ಕೊರೊನಾ ಹೊಸ ರೂಪಾಂತರ: ಲಂಡನ್​ನಲ್ಲಿ ಶೂಟಿಂಗ್ ಮುಗಿಸಿ ಬಂದಿರೋ ನಟಿ ಹರ್ಷಿಕಾ ಪೂಣಚ್ಚ ಹೇಳಿದ್ದೇನು?

ಭೋಜ್ ಪುರಿ ನಟ ಪವನ್ ಸಿಂಗ್ ಜೊತೆಯಲ್ಲಿ ನಟಿಸುತ್ತಿರುವ ಹರ್ಷಿಕಾ ಪೂಣಚ್ಚ ಭೋಜ್ ಪುರಿ ಸಿನಿಮಾದ ಶೂಟಿಂಗ್​ಗಾಗಿ ಲಂಡನ್​ನಲ್ಲಿ ಬೀಡು ಬಿಟ್ಟಿದ್ದರು. ಅಲ್ಲದೆ ಡಿಸೆಂಬರ್ 4ರಂದು ಬೆಳಗಿನ ಜಾವ ಬೆಂಗಳೂರಿಗೆ ವಾಪಾಸ್ಸಾಗಿದ್ದಾರೆ.

ಕೊರೊನಾ ಹೊಸ ರೂಪಾಂತರ: ಲಂಡನ್​ನಲ್ಲಿ ಶೂಟಿಂಗ್ ಮುಗಿಸಿ ಬಂದಿರೋ ನಟಿ ಹರ್ಷಿಕಾ ಪೂಣಚ್ಚ ಹೇಳಿದ್ದೇನು?
ನಟಿ ಹರ್ಷಿಕಾ ಪೂಣಚ್ಚ

Updated on: Dec 22, 2020 | 12:55 PM

ಬೆಂಗಳೂರು: ಬ್ರಿಟನ್​ನಲ್ಲಿ ಕೊರೊನಾ ಸೋಂಕಿನ ಹೊಸ ರೂಪಾಂತರ ಕಂಡು ಬಂದಿದ್ದು, ಈಗ ಜಗತ್ತಿನಾದ್ಯಂತ ನಡುಕ ಉಂಟು ಮಾಡಿದೆ. ಹೀಗಾಗಿ ಕೆಲವು ದಿನಗಳ ಹಿಂದೆ ಭೋಜ್ ಪುರಿ ಸಿನಿಮಾದ ಶೂಟಿಂಗ್​ಗಾಗಿ ಲಂಡನ್​ನಲ್ಲಿ ಬೀಡು ಬಿಟ್ಟಿದ್ದ ನಟಿ ಹರ್ಷಿಕಾ ಪೂಣಚ್ಚ ಟಿವಿ9ಗೆ ಪ್ರತಿಕ್ರಿಯೆ ನೀಡಿದ್ದಾರೆ.

ಬ್ರಿಟನ್​ನಲ್ಲಿ ಕೊರೊನಾ ಸೋಂಕಿನ ಹೊಸ ರೂಪಾಂತರದಿಂದಾಗಿ ಈಗಾಗಲೇ ಜಗತ್ತಿನ ಹಲವು ದೇಶಗಳು ಬ್ರಿಟನ್​ ದೇಶದೊಂದಿಗಿನ ವಿಮಾನಯಾನ ಸೇವೆಯನ್ನು ಸ್ಥಗಿತಗೊಳಿಸಿವೆ. ಅಲ್ಲದೆ ಭಾರತವೂ ಸಹ ಡಿಸೆಂಬರ್​ 31ರ ವರೆಗೆ ಬ್ರಿಟನ್​ ದೇಶದೊಂದಿಗಿನ ವಿಮಾನಯಾನ ಸೇವೆಯನ್ನು ಸ್ಥಗಿತಗೊಳಿಸಿ ಆದೇಶ ಹೊರಡಿಸಿದೆ.

