ಬಾಲಿವುಡ್ ಬ್ಯೂಟಿ ಆಲಿಯಾ ಭಟ್ಗೆ 2020ಕ್ಕೆ ಹೊಸ ಸಂಚಲನ ಮುಡಿಸೋಕೆ ರೆಡಿಯಾಗಿದ್ದಾರೆ. ಅಂದ್ಹಾಗೆ 2020ಕ್ಕೆ ಆಲಿಯಾ ಭಟ್ ಸಿನಿಮಾಗಳ ಪಟ್ಟಿಯೂ ದೊಡ್ಡದಾಗಿದೆ. ಹೀಗಾಗಿ ಬಾಲಿವುಡ್ ಬ್ಯೂಟಿ ಟಾಲಿವುಡ್ ಹಾಗೂ ಬಾಲಿವುಡ್ನಲ್ಲಿ ಸಂಚಲನ ಮೂಡಿಸೋದು ಪಕ್ಕಾ ಆಗಿದೆ.
ಆಲಿಯಾ ಭಟ್.. ಬಾಲಿವುಡ್ ಬ್ಯೂಟಿ.. ಅದ್ಭುತ ಌಕ್ಟಿಂಗ್ ಮೂಲಕ ಬಿಟೌನ್ನಲ್ಲಿ ಸಖತ್ ಹವಾ ಕ್ರಿಯೇಟ್ ಮಾಡಿದ ಚೆಲುವೆ. ಆಲಿಯಾ ಅಭಿನಯದ ಸಿನಿಮಾಗಳು 2019ರಲ್ಲಿಯೂ ರಿಲೀಸ್ ಆಗಿ ಹಿಟ್ ಲೀಸ್ಟ್ ಸೇರಿವೆ. 2019ರಲ್ಲಿ ಸಕ್ಸಸ್ ಫುಲ್ ನಟಿಮಣಿಯರ ಸಾಲಿಗೆ ಸೇರಿದ್ದ ಆಲಿಯಾ 2020ರಲ್ಲಿಯೂ ಲಕ್ಕಿ ಹೀರೋಹಿನ್ ಆಗಿ ಹೊರ ಹೊಮ್ಮೋ ಭರವಸೆ ಮೂಡಿಸಿದ್ದಾರೆ.
2020ಯಲ್ಲಿ 4 ಸಿನಿಮಾಗಳು ಬೆಳ್ಳಿ ಪರದೆ ಮೇಲೆ:
ಬಾಲಿವುಡ್ನ ಗಂಗೂ ಬಾಯಿ ಕಾತಿವಾಡಿ ಆಗಿ ಆಲಿಯಾ ವಿಭಿನ್ನ ಅವತಾರದಲ್ಲಿ ಮೋಡಿ ಮಾಡಲಿರೋದು ಒಂದು ಕಡೆಯಾದ್ರೆ. ಇನ್ನೊಂದು ಕಡೆ ಬಾಹುಬಲಿಯ ಮಾಂತ್ರಿಕ ನಿರ್ದೇಶಕ ರಾಜಮೌಳಿ ಌಕ್ಷನ್ ಕಟ್ ಹೇಳ್ತಿರೋ ಆರ್ಆರ್ಆರ್ ಸಿನಿಮಾದಲ್ಲಿಯೂ ಆಲಿಯಾ ನಟಿಸ್ತಿದ್ದಾರೆ. ಈ ಸಿನಿಮಾದಲ್ಲೂ ಆಲಿಯಾ ಭಟ್ಗೆ ಸ್ಪೆಷಲ್ ಇಂಪಾರ್ಟೆನ್ಸ್ ನೀಡಲಾಗಿದ್ದು, ಆರ್ಆರ್ಆರ್ ಮೂಲಕವೂ 2020ರಲ್ಲಿ ಅಬ್ಬರಿಸಲಿದ್ದಾರೆ.
ಬೇರೆ ನಟಿಮಣಿಯರಿಗೆ ಕಂಪೇರ್ ಮಾಡಿದ್ರೆ, ಆಲಿಯಾ ಭಟ್ ನಟಿಸ್ತಿರೋ 4 ಸಿನಿಮಾಗಳು ಕೂಡ ತುಂಬಾ ಸ್ಪೆಷಲ್ ಆಗಿವೆ.. ಒಟ್ನಲ್ಲಿ 2020ರಲ್ಲಿ ಆಲಿಯಾ ಭಟ್ ಪಾಲಿಗೆ ಲಕ್ಕಿ ಸಿನಿಮಾಗಳಾಗಿದ್ದು, ಗಲ್ಲಿ ಬಾಯ್ ಬೆಡಗಿಗೆ ಮತ್ತಷ್ಟು ಬೇಡಿಕೆ ಹೆಚ್ಚಾಗೋ ಭರವಸೆ ಮೂಡಿಸಿವೆ.
Published On - 7:46 am, Thu, 2 January 20