Abhishek Aviva Wedding Highlights: ಅಭಿಷೇಕ್​-ಅವಿವಾಗೆ ಸುದೀಪ್​, ಯಶ್, ರಜನಿ ವಿಶ್

ರಾಜೇಶ್ ದುಗ್ಗುಮನೆ
|

Updated on:Jun 05, 2023 | 2:39 PM

Abhishek Ambareesh Aviva Bidapa Marriage Highlights: ನಟ ಅಭಿಷೇಕ್ ಅಂಬರೀಷ್ ಹಾಗೂ ಅವಿವಾ ಬಿಡಪ ಮದುವೆಗೆ ಕ್ಷಣಗಣನೆ ಆರಂಭ ಆಗಿದೆ. ಮದುವೆ ಕುರಿತ ಕ್ಷಣಕ್ಷಣದ ಮಾಹಿತಿ.. ಈ ಲೈವ್​ ಬ್ಲಾಗ್​ನಲ್ಲಿ.

Abhishek Aviva Wedding Highlights: ಅಭಿಷೇಕ್​-ಅವಿವಾಗೆ ಸುದೀಪ್​, ಯಶ್, ರಜನಿ ವಿಶ್

ನಟ ಅಭಿಷೇಕ್ ಅಂಬರೀಷ್ (Abhishek Ambareesh)  ಹಾಗೂ ಅವಿವಾ ಬಿಡಪ ಮದುವೆ ಪೂರ್ಣಗೊಂಡಿದೆ ಇಂದು (ಜೂನ್ 5) ಬೆಳಿಗ್ಗೆ ಕರ್ಕಾಟಕ ಲಗ್ನದಲ್ಲಿ (9:30-10:30) ಇಬ್ಬರೂ ಹಸೆಮಣೆ ಏರಿದ್ದಾರೆ. ಬೆಂಗಳೂರಿನ ಮಾಣಿಕ್ಯ ಚಾಮರ ವಜ್ರದ ಕಲ್ಯಾಣಮಂಟಪದಲ್ಲಿ ಮದುವೆ ನಡೆದಿದೆ. ಅಂಬರೀಷ್ ಕುಟುಂಬ ರಾಜಕೀಯ ಹಾಗೂ ಸಿನಿಮಾ ಎರಡೂ ಕ್ಷೇತ್ರಗಳಲ್ಲಿ ತೊಡಗಿಕೊಂಡಿದೆ. ಹೀಗಾಗಿ, ಅನೇಕ ಸೆಲೆಬ್ರಿಟಿಗಳು ಮದುವೆಗೆ ಹಾಜರಿ ಹಾಕಿದ್ದಾರೆ. ಅಂಬರೀಷ್ ಅವರಿಗೂ ಸಾಕಷ್ಟು ಕ್ಷೇತ್ರದವರ ಜೊತೆ ಒಡನಾಟ ಇತ್ತು. ಹೀಗಾಗಿ, ಅವರ ಗೆಳೆಯರು ಕೂಡ ಮದುವೆಗೆ ಆಗಮಿಸಿದ್ದಾರೆ. ಮದುವೆ ಕುರಿತ ಕ್ಷಣಕ್ಷಣದ ಮಾಹಿತಿ.. ಈ ಲೈವ್​ ಬ್ಲಾಗ್​ನಲ್ಲಿ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

LIVE NEWS & UPDATES

The liveblog has ended.
  • 05 Jun 2023 01:55 PM (IST)

    ಅದ್ದೂರಿಯಾಗಿ ನಡೆದ ಮದುವೆ

    ಅಭಿಷೇಕ್ ಅಂಬರೀಷ್ ಹಾಗೂ ಅವಿವಾ ಮದುವೆ ಅದ್ದೂರಿಯಾಗಿ ನಡೆದಿದೆ. ಇದರ ಕಲರ್​ಫುಲ್ ಫೋಟೋ ವೈರಲ್ ಆಗಿದೆ.

  • 05 Jun 2023 12:14 PM (IST)

    ಯಶ್ ಕಡೆಯಿಂದ ಅಭಿಗೆ ಸಿಕ್ತು ವಿಶ್

  • 05 Jun 2023 11:42 AM (IST)

    ಅಭಿಷೇಕ್​-ಅವಿವಾಗೆ ವಿಶ್ ಮಾಡಿದ ರಜನಿಕಾಂತ್

  • 05 Jun 2023 11:41 AM (IST)

    ಸೆಲೆಬ್ರಿಟಿಗಳ ವಿಶ್

    ಮೇಘನಾ ರಾಜ್ ಸೇರಿ ಅನೇಕ ಸೆಲೆಬ್ರಿಟಿಗಳು ಬಂದು ಅಭಿಷೇಕ್-ಅವಿವಾ ದಂಪತಿಗೆ ವಿಶ್ ಮಾಡಿದ್ದಾರೆ.

