ಮುಂಬೈ: ನಟಿ ಪೂನಂ ಪಾಂಡೆ ಮತ್ತು ಅವರ ಗೆಳೆಯನನ್ನು ಮುಂಬೈ ಪೊಲೀಸರು ಮೆರೈನ್ ಡ್ರೈವ್ ಬಳಿ ಬಂಧಿಸಿದ್ದಾರೆ. ಕೊರೊನಾ ಹರಡುವುದನ್ನು ತಡೆಯಲು ವಿಧಿಸಲಾಗಿರುವ ಲಾಕ್‌ಡೌನ್ ಆದೇಶವನ್ನು ಉಲ್ಲಂಘಿಸಿ ತನ್ನ ಐಷಾರಾಮಿ ಬಿಎಂಡಬ್ಲು ಕಾರನ್ನು ಚಾಲನೆ ಮಾಡಿ ಸುತ್ತಾಡಿದ್ದಾರೆ. ಹೀಗಾಗಿ ಮುಂಬೈ ಪೊಲೀಸರು ನಟಿಯನ್ನು ಬಂಧಿಸಿದ್ದಾರೆ.
ಯಾವುದೇ ಕಾರಣವಿಲ್ಲದೆ ಅನವಶ್ಯಕವಾಗಿ ಪೂನಂ ಪಾಂಡೆ ಮತ್ತು ಅವರ ಸಹಚರರೊಬ್ಬರು ಹೊರಗೆ ಅಲೆದಾಡುತ್ತಿದ್ದರು. ಹೀಗಾಗಿ ಲಾಕ್‌ಡೌನ್ ಆದೇಶ ಉಲ್ಲಂಘನೆ ಎಂದು ಐಪಿಸಿ ಸೆಕ್ಷನ್ 188, 269 ಮತ್ತು 51 (ಬಿ) ಸೆಕ್ಷನ್‌ಗಳ ಅಡಿಯಲ್ಲಿ ಆಕೆಯ ವಿರುದ್ಧ ಪ್ರಕರಣ ದಾಖಲಾಗಿದೆ ಎಂದು ವರದಿಯಲ್ಲಿ ಹೇಳಲಾಗಿದೆ. ಹಾಗೂ ಪೊಲೀಸರು ಆಕೆಯ ಬಿಎಂಡಬ್ಲ್ಯು ಕಾರನ್ನು ವಶಪಡಿಸಿಕೊಂಡಿದ್ದಾರೆ.
Published On - 7:00 am, Mon, 11 May 20