ಕೊರೊನಾ ವೈರಸ್ ಹೆಮ್ಮಾರಿ ಜಗತ್ತನ್ನೇ ನಡುಗಿಸುತ್ತಿದೆ. ಆಫ್ರಿಕಾದಲ್ಲಿನ ಪುಟ್ಟ ಬಡ ರಾಷ್ಟ್ರಗಳಿಂದ ಹಿಡಿದು ಏಷ್ಯಾ, ಯುರೋಪ್, ಅಮೆರಿಕಾದಂಥ ಬಲಿಷ್ಠರು ಕೋವಿಡ್ ಕಪಿಮುಷ್ಠಿಗೆ ಸಿಕ್ಕಿ ಒದ್ದಾಡುತ್ತಿದ್ದಾರೆ. ಆದ್ರೆ ಬಹುತೇಕರಿಗೆ ಗೊತ್ತಿರಲಿಕ್ಕಿಲ್ಲ ಈ ಸಾಂಕ್ರಾಮಿಕ ಹೆಮ್ಮಾರಿ ಬಗ್ಗೆ ಹಾಲಿವುಡ್ ಚಿತ್ರವೊಂದು 2011ರಲ್ಲಿಯೇ ಎಚ್ಚರಿಕೆ ನೀಡಿತ್ತು ಎನ್ನುವುದು. ಹೌದು 2011ರಲ್ಲಿ ತೆರೆ ಕಂಡ Contagion ಹಾಲಿವುಡ್ ಸಿನಿಮಾ Coronavirus ಬಗ್ಗೆ ನೇರವಾಗಿ ಹೇಳದಿದ್ರೂ ಇದೇ ಮಾದರಿಯ ಸಾಂಕ್ರಾಮಿಕ ರೋಗ ಎಲ್ಲೆಡೆ ಹಬ್ಬಿ, ಅದರಿಂದಾಗುವ ಪರಿಣಾಮಗಳನ್ನ ಮನಮುಟ್ಟುವಂತೆ ಅನಾವರಣಗೊಳಿಸಿದೆ.
ಮುನ್ನೆಚ್ಚರಿಕೆಯಾಗಿತ್ತಾ ಚಿತ್ರ?
ವೈಜ್ಞಾನಿಕ ಚಿತ್ರಗಳು ಮತ್ತು ಹಾಲಿವುಡ್
ಹೌದು, 2011ರಲ್ಲಿ ತೆರೆಕಂಡ ಕಂಟೇಜಿಯನ್ ಚಿತ್ರ ಬಹುತೇಕ ಕೊರೊನಾವೈರಸ್‌ನ್ನೇ ಹೋಲುವಂಥ ಸಾಂಕ್ರಾಮಿಕ ರೋಗದ ಬಗ್ಗೆ ಇದೆ. ವೈಜ್ಞಾನಿಕ ಚಿತ್ರಗಳನ್ನು ದೊಡ್ಡ ಪರದೆ ಮೇಲೆ ನೈಜ ರೀತಿಯಲ್ಲಿ ಚಿತ್ರಿಸುವಲ್ಲಿ ಹಾಲಿವುಡ್‌ಗೆ ಹಾಲಿವುಡ್ಡೇ ಸಾಟಿ. ಅತ್ಯಾಧುನಿಕ ತಂತ್ರಜ್ಞಾನ, ಆರ್ಥಿಕ ನೆರವು ಮತ್ತು ಇಡಿ ಜಗತ್ತಿನಾದ್ಯಂತ ಮಾರುಕಟ್ಟೆ ಹೊಂದಿರುವ ಹಾಲಿವುಡ್, ಸೈನ್ಸ್ ಫಿಕ್ಷನ್ ಚಿತ್ರಗಳನ್ನ ವೀಕ್ಷಕರಿಗೆ ನೈಜವಾಗಿ ಉಣಬಡಿಸುವಲ್ಲಿ ಎತ್ತಿದ ಕೈ. ಇದಕ್ಕೆ ಉದಾಹರಣೆಗಳೆಂದರೆ ಸ್ಟೀವನ್ ಸ್ಪಿಲ್‌ಬರ್ಗ್ ‘ಈಟಿ’, ರಿಚರ್ಡ್ ಅಟೆನ್‌ಬರ್ಗ್‌ರ, ‘ಜುರಾಸಿಕ್ ಪಾರ್ಕ್’, ‘ಔಟ್ ಬ್ರೇಕ್’ ಮತ್ತು ‘ಡೇ ಆಫ್ಟರ್ ಟೂಮಾರೋ’ ಅಂತಹ ಅದ್ಭುತ ಚಿತ್ರಗಳು.
