ನಟಿ ಸಂಜನಾ ಮತ್ತೊಂದು ಹೆಸರು ಏನು ಗೊತ್ತಾ? CCB ಬಳಿಯಿರುವ ಮಾಹಿತಿ ಏನು?

  • Updated On - 9:15 am, Tue, 8 September 20
ನಟಿ ಸಂಜನಾ ಮತ್ತೊಂದು ಹೆಸರು ಏನು ಗೊತ್ತಾ? CCB ಬಳಿಯಿರುವ ಮಾಹಿತಿ ಏನು?

ಬೆಂಗಳೂರು: ಸ್ಯಾಂಡಲ್‌ವುಡ್‌ಗೆ ಡ್ರಗ್ಸ್ ಜಾಲದ ನಂಟು ಪ್ರಕರಣ ಸಂಬಂಧ ಹೆಸರು ಕೇಳಿ ಬಂದಿದ್ದ ನಟಿ ಸಂಜನಾ ಗಲ್ರಾನಿ ಮನೆ ಮೇಲೆ ಸಿಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಈ ವೇಳೆ ಅಧಿಕಾರಿಗಳು ಸಂಜನಾಳ ಬಗ್ಗೆ ಅನೇಕ ಮಾಹಿತಿಯನ್ನೂ ಸಹ ಕಲೆ ಹಾಕಿದ್ದಾರೆ.

ಸಂಜನಾ ಮೂಲತಃ ಸಿಂಧಿ ಬೆಡಗಿ. ಈಕೆಯ ಮೂಲ ಹೆಸರು ಅರ್ಚನಾ ಗಲ್ರಾನಿ. ಸೊಗ್ಗಡು ಎಂಬ ತೆಲುಗು ಸಿನಿಮಾದ ಮೂಲಕ ನಟನಾ ವೃತ್ತಿ ಆರಂಭಿಸಿದರು. ಈಕೆ ತನ್ನ 16ನೇ ವಯಸ್ಸಿನಲ್ಲೇ ಗ್ಲಾಮರ್ ಜಗತ್ತಿಗೆ ಕಾಲಿಟ್ಟಿದ್ದರು. ಪಿಯು ಓದುವಾಗಲೇ ಅಡ್ವರ್ಟೈಸಿಂಗ್ ಪ್ರಪಂಚದಲ್ಲಿ ಹೆಸರು ಮಾಡಿದ್ದರು.

ಸುಮಾರು 60ಕ್ಕೂ ಹೆಚ್ಚು ಕಿರುತೆರೆ ಅಡ್ವರ್ಟೈಸಿಂಗ್​ನಲ್ಲಿ ಕಾಣಿಸಿಕೊಂಡಿದ್ದ ಸಂಜನಾ ಓದುತ್ತಲೇ ಮಾಡೆಲಿಂಗ್ ವೃತ್ತಿ ಮುಂದುವರೆಸಿದ್ದರು. ಮರ್ಡರ್ ಚಿತ್ರದಲ್ಲಿ ಮಲ್ಲಿಕಾ ಮಾಡಿದ್ದ ಪಾತ್ರವನ್ನ ಅವರಷ್ಟೇ ಬೋಲ್ಡ್ ಆಗಿ ಸಂಜನಾ ನಿರ್ವಹಿಸಿದ್ರು.
2006 ರಲ್ಲಿ ರಿಲೀಸ್ ಆದ ಈ ಸಿನಿಮಾ ಪಡ್ಡೆ ಹುಡುಗರ ನಿದ್ದೆ ಗೆಡಿಸಿತ್ತು. ಆದಾದ ನಂತರ ಸಂಜನಾಗೆ ಗ್ಲಾಮರ್ ಕಂಟೆಂಟ್ ಇರೋ ಸಿನಿಮಾಗಳೇ ಹೆಚ್ಚು ಸಿಕ್ಕಿದ್ವು. ಆದ್ರೆ ಸಂಜನಾಗೆ ಲೀಡ್ ರೋಲ್​ಗಿಂತ ಹೆಚ್ಚು ಸಿಕ್ಕಿದ್ದು ಸೆಕೆಂಡ್ ಹೀರೋಯಿನ್ ಪಾತ್ರಗಳೇ. ಸಂಜನಾ ಬಹುತೇಕ ಸಿನಿಮಾಗಳಲ್ಲಿ ಒಂದೆರೆಡು ಗ್ಲಾಮರ್ ದೃಶ್ಯ, ಹಾಡುಗಳಿಗೆ ಸೀಮಿತವಾಗ್ತಿದ್ರು ಹಾಗೆ ಐಟಂ ಹಾಡುಗಳಿಗೂ ಸಂಜನಾ ಸೈ ಅಂದ್ರು.

