ಕೇವಲ 30 ಚಿತ್ರದಲ್ಲಿ ನಟಿಸಿರುವ ಕಂಗನಾಗೆ ಪದ್ಮಶ್ರೀ ಮಣೆ, ಶಿವಣ್ಣ ಫ್ಯಾನ್ಸ್ ಕಿಡಿಕಿಡಿ

ಬೆಂಗಳೂರು: ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್​ಗೆ ಪದ್ಮಶ್ರೀ ಪ್ರಶಸ್ತಿ ನೀಡದಿರುವುದಕ್ಕೆ ಅಭಿಮಾನಿಗಳು ಅಸಮಾಧಾನಗೊಂಡಿದ್ದಾರೆ. ಗಣರಾಜ್ಯೋತ್ಸವದ ದಿನ ಪ್ರತೀ ವರ್ಷ ತಮ್ಮ ತಮ್ಮ ಕ್ಷೇತ್ರದಲ್ಲಿ ಸಾಧನೆ ಮಾಡಿದವರಿಗೆ ಕೇಂದ್ರ ಸರ್ಕಾರ ಪದ್ಮಶ್ರೀ ಪ್ರಶಸ್ತಿ ನೀಡಿ ಪುರಸ್ಕರಿಸುತ್ತದೆ. ಅದೇ ರೀತಿ ಈ ಬಾರಿ ಬಾಲಿವುಡ್​ನ 4 ಗಣ್ಯರಿಗೆ ಸಿನಿಮಾ ಸಾಧನೆ ಗುರುತಿಸಿ ಪ್ರಶಸ್ತಿ ನೀಡಿದೆ. ಈ ಪೈಕಿ ನಟಿ ಕಂಗನಾ ರಣಾವತ್​ಗೆ ಸರ್ಕಾರ ಪದ್ಮಶ್ರೀ ಪ್ರಶಸ್ತಿ ನೀಡಿ ಸನ್ಮಾನಿಸಿದೆ. ಆದರೆ ಶಿವಣ್ಣಾಗೆ ಪ್ರಶಸ್ತಿ ನೀಡಿಲ್ಲವೆಂದು ಅಭಿಮಾನಿಗಳು ಬೇಸರ ವ್ಯಕ್ತಪಡಿಸಿದ್ದಾರೆ. ಕೇವಲ […]

ಕೇವಲ 30 ಚಿತ್ರದಲ್ಲಿ ನಟಿಸಿರುವ ಕಂಗನಾಗೆ ಪದ್ಮಶ್ರೀ ಮಣೆ, ಶಿವಣ್ಣ ಫ್ಯಾನ್ಸ್ ಕಿಡಿಕಿಡಿ

Updated on: Jan 27, 2020 | 1:46 PM

ಬೆಂಗಳೂರು: ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್​ಗೆ ಪದ್ಮಶ್ರೀ ಪ್ರಶಸ್ತಿ ನೀಡದಿರುವುದಕ್ಕೆ ಅಭಿಮಾನಿಗಳು ಅಸಮಾಧಾನಗೊಂಡಿದ್ದಾರೆ. ಗಣರಾಜ್ಯೋತ್ಸವದ ದಿನ ಪ್ರತೀ ವರ್ಷ ತಮ್ಮ ತಮ್ಮ ಕ್ಷೇತ್ರದಲ್ಲಿ ಸಾಧನೆ ಮಾಡಿದವರಿಗೆ ಕೇಂದ್ರ ಸರ್ಕಾರ ಪದ್ಮಶ್ರೀ ಪ್ರಶಸ್ತಿ ನೀಡಿ ಪುರಸ್ಕರಿಸುತ್ತದೆ. ಅದೇ ರೀತಿ ಈ ಬಾರಿ ಬಾಲಿವುಡ್​ನ 4 ಗಣ್ಯರಿಗೆ ಸಿನಿಮಾ ಸಾಧನೆ ಗುರುತಿಸಿ ಪ್ರಶಸ್ತಿ ನೀಡಿದೆ. ಈ ಪೈಕಿ ನಟಿ ಕಂಗನಾ ರಣಾವತ್​ಗೆ ಸರ್ಕಾರ ಪದ್ಮಶ್ರೀ ಪ್ರಶಸ್ತಿ ನೀಡಿ ಸನ್ಮಾನಿಸಿದೆ. ಆದರೆ ಶಿವಣ್ಣಾಗೆ ಪ್ರಶಸ್ತಿ ನೀಡಿಲ್ಲವೆಂದು ಅಭಿಮಾನಿಗಳು ಬೇಸರ ವ್ಯಕ್ತಪಡಿಸಿದ್ದಾರೆ.

ಕೇವಲ 30 ಚಿತ್ರದಲ್ಲಿ ನಟಿಸಿರುವ ಕಂಗನಾ ಮಣೆ
ಕಂಗನಾ ಕೇವಲ 30 ಚಿತ್ರದಲ್ಲಿ ನಟಿಸಿದ್ದಾರೆ. ಶಿವಣ್ಣ120 ಚಿತ್ರಗಳಲ್ಲಿ ನಟಿಸಿದ್ದಾರೆ. ಕಂಗನಾ ರಣಾವತ್​ಗಿಂತ ಹೆಚ್ಚು ಚಿತ್ರದಲ್ಲಿ ನಟಿಸಿರುವ ಶಿವಣ್ಣಗೆ ಪದ್ಮಶ್ರೀ ಪ್ರಶಸ್ತಿ ನೀಡಿಲ್ಲ ಎಂದು ಅಭಿಮಾನಿಗಳ ಬೇಸರ ವ್ಯಕ್ತಪಡಿಸಿದ್ದಾರೆ. ಶಿವಣ್ಣನ ಮೊದಲ ಸಿನಿಮಾ 1986ರಲ್ಲಿ ಬಿಡುಗಡೆ ಆಗಿದೆ. ಕಂಗನಾ ರಣಾವತ್ ಹುಟ್ಟಿದ್ದೆ 1987 ರಲ್ಲಿ, ಇವಳ ಸಾಧನೆ ಏನಿಲ್ಲ. ಕಂಗನಾ ಹಿಟ್ ಸಿನಿಮಾಗಳಿಗಿಂತ ಫ್ಲಾಪ್ ಚಿತ್ರಗಳನ್ನೇ ಹೆಚ್ಚು ನೀಡಿದ್ದು, ಶಿವರಾಜಕುಮಾರ್ ರಂತಹ ಹಿರಿಯ ನಾಯಕರು ಕಾಣಲಿಲ್ಲವೇ? ದಕ್ಷಿಣ ಭಾರತದ ನಟರೆಂದರೆ ಇವರಿಗೇಕೆ ತಾತ್ಸಾರ ಎಂದು ಶಿವಣ್ಣ ಅಭಿಮಾನಿಗಳು ಸರ್ಕಾರದ ವಿರುದ್ಧ ತಮ್ಮ ಆಕ್ರೋಶವನ್ನು ಹೊರ ಹಾಕಿದ್ದಾರೆ.

Published On - 1:33 pm, Mon, 27 January 20