AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಹೆಗ್ಗಣ ಮುದ್ದು’ ನನ್ನ ಕೊನೇ ಸಿನಿಮಾ ಆಗಬಹುದು; ನಿರ್ಮಾಣದ ಬಗ್ಗೆ ಡಾಲಿ ಬೇಸರ

ಡಾಲಿ ಧನಂಜಯ ಅವರು ನಟನಾಗಿ ಮಾತ್ರವಲ್ಲದೇ ನಿರ್ಮಾಪಕನಾಗಿಯೂ ಚಿತ್ರರಂಗದಲ್ಲಿ ಆ್ಯಕ್ಟೀವ್ ಆಗಿದ್ದಾರೆ. ಆದರೆ ತಮ್ಮ ನಿರ್ಮಾಣದಲ್ಲಿ ‘ಹೆಗ್ಗಣ ಮುದ್ದು’ ಕೊನೆಯ ಸಿನಿಮಾ ಆಗಬಹುದು ಎಂದು ಅವರು ಹೇಳಿದ್ದಾರೆ. ಅದಕ್ಕೆ ಕಾರಣ ಏನು ಎಂಬುದನ್ನು ಕೂಡ ವಿವರಿಸಿದ್ದಾರೆ. ಚಿತ್ರರಂಗದಲ್ಲಿ ಇರುವ ನೆಗೆಟಿವ್ ಪ್ರಚಾರದ ಬಗ್ಗೆ ಅವರು ಬೇಸರ ವ್ಯಕ್ತಪಡಿಸಿದ್ದಾರೆ.

‘ಹೆಗ್ಗಣ ಮುದ್ದು’ ನನ್ನ ಕೊನೇ ಸಿನಿಮಾ ಆಗಬಹುದು; ನಿರ್ಮಾಣದ ಬಗ್ಗೆ ಡಾಲಿ ಬೇಸರ
Daali Dhananjaya
ಮದನ್​ ಕುಮಾರ್​
|

Updated on: Jul 16, 2026 | 6:39 PM

Share

ಮುಖ್ಯಾಂಶಗಳು

  • ಸಿನಿಮಾ ನಿರ್ಮಾಣ ನಿಲ್ಲಿಸುವ ಸೂಚನೆ ನೀಡಿದ ಡಾಲಿ ಧನಂಜಯ.
  • ‘ಮದರ್ ಪ್ರಾಮಿಸ್’ ಚಿತ್ರಕ್ಕೆ ನೆಗೆಟಿವ್ ಪ್ರಚಾರ ಆಗಿದ್ದಕ್ಕೆ ಡಾಲಿ ಬೇಸರ.
  • ಇನ್ಮುಂದೆ ನಟನೆ ಬಗ್ಗೆ ಹೆಚ್ಚು ಗಮನ ಹರಿಸುವ ಬಗ್ಗೆ ಧನಂಜಯ ನಿರ್ಧಾರ.

‘ಮದರ್ ಪ್ರಾಮಿಸ್’ (Mother Promise) ಸಿನಿಮಾದ ಸುದ್ದಿಗೋಷ್ಠಿಯಲ್ಲಿ ನಟ, ನಿರ್ಮಾಪಕ ಡಾಲಿ ಧನಂಜಯ ಅವರು ಮಾತನಾಡಿದ್ದಾರೆ. ‘ನಾನು 2021ರಲ್ಲಿ ಬಡವ ರಾಸ್ಕಲ್ ಸಿನಿಮಾ ಮೂಲಕ ನಿರ್ಮಾಪಕನಾಗಿ ಗೆಲುವು ನೋಡಿದವನು. ಅಲ್ಲಿಯವರೆಗೂ ಏನು ಕೊಡುತ್ತಾರೋ ಅದನ್ನು ಇಸ್ಕೊಂಡು ಕೆಲಸ ಮಾಡಿದವನು. ಇವತ್ತು 2026. ಎಷ್ಟೋ ಜನರ ಜೊತೆ ಕೆಲಸ ಮಾಡಿ, ಎಷ್ಟೋ ಪ್ರಯತ್ನ ಮಾಡಿದ್ದೇನೆ. ನಿರ್ಮಾಪಕನಾಗಿ ಬಡವ ರಾಸ್ಕಲ್, ಹೆಡ್ ಬುಷ್, ವಿದ್ಯಾಪತಿ, ಟಗರು ಪಲ್ಯ, ಜೆಸಿ, ಮದರ್ ಪ್ರಾಮಿಸ್ ಮಾಡಿದ್ದೇನೆ. ಮುಂದೆ ‘ಹೆಗ್ಗಣ ಮುದ್ದು’ (Heggana Muddu) ಸಿನಿಮಾ ಇದೆ. ನನ್ನ ನಿರ್ಮಾಣದಲ್ಲಿ ಅದೇ ಕೊನೆಯ ಸಿನಿಮಾ ಆಗಬಹುದು’ ಎಂದು ಡಾಲಿ ಧನಂಜಯ (Daali Dhananjaya) ಹೇಳಿದ್ದಾರೆ.