ಕನ್ನಡದ ಮೈಲಾರಿ ಸಿನಿಮಾ “ಮೈಲಾಪುರ ಮೈಲಾರಿ” ಅನ್ನೋ ಹಾಡು ಸಖತ್ ಹಿಟ್ ಆಯ್ತು. ಹಾಗೆ ತೆಲುಗಿನ ಸರ್ದಾರ್ ಗಬ್ಬರ್ ಸಿನಿಮಾದಲ್ಲೂ ಸಹ ಒಂದು ಸಣ್ಣ ರೋಲ್​ನಲ್ಲಿ ಪವನ್ ಜೊತೆ ಸಂಜನಾ ಕಾಣಿಸಿಕೊಂಡಿದ್ದಾರೆ. ಸಂಜನಾ ತನ್ನ ಸಿನಿಮಾಗಿಂತ, ನಟನೆಗಿಂತ, ಕಾಂಟ್ರವರ್ಸಿ ಮೂಲಕವೇ ಸದ್ದು ಮಾಡಿದ ನಟಿ ಗಂಡಹೆಂಡತಿ ಸಿನಿಮಾದಲ್ಲಿ ತನಗೆ ಗೊತ್ತಿಲ್ಲದಂತೆ ತನಗೆ ಏನು ಅರಿವಾಗದ ವಯಸ್ಸಲ್ಲಿ ಹೇಗೆಗೋ ಚಿತ್ರಿಸಿದರು ಎಂಬ ಆರೋಪ ಮಾಡಿದ್ರು. ಒಂದಷ್ಟು ರಾದ್ಧಾಂತ ಮಾಡಿಕೊಂಡಿದ್ರು. ಹಾಗೆ ದಂಡುಪಾಳ್ಯ ಸಿನಿಮಾದಲ್ಲಿ ನ್ಯೂಡ್ ಆಗಿ ತೋರಿಸಿದ್ದಾರೆ ಅಂತ ಆರೋಪ ಮಾಡಿ ರಾದ್ಧಾಂತ ಮಾಡಿಕೊಂಡಿದ್ರು.

ಜಗ್ಗೇಶ್ ಹಾಗೂ ದರ್ಶನ್ ನಟನೆಯ ಅಗ್ರಜ ಸಿನಿಮಾದಲ್ಲೊಂದು ಹಾಟ್ ದೃಶ್ಯದ ವಿಚಾರವಾಗಿಯೂ ಸಂಜನಾ ಮಾಧ್ಯಮದ ಮುಂದೆ ಬಂದಿದ್ರು. ಇನ್ನು ಕಳೆದ ವರ್ಷ ವಂದನಾ ಜೈನ್ ಜೊತೆ ಪಬ್ ಒಂದರಲ್ಲಿ ಜಗಳ ಮಾಡಿಕೊಂಡು ಸಾರ್ವಜನಿಕವಾಗಿ ಕಿತ್ತಾಡಿಕೊಂಡಿದ್ರು‌. ಇನ್ನು ಸಂಜನಾ ಇದುವರೆಗೂ 47 ಕ್ಕೂ ಹೆಚ್ಚು ಸಿನಿಮಾಗಳನ್ನ ಮಾಡಿದ್ದಾರೆ. ಅವರ ಸಂಭಾವನೆ 5 ರಿಂದ 10 ಲಕ್ಷದವರೆಗಿತ್ತು.

ಇದನ್ನೂ ಓದಿ: ಸಂಜನಾದ್ದು ಟೆಂಪಲ್​ ರನ್ನಾ.. ಅಥವಾ ಟೆನ್ಷನ್​ನಲ್ಲಿ ಸಿಟಿ ರೌಂಡ್ಸ್​ ಮಾಡ್ತಿದ್ದಾರಾ?                     

‘ಸ್ಯಾಂಡಲ್​ವುಡ್​ನಲ್ಲಿ ಏನೇ ಕಾಂಟ್ರವರ್ಸಿ ಆದ್ರೂ ನನ್ನ ಹೆಸರು ಬರುತ್ತೆ.. ನನ್ನ ಹಣೆಬರಹ’

  ಇದು ಸಂಜನಾ ಗಲ್ರಾನಿ ಕಿರಿಕ್ ಕಹಾನಿ.. ವೀಕೆಂಡಲ್ಲಿ ಮನೆಯೇ ಪಬ್, ನೈಟ್ ಫುಲ್ ಪಾರ್ಟಿ!

Click on your DTH Provider to Add TV9 Kannada