ನಡುವೆ ಪ್ರದೋಶ್, ಜಾಮೀನಿಗಾಗಿ ಅರ್ಜಿ ಹಾಕಿದ್ದಾರೆ. ಬರೋಬ್ಬರು ಮೂರು ವಾರಗಳ ಜಾಮೀನು ಕೋರಿ ಪ್ರದೋಶ್ ಮನವಿ ಮಾಡಿದ್ದಾರೆ.

59ನೇ ಸಿಸಿಎಚ್ ನ್ಯಾಯಾಲಯದಲ್ಲಿ ಪ್ರದೋಶ್ ಜಾಮೀನಿಗಾಗಿ ಅರ್ಜಿ ಸಲ್ಲಿಸಿದ್ದು, ಅವರ ತಂದೆಯವರ ಕಾರ್ಯ ನೆರವೇರಿಸಲು ತಮಗೆ ಮೂರು ವಾರಗಳ ಜಾಮೀನು ನೀಡಬೇಕೆಂದು ಅವರು ಮನವಿ ಮಾಡಿದ್ದಾರೆ. ಪ್ರದೋಷ್ ರಾವ್ ಪರ ಹಿರಿಯ ವಕೀಲ ಕೆ.ದಿವಾಕರ್ ಮನವಿ ಮಾಡಿಕೊಂಡಿದ್ದಾರೆ. ಅಲ್ಲದೆ, ಪ್ರದೋಶ್ ಮಾಫಿ ಸಾಕ್ಷಿ ಆಗಿರುವ ಕಾರಣದಿಂದಾಗಿ ಅವರಿಗೆ ವಿಶೇಷ ಭದ್ರತೆ ವ್ಯವಸ್ಥೆ ಹಾಗೂ ಬೇರೆ ಠಾಣೆಯಲ್ಲಿ ಹಾಜರಿ ಹಾಕಲು ಅವಕಾಶ ಮಾಡಿಕೊಡಬೇಕು ಎಂದು ಸಹ ಮನವಿ ಮಾಡಲಾಗಿದೆ.

ಇದನ್ನೂ ಓದಿ: ರೇಣುಕಾ ಸ್ವಾಮಿ ಪ್ರಕರಣ: ನಟ ದರ್ಶನ್ ಖುದ್ದು ಹಾಜರಿ ಕೋರಿ ವಕೀಲರ ಅರ್ಜಿ

ಆದರೆ ಪ್ರದೋಶ್ ಅವರ ಜಾಮೀನು ಅರ್ಜಿಗೆ ಎಸ್​​ಪಿಪಿ ಸಚಿನ್ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಸಚಿನ್ ಮಾತ್ರವೇ ಅಲ್ಲದೆ ದರ್ಶನ್ ಪರ ವಕೀಲರು ಸಹ ಆಕ್ಷೇಪಣೆ ಸಲ್ಲಿಸಿದ್ದಾರೆ ಎನ್ನಲಾಗಿದೆ. ವಕೀಲರ ವಾದಗಳನ್ನು ಆಲಿಸಿದ 59ನೇ ಸಿಸಿಹೆಚ್ ಜಡ್ಜ್ ಸುಜಾತಾ ಮಡಿವಾಳಪ್ಪ ಸಾಂಬ್ರಾಣಿ ಜಾಮೀನು ಕುರಿತಂತೆ ಆದೇಶವನ್ನು ಕಾಯ್ದಿರಿಸಿದ್ದಾರೆ.

ಇದೇ ದಿನ ಪವಿತ್ರಾ ಗೌಡ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಾಧೀಶರು ವಜಾ ಮಾಡಿದ್ದಾರೆ. ಪವಿತ್ರಾ ಗೌಡ ಅವರು ತಮ್ಮ ಬ್ಯಾರಕ್ ಬದಲಾವಣೆಗಾಗಿ ಅರ್ಜಿ ಸಲ್ಲಿಸಿದ್ದರು. ಅವರು ಮಾತ್ರವೇ ಅಲ್ಲದೆ ಇದೇ ಪ್ರಕರಣದ ಆರೋಪಿಗಳಾದ ಅನುಕುಮಾರ್, ಜಗದೀಶ್ ಸಲ್ಲಿಸಿದ್ದ ಅರ್ಜಿಯನ್ನು ಸಹ ನ್ಯಾಯಾಧೀಶರು ವಜಾ ಮಾಡಿದ್ದಾರೆ. ಪ್ರದೋಶ್ ಅರ್ಜಿ ಏನಾಗಲಿದೆ ಎಂಬುದು ಕೆಲವೇ ದಿನಗಳಲ್ಲಿ ತಿಳಿಯಲಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಮಂಜುನಾಥ ಸಿ.

ಮಂಜುನಾಥ ಸಿ, ಬೆಂಗಳೂರು ಗ್ರಾಮಾಂತರ, ವಿಜಯರಪುರ ಪಟ್ಟಣ ನಿವಾಸಿ. ಕಳೆದ ಏಳು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯನಾಗಿದ್ದೇನೆ. ಕಳೆದ ಐದು ವರ್ಷದಿಂದ ಡಿಜಿಟಲ್ ಪತ್ರಿಕೋದ್ಯಮದಲ್ಲಿ ತೊಡಗಿಕೊಂಡಿದ್ದೇನೆ. ಈ ಹಿಂದೆ ಪ್ರಜಾವಾಣಿ, ಒನ್ ಇಂಡಿಯಾ ಕನ್ನಡ ಸಂಸ್ಥೆಗಳ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ್ದೇನೆ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್​ನ ಸಿನಿಮಾ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಮೆಚ್ಚಿನ ಹವ್ಯಾಸ ಸಿನಿಮಾ ವೀಕ್ಷಣೆ, ಪುಸ್ತಕಗಳನ್ನು ಓದುವುದು.

Read More
Loading...
Unable to load recommendations.
Follow Us