ಬೆಳಗಾವಿ: ಪ್ರೇಮಕವಿ ಹಾಗೂ ಖ್ಯಾತ ಚಿತ್ರಸಾಹಿತಿ ಕೆ.ಕಲ್ಯಾಣ್ ದಾಂಪತ್ಯದಲ್ಲಿ ಬಿರುಕು ಮೂಡಿದ್ದು ಇದೀಗ ದಂಪತಿ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ ಎಂದು ತಿಳಿದುಬಂದಿದೆ.
ತಮ್ಮ ಪತ್ನಿ ಅಶ್ವಿನಿ ಕಿಡ್ನಾಪ್ ಆಗಿದ್ದಾರೆಂದು ಕೆ.ಕಲ್ಯಾಣ್ ನಗರದ ಮಾಳಮಾರುತಿ ಠಾಣೆಗೆ ದೂರು ನೀಡಿದ್ದರು. ಚಿತ್ರಸಾಹಿತಿಯ ದೂರಿನ ಮೇರೆಗೆ ಸೆಪ್ಟೆಂಬರ್ 30ರಂದು FIR ದಾಖಲಾಗಿತ್ತು. ಕಲ್ಯಾಣ್ ದೂರಿನ ಮೇರೆಗೆ ಅವರ ಪತ್ನಿ ಅಶ್ವಿನಿಯನ್ನು ಪೊಲೀಸರು ಠಾಣೆಗೆ ಕರೆತಂದಿದ್ದಾರೆ. ಜೊತೆಗೆ, ಪೊಲೀಸರು ಅಶ್ವಿನಿಯಿಂದ ಮಾಹಿತಿ ಪಡೆಯುತ್ತಿದ್ದಾರೆ ಎಂದು ಹೇಳಲಾಗಿದೆ.
ಆಸ್ತಿಗೋಸ್ಕರ K ಕಲ್ಯಾಣ್ ನನ್ನನ್ನು ಮದುವೆ ಆಗಿದ್ದಾರೆ -ಪ್ರೇಮಕವಿ ವಿರುದ್ಧ ಪತ್ನಿ ಪ್ರತಿದೂರು
ಕಲ್ಯಾಣ್ ದೈಹಿಕ ಹಿಂಸೆ ನೀಡ್ತಿದ್ದಾರೆ, ನನಗೆ ವಿಚ್ಛೇದನ ಬೇಕು: ಕೋರ್ಟ್ ಮೊರೆಹೋದ ಪ್ರೇಮಕವಿ ಪತ್ನಿ
ಕೆ.ಕಲ್ಯಾಣ್ರ ಪತ್ನಿ ಅಶ್ವಿನಿಯನ್ನು ಆಕೆಯ ಪೋಷಕರು ಪುಸಲಾಯಿಸಿ ಅಪಹರಣ ಮಾಡಿದ್ದರು ಎಂದು ಸಾಹಿತಿ ತಮ್ಮ ದೂರಿನಲ್ಲಿ ಉಲ್ಲೇಖಿಸಿದ್ದರು. ಜೊತೆಗೆ, ಅಶ್ವಿನಿ ಅಕೌಂಟ್‌ನಿಂದ 19 ಲಕ್ಷ ರೂಪಾಯಿ ಹಣವನ್ನು ಆಕೆಯ ಪೋಷಕರು ತಮ್ಮ ಅಕೌಂಟ್‌ಗೆ ವರ್ಗಾವಣೆ ಮಾಡಿಸಿಕೊಂಡಿದ್ದಾರೆ ಎಂದು ಕಲ್ಯಾಣ್ ಆರೋಪಿಸಿದ್ದಾರೆ. ಇದಲ್ಲದೆ, ಬಾಗಲಕೋಟೆ ಜಿಲ್ಲೆಯ ಬೀಳಗಿ ತಾಲೂಕಿನ ಬಡಗಿ ಗ್ರಾಮದವರಾದ ತಮ್ಮ ಪತ್ನಿಯ ಸಂಬಂಧಿಗಳಾದ ಶಿವಾನಂದ ವಾಲಿ ಹಾಗೂ ಗಂಗಾ ಕುಲಕರ್ಣಿ ವಿರುದ್ಧ ಕಲ್ಯಾಣ್ ಆರೋಪಿಸಿದ್ದಾರೆ.
ಈ ಹಿನ್ನೆಲೆಯಲ್ಲಿ ಅವರ ಪತ್ನಿ ಅಶ್ವಿನಿಯನ್ನು ಪೊಲೀಸರು ಮಾಳಮಾರುತಿ ಠಾಣೆಗೆ ಕರೆತಂದು ಮಾಹಿತಿ ಪಡೆಯುತ್ತಿದ್ದಾರೆ. ಜೊತೆಗೆ, ಆರೋಪಿ ಶಿವಾನಂದ ವಾಲಿಯನ್ನು ಸಹ ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.
Published On - 5:51 pm, Sat, 3 October 20