  • 05 Jun 2023 11:15 AM (IST)

    ಮದುವೆಗೆ ಬಂದು ಹಾರೈಸಿದ ರಜನಿ

    ಅಭಿಷೇಕ್ ಅಂಬರೀಷ್​-ಅವಿವಾ ಮದುವೆಗೆ ಆಗಮಿಸಿದ ರಜನಿಕಾಂತ್; ಇಲ್ಲಿದೆ ಫೋಟೋ ಆಲ್ಬಂ

  • 05 Jun 2023 10:38 AM (IST)

    ಅಭಿಷೇಕ್ ಮದುವೆಗೆ ನರೇಶ್​-ಪವಿತ್ರಾ ಲೋಕೇಶ್

    ಅಭಿಷೇಕ್-ಅವಿವಾ ವಿವಾಹಕ್ಕೆ ಅನಿಲ್ ಕುಂಬ್ಳೆ, ನರೇಶ್​-ಪವಿತ್ರಾ ಲೋಕೇಶ್ ಸೇರಿ ಅನೇಕ ಗಣ್ಯರು ಆಗಮಿಸಿ ಶುಭಕೋರಿದ್ದಾರೆ.

  • 05 Jun 2023 09:55 AM (IST)

    ನೆರವೇರಿತು ಅವಿವಾ-ಅಭಿಷೇಕ್ ವಿವಾಹ

    ಅಭಿಷೇಕ್ ಹಾಗೂ ಅವಿವಾ ಮದುವೆ ನೆರವೇರಿದೆ. ಸೆಲೆಬ್ರಿಟಿಗಳು ಹಾಗು ಕುಟುಂಬದವರ ಸಮ್ಮುಖದಲ್ಲಿ ಈ ಮದುವೆ ನಡೆದಿದೆ.

  • 05 Jun 2023 09:35 AM (IST)

    ಮದುವೆಗೆ ಎಂಟ್ರಿ ಕೊಟ್ಟ ಸೆಲೆಬ್ರಿಟಿಗಳು

    ಅಭಿಷೇಕ್-ಅವಿವಾ ಮದುವೆಗೆ ದೊಡ್ಡ ದೊಡ್ಡ ಸೆಲೆಬ್ರಿಟಿಗಳು ಆಗಮಿಸಿದ್ದಾರೆ. ಸುಹಾಸಿನಿ ಅವರು ಮದುವೆಗೆ ಆಗಮಿಸಿದ್ದಾರೆ. ಇದರ ಜೊತೆ ಇನ್ನೂ ಅನೇಕರು ಮದುವೆಗೆ ಬಂದಿದ್ದಾರೆ.

  • 05 Jun 2023 09:19 AM (IST)

    ಅಭಿಷೇಕ್​-ಅವಿವಾ ಮದುವೆಗೆ ಕ್ಷಣಗಣನೆ..

    ಅಭಿಷೇಕ್​-ಅವಿವಾ ಮದುವೆಗೆ ಕ್ಷಣಗಣನೆ ಶುರುವಾಗಿದೆ. ಸಾಕಷ್ಟು ಸೆಲೆಬ್ರಿಟಿಗಳು ಮದುವೆಯಲ್ಲಿ ಭಾಗಿ ಆಗಿದ್ದಾರೆ. ಸಖತ್ ಅದ್ದೂರಿಯಾಗಿ ಮದುವೆ ನಡೆಯುತ್ತಿದೆ.

  • 05 Jun 2023 09:17 AM (IST)

    ಗೌಡರ ಸಂಪ್ರದಾಯದಂತೆ ನಡೆಯುತ್ತಿದೆ ಮದುವೆ

    ಗೌಡರ ಸಂಪ್ರದಾಯದಂತೆ ಈ ವಿವಾಹ ಕಾರ್ಯ ನಡೆಯುತ್ತಿದೆ. ಮದುವೆ ಶಾಸ್ತ್ರಗಳ ವಿಡಿಯೋ ಟಿವಿ9 ಕನ್ನಡಕ್ಕೆ ಲಭ್ಯ ಆಗಿದೆ.

