ಚಿಕ್ಕಬಳ್ಳಾಪುರ: ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದ ಬೈಎಲೆಕ್ಷನ್ ಹಿನ್ನೆಲೆ ಬಿಜೆಪಿ ಅಭ್ಯರ್ಥಿ ಡಾ. ಕೆ. ಸುಧಾಕರ್ ಪರ ನಟಿ ಹರಿಪ್ರಿಯಾ ಅಬ್ಬರದ ಪ್ರಚಾರ ನಡೆಸುತ್ತಿದ್ದಾರೆ. ನಗರದ 5ನೇ ವಾರ್ಡನಲ್ಲಿ ಮನೆ ಮನೆಗೆ ತೆರಳಿ ಬಿಜೆಪಿಗೆ ನಿಮ್ಮ ಮತವನ್ನು ಹಾಕಬೇಕು ಎಂದು ಮತದಾರರಲ್ಲಿ ಮನವಿ ಮಾಡಿದ್ದಾರೆ. ಅಲ್ಲದೆ ಜನಗಳ ಜೊತೆ ಮಾತನಾಡುತ್ತ ಅವರೊಡನೆ ಸೆಲ್ಫಿ ಕ್ಲಿಕ್ಕಿಸಿಕೊಂಡಿದ್ದಾರೆ. ಇವರ ಜೊತೆ ಬಿಜೆಪಿಯ ಅನೇಕ ಕರ್ಯಕರ್ತರು ಸಾಥ್ ನೀಡಿದ್ದಾರೆ.
ಜೊತೆಗೆ ಮೂಲತಃ ಚಿಕ್ಕಬಳ್ಳಾಪುರ ನಗರದವರಾಗಿರುವ ಹರಿಪ್ರಿಯಾ, ತವರೂರಿನಲ್ಲಿ ತಮ್ಮ ಬಾಲ್ಯದ ತುಂಟಾಟವನ್ನೆಲ್ಲ ನೆನಪಿಸಿಕೊಂಡಿದ್ದಾರೆ. ಚುನಾವಣಾ ಪ್ರಚಾರ ನನಗೆ ಫಸ್ಟ್ ಎಕ್ಸ್ಪೀರಿಯನ್ಸ್. ಇದುವರೆಗೂ ಸಿನಿಮಾಗಳ ಮೂಲಕ ಜನರನ್ನು ತಲುಪಿದ್ದೇನೆ. ಈಗ ಸುಧಾಕರ್ ಅತಂಹ ಒಳ್ಳೆಯ ಅಭ್ಯರ್ಥಿ ಪರ ಪ್ರಚಾರಕ್ಕೆ ಬಂದಿದ್ದೇನೆ. ಒಳ್ಳೆಯ ರೆಸ್ಪಾನ್ಸ್ ಸಿಕ್ಕಿದೆ. ಸುಧಾಕರ್ ಸಹ ಒಳ್ಳೆ ಒಳ್ಳೆ ಕೆಲಸಗಳನ್ನು ಮಾಡಿದ್ದಾರೆ ಎಂದು ಹರಿಪ್ರಿಯಾ ಹೇಳಿದರು.
ನಾನು ಇಲ್ಲಿನವಳೇ ಇದೇ ಬೀದಿಗಳಲ್ಲಿ ಓಡಾಡಿದ್ದೇನೆ, ಎಲ್ಲರೂ ಪರಿಚಯ ಇದ್ದಾರೆ. 15 ವರ್ಷಗಳಾಯ್ತು ನಾನು ಬೆಂಗಳೂರಿಗೆ ಹೋಗಿ, ಈ ಮಧ್ಯೆ ಚಿಕ್ಕಬಳ್ಳಾಪುರದಲ್ಲಿ ಬಹಳಷ್ಟು ಬದಲಾವಣೆಗಳಾಗಿವೆ. ಇನ್ನೂ ಸಾಕಷ್ಟು ಬದಲಾವಣೆಗೆ ಅವಕಾಶಗಳಿವೆ. ಅದನ್ನು ನಿಮ್ಮ ಸುಧಾಕರ್ ಪೂರೈಸುತ್ತಾರೆ. ಅದಕ್ಕೇ.. ನೀವು ಅವರಿಗೆ ವೋಟ್ ಮಾಡಿ ಎಂದು ಹರಿಪ್ರಿಯ ಮನೆ ಮನೆಗೆ ಭೇಟಿ ನೀಡುತ್ತಾ ಸುಧಾಕರ್ ಪರ ಮತಯಾಚಿಸಿದರು.
Published On - 12:35 pm, Wed, 27 November 19