ನಟನಾಗಿ ಎಂಜಾಯ್ ಮಾಡಬೇಕು:

‘ನನಗೆ ಸುಸ್ತಾಗುತ್ತದೆ. ನಾನು ನಟನಾಗಿ ಜೀವನವನ್ನು ಎಂಜಾಯ್ ಮಾಡಬೇಕು. ಬರೀ ಇದೇ ಕೆಲಸ ಮಾಡಿಕೊಂಡು ಇರೋಕೆ ಆಗಲ್ಲ. ಯಾರೋ ಏನೋ ಪ್ರಯತ್ನ ಮಾಡುತ್ತಿರುವಾಗ ಅದಕ್ಕೆ ತೊಂದರೆ ಕೊಡಬಾರದು ಎಂಬ ಮನಸ್ಥಿತಿ ಬೇಕು. ಸಿನಿಮಾ, ಸಾಹಿತ್ಯ, ನಾಟಕ ಇವೆಲ್ಲವೂ ಕನ್ನಡವನ್ನು ಕಟ್ಟುವ ಕೆಲಸಗಳೇ. ಅದರಲ್ಲಿ ಪ್ರತಿಯೊಬ್ಬ ಕಲಾವಿದ ಕೂಡ ಮುಖ್ಯ ಆಗುತ್ತಾರೆ’ ಎಂದಿದ್ದಾರೆ ಡಾಲಿ ಧನಂಜಯ.

‘ಮದರ್ ಪ್ರಾಮಿಸ್ ಸಿನಿಮಾದಲ್ಲಿ ಅನೇಕ ಹೊಸಬರು ಕೆಲಸ ಮಾಡಿ, ಮನರಂಜನೆ ನೀಡಿದ್ದಾರೆ. ಯಾರಿಗಾದರೂ ಈ ಚಿತ್ರದ ಬಗ್ಗೆ ಸಮಸ್ಯೆ ಇದ್ದರೆ 50 ಜನರು ಇರುವ ಕಡೆ ಕುಳಿತುಕೊಂಡು ಅನುಭವ ಪಡೆಯಿರಿ. ಪ್ರೇಕ್ಷಕರು ನಗಲಿಲ್ಲ ಎಂದರೆ ಸಿನಿಮಾ ಚೆನ್ನಾಗಿಲ್ಲ ಅಂತ ನಾನು ಒಪ್ಪಿಕೊಳ್ಳುತ್ತೇನೆ. ಏನಾದರೂ ಮಾಡಿದಾಗ ಪಾಸಿಟಿವ್ ಆಗಿ ಜೊತೆಯಲ್ಲಿ ನಿಂತುಕೊಳ್ಳಬೇಕು. ಪ್ರತಿ ಬಾರಿ ಅದನ್ನು ಬೇರೆ ಕಡೆಗೆ ತೆಗೆದುಕೊಂಡು ಹೋಗುವುದರಲ್ಲಿ ಅರ್ಥ ಇಲ್ಲ’ ಎಂದು ಡಾಲಿ ಹೇಳಿದ್ದಾರೆ.

ನಿರ್ಮಾಣ ಎಂದರೆ ಸುಲಭ ಅಲ್ಲ:

‘ಇದರ ಬಗ್ಗೆ ನಾನು ದೂಷಣೆ ಮಾಡುತ್ತಿಲ್ಲ. ಇದರಿಂದ ನನಗೆ ಏನೂ ಆಗಬೇಕಾಗಿಲ್ಲ. ನಟನಾಗಿ ಒಳ್ಳೆಯ ಸಿನಿಮಾಗಳನ್ನು ಮಾಡಬೇಕು. ಅಷ್ಟೇ ನನ್ನ ಕೆಲಸ. ಉಳಿದೆಲ್ಲವೂ ನನಗೆ ಹೆಚ್ಚುವರಿ. ಏನೋ ಕೊಡುಗೆ ನೀಡಬೇಕು ಅಂತ ನಾನು ಪ್ರಯತ್ನಿಸುತ್ತಿದ್ದೇನೆ. ಅದನ್ನು ಮೆಚ್ಚಿಕೊಳ್ಳುವುದು ಬಿಟ್ಟು ಬೇರೆ ಕಡೆ ತಿರುಗಿಸುವುದರಿಂದ ಅದು ಯಾರನ್ನೂ ಎಲ್ಲಿಗೂ ಕರೆದುಕೊಂಡು ಹೋಗಲ್ಲ. ನಿರ್ಮಾಣ ಎಂದರೆ ಸುಲಭ ಅಲ್ಲ’ ಎಂಬುದು ಡಾಲಿ ಧನಂಜಯ ಅಭಿಪ್ರಾಯ.