    ಗೌಡರ ಸಂಪ್ರದಾಯದಂತೆ ನಡೆಯುತ್ತಿದೆ ಅಭಿ-ಅವಿವಾ ಮದುವೆ; ಇಲ್ಲಿದೆ ವಿಡಿಯೋ

  • 05 Jun 2023 08:34 AM (IST)

    ಅಭಿಷೇಕ್ ಮದುವೆಗೆ ಕ್ಷಣಗಣನೆ

    ಬೆಳಗ್ಗೆ ಆರು ಗಂಟೆಗೆ ಜೆಪಿ ನಗರದ ನಿವಾಸದಿಂದ ಚಾಮರವಜ್ರಗೆ ಕುಟುಂಬ ತೆರಳಿದೆ. ಇಂದು ಬೆಳಗ್ಗೆ 9.30 ರಿಂದ 10.30 ರ ವರೆಗು ನಡೆಯೋ ಶುಭ ಮುಹೂರ್ತದಲ್ಲಿ ಅಭಿ‌‌-ಅವಿವಾ ಕಲ್ಯಾಣ ನೆರವೇರಲಿದೆ.

  • 05 Jun 2023 08:26 AM (IST)

    ಕಲ್ಯಾಣ ಮಂಟಪಕ್ಕೆ ಅಭಿ ಎಂಟ್ರಿ ನೋಡಿ

    ಹೇಗಿತ್ತು ನೋಡಿ ಅಭಿಷೇಕ್ ಎಂಟ್ರಿ. ವಿಡಿಯೋ ನೋಡಲು ಸುದ್ದಿ ಕ್ಲಿಕ್ ಮಾಡಿ.

    Abhishek Ambareesh Wedding: ಮದುವೆ ಸ್ಥಳಕ್ಕೆ ಹೇಗಿತ್ತು ನೋಡಿ ಅಭಿಷೇಕ್ ಅಂಬರೀಷ್ ಎಂಟ್ರಿ

  • 05 Jun 2023 08:10 AM (IST)

    ಅವಿವಾಗೆ ಸಿಕ್ತು ಚೆಂದದ ಗಿಫ್ಟ್​

    ಏನಿದು ಆ ಗಿಫ್ಟ್​? ಈ ಕೆಳಗಿನ ಸುದ್ದಿಯಲ್ಲಿದೆ ವಿವರ

    Aviva Bidapa: ವಿವಾಹಕ್ಕೂ ಮುನ್ನ ಸೋಲ್​ಮೇಟ್​ನಿಂದ ಅವಿವಾಗೆ ಸಿಕ್ತು ಚೆಂದದ ಗಿಫ್ಟ್​; ಇದರ ವಿಶೇಷತೆಗಳೇನು?

  • 05 Jun 2023 07:45 AM (IST)

    ಮದುವೆ ನಡೆಯುವ ಸ್ಥಳಕ್ಕೆ ಬಂದ ಅಂಬಿ ಕುಟುಂಬ

    ಸುಮಲತಾ ಅಂಬರೀಷ್, ಅಭಿಷೇಕ್ ಅಂಬರೀಷ್ ಹಾಗೂ ಕುಟುಂಬದವರು ಮದುವೆ ನಡೆಯುವ ಸ್ಥಳಕ್ಕೆ ಬಂದಿದೆ. ಶೀಘ್ರವೇ ಮದುವೆ ಕಾರ್ಯಗಳು ಆರಂಭ ಆಗಲಿವೆ.

  • 05 Jun 2023 07:37 AM (IST)

    ಪ್ಯಾಲೇಸ್​ ಗ್ರೌಂಡ್​ನಲ್ಲಿ ಅದ್ದೂರಿ ಆರತಕ್ಷತೆ

    ಜೂನ್ 7ರಂದು ಬೆಂಗಳೂರಿನ ಪ್ಯಾಲೇಸ್​ ಗ್ರೌಂಡ್​ನಲ್ಲಿರುವ ತ್ರಿಪುರ ವಾಸಿನಿಯಲ್ಲಿ ಅದ್ದೂರಿಯಾಗಿ ಆರತಕ್ಷತೆ ನಡೆಯಲಿದೆ. ಅಂದು ಎಲ್ಲಾ ಸೆಲೆಬ್ರಿಟಿಗಳು ಭಾಗಿ ಆಗಿ ಔತಣ ಸ್ವೀಕರಿಸಲಿದ್ದಾರೆ. ಇಂದು ಆಪ್ತರು ಹಾಗೂ ಕುಟುಂಬದವರು ಮಾತ್ರ ಹಾಜರಿ ಹಾಕುವ ಸಾಧ್ಯತೆ ಇದೆ. ಈಗಾಗಲೇ ಮದುವೆಗೆ ಸಿದ್ಧತೆ ನಡೆದಿದೆ.

