ಬೆಂಗಳೂರು: ಅದ್ದೂರಿಯಾಗಿ ಮದುವೆ ಮಾಡ್ಕೋಬೇಕು ಎಂದು ಕನಸು ಕಂಡಿದ್ದ ಎಷ್ಟೋ ಮಂದಿಯ ಕನಸು ಹೆಮ್ಮಾರಿ ಕೊರೊನಾ ವೈರಸ್ನಿಂದಾಗಿ ನುಚ್ಚುನೂರಾಗಿದೆ. ಆದರೆ ಮ್ಯಾರೇಜ್ ಆರ್ ಮೇಡ್ ಇನ್ ಹೆವೆನ್ ಅನ್ನೋ ರೀತಿ ಲಾಕ್ಡೌನ್ ನಡುವೆಯೂ ಮದುವೆ ಕಾರ್ಯಗಳು ನಡೆಯುತ್ತಿವೆ.
ಇದಕ್ಕೆ ಸಾಕ್ಷಿಯಾಗಿ ಇಂದು ಅಂಬಾರಿ, ಅದ್ದೂರಿ, ರಾಟೆ, ಐರಾವತ ಮತ್ತು ಕಿಸ್ ಚಿತ್ರಗಳ ನಿರ್ದೇಶಕ ಎ.ಪಿ ಅರ್ಜುನ್ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಅನ್ನಪೂರ್ಣ ಅವರ ಜೊತೆ ಮನೆಯಂಗಳದಲ್ಲೇ ಸಿಂಪಲ್ಲಾಗಿ ಸಪ್ತಪದಿ ತುಳಿದಿದ್ದಾರೆ. ಲಾಕ್ಡೌನ್ ಹಿನ್ನೆಲೆಯಲ್ಲಿ ಸ್ಯಾಂಡಲ್ವುಡ್ ಬಹುತೇಕ ಕಲಾವಿದರು ಭಾಗಿಯಾಲು ಸಾಧ್ಯವಾಗಿಲ್ಲದಿದ್ದರೂ ಧ್ರುವ ಸರ್ಜಾ, ಹರಿಸಂತು, ಕಿಸ್ ಚಿತ್ರದ ನಾಯಕ ವಿರಾಟ್ ಸೇರಿದಂತೆ ಅರ್ಜುನ್ ಆಪ್ತ ಗೆಳೆಯರ ಬಳಗ ವಿವಾಹದಲ್ಲಿ ಭಾಗಿಯಾಗಿದ್ದರು.
Published On - 11:10 am, Sun, 10 May 20