ಕೊರೊನಾದಂಥದ್ದೇ ಕತೆ ಹೊಂದಿರುವ ಕಂಟೇಜಿಯನ್ ಚಿತ್ರ
ಬೆತ್ ಎಮ್‌ಹಾಫ್ ಎನ್ನವ ಮಲ್ಟಿನ್ಯಾಶನಲ್ ಕಂಪನಿ ಉದ್ಯೋಗಿ ಹಾಂಕಾಂಗ್‌ನಿಂದ ಅಮೆರಿಕದ ತನ್ನ ಊರು ಮಿನಿಯಾಪೊಲಿಸ್‌ಗೆ ಹಿಂದಿರುಗುವುದರೊಂದಿಗೆ ಕಥೆ ಮತ್ತು ಸಾಂಕ್ರಾಮಿಕ ವೈರಸ್ ಅನಾವರಣಗೊಳ್ಳುತ್ತಾ ಹೋಗುತ್ತದೆ. ಕೆಲ ದಿನಗಳಲ್ಲಿಯೇ ಆಕೆ ವೈರಸ್‌ನಿಂದ ಸಾಯುವುದಲ್ಲದೇ ಆಕೆಯ ಸಂಪರ್ಕಕ್ಕೆ ಬಂದ ಎಲ್ಲರೂ ಸಾವನ್ನಪ್ಪುತ್ತಾರೆ. ಆದ್ರೆ ಆಕೆಯ ಗಂಡ ಮಾತ್ರ ಯಾವುದೇ ತೊಂದರೆಯಾಗದೇ ಆರಾಮವಾಗಿರುತ್ತಾನೆ. ಯಾಕಂದ್ರೆ ಆತನ ರೋಗ ನಿರೋಧಕ ಶಕ್ತಿ ವೈರಸ್‌ಗಿಂತ ಬಲಿಷ್ಟವಾಗಿರುತ್ತೆ.
ವೈರಸ್ ಭಯಾನಕತೆಗಳ ಅನಾವರಣ
ಹೀಗೆ ವೈರಸ್ ಜಗತ್ತಿನಾದ್ಯಂತ ತನ್ನ ರುದ್ರನರ್ತನವನ್ನ ಆರಂಭಿಸುತ್ತಿದ್ದಂತೆ ವಿಶ್ವ ಆರೋಗ್ಯ ಸಂಸ್ಥೆ ಮತ್ತು ಅಮೆರಿಕದ ಸಾಂಕ್ರಾಮಿಕ ರೋಗ ತಡೆ ಮತ್ತು ನಿರೋಧಕ ಸಂಸ್ಥೆ ರೋಗದ ಪತ್ತೆ ಮತ್ತು ಅದನ್ನು ತಡೆಯಬಹುದಾದ ಸಾಧ್ಯತೆಗಳ ಕುರಿತು ತನಿಖೆ ಮತ್ತು ಚಿಕಿತ್ಸೆ ಕುರಿತು ತಲೆಬಿಸಿಮಾಡಿಕೊಳ್ಳಲಾರಂಭಿಸುತ್ತವೆ. ನುರಿತ ತಜ್ಞರನ್ನ ವೈರಸ್‌ನ ಮೂಲ ಸ್ಥಳಕ್ಕೆ ತನಿಖೆಗೆ ಕಳಿಸಿದ್ರೆ, ಇನ್ನುಳಿದವರು ಅದನ್ನು ತಡೆಯುವ ನಿಟ್ಟಿನಲ್ಲಿ ಕಾರ್ಯೋನ್ಮುಖರಾಗುತ್ತಾರೆ. ಇನ್ನು ಕೆಲವರು ಈ ಭಯಂಕರ ಹೆಮ್ಮಾರಿಗೆ ಔಷಧ ಕಂಡು ಹಿಡಿಯುವ ಪ್ರಯತ್ನದಲ್ಲಿ ತೊಡಗುತ್ತಾರೆ.
ವೈದ್ಯರು ಮತ್ತು ವಿಜ್ಞಾನಿಗಳ ಹೋರಾಟದ ಅನಾವರಣ
ಈ ಪ್ರಯತ್ನದಲ್ಲಿ ಕೆಲವರು ವೈರಸ್‌ನಿಂದಾಗಿಯೇ ಪ್ರಾಣ ತೆತ್ತರೆ, ಕೆಲ ಅವಕಾಶವಾದಿಗಳು ಮುಗ್ಧ ಜನತೆಯ ದಾರಿ ತಪ್ಪಿಸಿ ಹೆಸರು ಮತ್ತು ಹಣ ಗಳಿಸಲು ತಪ್ಪು ಮಾಹಿತಿ ಹರುಡುತ್ತಾರೆ. ಮತ್ತೊಂದೆೆಡೆ ಸತತ ಪ್ರಯತ್ನಗಳ ನಂತರ ತಜ್ಞರು ಎಂಇವಿ-1 ವೈರಸ್‌ಗೆ ಔಷಧಿಯನ್ನ ಕಂಡುಹಿಡಿಯುತ್ತಾರೆ. ಅದಕ್ಕಾಗಿ ಒಬ್ಬ ವೈದ್ಯ ವಿಜ್ಞಾನಿ ತನ್ನ ಮೇಲೆಯೇ ಔಷಧಿಯನ್ನ ಪ್ರಯೋಗಿಸಿಕೊಳ್ಳುತ್ತಾಳೆ.
ಮಾನವನ ದೌರ್ಬಲ್ಯ ಮತ್ತು ಹಣದ ದಾಹದ ಅನಾವರಣ
-ಗುರು
Published On - 5:27 pm, Thu, 25 June 20