
ಬೆಂಗಳೂರು: ಸ್ಯಾಂಡಲ್ವುಡ್ಗೆ ಡ್ರಗ್ಸ್ ಜಾಲದ ನಂಟು ಇರುವ ಬಗ್ಗೆ ಆರೋಪ ಪ್ರತ್ಯಾರೋಪ ಕೇಳಿಬರುತ್ತಿರುವ ಬೆನ್ನಲ್ಲೇ ಮೈನಾ ಸಿನಿಮಾ ಖ್ಯಾತಿಯ ಚೇತನ್ ಅವರು ನಟ ನಟಿಯರಿಗೆ ಮತ್ತೊಂದು ಪ್ರಮುಖ ಪ್ರಶ್ನೆ ಎತ್ತಿದ್ದಾರೆ.
ಇದನ್ನೂ ಓದಿ: ನಟ ಚೇತನ್ ಬಹುಶಃ ಪ್ರಧಾನಿ ಮೋದಿ ಬಗ್ಗೆ ಮಾತ್ನಾಡಿರಬೇಕು: ಸುದೀಪ್
ತಮ್ಮ ಫೇಸ್ಬುಕ್ ಖಾತೆಯಲ್ಲಿ ಈ ಕುರಿತು ಪೋಸ್ಟ್ ಹಾಕಿರೋ ಚೇತನ್ ಕೇವಲ ಹಣಕ್ಕಾಗಿ ಮದ್ಯ, ಗುಟ್ಕಾ, ಜೂಜು ಬಗ್ಗೆ ಜಾಹೀರಾತು ನೀಡುವ ‘ಸ್ಟಾರ್’ಗಳದ್ದೂ ದುಷ್ಕೃತ್ಯವಲ್ಲವೇ? ಅವರ ಮೇಲೆ ಬೆರಳು ತೋರಿಸದಿರುವುದು ಸೋಜಿಗ, ಅದೂ ಮೋಸ ಅಲ್ಲವೇ? ಎಂದು ಪ್ರಶ್ನಿಸಿದ್ದಾರೆ.
ಜೊತೆಗೆ, ಇವರು ಸಾಮಾಜಿಕ ದುಷ್ಕೃತ್ಯಗಳ ‘ರಾಯಭಾರಿಗಳಲ್ಲವೇ’? ಎಂದು ಸಾಮಾಜಿಕ ಜಾಲತಾಣದಲ್ಲಿ ನಟ ಚೇತನ್ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
Published On - 11:52 am, Tue, 1 September 20