ಬೆಂಗಳೂರು:ಬಿಗ್ ಬಾಸ್ ಖ್ಯಾತಿಯ ನಟ ವಿನಾಯಕ ಜೋಶಿ, ತಮ್ಮ ಬಾಲ್ಯದ ಗೆಳತಿ ವರ್ಷಾ ಅವರ ಜೊತೆ ಇಂದು ಸಪ್ತಪದಿ ತುಳಿಯಲಿದ್ದಾರೆ.
ವರ್ಲ್ಡ್ ಬ್ಯಾಡ್ಮಿಂಟನ್ ರ್ಯಾಂಕಿಂಗ್ನಲ್ಲಿ 120 ನೇ ಸ್ಥಾನ ಪಡೆದಿದ್ದ ವರ್ಷ ಅವರು, ಸದ್ಯ ಬ್ಯಾಡ್ಮಿಂಟನ್ ಕೋಚ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಬಾಲ್ಯದ ಗೆಳೆಯರಾಗಿದ್ದ ಇಬ್ಬರೂ ಕೆಲ ವರ್ಷಗಳ ಕಾಲ ಬೇರೆ ಬೇರೆ ಊರಿನಲ್ಲಿ ವಾಸಿಸುತ್ತಿದ್ದರು. ಈ ನಡುವೆ ಎರಡು ದಶಕಗಳ ನಂತರ ಭೇಟಿಯಾದ ಇಬ್ಬರ ನಡುವೆ ಪ್ರೇಮಾಂಕುರವಾಗಿತ್ತು.
ಇಬ್ಬರ ಪ್ರೀತಿಯನ್ನು ಒಪ್ಪಿದ ಪೋಷಕರು ಮದುವೆಗೆ ಅನುಮತಿ ನೀಡಿದರು. ಮದುವೆಯಲ್ಲಿ ಸ್ನೇಹಿತರು ಹಾಗೂ ಆಪ್ತರಷ್ಟೆ ಭಾಗಿಯಾಗುತ್ತಿದ್ದು, 15 ರಿಂದ 55 ವರ್ಷದೊಳಗಿನವರಿಗಷ್ಟೇ ಮಾತ್ರ ಮದುವೆಯಲ್ಲಿ ಭಾಗಿಯಾಗಲು ಅವಕಾಶ ನೀಡಲಾಗಿದೆ. ಕೋವಿಡ್ ನಿಯಂತ್ರಣಕ್ಕೆ ಬಂದ ನಂತರ ಮತ್ತೊಮ್ಮೆ ಸ್ನೇಹಿತರಿಗಾಗಿ ಕಾರ್ಯಕ್ರಮ ಇಟ್ಟುಕೊಳ್ಳಲ್ಲಿದ್ದಾರೆ.