ಬೆಂಗಳೂರಿನಲ್ಲಿ ಮೃತಪಟ್ಟ ಬೆಂಗಾಲಿ ನಟಿ, ಕಾರಣ ಏನು ಗೊತ್ತಾ!?

|

Updated on: Oct 04, 2020 | 1:43 PM

ಬೆಂಗಳೂರು: 2013ರ ಬಾಲಿವುಡ್‌ನ ಚೊಚ್ಚಲ ಚಿತ್ರ ಮೈ ಕೃಷ್ಣ ಹೂನ್‌ ಖ್ಯಾತಿಯ ನಟಿ ಮಿಶ್ತಿ ಮುಖರ್ಜಿ ಕಿಡ್ನಿ ವೈಫಲ್ಯದಿಂದ ಶುಕ್ರವಾರ ನಿಧನರಾಗಿದ್ದಾರೆ. ಕಳೆದ ಕೆಲವು ತಿಂಗಳುಗಳಿಂದ ಮೂತ್ರಪಿಂಡದ ಕಾಯಿಲೆಯಿಂದ ಬಳಲುತ್ತಿದ್ದ ನಟಿ ಮಿಶ್ತಿ ಚಿಕಿತ್ಸೆ ಫಲಿಸದೆ ಉಸಿರು ಚೆಲ್ಲಿದ್ದಾರೆ. ಮಿಶ್ತಿ ಚಿಕಿತ್ಸೆಯ ಭಾಗವಾಗಿ ಕೀಟೋ(keto diet) ಆಹಾರ ಪದ್ಧತಿಯನ್ನು ಅನುಸರಿಸುತ್ತಿದ್ದರು ಎಂಬ ಮಾಹಿತಿ ಸಿಕ್ಕಿದ್ದು, ಇವರ ಈ ಆಹಾರ ಪದ್ಧತಿಯೇ ಸಾವಿಗೆ ಕಾರಣವಾಗಿದೆಯಂತೆ. ದಢೂತಿ ನಟಿ ಸಣ್ಣ ಆಗಲು ಹೋಗಿ ಯಡವಟ್ಟು ಮಾಡಿಕೊಂಡ್ರಾ? 27 ವರ್ಷದ ನಟಿ […]

ಬೆಂಗಳೂರಿನಲ್ಲಿ ಮೃತಪಟ್ಟ ಬೆಂಗಾಲಿ ನಟಿ, ಕಾರಣ ಏನು ಗೊತ್ತಾ!?
Follow us on

ಬೆಂಗಳೂರು: 2013ರ ಬಾಲಿವುಡ್‌ನ ಚೊಚ್ಚಲ ಚಿತ್ರ ಮೈ ಕೃಷ್ಣ ಹೂನ್‌ ಖ್ಯಾತಿಯ ನಟಿ ಮಿಶ್ತಿ ಮುಖರ್ಜಿ ಕಿಡ್ನಿ ವೈಫಲ್ಯದಿಂದ ಶುಕ್ರವಾರ ನಿಧನರಾಗಿದ್ದಾರೆ. ಕಳೆದ ಕೆಲವು ತಿಂಗಳುಗಳಿಂದ ಮೂತ್ರಪಿಂಡದ ಕಾಯಿಲೆಯಿಂದ ಬಳಲುತ್ತಿದ್ದ ನಟಿ ಮಿಶ್ತಿ ಚಿಕಿತ್ಸೆ ಫಲಿಸದೆ ಉಸಿರು ಚೆಲ್ಲಿದ್ದಾರೆ. ಮಿಶ್ತಿ ಚಿಕಿತ್ಸೆಯ ಭಾಗವಾಗಿ ಕೀಟೋ(keto diet) ಆಹಾರ ಪದ್ಧತಿಯನ್ನು ಅನುಸರಿಸುತ್ತಿದ್ದರು ಎಂಬ ಮಾಹಿತಿ ಸಿಕ್ಕಿದ್ದು, ಇವರ ಈ ಆಹಾರ ಪದ್ಧತಿಯೇ ಸಾವಿಗೆ ಕಾರಣವಾಗಿದೆಯಂತೆ.

ದಢೂತಿ ನಟಿ ಸಣ್ಣ ಆಗಲು ಹೋಗಿ ಯಡವಟ್ಟು ಮಾಡಿಕೊಂಡ್ರಾ?
27 ವರ್ಷದ ನಟಿ ಮಿಶ್ತಿ ಬೆಂಗಳೂರಿನಲ್ಲಿ ವಾಸಿಸುತ್ತಿದ್ದರು. ಮಿಶ್ತಿ ತನ್ನ ಚೊಚ್ಚಲ ಚಿತ್ರದ ನಂತರ ರಾಕೇಶ್ ಮೆಹ್ತಾ ನಿರ್ದೇಶಿಸಿದ ಲೈಫ್ ಕಿ ತೋಹ್ ಲಗ್ ಗಾಯಿಯಲ್ಲಿ ಕಾಣಿಸಿಕೊಂಡ್ರು. ಹಿಂದಿ ಮತ್ತು ಬಂಗಾಳಿ ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ಮ್ಯೂಸಿಕ್ ವೀಡಿಯೊಗಳಿಂದ ನಟಿ ಹೆಚ್ಚಿನ ಜನಪ್ರಿಯತೆ ಗಳಿಸಿದ್ದರು. ಆದ್ರೆ ಅವರ ಆಹಾರ ಪದ್ಧತಿ ಮತ್ತು ಕಿಡ್ನಿ ವೈಫಲ್ಯದಿಂದ ಮೃತಪಟ್ಟಿದ್ದಾರೆ. ಅವರ ಅಂತಿಮ ವಿಧಿಗಳನ್ನು ಕುಟುಂಬದವರು ಶನಿವಾರ ನೆರವೇರಿಸಿದ್ದಾರೆ. ಮಿಶ್ತಿ ಕೋಲ್ಕತ್ತಾದಿಂದ ಬಂದು ಬೆಂಗಳೂರಿನಲ್ಲಿ ನೆಲೆಸಿದ್ದರು. ದಪ್ಪಗಿದ್ದ ಕಾರಣ ಸಣ್ಣ ಆಗಲು ಡಯಟ್ ಮೊರೆ ಹೋಗಿ ಪ್ರಾಣವನ್ನೇ ಕಳೆದುಕೊಂಡಿದ್ದಾರೆ.