  • 05 Jun 2023 07:25 AM (IST)

    ಬರಲಿದ್ದಾರೆ ರಾಜಕೀಯ ನಾಯಕರು?

    ಸುಮಲತಾ ಅಂಬರೀಷ್ ಅವರು ರಾಜಕೀಯದಲ್ಲಿ ತೊಡಗಿಕೊಂಡಿದ್ದಾರೆ. ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಅವರು ಬಿಜೆಪಿಗೆ ಬೆಂಬಲಿಸಿದ್ದರು. ಹೀಗಾಗಿ, ಬಿಜೆಪಿ ಪಕ್ಷದ ಅನೇಕರು ಮದುವೆಗೆ ಹಾಜರಿ ಹಾಕುತ್ತಾರಾ ಎಂಬುದನ್ನು ಕಾದು ನೋಡಬೇಕಿದೆ.

  • 05 Jun 2023 07:25 AM (IST)

    ಅಭಿಷೇಕ್ ಮದುವೆಗೆ ಬರಲಿದ್ದಾರೆ ದೊಡ್ಡ ಸೆಲೆಬ್ರಿಟಿಗಳು

    ಮೇಘನಾ ರಾಜ್, ಪ್ರಿಯಾಂಕಾ ಉಪೇಂದ್ರ ಸೇರಿ ಅನೇಕ ಸೆಲೆಬ್ರಿಟಿಗಳು ಮೆಹಂದಿ ಕಾರ್ಯಕ್ರಮಕ್ಕೆ ಆಗಮಿಸಿದ್ದರು. ಅವರು ಕೂಡ ಮದುವೆಗೆ ಬರಲಿದ್ದಾರೆ. ಶಿವರಾಜ್​ಕುಮಾರ್, ಉಪೇಂದ್ರ ಸೇರಿ ಅನೇಕರು ಮದುವೆಗೆ ಆಗಮಿಸಲಿದ್ದಾರೆ.

  • 05 Jun 2023 07:24 AM (IST)

    ಮದುವೆಗೆ ಅಭಿಷೇಕ್ ಆಪ್ತರ ಹಾಜರಿ

    ಅಭಿಷೇಕ್ ಅಂಬರೀಷ್ ಅವರು ಅನೇಕ ಹೀರೋಗಳ ಜೊತೆ ಒಳ್ಳೆಯ ಒಡನಾಟ ಹೊಂದಿದ್ದಾರೆ. ಪ್ರಜ್ವಲ್ ದೇವರಾಜ್, ರಾಗಿಣಿ ಚಂದ್ರನ್ ಮೊದಲಾದವರು ಈಗಾಗಲೇ ಎಲ್ಲಾ ಶಾಸ್ತ್ರಗಳಲ್ಲೂ ಭಾಗಿ ಆಗಿದ್ದಾರೆ. ಇವರು ಮದುವೆಯಲ್ಲಿ ಮಿಂಚಲಿದ್ದಾರೆ.

  • 05 Jun 2023 07:24 AM (IST)

    ಅಭಿಷೇಕ್ ಮದುವೆಗೆ ಕ್ಷಣಗಣನೆ

    ಇಂದು (ಜೂನ್ 5) ಬೆಳಿಗ್ಗೆ ಕರ್ಕಾಟಕ ಲಗ್ನದಲ್ಲಿ (9:30-10:30) ಅಭಿಷೇಕ್​-ಅವಿವ ಹಸೆಮಣೆ ಏರಲಿದ್ದಾರೆ. ಬೆಂಗಳೂರಿನ ಮಾಣಿಕ್ಯ ಚಾಮರ ವಜ್ರದ ಕಲ್ಯಾಣಮಂಟಪದಲ್ಲಿ ಮದುವೆ ನಡೆಯಲಿದೆ.

  • Published On - Jun 05,2023 7:19 AM

    Follow us
    ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
    ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
    ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
    ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
    ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
    ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
    Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
    Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
    ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
    ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
    ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
    ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
    ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
    ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
    ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
    ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
    ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
    ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
    ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
    ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್