ಇದನ್ನೂ ಓದಿ: ‘ಮದರ್ ಪ್ರಾಮಿಸ್’ ಸಿನಿಮಾ ಬಗ್ಗೆ ನೆಗೆಟಿವ್ ಪ್ರಚಾರ, ಡಾಲಿ ಬೇಸರ

‘ಪ್ರತಿ ಬಾರಿ ನಾನೊಬ್ಬನೆ ಇರುತ್ತೇನೆ. ಈ ಬಾರಿ ನನ್ನ ಫ್ರೆಂಡ್ ಹರ್ಷ ಬಂದಿದ್ದಾನೆ. ಪ್ರತಿ ಸಲ ದುಡ್ಡು ಹೊಂದಿಸಿಕೊಂಡು ಬಂದು, ಅದೇ ಉತ್ಸಾಹದಲ್ಲಿ ಸಿನಿಮಾ ಮಾಡುವುದು ಅಷ್ಟು ಸುಲಭವಲ್ಲ. ಒಳ್ಳೆಯ ಸಿನಿಮಾ ಮಾಡಿದಾಗ, ಅದಕ್ಕೆ ಒಳ್ಳೆಯ ಅಭಿಪ್ರಾಯ ಸಿಕ್ಕಾಗ ಅದನ್ನು ಪ್ರಸಾರ ಮಾಡಬೇಕು. ಈ ಹಿಂದೆ ಕೂಡ ನಮ್ಮ ಸಿನಿಮಾಗೆ ನೆಗೆಟಿವ್ ವಿಮರ್ಶೆ ಬಂದಿತ್ತು. ಆದರೆ ಜನರು ಚಿತ್ರಮಂದಿರಕ್ಕೆ ನುಗ್ಗಿದ್ದಾಗ ಇದು ಯಾವುದೂ ನಮಗೆ ಮುಖ್ಯವಾಗಿರಲಿಲ್ಲ. ಬಡವ ರಾಸ್ಕಲ್, ಟಗರು ಪಲ್ಯ ಸಿನಿಮಾಗಳಿಗೂ ನೆಗೆಟಿವ್ ಮಾಡಿದ್ದರು. ಆದರೆ ಆ ಸಿನಿಮಾಗಳು ಹಿಟ್ ಆದವು’ ಎಂದಿದ್ದಾರೆ ಡಾಲಿ ಧನಂಜಯ.

ಮದರ್ ಪ್ರಾಮಿಸ್ ಚಿತ್ರದಿಂದ ಲಾಸ್ ಆಗಿಲ್ಲ:

‘ಮದರ್ ಪ್ರಾಮಿಸ್ ಸಿನಿಮಾ ಉತ್ತಮ ಪ್ರದರ್ಶನ ಕಂಡಿದೆ. ನಮಗೆ ಇನ್ನೂ ಚೆನ್ನಾಗಿ ಆಗಬೇಕು. ಖಂಡಿತವಾಗಿಯೂ ಲಾಸ್ ಆಗಲ್ಲ. ಮೊದಲ ವಾರದಲ್ಲಿಯೇ ಕಲೆಕ್ಷನ್ ಚೆನ್ನಾಗಿ ಆಗಿದೆ. ನಾವು ಚೆನ್ನಾಗಿ ಪ್ಲ್ಯಾನ್ ಮಾಡಿಕೊಂಡು ಸಿನಿಮಾ ಮಾಡಿದ್ದೇವೆ. ಒಂದು ವೇಳೆ ಲಾಸ್ ಅಂತ ಏನಾದರೂ ಆದರೆ ನನಗೆ ಸಂಭಾವನೆ ಸಿಗಲ್ಲ ಅಷ್ಟೇ. ಅದು ಬಿಟ್ಟರೆ ಇನ್ನು ಏನೂ ಲಾಸ್ ಆಗಲ್ಲ’ ಎಂದು ಡಾಲಿ ಧನಂಜಯ ಅವರು ಹೇಳಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Follow Us
ಮದನ್​ ಕುಮಾರ್​
ಮದನ್​ ಕುಮಾರ್​