ಭೋಜ್ ಪುರಿ ನಟ ಪವನ್ ಸಿಂಗ್ ಜೊತೆಯಲ್ಲಿ ನಟಿಸುತ್ತಿರುವ ಹರ್ಷಿಕಾ ಪೂಣಚ್ಚ ಭೋಜ್ ಪುರಿ ಸಿನಿಮಾದ ಶೂಟಿಂಗ್​ಗಾಗಿ ಲಂಡನ್​ನಲ್ಲಿ ಬೀಡು ಬಿಟ್ಟಿದ್ದರು. ಅಲ್ಲದೆ ಡಿಸೆಂಬರ್ 4ರಂದು ಬೆಳಗಿನ ಜಾವ ಬೆಂಗಳೂರಿಗೆ ವಾಪಾಸ್ಸಾಗಿದ್ದಾರೆ. ಹೀಗಾಗಿ ನಟಿ ಹರ್ಷಿಕಾ ಪೂಣಚ್ಚ ಟಿವಿ9ಗೆ ಪ್ರತಿಕ್ರಿಯೆ ನೀಡಿದ್ದು, ನಾನು ಯಾವುದೇ ತೊಂದರೆ ಇಲ್ಲದೆ ಆರಾಮಾಗಿದ್ದೇನೆ ಎಂದಿದ್ದಾರೆ. ಅಲ್ಲದೆ ಡಿಸೆಂಬರ್ 18ರಂದು ಬೆಂಗಳೂರಲ್ಲೇ ಫೊಟೋ ಶೂಟ್ ಕೂಡ ಮಾಡಿಸಿದ್ದು, ನನಗೆ ಕೊರೊನಾ ಸೋಂಕಿನ ಯಾವುದೇ ಲಕ್ಷಣಗಳು ಕಂಡು ಬಂದಿಲ್ಲ ಎಂದು ತಿಳಿಸಿದ್ದಾರೆ.

ಎರಡು ವಾರದ ಹಿಂದೆಯೇ ವಾಪಸ್ ಆಗಿದ್ದೇನೆ..
ಶೂಟಿಂಗ್​ಗಾಗಿ ಲಂಡನ್​ಗೆ ತೆರಳಿದ್ದರ ಬಗ್ಗೆ ನಟಿ ಹರ್ಷಿಕಾ ಪೂಣಚ್ಚ ವಿಡಿಯೋ ಮೂಲಕ ಸ್ಪಷ್ಟನೆ ನೀಡಿದ್ದು, ನಾನು ಲಂಡನ್​ಗೆ ಹೋಗಿದ್ದೆ. ಆದ್ರೆ ಎರಡು ವಾರದ ಹಿಂದೆಯೇ ವಾಪಸ್ ಆಗಿದ್ದೇನೆ. ಅಲ್ಲದೆ ಕಳೆದ ವಾರ ಬೆಂಗಳೂರಲ್ಲಿ ಫೊಟೋ ಶೂಟ್ ಕೂಡ ಮಾಡಿಸಿದ್ದೇನೆ. ಜೊತೆಗೆ ಬೆಂಗಳೂರಿನಲ್ಲೆ ಆರಾಮಾಗಿದ್ದೇನೆ ಎಂದಿದ್ದಾರೆ.

Published On - 11:53 am, Tue, 22 December 20

ಪೃಥ್ವಿಶಂಕರ

ಪೃಥ್ವಿಶಂಕರ ಅವರ ಹುಟ್ಟೂರು ಹಾಸನದ ಕೊಣನೂರು ಸಮೀಪದ ಲಕ್ಷ್ಮೀಪುರ. ಕಳೆದ 8 ವರ್ಷಗಳಿಂದ ಪತ್ರಿಕಾರಂಗದಲ್ಲಿ ಕೆಲಸ. ಟಿವಿ9 ಕನ್ನಡದಲ್ಲೇ ವೃತ್ತಿ ಜೀವನ ಆರಂಭಿಸಿದ ಇವರು, ಮೊದಲ 3 ವರ್ಷ ವಿಡಿಯೋ ಎಡಿಟರ್ ಆಗಿ ಕೆಲಸ ಮಾಡಿದ ಬಳಿಕ ಇವರ ಆಸಕ್ತಿಯ ವಿಷಯವಾದ ಕ್ರೀಡೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ವೃತ್ತಿ ಬದುಕಿನ ಎರಡನೇ ಇನ್ನಿಂಗ್ಸ್ ಆರಂಭಿಸಿದ್ದೇನೆ.

Read More
Loading...
Unable to load recommendations.
Follow Us