ರಾಗಿಣಿಗೆ ಹೊಸ ವರ್ಷಾಚರಣೆ ಈ ಬಾರಿ ಜೈಲಿನಲ್ಲೇ.. ಸದ್ಯಕ್ಕೆ ಜಾಮೀನು ಕೊಡಲ್ಲ ಎಂದ ಸುಪ್ರೀಂ ಕೋರ್ಟ್​

|

Updated on: Dec 04, 2020 | 12:18 PM

ಸ್ಯಾಂಡಲ್​ವುಡ್​ಗೆ ಡ್ರಗ್ಸ್​ ಜಾಲದ ನಂಟು ಕೇಸ್​ನಲ್ಲಿ ಸದ್ಯ ಜೈಲಿನಲ್ಲಿರುವ ನಟಿ ರಾಗಿಣಿ ದ್ವಿವೇದಿಗೆ ಸದ್ಯ ಜನವರಿವರೆಗೂ ಬಿಡುಗಡೆ ಭಾಗ್ಯ ಸಿಕ್ಕಿಲ್ಲ. ಸುಪ್ರೀಂ ಕೋರ್ಟ್​ನಲ್ಲಿ ನಟೆ ಸಲ್ಲಿಸಿದ್ದ ಜಾಮೀನು ಅರ್ಜಿ ವಿಚಾರಣೆ ಜನವರಿ ಮೊದಲ ವಾರಕ್ಕೆ ಮುಂದೂಡಿಕೆಯಾಗಿದೆ.

ರಾಗಿಣಿಗೆ ಹೊಸ ವರ್ಷಾಚರಣೆ ಈ ಬಾರಿ ಜೈಲಿನಲ್ಲೇ.. ಸದ್ಯಕ್ಕೆ ಜಾಮೀನು ಕೊಡಲ್ಲ ಎಂದ ಸುಪ್ರೀಂ ಕೋರ್ಟ್​
ರಾಗಿಣಿ ದ್ವಿವೇದಿ
Follow us on

ದೆಹಲಿ: ಸ್ಯಾಂಡಲ್​ವುಡ್​ಗೆ ಡ್ರಗ್ಸ್​ ಜಾಲದ ನಂಟು ಕೇಸ್​ನಲ್ಲಿ ಸದ್ಯ ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ನಟಿ ರಾಗಿಣಿ ದ್ವಿವೇದಿಗೆ ಜನವರಿವರೆಗೂ ಬಿಡುಗಡೆ ಭಾಗ್ಯ ಸಿಕ್ಕಿಲ್ಲ. ಸುಪ್ರೀಂ ಕೋರ್ಟ್​ನಲ್ಲಿ ನಟಿ ಸಲ್ಲಿಸಿದ್ದ ಜಾಮೀನು ಅರ್ಜಿ ವಿಚಾರಣೆಯನ್ನು ಕೋರ್ಟ್​, ಜನವರಿ ಮೊದಲ ವಾರಕ್ಕೆ ಮುಂದೂಡಿದೆ.

ಇದೇ ವೇಳೆ ಸುಪ್ರೀಂ ಕೋರ್ಟ್‌ ಸಿಸಿಬಿ ಪೊಲೀಸರಿಗೆ ನೋಟಿಸ್ ನೀಡಿದೆ. ಜೊತೆಗೆ, ರಾಜ್ಯ ಸರ್ಕಾರಕ್ಕೂ ನೋಟಿಸ್ ನೀಡಿರುವ ಸುಪ್ರೀಂಕೋರ್ಟ್, ವಿಚಾರಣೆಯನ್ನು ಮುಂದಿನ ತಿಂಗಳಿಗೆ ಮುಂದೂಡಿದೆ.

ಸಂಜನಾ ಜಾಮೀನು ಅರ್ಜಿ ವಿಚಾರಣೆ ಮಧ್ಯಾಹ್ನ 3 ಗಂಟೆಗೆ ಮುಂದೂಡಿಕೆ
ಇತ್ತ, ಹೈಕೋರ್ಟ್‌ನಲ್ಲಿ ನಟಿ ಸಂಜನಾ ಜಾಮೀನು ಅರ್ಜಿ ವಿಚಾರಣೆ ಮಧ್ಯಾಹ್ನ 3 ಗಂಟೆಗೆ ಮುಂದೂಡಿಕೆಯಾಗಿದೆ. ಹೈಕೋರ್ಟ್ ವಿಚಾರಣೆಯನ್ನು ಮಧ್ಯಾಹ್ನ3 ಗಂಟೆಗೆ ಮುಂದೂಡಿದೆ.

Published On - 11:46 am, Fri, 4 December 20