ಏನಿದು ಕೀಟೋ(keto diet) ಆಹಾರ ಪದ್ಧತಿ:
ಕೀಟೋ ಅಥವಾ ಕೆಟೋಜೆನಿಕ್ ಡಯಟ್ ಅನ್ನು ಕಡಿಮೆ ಕಾರ್ಬ್ ಕೀಟೊ ಡಯಟ್ (Low-Carb Keto Diet) ಎಂದು ಕರೆಯಲಾಗುತ್ತೆ. ಈ ಆಹಾರ ಕ್ರಮಗಳನ್ನು ಅನುಸರಿಸುವುದರಿಂದ ನಮ್ಮ ಯಕೃತ್ತಿನಲ್ಲಿ ಕೀಟೋನ್ ಉತ್ಪತ್ತಿಯಾಗುತ್ತದೆ. ದೇಹದ ಕೊಬ್ಬನ್ನು ಕರಗಿಸುವಲ್ಲಿ ಇದು ತುಂಬಾ ಪರಿಣಾಮಕಾರಿ. ಇದರಿಂದ, ನೀವು ಕೇವಲ 10 ದಿನಗಳಲ್ಲಿ ಗರಿಷ್ಠ ತೂಕವನ್ನು ಕಳೆದುಕೊಳ್ಳಬಹುದು ಎನ್ನಲಾಗಿದೆ. ಈ ಆಹಾರ ಕ್ರಮದಲ್ಲಿ ಸಂಪೂರ್ಣ ಕೊಬ್ಬಿನ ಆಹಾರಗಳನ್ನು ಹೆಚ್ಚು ಸೇವಿಸಲಾಗುತ್ತದೆ. ಕಡಿಮೆ ಪ್ರೋಟೀನ್ ಮತ್ತು ಅತೀ ಕಡಿಮೆ ಕಾರ್ಬೋಹೈಡ್ರೇಟ್‌ ಆಹಾರಗಳನ್ನು ಸೇವಿಸಲಾಗುತ್ತದೆ. ಪ್ರಮಾಣಿತ ಕೀಟೊ ಆಹಾರದಲ್ಲಿ 70% ಕೊಬ್ಬು, 25% ಪ್ರೋಟೀನ್ ಮತ್ತು 5% ಕಾರ್ಬೋಹೈಡ್ರೇಟ್‌ಗಳು ಇರಬೇಕು. ಹೀಗಾಗಿ ದೇಹದ ತೂಕ ಕಡಿಮೆ ಮಾಡಲು ನಟಿಯರು ಈ ಡಯಟ್ ಮೊರೆ ಹೋಗುತ್ತಾರೆ. ಆದರೆ ನಟಿ ಮಿಶ್ತಿಗೆ ಈ ಡಯಟ್ ಪ್ರಾಣಕ್ಕೆ ಕುತ್ತು ತಂದಿದೆ.

ಕೀಟೋ ಡಯಟ್​ನಿಂದ ಆಗುವ ದುಷ್ಪರಿಣಾಮಗಳು:
ಕೀಟೋ ಆಹಾರವು ಕಡಿಮೆ ರಕ್ತದೊತ್ತಡ, ಮೂತ್ರಪಿಂಡದ ಕಲ್ಲುಗಳು, ಮಲಬದ್ಧತೆ, ಪೋಷಕಾಂಶಗಳ ಕೊರತೆ ಮತ್ತು ಹೃದಯ ಸಂಬಂಧಿ ಅಪಾಯವನ್ನು ಹೆಚ್ಚಿಸುತ್ತದೆ. ಕೀಟೋ ನಂತಹ ಕಟ್ಟುನಿಟ್ಟಿನ ಆಹಾರ ಪದ್ಧತಿ ಸಾಮಾಜಿಕ ಪ್ರತ್ಯೇಕತೆ ಅಥವಾ ಅಸ್ತವ್ಯಸ್ತವಾಗಿಸುವುದಕ್ಕೆ ಕಾರಣವಾಗಬಹುದು. ಮೇದೋಜ್ಜೀರಕ ಗ್ರಂಥಿ, ಪಿತ್ತಜನಕಾಂಗ, ಥೈರಾಯ್ಡ್ ಅಥವಾ ಪಿತ್ತಕೋಶವನ್ನು ಒಳಗೊಂಡ ಯಾವುದೇ ಸಮಸ್ಯೆ ಇರುವವರಿಗೆ ಕೀಟೋ ಡಯಟ್ ಸುರಕ್ಷಿತವಲ್ಲ. ಹೀಗಾಗಿ ಡಯಟ್ ಮಾಡುವ ಮುನ್ನ ಆ ಆಹಾರ ಪದ್ಧತಿ ನಮಗೆ ಸೂಕ್ತವೇ ಎಂದು ತಿಳಿದು ಸಹಾಯ-ಸಲಹೆಯ ನಂತರವೇ ಮಾಡಬೇಕು.

Published On - 11:45 am, Sun, 4 October 20