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More
ಸೌಜನ್ಯ ಕೇಸ್ ತನಿಖಾಧಿಕಾರಿ ಖಡಕ್ ಆಫೀಸರ್ ಲೋಕೇಶ್ ಜಗಲ್ಸಾರ್ ಹಿನ್ನೆಲೆ
ಸೌಜನ್ಯ ಕೇಸ್ ತನಿಖಾಧಿಕಾರಿ ಖಡಕ್ ಆಫೀಸರ್ ಲೋಕೇಶ್ ಜಗಲ್ಸಾರ್ ಹಿನ್ನೆಲೆ
ಎಸ್‌ಐಆರ್ ವಿವಾದ; ಎಫ್‌ಐಆರ್‌ಗಳು ನನಗೆ ಪದಕಗಳಿದ್ದಂತೆ ಎಂದ ರಾಹುಲ್ ಗಾಂಧಿ
ಎಸ್‌ಐಆರ್ ವಿವಾದ; ಎಫ್‌ಐಆರ್‌ಗಳು ನನಗೆ ಪದಕಗಳಿದ್ದಂತೆ ಎಂದ ರಾಹುಲ್ ಗಾಂಧಿ
ಮುಸ್ಲಿಂ ಮತದಾರರ ಹೆಸರು ಡಿಲೀಟ್ ಆರೋಪ
ಮುಸ್ಲಿಂ ಮತದಾರರ ಹೆಸರು ಡಿಲೀಟ್ ಆರೋಪ
ಡೀಸೆಲ್​ ಟ್ಯಾಂಕರ್​​ನಲ್ಲಿ ತಾಂತ್ರಿಕ ದೋಷ, ಬಸ್​ ಸಂಚಾರ ಸ್ಥಗಿತ
ಡೀಸೆಲ್​ ಟ್ಯಾಂಕರ್​​ನಲ್ಲಿ ತಾಂತ್ರಿಕ ದೋಷ, ಬಸ್​ ಸಂಚಾರ ಸ್ಥಗಿತ
ಮಂತ್ರಿಗಳ ಮೇಲೆ ರಹಸ್ಯ ಕ್ಯಾಮೆರಾ ಕಣ್ಣು: ಸಚಿವರನ್ನ ಎಚ್ಚರಿಸಿದ ಡಿಕೆಶಿ
ಮಂತ್ರಿಗಳ ಮೇಲೆ ರಹಸ್ಯ ಕ್ಯಾಮೆರಾ ಕಣ್ಣು: ಸಚಿವರನ್ನ ಎಚ್ಚರಿಸಿದ ಡಿಕೆಶಿ
'ಸಿಎಂ ಆಗಲು ಸಿದ್ದರಾಮಯ್ಯ ವಿರುದ್ಧ ಡಿಕೆಶಿ ಸ್ಟಿಂಗ್ ಆಪರೇಷನ್ ಮಾಡಿದ್ದರು'
'ಸಿಎಂ ಆಗಲು ಸಿದ್ದರಾಮಯ್ಯ ವಿರುದ್ಧ ಡಿಕೆಶಿ ಸ್ಟಿಂಗ್ ಆಪರೇಷನ್ ಮಾಡಿದ್ದರು'
ಕಬ್ಬು ಬೆಳೆಗಾರರ ಮೀಟಿಂಗ್‌ ಬಗ್ಗೆ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಹೀಗಂದ್ರು
ಕಬ್ಬು ಬೆಳೆಗಾರರ ಮೀಟಿಂಗ್‌ ಬಗ್ಗೆ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಹೀಗಂದ್ರು
ಸಾರಿಗೆ ನೌಕರರಿಂದ ಮತ್ತೆ ಪ್ರತಿಭಟನೆ: ವೇತನ ಪರಿಷ್ಕರಣೆಗೆ ಆಗ್ರಹ
ಸಾರಿಗೆ ನೌಕರರಿಂದ ಮತ್ತೆ ಪ್ರತಿಭಟನೆ: ವೇತನ ಪರಿಷ್ಕರಣೆಗೆ ಆಗ್ರಹ
ಮೈಸೂರು: ಚಾಮುಂಡೇಶ್ವರಿ ದರ್ಶನ ಪಡೆದ ತೆಲುಗು ನಟ ಮಂಚು ಮನೋಜ್
ಮೈಸೂರು: ಚಾಮುಂಡೇಶ್ವರಿ ದರ್ಶನ ಪಡೆದ ತೆಲುಗು ನಟ ಮಂಚು ಮನೋಜ್
ಗಾಲ್ಫ್​​ನಲ್ಲಿ ಚಿನ್ನದ ಪದಕ ವಿಜೇತೆ ಪ್ರಣವಿ​ಗೆ ಅದ್ದೂರಿ ಸ್ವಾಗತ
ಗಾಲ್ಫ್​​ನಲ್ಲಿ ಚಿನ್ನದ ಪದಕ ವಿಜೇತೆ ಪ್ರಣವಿ​ಗೆ ಅದ್ದೂರಿ ಸ್ವಾಗತ