ಸಂಜನಾರನ್ನ ಈ ಕ್ಷಣದವರೆಗೂ ಅರೆಸ್ಟ್ ಮಾಡಿಲ್ಲ: CCB ಸಂದೀಪ್ ಪಾಟೀಲ್ ಸ್ಪಷ್ಟನೆ

|

Updated on: Sep 08, 2020 | 10:05 AM

ಬೆಂಗಳೂರು: ನಟಿ ಸಂಜನಾ ಮನೆಯ ಮೇಲೆ ಸಿಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಸಂಜನಾರನ್ನು ವಶಕ್ಕೆ ಪಡೆದು ಸಂಜನಾ ನಿವಾಸದಲ್ಲೇ ವಿಚಾರಣೆ ನಡೆಸಿದ್ದಾರೆ. ಹೆಚ್ಚಿನ ವಿಚಾರಣೆಗಾಗಿ ಸಿಸಿಬಿ ಕಚೇರಿಗೆ ಕರೆದುಕೊಂಡು ಹೋಗುವ ಸಾಧ್ಯತೆ ಇದೆ. ಈ ಬಗ್ಗೆ ಮಾತನಾಡಿದ ಸಿಸಿಬಿ ಮುಖ್ಯಸ್ಥ ಸಂದೀಪ್ ಪಾಟೀಲ್ ನಟಿ ಸಂಜನಾರನ್ನು ಈ ಕ್ಷಣದವರೆಗೂ ಅರೆಸ್ಟ್ ಮಾಡಿಲ್ಲ ಎಎಂದು ಟಿವಿ9ಗೆ ಮಾಹಿತಿ ನೀಡಿದ್ದಾರೆ. ಸಂಜನಾರನ್ನು ಕೇವಲ ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದೇವೆ. ಸಂಜನಾ ಮನೆಯಲ್ಲಿ ಒಂದಷ್ಟು ವಸ್ತು ಜಪ್ತಿ ಮಾಡಿದ್ದೇವೆ. ಸಂಪೂರ್ಣ ವಿಚಾರಣೆ […]

ಸಂಜನಾರನ್ನ ಈ ಕ್ಷಣದವರೆಗೂ ಅರೆಸ್ಟ್ ಮಾಡಿಲ್ಲ: CCB ಸಂದೀಪ್ ಪಾಟೀಲ್ ಸ್ಪಷ್ಟನೆ
Follow us on

ಬೆಂಗಳೂರು: ನಟಿ ಸಂಜನಾ ಮನೆಯ ಮೇಲೆ ಸಿಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಸಂಜನಾರನ್ನು ವಶಕ್ಕೆ ಪಡೆದು ಸಂಜನಾ ನಿವಾಸದಲ್ಲೇ ವಿಚಾರಣೆ ನಡೆಸಿದ್ದಾರೆ. ಹೆಚ್ಚಿನ ವಿಚಾರಣೆಗಾಗಿ ಸಿಸಿಬಿ ಕಚೇರಿಗೆ ಕರೆದುಕೊಂಡು ಹೋಗುವ ಸಾಧ್ಯತೆ ಇದೆ. ಈ ಬಗ್ಗೆ ಮಾತನಾಡಿದ ಸಿಸಿಬಿ ಮುಖ್ಯಸ್ಥ ಸಂದೀಪ್ ಪಾಟೀಲ್ ನಟಿ ಸಂಜನಾರನ್ನು ಈ ಕ್ಷಣದವರೆಗೂ ಅರೆಸ್ಟ್ ಮಾಡಿಲ್ಲ ಎಎಂದು ಟಿವಿ9ಗೆ ಮಾಹಿತಿ ನೀಡಿದ್ದಾರೆ.

ಸಂಜನಾರನ್ನು ಕೇವಲ ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದೇವೆ. ಸಂಜನಾ ಮನೆಯಲ್ಲಿ ಒಂದಷ್ಟು ವಸ್ತು ಜಪ್ತಿ ಮಾಡಿದ್ದೇವೆ. ಸಂಪೂರ್ಣ ವಿಚಾರಣೆ ಬಳಿಕ ಬಂಧನದ ಬಗ್ಗೆ ನಿರ್ಧಾರ ಮಾಡುತ್ತೇವೆ ಎಂದು ಟಿವಿ9ಗೆ ಸಿಸಿಬಿ ಮುಖ್ಯಸ್ಥ ಸಂದೀಪ್ ಪಾಟೀಲ್ ಸ್ಪಷ್ಟಪಡಿಸಿದ್ದಾರೆ.

ಮನೆಗೇ ಉಪಾಹಾರ ತರಿಸಿಕೊಂಡ ಅಧಿಕಾರಿಗಳು:
ಇನ್ನು ನಟಿ ಸಂಜನಾ ಮನೆಯಲ್ಲಿ ಶೋಧ ನಡೆಸ್ತಿರುವ ಸಿಸಿಬಿ ಅಧಿಕಾರಿಗಳು ಉಪಾಹಾರ ತರಿಸಿಕೊಂಡಿದ್ದಾರೆ. ಬೆಳಗ್ಗೆ 6.35ರಿಂದ ಅಧಿಕಾರಿಗಳ ನಿರಂತರ ಶೋಧ ನಡೆಯುತ್ತಿದೆ. ಹೀಗಾಗಿ, ಮನೆಗೇ ತಿಂಡಿ, ಕಾಫಿ, ಟೀ ತರಿಸಿಕೊಂಡಿದ್ದಾರೆ.