ವಿರೇನ್ ಮೊಬೈಲ್ ರಿಟ್ರೀವ್ ಆಯ್ತು! ಮಾಹಿತಿ ಕೆದಕ್ತಿದೆ CCB: ಬಯಲಾಗ್ತಿದೆ ರಾಜಕೀಯ ನಂಟು

|

Updated on: Sep 23, 2020 | 8:55 AM

ಬೆಂಗಳೂರು: ಡ್ರಗ್ಸ್ ಮಾಫಿಯಾ ಪ್ರಕರಣ ಸಂಬಂಧಿಸಿ ಬಹುದಿನಗಳಿಂದ ಸಿಸಿಬಿಗೆ ತಲೆ ನೋವಾಗಿ ಕಾಡುತ್ತಿದ್ದ ವಿರೇನ್ ಖನ್ನಗೆ ಸೇರಿದ ಮೊಬೈಲ್ ರಿಟ್ರೀವ್ ಆಗಿದೆ. ಎಷ್ಟೇ ಪ್ರಯತ್ನ ಪಡ್ರೂ ಬಾಯಿ ಬಿಡದೆ ರಂಗಿನಾಟ ಆಡ್ತಿದ್ದ ವಿರೇನ್​ ಮೊಬೈಲ್​ನಲ್ಲಿನ ಸ್ಫೋಟಕ ಮಾಹಿತಿ ಬಹಿರಂಗವಾಗಿದೆ. ಸದ್ಯ ವಿರೇನ್ ಖನ್ನ ಮೊಬೈಲ್ ರಿಟ್ರೀವ್ ಆಗಿದ್ದು ಅವನ ಕಾಂಟ್ಯಾಕ್ಟ್ ಲಿಸ್ಟ್​ನಲ್ಲಿ ರಾಜಕೀಯ ಮುಖಂಡರ ಮಕ್ಕಳ ನಂಬರ್ ಸಿಕ್ಕಿದೆ. ವಿರೇನ್​ಗೆ ರಾಜಕೀಯ ನಂಟಿ ಇರುವುದು ಬಯಲಾಗಿದೆ. ರಿಟ್ರೀವ್ ಆದ ಮೊಬೈಲ್​ನಲ್ಲಿ ದೊಡ್ಡ ದೊಡ್ಡವರ ಕಾಂಟ್ಯಾಕ್ಟ್ ಲಿಸ್ಟ್ ಇದೆ. […]

ವಿರೇನ್ ಮೊಬೈಲ್ ರಿಟ್ರೀವ್ ಆಯ್ತು! ಮಾಹಿತಿ ಕೆದಕ್ತಿದೆ CCB: ಬಯಲಾಗ್ತಿದೆ ರಾಜಕೀಯ ನಂಟು
Follow us on

ಬೆಂಗಳೂರು: ಡ್ರಗ್ಸ್ ಮಾಫಿಯಾ ಪ್ರಕರಣ ಸಂಬಂಧಿಸಿ ಬಹುದಿನಗಳಿಂದ ಸಿಸಿಬಿಗೆ ತಲೆ ನೋವಾಗಿ ಕಾಡುತ್ತಿದ್ದ ವಿರೇನ್ ಖನ್ನಗೆ ಸೇರಿದ ಮೊಬೈಲ್ ರಿಟ್ರೀವ್ ಆಗಿದೆ. ಎಷ್ಟೇ ಪ್ರಯತ್ನ ಪಡ್ರೂ ಬಾಯಿ ಬಿಡದೆ ರಂಗಿನಾಟ ಆಡ್ತಿದ್ದ ವಿರೇನ್​ ಮೊಬೈಲ್​ನಲ್ಲಿನ ಸ್ಫೋಟಕ ಮಾಹಿತಿ ಬಹಿರಂಗವಾಗಿದೆ.

ಸದ್ಯ ವಿರೇನ್ ಖನ್ನ ಮೊಬೈಲ್ ರಿಟ್ರೀವ್ ಆಗಿದ್ದು ಅವನ ಕಾಂಟ್ಯಾಕ್ಟ್ ಲಿಸ್ಟ್​ನಲ್ಲಿ ರಾಜಕೀಯ ಮುಖಂಡರ ಮಕ್ಕಳ ನಂಬರ್ ಸಿಕ್ಕಿದೆ. ವಿರೇನ್​ಗೆ ರಾಜಕೀಯ ನಂಟಿ ಇರುವುದು ಬಯಲಾಗಿದೆ. ರಿಟ್ರೀವ್ ಆದ ಮೊಬೈಲ್​ನಲ್ಲಿ ದೊಡ್ಡ ದೊಡ್ಡವರ ಕಾಂಟ್ಯಾಕ್ಟ್ ಲಿಸ್ಟ್ ಇದೆ. ಬೆಂಗಳೂರಿನ ಶಾಸಕನ ಪುತ್ರ ಸೇರಿದಂತೆ ಹಲವು ಮಂದಿಯ ನಂಬರ್ ಪತ್ತೆಯಾಗಿದೆ. ಸದ್ಯ ಪತ್ತೆಯಾದ ಫೋನ್ ನಂಬರ್​ಗಳ ಜೊತೆಗಿನ ಸಂಪರ್ಕದ ಮಾಹಿತಿ ಕೆದಕೋಕೆ ಸಿಸಿಬಿ ಮುಂದಾಗಿದೆ. ಡ್ರಗ್ಸ್ ಜಾಡು ಹಿಡಿದು ಬೆನ್ನಟ್ಟಿರುವ ಸಿಸಿಬಿಯಿಂದ ಮತ್ತಷ್ಟು ಮಾಹಿತಿ ಬಯಲಾಗೋ ಸಾಧ್ಯತೆ ಇದೆ.

ರಾಜಕೀಯ ವ್ಯಕ್ತಿಗಳ ಪುತ್ರರಿಗೆ ಶೀಘ್ರವೇ ನೋಟಿಸ್ ನೀಡೊ ಸಾಧ್ಯತೆ ಇದೆ. ಅಸಲಿಗೆ ವಿರೇನ್ ಖನ್ನ ಬಳಸುತಿದದ್ದು ಎರಡು ಮೊಬೈಲ್ಸ್ ಅದರಲ್ಲಿ ಒಂದು ಮೊಬೈಲ್ ಪಾಸ್ ವರ್ಡ್ ನೀಡದೇ ವಿರೇನ್ ಖನ್ನ ಕಿರಿಕಿರಿ ಮಾಡುತ್ತಿದ್ದಾನೆ.