ದರ್ಶನ್ ಹಾಗೂ ಉಮಾಪತಿ ಶ್ರೀನಿವಾಸ್​ಗೌಡ ಪ್ರಕರಣ ಸುಖಾಂತ್ಯದತ್ತ?

| Updated By: shivaprasad.hs

Updated on: Jul 13, 2021 | 2:37 PM

Darshan - Umapati Srinivas Gowda: ದರ್ಶನ್ ಹಾಗೂ ಉಮಾಪತಿ ಶ್ರೀನಿವಾಸ್​ಗೌಡ ಅವರ ಪ್ರಕರಣ ಸುಖಾಂತ್ಯವಾಗುವ ಸುಳಿವು ಲಭ್ಯವಾಗಿದೆ. ಈ ಕುರಿತು ಇಬ್ಬರೂ ಹೇಳಿಕೆಗಳನ್ನು ನೀಡಿದ್ದಾರೆ.

ದರ್ಶನ್ ಹಾಗೂ ಉಮಾಪತಿ ಶ್ರೀನಿವಾಸ್ ಗೌಡ ಪ್ರಕರಣವು ಸುಖಾಂತ್ಯವಾಗುವ ಸುಳಿವು ಲಭ್ಯವಾಗಿದೆ. ಈ ಕುರಿತು ಮಾಧ್ಯಗಳಿಗೆ ಪ್ರತಿಕ್ರಿಯಿಸಿರುವ ದರ್ಶನ್ ಈ ಪ್ರಕರಣವನ್ನು ಇಲ್ಲಿಗೆ ನಿಲ್ಲಿಸೋಣ ಎಂದಿದ್ದಾರೆ. ಉಮಾಪತಿಯವರು ನನ್ನ ನಿರ್ಮಾಪಕರು. ಅವರ ವಿರುದ್ಧ ನಾನೆಂದಿಗೂ ಮಾತನಾಡುವುದಿಲ್ಲ. ಅವರನ್ನು ಎಂದಿಗೂ ಬಿಟ್ಟುಕೊಡುವುದಿಲ್ಲ ಎಂದು ದರ್ಶನ್ ಪ್ರತಿಕ್ರಿಯಿಸಿದ್ದಾರೆ. ಹಾಗೆಯೇ ಇದನ್ನು ಕುಳಿತು ಚರ್ಚಿಸುತ್ತೇವೆ ಎಂದೂ ಅವರು ತಿಳಿಸಿದ್ದಾರೆ.

ಅರುಣಾ ಅವರ ಆರೋಪಕ್ಕೆ ಕುರಿತಂತೆ ಪ್ರತಿಕ್ರಿಯಿಸಿದ ದರ್ಶನ್ ಎರಡು- ಮೂರು ದಿನಗಳಿಂದ ನಡೆಯುತ್ತಿರುವ ಈ ಪ್ರಕರಣದಿಂದ ರೋಸಿ ಹೋಗಿದ್ದೇನೆ. ಎಲ್ಲರೂ ಇದನ್ನು ಬಿಟ್ಟುಬಿಡಿ. ಈ ಕೇಸನ್ನು ನ್ಯಾಯಾಲಕ್ಕೆ ಹಾಕಿದರೂ ಇದು ನಿಲ್ಲುವುದಿಲ್ಲ. ಹಾಗಿರುವಾಗ ಇದನ್ನೇ ಗುದ್ದಾಡಿ ಪ್ರಯೋಜನವಿಲ್ಲ. ವಂಚನೆಯ ಮೂಲದ ಬಗ್ಗೆ ತಿಳಿದುಕೊಳ್ಳಬೇಕೆಂದು ಅದರ ಕುರಿತು ಗಮನಹರಿಸಿದೆವು ಅಷ್ಟೇ ಎಂದು ಅವರು ಸ್ಪಷ್ಟನೆ ನೀಡಿದ್ದಾರೆ.

ಈ ಪ್ರಕರಣವನ್ನು ಇಲ್ಲಿಗೆ ಸುಖಾಂತ್ಯ ಮಾಡೋಣ: ಉಮಾಪತಿ

ನಟ ದರ್ಶನ್​ ಏನು ಹೇಳುತ್ತಾರೋ ಅದೇ ಫೈನಲ್. ನಟ ದರ್ಶನ್ ಜೊತೆ ನಾನು ಸದಾ ಕಾಲ ಇರುತ್ತೇನೆ ಎಂದು ಟಿವಿ9ಗೆ ಉಮಾಪತಿ ಶ್ರೀನಿವಾಸ ಗೌಡ ಪ್ರತಿಕ್ರಿಯೆ ನೀಡಿದ್ದಾರೆ. ದರ್ಶನ್ ಜೊತೆ ಇಂದು ಮಾತನಾಡಿದ್ದೇನೆ. ನಾವು ಸದಾ ಒಂದಾಗಿರುತ್ತೇವೆ. ಈ ಪ್ರಕರಣವನ್ನು ಇಲ್ಲಿಗೆ ಸುಖಾಂತ್ಯ ಮಾಡೋಣ ಎಂದು ಅವರು ಪ್ರತಿಕ್ರಿಯೆ ನೀಡಿದ್ದಾರೆ.

ಇದನ್ನೂ ಓದಿ: ಈ ಪ್ರಕರಣದಲ್ಲಿ ಯಾರೋ ನನ್ನನ್ನು ಸಿಲುಕಿಸೋಕೆ ಪ್ರಯತ್ನ ಮಾಡುತ್ತಿದ್ದಾರೆ: ಉಮಾಪತಿ ಶ್ರೀನಿವಾಸ್​ ಗೌಡ

Published On - 1:45 pm, Tue, 13 July 21

Follow us on