ಇಂಡಿಯನ್-2 ಸಿನಿಮಾ ಚಿತ್ರೀಕರಣದ ವೇಳೆ ದುರಂತ, ಮೂವರ ದುರ್ಮರಣ

|

Updated on: Feb 20, 2020 | 10:55 AM

ಚೆನ್ನೈ: ಇಂಡಿಯನ್-2 ಸಿನಿಮಾ ಚಿತ್ರೀಕರಣದ ವೇಳೆ ದುರಂತ ಸಂಭವಿಸಿ ಮೂವರು ಮೃತಪಟ್ಟಿರುವ ಘಟನೆ ಇವಿಪಿ ಸ್ಟುಡಿಯೋದಲ್ಲಿ ನಡೆದಿದೆ. ಚಿತ್ರದಲ್ಲಿ ನಟ ಕಮಲ್ ಹಾಸನ್ ಅಭಿನಯಿಸುತ್ತಿದ್ದು, ಶಂಕರ್ ನಿರ್ದೇಶನದಲ್ಲಿ ಮೂಡಿಬರುತ್ತಿರುವ ಚಿತ್ರ ಇದಾಗಿದೆ. ಚೆನ್ನೈನಲ್ಲಿರುವ ಇವಿಪಿ ಫಿಲ್ಮ್ ಸಿಟಿಯಲ್ಲಿ ಬುಧವಾರ ರಾತ್ರಿ ಚಿತ್ರೀಕರಣ ನಡೆಯುತ್ತಿದ್ದ ಸಂದರ್ಭದಲ್ಲಿ ಚಿತ್ರೀಕರಣಕ್ಕೆ ಬಳಸಲಾಗುತ್ತಿದ್ದ ಕ್ರೇನ್​ನಲ್ಲಿ ಲೈಟ್ ವ್ಯವಸ್ಥೆ ಮಾಡುವಾಗ ಕ್ರೇನ್​ ಉರುಳಿ ಬಿದ್ದಿದೆ. ಘಟನೆಯಲ್ಲಿ ಮೂವರು ಸಾವನ್ನಪ್ಪಿದ್ದಾರೆ ಹಾಗೂ 9 ಮಂದಿ ಗಾಯಗೊಂಡಿದ್ದಾರೆ. ಮೃತರನ್ನು ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡ್ತಿದ್ದ ಮಧು, ಕೃಷ್ಣ […]

ಇಂಡಿಯನ್-2 ಸಿನಿಮಾ ಚಿತ್ರೀಕರಣದ ವೇಳೆ ದುರಂತ, ಮೂವರ ದುರ್ಮರಣ
Follow us on

ಚೆನ್ನೈ: ಇಂಡಿಯನ್-2 ಸಿನಿಮಾ ಚಿತ್ರೀಕರಣದ ವೇಳೆ ದುರಂತ ಸಂಭವಿಸಿ ಮೂವರು ಮೃತಪಟ್ಟಿರುವ ಘಟನೆ ಇವಿಪಿ ಸ್ಟುಡಿಯೋದಲ್ಲಿ ನಡೆದಿದೆ. ಚಿತ್ರದಲ್ಲಿ ನಟ ಕಮಲ್ ಹಾಸನ್ ಅಭಿನಯಿಸುತ್ತಿದ್ದು, ಶಂಕರ್ ನಿರ್ದೇಶನದಲ್ಲಿ ಮೂಡಿಬರುತ್ತಿರುವ ಚಿತ್ರ ಇದಾಗಿದೆ.

ಚೆನ್ನೈನಲ್ಲಿರುವ ಇವಿಪಿ ಫಿಲ್ಮ್ ಸಿಟಿಯಲ್ಲಿ ಬುಧವಾರ ರಾತ್ರಿ ಚಿತ್ರೀಕರಣ ನಡೆಯುತ್ತಿದ್ದ ಸಂದರ್ಭದಲ್ಲಿ ಚಿತ್ರೀಕರಣಕ್ಕೆ ಬಳಸಲಾಗುತ್ತಿದ್ದ ಕ್ರೇನ್​ನಲ್ಲಿ ಲೈಟ್ ವ್ಯವಸ್ಥೆ ಮಾಡುವಾಗ ಕ್ರೇನ್​ ಉರುಳಿ ಬಿದ್ದಿದೆ. ಘಟನೆಯಲ್ಲಿ ಮೂವರು ಸಾವನ್ನಪ್ಪಿದ್ದಾರೆ ಹಾಗೂ 9 ಮಂದಿ ಗಾಯಗೊಂಡಿದ್ದಾರೆ.

ಮೃತರನ್ನು ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡ್ತಿದ್ದ ಮಧು, ಕೃಷ್ಣ ಸೆಟ್‌ನಲ್ಲಿದ್ದ ಸಿಬ್ಬಂದಿ ಚಂದ್ರನ್ ಎಂದು ಗುರುತಿಸಲಾಗಿದೆ. ಇನ್ನು ಚಿತ್ರ ನಿರ್ದೇಶಕ ಶಂಕರ್​ ಸೇರಿ ಹತ್ತು ಜನರಿಗೆ ಗಾಯಗಳಾಗಿವೆ. ಗಾಯಾಳುಗಳನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿದೆ. ನಟ ಕಮಲ್‌ಹಾಸನ್ ಮೃತರ ಕುಟುಂಬಕ್ಕೆ ಸಾಂತ್ವನ ಕೋರಿದ್ದು, ಗಾಯಾಳುಗಳು ಬೇಗ ಗುಣಮುಖರಾಗಲೆಂದು ಟ್ವೀಟ್ ಮಾಡಿದ್ದಾರೆ.

Published On - 9:20 am, Thu, 20 February 20