ಈ ಚಿತ್ರದಲ್ಲಿ ರವಿಚಂದ್ರನ್ ಹೊಸ ಬಗೆಯ ಪಾತ್ರವೊಂದರಲ್ಲಿ ಡಿಫರೆಂಟ್ ಲುಕ್ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಮೂಲಗಳ ಪ್ರಕಾರ. ಅವರು ಇದುವರೆಗೆ ನಿರ್ವಹಿಸಿರುವ ಪಾತ್ರಗಳಿಗಿಂತ ‘ಕನ್ನಡಿಗ’ ಚಿತ್ರದಲ್ಲಿನ ಪಾತ್ರ ಭಿನ್ನವಾಗಿದೆಯಂತೆ. ಅವರು ನಿರ್ವಹಿಸುತ್ತಿರುವ ಪಾತ್ರದ ಹೆಸರು ಗುಣಭದ್ರ ಎಂದು ಗೊತ್ತಾಗಿದೆ. ಬಿಳಿ ಪಂಚೆ, ತಲೆ ಮೇಲೆ ಮುಂಡಾಸು ಮತ್ತು ಮುಖದ ಮೇಲೆ ಗಿರಿಜಾ ಮೀಸೆ ಹೊತ್ತ ರವಿಚಂದ್ರನ್ ಅವರ ಇಮೇಜ್ ಅಭಿಮಾನಿಗಳ ಕುತೂಹಲ ಕೆರಳಿಸುವದರೊಂದಿಗೆ ವೈರಲ್ ಕೂಡ ಆಗಿಬಿಟ್ಟಿದೆ.
ಐತಿಹಾಸಿಕ ಕಥಾ ಹಂದರವುಳ್ಳ ಚಿತ್ರವನ್ನು ಬಿ.ಎಂ ಗಿರಿರಾಜ್ ನಿರ್ದೇಶಿಸುತ್ತಿದ್ದಾರೆ. ಚಿತ್ರದ ಮತ್ತೊಂದು ವೈಶಿಷ್ಟ್ಯತೆಯೆಂದರೆ ಖ್ಯಾತ ಬಾಲಿವುಡ್ ನಟ ಟಾಮ್ ಆಲ್ಟರ್ ಅವರ ಮಗ ಜೆಮೀ ಆಲ್ಟರ್, ಕನ್ನಡ–ಇಂಗ್ಲಿಷ್ ನಿಘಂಟು ರಚಿಸಿದ ರೆವರೆಂಡ್ ಫರ್ಡಿನ್ಯಾಂಡ್ ಕಿಟ್ಟೆಲ್ ಅವರ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿರುವುದು. ‘ಕೆಜಿಎಫ್’ ಚಿತ್ರಕ್ಕೆ ಸಂಗೀತ ನೀಡಿದ ರವಿ ಬಸ್ರೂರ್ ‘ಕನ್ನಡಿಗ’ ಚಿತ್ರಕ್ಕೆ ಹಾಡುಗಳನ್ನು ಸಂಯೋಜಿಸಲಿದ್ದಾರೆ.
ರವಿಚಂದ್ರನ್ ಖುದ್ದು ಈ ಸಿನಿಮಾದ ಬಗ್ಗೆ ಬಹಳ ರೋಮಾಂಚಿತರಾಗಿದ್ದು ಇದರಲ್ಲಿರುವಂಥ ಪಾತ್ರವನ್ನು ಹಿಂದೆಂದೂ ಮಾಡಿಲ್ಲವೆಂದು ಹೇಳಿದ್ದಾರೆ.
Published On - 9:16 pm, Mon, 9 November 20