ತಾವೇ ಮುಂದೆ ನಿಂತು ತಾಯಿ ಸಮಾಧಿ ಕಟ್ಟಿಸಿದ ದುನಿಯಾ ವಿಜಯ್

ತಾವೇ ಮುಂದೆ ನಿಂತು ತಾಯಿ ಸಮಾಧಿ ಕಟ್ಟಿಸಿದ ದುನಿಯಾ ವಿಜಯ್

| Updated By: ರಾಜೇಶ್ ದುಗ್ಗುಮನೆ

Updated on: Jul 14, 2021 | 8:06 PM

ನಾರಾಯಣಮ್ಮ ಅವರ ಅಂತಿಮ ಸಂಸ್ಕಾರದಲ್ಲಿ ದುನಿಯಾ ವಿಜಯ್​ ಹಾಗೂ ಕುಟುಂಬದ ಇತರೆ ಸದಸ್ಯರು ಭಾಗಿ ಆಗಿದ್ದರು.  ಕೆಲವೇ ದಿನಗಳ ಹಿಂದೆ ನಾರಾಯಣಮ್ಮ ಅವರು ಕೊವಿಡ್​ನಿಂದ ಚೇತರಿಸಿಕೊಂಡಿದ್ದರು.

ಖ್ಯಾತ ನಟ ದುನಿಯಾ ವಿಜಯ್​ ಅವರ ತಾಯಿ ನಾರಾಯಣಮ್ಮ ಅವರ ಅಂತ್ಯ ಸಂಸ್ಕಾರವನ್ನು ಶುಕ್ರವಾರ (ಜು.9) ನೆರವೇರಿಸಲಾಯಿಗಿತ್ತು. ಆನೇಕಲ್​ನ‌ ಕುಂಬಾರನಹಳ್ಳಿಯಲ್ಲಿ ಅಂತ್ಯಕ್ರಿಯೆ ನಡೆಸಲಾಯಿತು. ಈಗ ದುನಿಯಾ ವಿಜಯ್​ ಅವರು ಸಮಾಧಿ ಕಟ್ಟಿದ್ದಾರೆ. ಈ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.

ನಾರಾಯಣಮ್ಮ ಅವರ ಅಂತಿಮ ಸಂಸ್ಕಾರದಲ್ಲಿ ದುನಿಯಾ ವಿಜಯ್​ ಹಾಗೂ ಕುಟುಂಬದ ಇತರೆ ಸದಸ್ಯರು ಭಾಗಿ ಆಗಿದ್ದರು.  ಕೆಲವೇ ದಿನಗಳ ಹಿಂದೆ ನಾರಾಯಣಮ್ಮ ಅವರು ಕೊವಿಡ್​ನಿಂದ ಚೇತರಿಸಿಕೊಂಡಿದ್ದರು. ಬಳಿಕ ಅವರಿಗೆ ಮತ್ತೆ ಅನಾರೋಗ್ಯ ಸಮಸ್ಯೆ ಕಾಣಿಸಿಕೊಂಡಿತ್ತು. ಬ್ರೇನ್​ ಸ್ಟ್ರೋಕ್​ ಆದ ಪರಿಣಾಮ ಪರಿಸ್ಥಿತಿ ಚಿಂತಾಜನಕ ಆಗಿತ್ತು. ಆದರೂ ಅವರಿಗೆ ಆಸ್ಪತ್ರೆಗೆ ಹೋಗಲು ಇಷ್ಟ ಇರಲಿಲ್ಲ. ಹಾಗಾಗಿ ಮನೆಯಲ್ಲಿಯೇ ವಿಜಯ್​ ಅವರು ತಾಯಿಯ ಆರೈಕೆ ಮಾಡುತ್ತಿದ್ದರು. ಆದರೂ ಚಿಕಿತ್ಸೆ ಫಲಕಾರಿ ಆಗದೇ ಅವರು ಗುರುವಾರ (ಜು.8) ಕೊನೆಯುಸಿರು ಎಳೆದರು.

ಇದನ್ನೂ ಓದಿ: ಆನೇಕಲ್​ನ‌ ಕುಂಬಾರನಹಳ್ಳಿಯಲ್ಲಿ ದುನಿಯಾ ವಿಜಯ್​ ತಾಯಿ ನಾರಾಯಣಮ್ಮ ಅಂತ್ಯಕ್ರಿಯೆ