ಯಾಕೋ ಸದ್ಯದ ಮಟ್ಟಿಗೆ ದೀಪಿಕಾ ಪಡುಕೋಣೆ ಟೈಂ ಸರಿಯಾಗಿಲ್ಲ ಅಂತಾ ಕಾಣುತ್ತೆ. ಆ ಕಡೆ ಬಹುನಿರೀಕ್ಷಿತ ಚಿತ್ರ ‘ಛಪಾಕ್’ ಮಕಾಡೆ ಮಲಗಿದ್ರೆ, ಇನ್ನೊಂದ್ಕಡೆ ಅದೇ ಸಿನಿಮಾದ ಪ್ರಮೋಷನ್ ಮಾಡೋಕೆ ಹೋಗಿ ಡಿಪ್ಪಿ ಎಡವಟ್ಟು ಮಾಡ್ಕೊಂಡಿದ್ದಾಳೆ. ಈ ಬಗ್ಗೆ ಸೋಷಿಯಲ್ ಮೀಡಿಯಾಗಳಲ್ಲಿ ದೀಪಿಕಾ ವಿರುದ್ಧ ಭಾರಿ ಆಕ್ರೋಶ ವ್ಯಕ್ತವಾಗುತ್ತಿದೆ.
ಸ್ಯಾಂಡಲ್ವುಡ್ನ ಐಶ್ವರ್ಯ, ಬಾಲಿವುಡ್ನ ಪದ್ಮಾವತಿ ದೀಪಿಕಾ ಪಡುಕೋಣೆಗೆ ಒಂದಾದ ನಂತರ ಒಂದು ಸಮಸ್ಯೆಗಳು ಎದುರಾಗ್ತಿವೆ. ಅದ್ಯಾವಾಗ ಜೆಎನ್ಯು ಹೋರಾಟ ನಡೆಯುತ್ತಿದ್ದ ಜಾಗಕ್ಕೆ ದೀಪಿಕಾ ಹೋಗಿ ಬಂದ್ರೋ, ಆಹೊತ್ತಿನಿಂದ ಇಲ್ಲಿಯವರೆಗೆ ದೀಪಿಕಾಗೆ ನೆಮ್ಮದಿಯೇ ಇಲ್ಲ. ಆಕಡೆ ‘ಛಪಾಕ್’ ಸಿನಿಮಾ ಮಕಾಡೆ ಮಲಗಿದೆ. ಇನ್ನು ಇದೇ ‘ಛಪಾಕ್’ ಚಿತ್ರಕ್ಕಾಗಿ ಪ್ರಮೋಷನ್ ಮಾಡಲು ಹೋಗಿ ದೀಪಿಕಾ ಎಡವಿದ್ದಾರೆ.
ಪ್ರಚಾರದ ಅಬ್ಬರದಲ್ಲಿ ದೀಪಿಕಾ ಎಡವಟ್ಟು!
ದೀಪಿಕಾ ಸಿನಿ ಭವಿಷ್ಯದ ಮೇಲೆ ವ್ಯತಿರಿಕ್ತ ಪರಿಣಾಮ?
ಒಟ್ನಲ್ಲಿ ದೀಪಿಕಾ ಏನೋ ಮಾಡಲು ಹೋಗಿ ಏನೋ ಮಾಡ್ಕೊಂಡಿದ್ದಾರೆ. ಪ್ರಮೋಷನ್ನಲ್ಲಿ ಮಾಡಿಕೊಂಡ ಯಡವಟ್ಟು ಮತ್ತೊಂದು ಎಫೆಕ್ಟ್ ಕೊಡುತ್ತಿದೆ. ಆದರೆ ಇದನ್ನೆಲ್ಲಾ ದೀಪಿಕಾ ಭವಿಷ್ಯದಲ್ಲಿ ಹೇಗೆ ಫೇಸ್ ಮಾಡುತ್ತಾರೆ ಅನ್ನೋದನ್ನ ಮುಂದಿನ ದಿನಗಳಲ್ಲಿ ಕಾದು ನೋಡಬೇಕಿದೆ.