ಕೊರೊನಾದಿಂದ ಕಂಗಾಲಾಗಿ ಹುಟ್ಟೂರಿಗೆ ತರಳುತ್ತಿರೋ ವಲಸೆ ಕಾರ್ಮಿಕರ ನೆರವಿಗೆ ಅಮಿತಾಬ್ ಬಚ್ಚನ್ ನಿಂತಿದ್ದಾರೆ. ಕಳೆದ ತಿಂಗಳು 10 ಬಸ್ಸುಗಳಲ್ಲಿ ವಲಸೆ ಕಾರ್ಮಿಕರನ್ನ ಉತ್ತರ ಪ್ರದೇಶದಲ್ಲಿರೋ ಅವರವ ಊರುಗಳಿಗೆ ಕಳುಹಿಸಿಕೊಟ್ಟಿದ್ದರು. ಈಗ ಚಾರ್ಟರ್ಡ್ ಫ್ಲೈಟ್ ಮೂಲಕ ಏರ್ಲಿಫ್ಟ್ ಮಾಡಿದ್ದಾರೆ.
ಅಮಿತಾಬ್ ಬಚ್ಚನ್ ಕಾರ್ಪ್ ಲಿಮಿಟೆಡ್ ಕಂಪನಿ ಮುಂಬೈನಲ್ಲಿರುವ ವಲಸೆ ಕಾರ್ಮಿಕರನ್ನ ಏರ್ಲಿಫ್ಟ್ ಮಾಡಿದೆ. ಈಗಾಗ್ಲೇ ಮೂರು ವಿಮಾನಗಳ ಮೂಲಕ ಮುಂಬೈನಲ್ಲಿ ಸಿಕ್ಕಿಕೊಂಡಿದ್ದ ವಲಸೆ ಕಾರ್ಮಿಕರನ್ನ ಉತ್ತರ ಪ್ರದೇಶದ ವಿವಿಧ ಭಾಗಗಳಿಗೆ ತಲುಪಿಸೋ ಕೆಲ ಮಾಡಲಾಗಿದೆ.
ಹಾಗಂತ ಅಮಿತಾಬ್ ಬಚ್ಚನ್ ವಲಸೆ ಕಾರ್ಮಿಕರಿಗೆ ನೆರವಾಗಿದ್ದು ಇದೇ ಮೊದಲಲ್ಲ. ಈ ಹಿಂದೆ ಕೂಡ ಹಾಜಿ ಅಲಿ ಟ್ರೆಸ್ಟ್ ಹಾಗೂ ಪಿರ್ ಮಖಡಮ್ ಸಾಹೇಬ್ ಟ್ರಸ್ಟ್ ಜೊತೆ ಸೇರಿ ಬಿಗ್ ಬಿ 4500 ಮಂದಿ ವಲಸೆ ಕಾರ್ಮಿಕರಿಗೆ ಬೇಯಿಸಿದ ಆಹಾರವನ್ನ ರವಾನಿಸಿದ್ದರು. ಇಷ್ಟೇ ಅಲ್ಲದೆ ಆಸ್ಪತ್ರೆಗಳಿಗೆ, ಪೊಲೀಸ್ ಅಧಿಕಾರಿಗಳಿಗೆ ಸುಮಾರು 20 ಸಾವಿರ ಪಿಪಿ ಇ ಕಿಟ್ ಅನ್ನೂ ರವಾನಿಸಿದ್ದರು.
ಈಗ ಹುಟ್ಟೂರಿಗೆ ಹೋಗಲು ಪರದಾಡುತ್ತಿದ್ದವರನ್ನ ಬಿಗ್ ಬಿ ವಿಮಾನದಲ್ಲಿ ತಮ್ಮ ಮನೆಗಳಿಗೆ ಕಳುಹಿಸಿಕೊಟ್ಟಿದ್ದಾರೆ. ಸಾಕಷ್ಟು ಮಂದಿ ವಲಸೆ ಕಾರ್ಮಿಕರು ಬಸ್ಸು ರೈಲು ಸಿಗದೆ ಕಾಲ್ನಡಿಗೆಯಲ್ಲೇ ತಮ್ಮೂರಿಗೆ ಹೊರಟಿದ್ದರು.