ನಟ ದರ್ಶನ್ ಅವರು ಸದ್ಯ ಜಾಮೀನು ಪಡೆದು ಹೊರ ಬಂದಿದ್ದಾರೆ. ಅನಾರೋಗ್ಯದ ಕಾರಣ ನೀಡಿ ಅವರಿಗೆ ಆರು ವಾರ ಕೋರ್ಟ್ ರಿಲೀಫ್ ನೀಡಿದೆ. ಅವರಿಗೆ ಬೆನ್ನು ನೋವು ಉಲ್ಬಣಿಸಿರುವುದರಿಂದ ಚಿಕಿತ್ಸೆ ಪಡೆಯೋದು ಅನಿವಾರ್ಯ ಆಗಿದೆ. ದರ್ಶನ್ ಯಾವಾಗ ಬರುತ್ತಾರೆ ಎಂಬ ವಿಚಾರದಲ್ಲಿ ಅನೇಕರು ಭವಿಷ್ಯ ನುಡಿದಿದ್ದರು. ಈ ಪೈಕಿ ಕೆಲವು ಸತ್ಯ ಆದರೆ, ಇನ್ನೂ ಕೆಲವು ಸುಳ್ಳಾಗಿದೆ. ಹೀಗಿರುವಾಗಲೇ ದರ್ಶನ್ ಹಳೆಯ ವಿಡಿಯೋ ಒಂದು ವೈರಲ್ ಆಗಿದೆ. ಆ ವಿಡಿಯೋದಲ್ಲಿ ‘ಅಕ್ಟೋಬರ್ಗೆ ಬಂದೇ ಬರ್ತೀನಿ’ ಎಂದು ಹೇಳಿದ್ದರು. ಈ ವಿಡಿಯೋನ ಫ್ಯಾನ್ಸ್ ವೈರಲ್ ಮಾಡುತ್ತಿದ್ದಾರೆ.
ದರ್ಶನ್ ಅವರು ರೇಣುಕಾ ಸ್ವಾಮಿ ಕೊಲೆ ಕೇಸ್ನಲ್ಲಿ ಜೂನ್ 11ರಂದು ಬಂಧನಕ್ಕೆ ಒಳಗಾದರು. ಆರಂಭದಲ್ಲಿ ಎರಡು ವಾರ ಪೊಲೀಸ್ ಕಸ್ಟಡಿಯಲ್ಲಿ ಇದ್ದ ಅವರು ನಂತರ ಅವರನ್ನು ನ್ಯಾಯಾಂಗ ಬಂಧನಕ್ಕೆಒಪ್ಪಿಸಲಾಯಿತು. ಬೆಂಗಳೂರು ಜೈಲಿನಲ್ಲಿ ಐಷಾರಾಮಿ ಸವಲತ್ತು ಪಡೆಯುತ್ತಿದ್ದ ಆರೋಪದ ಮೇಲೆ ಎರಡೇ ತಿಂಗಳಲ್ಲಿ ಅವರನ್ನು ಬಳ್ಳಾರಿಗೆ ಜೈಲಿಗೆ ಶಿಫ್ಟ್ ಮಾಡಲಾಯಿತು. ಆಗ ಅಭಿಮಾನಿಗಳು ‘ನಮ್ಮ ಬಾಸ್ 70 ದಿನಗಳ ಮೇಲೆ ಯಾರಿಗೂ ಕಾಲ್ಶೀಟ್ ಕೊಡಲ್ಲ’ ಎಂದರು.
ಈಗ ದರ್ಶನ್ ಬಳ್ಳಾರಿ ಜೈಲಿನಿಂದ ಬಿಡುಗಡೆ ಹೊಂದಿದ್ದಾರೆ. ಈ ವೇಳೆ ಅವರ ಹಳೆಯ ವಿಡಿಯೋ ಒಂದು ವೈರಲ್ ಆಗಿದೆ. ದರ್ಶನ್ ಅವರು ಚಿತ್ರರಂಗಕ್ಕೆ ಬಂದು 25 ವರ್ಷಗಳು ತುಂಬಿದ ಹಿನ್ನೆಲೆಯಲ್ಲಿ ಅದನ್ನು ಆಚರಿಸಲಾಗಿತ್ತು. ಈ ವೇಳೆ ದರ್ಶನ್ ಮಾತನಾಡಿದ್ದರು.
‘ಅಕ್ಟೋಬರ್ಗೆ ಬಂದೇ ಬರ್ತೀನಿ ಚಿನ್ನಾ. ಬಂದೇ ಬರ್ತೀವಿ. ದಮ್ ಕಟ್ಟಾದ್ರೂ ದುಡಿದು ಬಿಡೋಣ’ ಎಂದು ದರ್ಶನ್ ಹೇಳಿದ್ದರು. ಈ ವಿಡಿಯೋನ ಅವರ ಫ್ಯಾನ್ಸ್ ಈಗ ವೈರಲ್ ಮಾಡುತ್ತಿದ್ದಾರೆ. ‘ಅವತ್ತೇ ಹೇಳಿದ್ವಿ ಅಕ್ಟೋಬರ್ಗೆ ಬಂದೇ ಬರ್ತೀವಿ ಅಂತ’ ಎಂದು ಫ್ಯಾನ್ಸ್ ಬರೆದುಕೊಳ್ಳುತ್ತಾ ಇದ್ದಾರೆ.
ಇದನ್ನೂ ಓದಿ: ಪತ್ನಿ ವಿಜಯಲಕ್ಷ್ಮೀ ಮನೆಯಲ್ಲಿ ರಿಲ್ಯಾಕ್ಸ್ ಆದ ದರ್ಶನ್; ಮಗನ ಬರ್ತ್ಡೇ ಆಚರಣೆ
ದರ್ಶನ್ ಅವರು ವೈದ್ಯಕೀಯ ವರದಿಗಳನ್ನು ನೀಡಿ ಜಾಮೀನು ಪಡೆದಿದ್ದಾರೆ. ಅವರು ಆರು ವಾರವನ್ನು ಸಂಪೂರ್ಣವಾಗಿ ಚಿಕಿತ್ಸೆಗೆ ಬಳಕೆ ಮಾಡಿಕೊಳ್ಳಬೇಕಿದೆ. ಸದ್ಯ ಅವರು ಪತ್ನಿ ನಿವಾಸದಲ್ಲಿ ಇದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 7:32 am, Thu, 31 October 24